ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್‌ ಆಫ್‌ಲೈನ್‌ ವೀಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ?

|

ಗೂಗಲ್ ಒಡೆತನದ ಯೂಟ್ಯೂಬ್ ಈಗಾಗಲೇ ವಿಶ್ವದಾದ್ಯಂತ ಜನಪ್ರಿಯಗಳಿಸಿರುವ ವಿಡಿಯೊ ಪ್ಲಾಟ್‌ಫಾರ್ಮ್ ಆಗಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಸಹ ಯೂಟ್ಯೂಬ್ ವೀಕ್ಷಣೆ ಅಧಿಕವಾಗಿದೆ. ಮ್ಯೂಸಿಕ್ ಮತ್ತು ವಿಡಿಯೋ ಎರಡನ್ನು ಒಳಗೊಂಡಿರುವ ಯೂಟ್ಯೂಬ್ ಬಳಕೆದಾರರಿಗೆ ನೆಚ್ಚಿನ ಮನರಂಜನೆಯ ತಾಣವಾಗಿದೆ. ಹಾಗೆಯೇ ಯೂಟ್ಯೂಬ್‌ನಲ್ಲಿ ಎಲ್ಲ ವಿಷಯಗಳ ಮಾಹಿತಿಯ ವಿಡಿಯೊಗಳು ಸಹ ಲಭ್ಯ ಇರುವುದು ಮತ್ತೊಂದು ಆಕರ್ಷಣೆ ಆಗಿದೆ. ಜೊತೆಗೆ ಕೆಲವು ಉಪಯುಕ್ತ ಫೀಚರ್ಸ್‌ಗಳ ಅಡಕವಾಗಿವೆ.

ಗೂಗಲ್‌

ಹೌದು, ಯುಟ್ಯೂಬ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಪ್ರಸ್ತುತ ತನ್ನ ಪ್ರೀಮಿಯಂ ಚಂದಾದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇದು ಅವರ ಡೆಸ್ಕ್‌ಟಾಪ್ ವೆಬ್ ಬ್ರೌಸರ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸಲಿದೆ ಎನ್ನಲಾಗ್ತಿದೆ. ಇನ್ನು ಈ ಫೀಚರ್ಸ್‌ ಪ್ರಸ್ತುತ ಪ್ರಾಯೋಗಿಕ ವೈಶಿಷ್ಟ್ಯವಾಗಿ ಲಭ್ಯವಿದೆ. ಇದು ಕ್ರೋಮ್, ಎಡ್ಜ್ ಮತ್ತು ಒಪೇರಾ ವೆಬ್ ಬ್ರೌಸರ್‌ಗಳ ಇತ್ತೀಚಿನ ಆವೃತ್ತಿಗಳನ್ನು ಮಾತ್ರ ಬೆಂಬಲಿಸುತ್ತದೆ. ಹಾಗಾದ್ರೆ ಯೂಟ್ಯೂಬ್‌ ಪರಿಚಯಿಸಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್

ಯೂಟ್ಯೂಬ್ ತನ್ನ ಪ್ರೀಮಿಯಂ ಚಂದಾದಾರರಿಗೆ ಮೊಬೈಲ್‌ನಲ್ಲಿ ಆಫ್‌ಲೈನ್‌ ವೀಡಿಯೋ ಡೌನ್‌ಲೋಡ್‌ ಮಾಡಲು ಈಗಾಗಲೇ ಅವಕಾಶ ನೀಡಿದೆ. ಅಲ್ಲದೆ ಸೃಷ್ಟಿಕರ್ತರು ತಮ್ಮ ವೀಕ್ಷಕರಿಗೆ ಡೌನ್‌ಲೋಡ್ ಮಾಡಲು ಅನುಮತಿಸುವ ವೀಡಿಯೋಗಳನ್ನು ನೋಡಲು ಅವಕಾಶ ನೀಡಿದೆ. ಇದೀಗ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಆಫ್‌ಲೈನ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ನೀಡಿದೆ. ಸದ್ಯ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಆಫ್‌ಲೈನ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್ ಆಫ್‌ಲೈನ್ ವೀಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ?

ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್ ಆಫ್‌ಲೈನ್ ವೀಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಗೂಗಲ್‌ ಅಕೌಂಟ್‌ ಮೂಲಕ ಯೂಟ್ಯೂಬ್‌ ಗೆ ಲಾಗ್ ಇನ್ ಮಾಡಿ.
ಹಂತ:2 ಯೂಟ್ಯೂಬ್‌ ನ "ಪ್ರಯೋಗಾತ್ಮಕ ಫೀಚರ್ಸ್‌ಗಳನ್ನು ಪ್ರಯತ್ನಿಸಿ" ಪೇಜ್‌ ಕ್ಲಿಕ್ ಮಾಡಿ.
ಹಂತ:3 ''ಡೌನ್ಲೋಡ್ ವೀಡಿಯೋಸ್ ಫ್ರಮ್ ಯುವರ್ ಬ್ರೌಸರ್'' ಆಯ್ಕೆಯನ್ನು ನೋಡುವವರೆಗೆ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:4 "ಟ್ರೈ ಇಟ್‌ ಔಟ್‌ " ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:5 ಈಗ ವೀಡಿಯೋ ವೀಕ್ಷಣೆ ಮಾಡುವಾಗ, ಡೌನ್‌ಲೋಡ್ ಮಾಡಲು ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಬಹುದು.
ಹಂತ:6 ವೀಡಿಯೊವನ್ನು ಡೌನ್‌ಲೋಡ್ ಮಾಡಿದ ನಂತರ, ಬಳಕೆದಾರರು ಅವುಗಳನ್ನು ಡೌನ್‌ಲೋಡ್ ವಿಭಾಗದ ಒಳಗೆ ನೋಡಬಹುದು.

ಡೌನ್‌ಲೋಡ್

ಇದಾದ ನಂತರ ಅರ್ಹ ಬಳಕೆದಾರರು ಸೆಟ್ಟಿಂಗ್ಸ್‌ ಮೆನುಗೆ ಹೋಗುವ ಮೂಲಕ ವೀಡಿಯೊ ಡೌನ್‌ಲೋಡ್ ಗುಣಮಟ್ಟವನ್ನು ಆಯ್ಕೆ ಮಾಡಬಹುದು. ಫುಲ್‌ ಹೆಚ್‌ಡಿ (1080 ಪಿ) ಗರಿಷ್ಠವಾಗಿರುತ್ತದೆ. ಹೆಚ್ಚಿನ (720p), ಮಧ್ಯಮ (480p), ಮತ್ತು ಕಡಿಮೆ (144p) ರೆಸಲ್ಯೂಶನ್‌ ಆಯ್ಕೆ ಕೂಡ ಲಭ್ಯವಿರಲಿದೆ. ಇದಲ್ಲದೆ ಬಳಕೆದಾರರು ತಮ್ಮ ಡೆಸ್ಕ್‌ಟಾಪ್‌ನಲ್ಲಿ ಸ್ಪೇಸ್‌ ಕ್ಲಿಯರ್‌ ಮಾಡುವುದಕ್ಕಾಗಿ ಲೋಕಲ್‌ ಡೌನ್‌ಲೋಡ್‌ಗಳನ್ನು ಡಿಲೀಟ್‌ ಮಾಡಬಹುದು. ಸದ್ಯ ಈ ಹೊಸ ಫೀಚರ್ ಪ್ರಸ್ತುತ ಅಕ್ಟೋಬರ್ 19 ರವರೆಗೆ ಪರೀಕ್ಷೆಯಲ್ಲಿದೆ. ಇದು ಯಾವಾಗ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

ವಿಡಿಯೊ

ಇದಲ್ಲದೆ ಯೂಟ್ಯೂಬ್‌ನಲ್ಲಿನ ವಿಡಿಯೊ ಲಿಂಕ್‌ಗಳನ್ನು ಬಳಕೆದಾರರು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಿಗೆ ಶೇರ್ ಮಾಡುವ ಆಯ್ಕೆ ಇದೆ. ಹಾಗೆಯೇ ವಿಡಿಯೊದಲ್ಲಿ ನಿರ್ದಿಷ್ಟ ಭಾಗವನ್ನು ವೀಕ್ಷಿಸಲು ಅನುವು ಮಾಡಲು URLನಲ್ಲಿ ಸೆಟ್ ಮಾಡಬಹುದಾದ ಆಯ್ಕೆ ಇದೆ. ಉದಾಹರಣೆ: URL ಕೊನೆಯಲ್ಲಿ t = 1m45s (ವಿಡಿಯೊದ ನಿರ್ದಿಷ್ಟ ಭಾಗದ ಸಮಯ/ಸೆಕೆಂಡ) ನಮೂದಿಸುವುದು.

Best Mobiles in India

English summary
YouTube is currently testing offline video downloads on desktop feature for Premium subscribers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X