ನಿಮ್ಮ ಮಕ್ಕಳು ಯೂಟ್ಯೂಬ್ ನೋಡುವ ಗೀಳಿಗೆ ಬಿದ್ದಿದ್ದರೆ ಹೀಗೆ ಮಾಡಿ!

|

ಮಕ್ಕಳು ಯಾವಾಗಲೂ ಯೂಟ್ಯೂಬ್ ನೋಡುವ ಗೀಳಿಗೆ ಬಿದ್ದಿದ್ದಾರೆ ಎಂಬ ಆತಂಕ ನಿಮಗೆ ಕಾಡುತ್ತಿದೆಯಾ?..ಹಾಗಾದರೆ, ಚಿಂತೆ ಬಿಡಿ. ನಿಮ್ಮ ಮಕ್ಕಳ ಯೂಟ್ಯೂಬ್ ಪ್ರಪಂಚವನ್ನೇ ಬದಲಾಯಿಸುವ ಆಯ್ಕೆ ನಿಮಗಿದೆ. ಯೂಟ್ಯೂಬ್ ಆಪ್‌ನಲ್ಲಿನ ಸೆಟ್ಟಿಂಗ್ಸ್ ಬದಲಾಯಿಸಿ ಯೂಟ್ಯೂಬ್ ಮೇಲೆ ಮಕ್ಕಳಿಗಿರುವ ಅವಲಂಬನೆಯನ್ನು ಅವರ ಒಳಿತಿಗಾಗಿ ಬದಲಾಯಿಸಬಹುದಾಗಿದೆ.

ಮೊಬೈಲ್ ಹಿಡಿದು ಯೂಟ್ಯೂಬ್ ತೆರೆದು ಕುಳಿತುಕೊಳ್ಳುವ ಮಕ್ಕಳಿಗಾಗಿಯೇ ಯೂಟ್ಯೂಬ್ ಕಿಡ್ಸ್ ಎಂಬ ಆಪ್ ಹೊಸದೊಂದು ಸೌಲಭ್ಯವನ್ನು ನೀಡುತ್ತಿದೆ. ಮಕ್ಕಳ ಮಾನಸಿಕ ಸ್ಥಿತಿ, ಭವಿಷ್ಯದ ಮೇಲೆ ಅಷ್ಟೇ ಅಡ್ಡಪರಿಣಾಮ ಬೀರಬಲ್ಲದಾದ ವಿಷಯಗಳಿಂದ ದೂರವಿರಿಸಲು ಹಾಗೂ ಮಕ್ಕಳಿಗೆ ಏನು ಬೇಕೋ ಅದನ್ನೇ ಒದಗಿಸಲು ಯೂಟ್ಯೂಬ್ ಕಿಡ್ಸ್ ಆಪ್ ನಿಮಗೆ ಸಹಾಯ ಮಾಡಲಿದೆ.

ನಿಮ್ಮ ಮಕ್ಕಳು ಯೂಟ್ಯೂಬ್ ನೋಡುವ ಗೀಳಿಗೆ ಬಿದ್ದಿದ್ದರೆ ಹೀಗೆ ಮಾಡಿ!

ಯೂಟ್ಯೂಬ್ ಕಿಡ್ಸ್ ಆಪ್‌ನಲ್ಲಿ 'ಓಲ್ಡರ್', 'ಯಂಗರ್' ಮತ್ತು 'ಪೇರೆಂಟ್ ಅಪ್ರೂವಡ್ ಕಂಟೆಟ್' ಎನ್ನುವ ಮೂರು ಬಗೆಯ ಸೆಟ್ಟಿಂಗ್‌ಗಳಿದ್ದು, ನಿಮ್ಮ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅದನ್ನು ಸೆಟ್ ಮಾಡಬಹುದಾಗಿದೆ. ಹೀಗೆ ಮಾಡಿದರೆ ನಿಮ್ಮ ಮಗುವಿನ ವಯಸ್ಸಿಗೆ ತಕ್ಕಂತ ವಿದ್ಯಾಭ್ಯಾಸದ ವೀಡಿಯೋಗಳು, ಹಾಡುಗಳು ಕಾಣಸಿಗುತ್ತವೆ ಎಂದು ಯೂಟ್ಯೂಬ್ ಮಾಹಿತಿ ನೀಡಿದೆ.

ನಿಮ್ಮ ಮಗು 8 ವರ್ಷ ವಯಸ್ಸಿನ ಮಗುವಾಗಿದ್ದರೆ, 'ಯಂಗರ್' ಅಥವಾ 'ಓಲ್ಡರ್' ಸೆಟ್ಟಿಂಗ್‌ನಲ್ಲಿಡಬಹುದಾಗಿದೆ. ಅವೆರಡೂ ಬೇಡವೆಂದರೆ 'ಪೇರೆಂಟ್ ಅಪ್ರೂವಡ್ ಕಂಟೆಂಟ್' ಸೆಟ್ಟಿಂಗ್ ಮಾಡಿಡಬಹುದು. ಹೀಗೆ ಮಾಡಿದರೆ ಯೂಟ್ಯೂಬ್ ಕಿಡ್ಸ್ ಆಪ್‌ನಲ್ಲಿ ಪೋಷಕರ ಒಪ್ಪಿಗೆಯ ಮೇರೆಗೆ ಹಾಕಿರುವಂತಹ ವೀಡಿಯೋಗಳು ಮಾತ್ರ ಕಾಣ ಸಿಗುತ್ತವೆ ಎಂದು ಯೂಟ್ಯೂಬ್ ಹೇಳಿದೆ.

ನಿಮ್ಮ ಮಕ್ಕಳು ಯೂಟ್ಯೂಬ್ ನೋಡುವ ಗೀಳಿಗೆ ಬಿದ್ದಿದ್ದರೆ ಹೀಗೆ ಮಾಡಿ!
Riversong Jelly Kids GPS tracker hands-on - GIZBOT KANNADA

ಇನ್ನು ಯಾವುದೇ ಸೆಟ್ಟಿಂಗ್ ಆಯ್ಕೆ ಮಾಡುವ ಮೊದಲು ನಿಮ್ಮ ಮಗುವಿಗೆ ಯಾವ ರೀತಿಯ ವೀಡಿಯೋಗಳನ್ನು ತೋರಿಸಬೇಕು ಅನ್ನುವುದನ್ನು ನೀವು ಆಯ್ಕೆ ಮಾಡಬಹುದು. ಹೀಗೆ ಮಾಡಿದರೆ,ನಿಮ್ಮ ಮಕ್ಕಳು ಯಾವುದೇ ಇತರೆ ವೀಡಿಯೋಗಳನ್ನು ಅದರಲ್ಲಿ ಹುಡುಕಲು ಆಗುವುದಿಲ್ಲ. ಹಾಗಾಗಿ, ನಿಮ್ಮ ಮಕ್ಕಳ ಯೂಟ್ಯೂಬ್ ಗೀಳು ಸಹ ನಿಮ್ಮನ್ನು ಬಾಧಿಸುವುದಿಲ್ಲ.

ಓದಿರಿ: ಇಂದು ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಖರೀದಿಸಲು ಮತ್ತೊಂದು ಸಿಹಿಸುದ್ದಿ!

ಯೂಟ್ಯೂಬ್ ವಿಡಿಯೋದಲ್ಲಿ ಹಾಡು, ಸಂಗೀತ ಹುಡುಕುವುದು ಹೇಗೆ..?

ಯೂಟ್ಯೂಬ್ ವಿಡಿಯೋದಲ್ಲಿ ಹಾಡು, ಸಂಗೀತ ಹುಡುಕುವುದು ಹೇಗೆ..?

ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವುದು ವೀಡಿಯೋಸ್ ತಾಣ ಎಂದರೆ ಗೂಗಲ್ ಮಾಲೀಕತ್ವದ ಯೂಟ್ಯೂಬ್, ಭಾರತೀಯ ಮಾರುಕಟ್ಟೆ ಸೇರಿದಂತೆ ಜಾಗತಿಕವಾಗಿ ವಿಡಿಯೋ ಜಾಲತಾಣದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್ ನಲ್ಲಿ ನೀವು ನೋಡುವ ವಿಡಿಯೋಗಳಲ್ಲಿ ಬಳಕೆಯಾಗುವ ಮ್ಯೂಸಿಕ್ ಅಥಾವ ಹಾಡು ಯಾವುದು ಎಂಬುದನ್ನು ಹುಡುಕುವುದು ಹೇಗೆ ಮೊದಲು ಮುಂದೆ ತಿಳಿಸಿಕೊಡುತ್ತಿದ್ದೇವೆ.

ನೀವು ಯಾವುದೇ ಒಂದು ವಿಡಿಯೋವನ್ನು ನೋಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಕೊಟ್ಟಿರುವಂತಹ ಮ್ಯೂಸಿಕ್ ನಿಮಗೆ ಇಷ್ಟ ಅಂತ ಸಂದರ್ಭದಲ್ಲಿ ಆ ಮ್ಯೂಸಿಕ್ ಅನ್ನು ಹೇಗೆ ಹುಡುಕುದು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ..

ಡಿಸ್ಕ್ರಿಪ್ಷನ್ ನೋಡಿ

ಡಿಸ್ಕ್ರಿಪ್ಷನ್ ನೋಡಿ

ವಿಡಿಯೋ ನೋಡಿದ ನಂತರದಲ್ಲಿ ಮ್ಯೂಸಿಕ್ ಅಥಾವ ಹಾಡು ಇಷ್ಟ ಆದಲ್ಲಿ ವಿಡಿಯೋ ಕೆಳಬಾಗದಲ್ಲಿ ನೀಡಿರುವಂತಹ ದೊರೆಯಲಿದೆ. ಆ ಮೂಲಕ ನೀವು ವಿಡಿಯೋದಲ್ಲಿ ಅಳವಡಿಸಿರುವ ಮ್ಯೂಸಿಕ್ ಎಲ್ಲಿಯದು ಎಂಬುದನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ.

ಗೂಗಲ್ ಲಿರಿಕ್ಸ್

ಗೂಗಲ್ ಲಿರಿಕ್ಸ್

ನಿಮಗೆ ಇಷ್ಟವಾದ ಸಾಂಗ್ ಒಂದನ್ನು ಹುಡುಕ ಬೇಕಾದ ಸಂದರ್ಭದಲ್ಲಿ ನೀವು ಹೆಚ್ಚಿನ ತಲೆಕೆಡಿಸಿ ಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಇದಕ್ಕಾಗಿ ಗೂಗಲ್ ಹೊಸ ಮಾದರಿಯಲ್ಲಿದೆ ಗೂಗಲ್ ಲಿರಿಕ್ಸ್ ಎಂಬ ಹೊಸದೊಂದು ಸರ್ಚ್ ಆಯ್ಕೆಯನನು ನೀಡಲಾಗಿದೆ. ಹಾಡು ಯಾವುದು ಎಂಬುದನ್ನು ಹುಡುಕಲು ಅದರ ಲಿರೀಕ್ ಬರೆದರೆ ಸರ್ಚ್ ಇಂಜಿನ್ ನಲ್ಲಿ ಗೂಗಲ್ ಹಾಡು ಹುಡುಕಿ ಕೊಡಲಿದೆ.

ಕಾಮೆಂಟ್ಸ್ ನೋಡಿ

ಕಾಮೆಂಟ್ಸ್ ನೋಡಿ

ಇದಲ್ಲದೆ ನೀವು ಯೂಟ್ಯೂಬ್ ವಿಡಿಯೋ ನೋಡುವ ಸಂದರ್ಭದಲ್ಲಿ ನಿಮಗೆ ಇಷ್ಟವಾದಂತಹ ಮ್ಯೂಸಿಕ್ ಅಲ್ಲಿ ಇದ್ದರೆ, ವಿಡಿಯೋ ಕಾಮೆಂಟ್ ನೋಡಿ, ಕೆಲವು ಬಾರಿ ನಿಮ್ಮಂತೆ ಸಾಂಗ್ ಇಷ್ಟವಾದವರು ಕಾಮೆಂಟ್ ನಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ ಇದು ಯಾವ ಮ್ಯೂಸಿಕ್ ಎಂದು ಅದಕ್ಕೆ ಉತ್ತರವನ್ನು ನೀವು ಅಲ್ಲಿ ಕಾಣಬಹುದಾಗಿದೆ.

ಮ್ಯೂಸಿಕ್ ಐಡೆಂಟಿಫಿಕೇಶನ್

ಮ್ಯೂಸಿಕ್ ಐಡೆಂಟಿಫಿಕೇಶನ್

ಇದಲ್ಲದೆ ಮಾರುಕಟ್ಟೆಯಲ್ಲಿ ಮ್ಯೂಸಿಕ್ ಐಡೆಂಟಿಫಿಕೇಶನ್ ಆಪ್ ಗಳು ಕಾಣಿಸಿಕೊಂಡಿದೆ. ಇವು ನಿಮಗೆ ಬೇಕಾದ ಸಂದರ್ಭದಲ್ಲಿ ಯಾವ ಹಾಡು ಅಥಾವ ಮ್ಯೂಸಿಕ್ ಅನ್ನು ಹುಡುಗಿ ಕೊಡಲಿವೆ.

ಶಾಹಜಮ್:

ಶಾಹಜಮ್:

ಸದ್ಯ ಮಾರುಕಟ್ಟೆಯಲ್ಲಿ ಮ್ಯೂಸಿಕ್ ಐಡೆಂಟಿಫಿಕೇಶನ್ ಮಾಡುವಂತಹ ಗಳಲ್ಲಿ ಇದೂ ಒಂದಾಗಿದೆ. ನಿಮಗೆ ಬೇಕಾದ ಅಂತಹ ಸಾಂಗ್ ಅನ್ನ ಹುಡುಕುವ ಸಲುವಾಗಿ ಹಾಡು ಪ್ಲೇ ಆಗುತ್ತಿರುವ ಸ್ಪೀಕರ್ ನ ಬಳಿ ಆಪ್ ಅನ್ನು ಓಪನ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಹಿಡಿದರೆ ಸಾಕು ಹಾಡಿನ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದೆ.

ಯೂಟ್ಯೂಬ್ ಥಂಬ್ಲೇನ್‌ ಇಮೇಜ್‌ನ್ನು ಈಗ ಆನ್‌ಲೈನ್‌ನಲ್ಲಿ ಸರಳವಾಗಿ ಮಾಡಿ..!

ಯೂಟ್ಯೂಬ್ ಥಂಬ್ಲೇನ್‌ ಇಮೇಜ್‌ನ್ನು ಈಗ ಆನ್‌ಲೈನ್‌ನಲ್ಲಿ ಸರಳವಾಗಿ ಮಾಡಿ..!

ಇಂದಿನ ದಿನದಲ್ಲಿ ಯೂಟ್ಯೂಬ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಯೂಟ್ಯೂಬ್ ಥಮ್ ಬ್ಲೇನ್ ಗಳನ್ನು ಉತ್ತಮ ರೀತಿಯಲ್ಲಿ ನಿರ್ಮಿಸುವುದು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಆನ್ ಲೈನಿನಲ್ಲಿಯೇ ಉತ್ತಮವಾಗಿ ಥಮ್ ಬ್ಲೇನ್ ಗಳನ್ನು ರಚಿಸಿಕೊಳ್ಳುವ ಸಾಫ್ಟ್ ವೇರ್ ಗಳು ಲಭ್ಯವಿದೆ.

ಇವುಗಳನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಇವುಗಳಿಂದಾಗಿ ನಿಮ್ಮ ಯುಟ್ಯೂಬ್ ಅನ್ನು ಆಕರ್ಷಕವಾಗಿಸಿಕೊಳ್ಳಬಹುದಾಗಿದೆ.

1) ಕ್ಯಾನ್ವಾ

1) ಕ್ಯಾನ್ವಾ

ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುವ ಡಿಸೈನಿಂಗ್ ವೆಬ್ ಸೈಟ್ ಇದಾಗಿದೆ. ಇದರಲ್ಲಿ ನೀವು ಟಾಪ್ ಗುಣಮಟ್ಟದ ಥಮ್ ಬ್ಲೇನ್ ಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಅದುವೇ ಪ್ರೋಫೆಷನಲ್ ರೀತಿಯಲ್ಲಿ ಡಿಸೈನ್ ಮಾಡಿಕೊಂಡು ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಇದರಲ್ಲಿ ಸೆಳೆಯಬಹುದಾಗಿದೆ. ಸದ್ಯ ಹೆಚ್ಚಿನ ಮಂದಿ ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

2) ಪೋಟೋ ಜೆಟ್

2) ಪೋಟೋ ಜೆಟ್

ಇದರಲ್ಲಿ ಸುಮಾರು 500 ಡಿಸೈನ್ ಗಳನ್ನು ಕಾಣಬಹುದಾಗಿದೆ. ಇದರಿಂದಾಗಿ ನಿಮ್ಮ ಯೂಟ್ಯೂಬ್ ಥಮ್ ಬ್ಲೇನ್ ಗಳನ್ನು ಉತ್ತಮ ರೀತಿಯಲ್ಲಿ ನಿರ್ಮಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಟೆಕ್ಟ್ ಗಳನ್ನು ಡಿಸೈನ್ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ಕ್ರಿಯೇಟಿವಿಟಿಯೂ ಉತ್ತಮವಾಗಲಿದೆ. ಅಮೆಜಿಂಗ್ ಡಿಸೈನ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.

3) ಸ್ನಾಪಾ

3) ಸ್ನಾಪಾ

ಆನ್ ಲೈನ್ ಇಮೇಜ್ ಎಡಿಟಿಂಗ್ ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಇಲ್ಲಿ ವಿಭಿನ್ನವಾಗಿ ಥಮ್ ಬ್ಲೇನ್ ಗಳನ್ನು ಡಿಸೈನ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಹೆಚ್ಚಿನ ಮಂದಿ ಇಮೇಜ್ ಆನ್ ಲೈನ್ ಎಡಿಟಿಂಗ್ ಗೆ ಇದು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದು ಸಹ ಬಳಕೆದಾರರಿಗೆ ಉಚಿತ ಬಳಕೆಗೆ ದೊರೆಯುತ್ತಿದೆ ಎನ್ನಲಾಗಿದೆ.

4) ಆಡೋಬ್ ಸ್ಪಾರ್ಕ್:

4) ಆಡೋಬ್ ಸ್ಪಾರ್ಕ್:

ಇದಲ್ಲದೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಆಡೋಬ್ ಹೊಸ ಟೂಲ್ ಇದಾಗಿದೆ. ಇದರಲ್ಲಿ ನೀವು ಹೆಚ್ಚಿನ ಪ್ರಮಾಣದ ಪ್ರೀ ಲೋಡ್ ಪೋಸ್ಟರ್ ಗಳನ್ನು ಕಾಣಬಹುದಾಗಿದೆ. ಇದರಿಂದಾಗಿ ನಿಮ್ಮ ಚಿತ್ರ ಇನ್ನಷ್ಟು ಉತ್ತಮವಾಗಿ ಮೂಡಿಬರಲಿದೆ ಎನ್ನಲಾಗಿದೆ. ಪ್ರೋಫೆಷನಲ್ ಮಾದರಿಯಲ್ಲಿ ಇದನ್ನು ಡಿಸೈನ್ ಮಾಡಿಕೊಳ್ಳುವ ಅವಕಾಶವು ಇದೆ.

5) ಫೋಟರ್

5) ಫೋಟರ್

ಹಿಂದಿನಿಂದಲೂ ಇದನ್ನು ಫೊಟೋ ಎಡಿಟಿಂಗ್ ಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಸಾಕಷ್ಟು ಕೊಲೇಜ್ ಆಯ್ಕೆಗಳನ್ನು ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಒಂದೇ ಸೂರಿನಲ್ಲಿ ಸಾಕಷ್ಟು ಆಯ್ಕೆಗಳು ಬಳಕೆಗೆ ದೊರೆಯಲಿದೆ. ಇದು ಹೆಚ್ಚುಬ ಸಂಖ್ಯೆಯ ಅಭಿಮಾನಿಗಳನ್ನು

Best Mobiles in India

English summary
Like AOL Kids before it, the YouTube Kids app never really seemed to live up to its kid-friendly potential.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X