Subscribe to Gizbot

ಯೂಟ್ಯೂಬ್ ನಿಂದ ಶೀಘ್ರವೇ ಪಾವತಿ ಮಾಡಿ ಪಡೆಯುವ ಮ್ಯೂಸಿಕ್ ಸೇವೆ ಆರಂಭ..!

Written By: Lekhaka

ಮ್ಯೂಸಿಕ್ ಸ್ಟ್ರೀಮ್ ಸೇವೆಯಲ್ಲಿ ತನ್ನದೇ ಅಧಿಪತ್ಯವನ್ನು ಸ್ಥಾಪಿಸಿರುವ ಆಪಲ್ ಮ್ಯೂಸಿಕ್ ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದ ಸ್ಪರ್ಧೆಯನ್ನು ಎದುರಿಸಲಿದೆ. ಅಲ್ಲದೇ ಸಾಕಷ್ಟು ಗ್ರಾಹಕರನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ. ಮುಂದಿನ ವರ್ಷದಲ್ಲಿ ಖ್ಯಾತ ವಿಡಿಯೋ ಸ್ಟ್ರೀಮಿಂಗ್ ತಾಣ ಯೂಟ್ಯೂಬ್ ಪೇಯ್ಡ್ ಮ್ಯೂಸಿಕ್ ಸೇವೆಯನ್ನು ಆರಂಭಿಸಲು ಈಗಾಗಲೇ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ.

ಯೂಟ್ಯೂಬ್ ನಿಂದ ಶೀಘ್ರವೇ ಪಾವತಿ ಮಾಡಿ ಪಡೆಯುವ ಮ್ಯೂಸಿಕ್ ಸೇವೆ ಆರಂಭ..!

ಯೂಟ್ಯೂಬ್ 2018ರ ಮಾರ್ಚ್ ನಲ್ಲಿ ಪೇಯ್ಡ್ ಮ್ಯೂಸಿಕ್ ಸೇವೆಯನ್ನು ಶುರು ಮಾಡಲಿದೆ ಎನ್ನುವುದಕ್ಕೆ ಪ್ರಬಲ ಸಾಕ್ಷಿಯಾಗಿ ವಾರ್ನರ್ ಮ್ಯೂಸ್ ಗ್ರೂಪ್, ಸೋನಿ ಮ್ಯೂಸಿಕ್ ಎಂಟರ್ ಟೈನ್ ಮೆಂಟ್, ಮರ್ಲಿನ್, ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್, ಗ್ರೂಪ್ ಆಫ್ ಇನ್ ಡಿಪೆಂಡೆಂಟ್ ಲೆಬಲ್ಸ್ ಸೇರಿದಂತೆ ಹಲವರು ಮ್ಯೂಸಿಕ್ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಯೂಟ್ಯೂಬ್ ತನ್ನ ವಿಡಿಯೋ ಸ್ಟ್ರೀಮಿಂಗ್ ನೊಂದಿಗೆ ಈ ಪೇಯ್ಡ್ ಮ್ಯೂಸಿಕ್ ಸೇವೆಯನ್ನು ಸಹ ಆರಂಭಿಸಲಿದೆ ಎನ್ನಲಾಗಿದೆ. ಇದರಿಂದ ಯೂಟ್ಯೂಬ್ ಗೆ ಹೆಚ್ಚಿನ ಲಾಭವಾಗಲಿದ್ದು, ಮಿಲಿಯನ್ ಗಟ್ಟಲೇ ವಿಡಿಯೋ ನಡುವೆ ಪಾವತಿ ಸೇವೆಯನ್ನು ಪ್ರೋಮೊಟ್ ಮಾಡುವ ಅವಕಾಶವು ದೊರೆಯಲಿದೆ.

ಇದಲ್ಲದೇ ಯೂಟ್ಯೂಬ್ ಮ್ಯಾಸಿಕ್ ಹಲವು ಉತ್ತಮ ಸೇವೆಗಳನ್ನು ಬಳಕೆದಾರರಿಗೆ ನೀಡಲಿದೆ. ಅಲ್ಲದೇ ಯೂಟ್ಯೂಬ್ ನಲ್ಲಿ ಮಾತ್ರವೇ ಎಕ್ಸ್ ಕ್ಲೂಸಿವ್ ಆಗಿ ಪ್ಲೇ ಆಗುವ ಕೆಲವು ಮ್ಯೂಸಿಕ್-ವಿಡಿಯೋ ಗಳನ್ನು ಪಾವತಿ ದಾರರಿಗೆ ನೀಡಲಿದೆ. ಅಲ್ಲದೇ ಹೊಸ ಹೊಸ ಮ್ಯೂಸಿಕ್ ಗಳನ್ನು ಮೊದಲನೆಯದಾಗಿ ಬಳಕೆದಾರರಿಗೆ ತಲುಪಿಸಲಿದೆ.

ಅಮೆಜಾನ್‌ ಹಿಂದಿಕ್ಕಿದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರಿಂದ ನಂ.1 ಪಟ್ಟ..!

ಈಗಾಗಲೇ ಗೂಗಲ್ ಪ್ಲೇ ಮ್ಯೂಸಿಕ್ ಸೇವೆಯೂ ಜಾರಿಯಲಿದ್ದೆ, ಇದಕ್ಕಾಗಿ ಗ್ರಾಹಕರು ಹಣವನ್ನು ಪಾವತಿ ಮಾಡಬೇಕು. ಅಲ್ಲದೇ ಯೂಟ್ಯೂಬ್ ರೆಡ್ ಸೇವೆಯೂ ಕೆಲವು ದಿನಗಳಿಂದ ಜಾರಿಯಲ್ಲಿದೆ ಇದುವೇ ಪಾವತಿ ಮಾಡಿ ಬಳಕೆ ಮಾಡುವ ಸೇವೆಯಾಗಿದ್ದು, ಇದರೊಂದಿಗೆ ಹೊಸದಾಗಿ ಯೂಟ್ಯೂಬ್ ಮ್ಯೂಸಿಕ್ ಸೇರ್ಪಡೆಯಾಗಲಿದೆ.

English summary
YouTube might launch a music subscription service as early as March 2018 to compete with Apple Music and Spotify.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot