ಯುಟ್ಯೂಬ್‌ನಿಂದ ಗುಡ್‌ ನ್ಯೂಸ್‌! ಯುಟ್ಯೂಬ್‌ನ ಈ ಆಫರ್‌ ನಿಮಗೂ ಸಿಗುತ್ತಾ?

|

ಯುಟ್ಯೂಬ್‌ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯಂ ಸೇವೆಗಳನ್ನು ಕೂಡ ನೀಡುತ್ತಾ ಬಂದಿದೆ. ಇದೀಗ ತನ್ನ ಯುಟ್ಯೂಬ್‌ ಪ್ರೀಮಿಯಂ ಗ್ರಾಹಕರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದೆ. ಆರು ವರ್ಷಗಳಿಂದಲೂ ಯುಟ್ಯೂಬ್‌ ಪ್ರೀಮಿಯಂ ಚಂದಾದಾರರಾಗಿರುವ ಆಯ್ದ ಬಳಕೆದಾರರಿಗೆ 12 ತಿಂಗಳ ಉಚಿತ ಸೇವೆಯನ್ನು ನೀಡಲು ಯುಟ್ಯೂಬ್‌ ಮುಂದಾಗಿದೆ ಎಂದು ವರದಿಯಾಗಿದೆ.

ಯುಟ್ಯೂಬ್‌

ಹೌದು, ಯುಟ್ಯೂಬ್‌ ತನ್ನ ನಿಷ್ಠಾವಂತ ಗ್ರಾಹಕರಿಗೆ 12 ತಿಂಗಳ ಉಚಿತ ಪ್ರೀಮಿಯಂ ಸೇವೆಯನ್ನು ನೀಡಲಿದೆ. ಅಂದರೆ ಬರೋಬ್ಬರಿ 2,222 ದಿನಗಳು ಅಥವಾ ನಿಖರವಾಗಿ 3,199,680 ನಿಮಿಷಗಳು ನೀವು ಯುಟ್ಯೂಬ್‌ ಪ್ರೀಮಿಯಂ ಚಂದಾದಾರರಾಗಿದ್ದರೆ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇಂತಹ ಆಯ್ದ ಗ್ರಾಹಕರಲ್ಲಿ ನೀವು ಕೂಡ ಒಬ್ಬರಾಗಿದ್ದರೆ ಆಂಡ್ರಾಯ್ಡ್‌ ಯುಟ್ಯೂಬ್‌ ಮ್ಯೂಸಿಕ್‌ನಲ್ಲಿ "ಟೈಂ ಟು ಸೆಲೆಬ್ರೆಟ್‌" ಎನ್ನು ಪ್ರಾಂಪ್ಟ್ ಅನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಹಾಗಾದ್ರೆ ಯುಟ್ಯೂಬ್‌ನ ಈ ಉಚಿತ ಸೇವೆಯಲ್ಲಿ ಏನೆಲ್ಲಾ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯುಟ್ಯೂಬ್‌

ಯುಟ್ಯೂಬ್‌ ತನ್ನ ಗ್ರಾಹಕರಿಗಾಗಿ ವಿಶೇಷ ಸೇವೆಗಳನ್ನು ನೀಡುತ್ತಲೇ ಬಂದಿದೆ. ಅದರಂತೆ ಕಳೆದ ಆರು ವರ್ಷಗಳಿಂದಲೂ ಪ್ರೀಮಿಯಂ ಚಂದಾದಾರಿಕೆ ಬಳಸುತ್ತಿರುವ ಗ್ರಾಹಕರಿಗೆ 12 ತಿಂಗಳ ಅಂದರೆ ಒಂದು ವರ್ಷದ ಅವಧಿಯ ಉಚಿತ ಸೇವೆಯನ್ನು ನೀಡಲಿದೆ. ಇದಕ್ಕಾಗಿ ಯುಟ್ಯೂಬ್‌ ತನ್ನ ಆಯ್ದ ನಿಷ್ಠಾವಂತ ಗ್ರಾಹಕರಿಗೆ ನಿಮ್ಮ ನಂಬಲಾಗದ ಬೆಂಬಲಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಾವು ನಿಮಗಾಗಿ ನಿಮ್ಮ ಖಾತೆಯಲ್ಲಿ ಸ್ವಲ್ಪ ಏನನ್ನಾದರೂ ಸಕ್ರಿಯಗೊಳಿಸದ್ದೇವೆ ಎನ್ನುವ ಸಂದೇಶವನ್ನು ಯುಟ್ಯೂಬ್‌ ನೀಡಿದೆ. ಈ ಮಾದರಿಯ ಸಂದೇಶವನ್ನು ಎಲ್ಲಾ ಬಳಕೆದಾರರು ಪಡೆದಿಲ್ಲವಾದರೂ, ಶೀಘ್ರದಲ್ಲೇ ಇನ್ನು ಹೆಚ್ಚಿನ ಮಂದಿ ಈ ಮಾದರಿಯ ಸಂದೇಶವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

ನಿಮ್ಮ ಯುಟ್ಯೂಬ್‌ ಪ್ರೀಮಿಯಂ ಪ್ರಾರಂಭದ ದಿನಾಂಕವನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ಯುಟ್ಯೂಬ್‌ ಪ್ರೀಮಿಯಂ ಪ್ರಾರಂಭದ ದಿನಾಂಕವನ್ನು ಪರಿಶೀಲಿಸುವುದು ಹೇಗೆ?

ನೀವು ಯುಟ್ಯೂಬ್‌ ಪ್ರೀಮಿಯಂ ಪಡೆದು ಎಷ್ಟು ದಿನವಾಗಿದೆ ಎಂದು ಪರಿಶೀಲಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ಆಂಡ್ರಾಯ್ಡ್‌ ಅಥವಾ ಐಒಎಸ್‌ ಡಿವೈಸ್‌ನಲ್ಲಿ ಯುಟ್ಯೂಬ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಬಲಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಟ್ಯಾಪ್‌ ಮಾಡಿರಿ.
ಹಂತ:3 ಇದರಲ್ಲಿ ಯುಟ್ಯೂಬ್‌ ಪ್ರೀಮಿಯಂ ಬೆನಿಫಿಟ್ಸ್‌ ಕ್ಯಾಟಗರಿಯನ್ನು ಆಯ್ಕೆ ಮಾಡಿ
ಹಂತ:4 ಇದೀಗ ನೀವು ನಿಮ್ಮ ಯೂಸರ್‌ನೇಮ್‌ ಮೂಲಕ ನಿಮ್ಮ ಮೆಂಬರ್‌ಶಿಪ್‌ ಸಿನ್ಸ್‌ ದಿನಾಂಕ ನೋಡುತ್ತೀರಿ.

ಈ ದಿನಾಂಕದ ಮೂಲಕ ನೀವು ಎಷ್ಟು ದಿನದಿಂದ ಯುಟ್ಯೂಬ್‌ ಪ್ರೀಮಿಯಂ ಸೇವೆ ಬಳಸುತ್ತಿದ್ದೀರಾ ಅನ್ನೊದನ್ನ ತಿಳಿಯಬಹುದಾಗಿದೆ.

ಭಾರತದಲ್ಲಿ ಲಭ್ಯವಿರುವ ಯುಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆ ಪ್ಲಾನ್‌ಗಳು!

ಭಾರತದಲ್ಲಿ ಲಭ್ಯವಿರುವ ಯುಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆ ಪ್ಲಾನ್‌ಗಳು!

ಭಾರತದಲ್ಲಿ ಯುಟ್ಯೂಬ್‌ ಪ್ರೀಮಿಯಂ ಪ್ಲಾನ್‌ಗಲ್ಲಿ ನೀವು ಹಲವು ಆಯ್ಕೆಗಳನ್ನು ಕಾಣಬಹುದು. ಇದರಲ್ಲಿ ನಿಮಗೆ ಯಾವುದೇ ಆಟೋ ಅಪ್ಡೇಟ್‌ ಇಲ್ಲದ ಪ್ಲಾನ್‌ ಬೇಕಿದ್ದರೆ ಮಾಸಿಕ 139 ರೂ. ಪ್ಲಾನ್‌ ಲಭ್ಯವಿದೆ. ಒಂದು ವೇಳೆ ನೀವು ಆಟೋ-ಅಪ್ಡೇಟ್‌ ಪ್ಲಾನ್‌ ಬಯಸಿದರೆ ಮಾಸಿಕ 129ರೂ.ಚಂದಾದಾರಿಕೆ ಪ್ಲಾನ್‌ ಆಯ್ಕೆ ಮಾಡಬಹುದು. ಇನ್ನು ನಿಮಗೆ ಮೂರು ತಿಂಗಳ ಪ್ಲಾನ್‌ ಬೇಕಿದ್ದರೆ 399ರೂ. ಬೆಲೆಯ ಪ್ಲಾನ್‌ ಲಭ್ಯವಿದೆ. ಹಾಗೆಯೇ ವಾರ್ಷಿಕ ಚಂದಾದಾರಿಕೆಯ ಯೋಜನೆ ನಿಮಗೆ 1,290ರೂ.ಬೆಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಯೂಟ್ಯೂಬ್

ಇದಲ್ಲದೆ ಅನ್‌ವರ್ಸ್‌ಗಾಗಿ, ಯೂಟ್ಯೂಬ್ ವಿದ್ಯಾರ್ಥಿಗಳಿಗೆ ತಿಂಗಳಿಗೆ ಕೇವಲ 79 ರೂ ವೆಚ್ಚದ ಪ್ಲಾನ್‌ ಅನ್ನು ನೀಡುತ್ತಿದೆ. ಇದನ್ನು ಪಡೆಯಬೇಕಾದರೆ, ಬಳಕೆದಾರರು ತಮ್ಮ ಸ್ಟೂಡೆಂಟ್‌ ಐಡಿಯನ್ನು ಐಡೆಂಟಿಟಿಯಾಗಿ ಸಬ್ಮಿಟ್‌ ಮಾಡಬೇಕಾಗುತ್ತದೆ. ಇನ್ನು ಯುಟ್ಯೂಬ್‌ ಪ್ರೀಮಿಯಂ ಬಳಕೆದಾರರಯ ಆಫ್‌ಲೈನ್‌ನಲ್ಲಿ ವೀಕ್ಷಿಸಲು ಬೇಕಾದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಜೊತೆಗೆ ಜಾಹೀರಾತು-ಮುಕ್ತ ವೀಕ್ಷಣೆ ಹಾಗೂ ಬ್ಯಾಕ್‌ಗ್ರೌಂಡ್‌ ಮತ್ತು ಪಿಕ್ಚರ್-ಇನ್-ಪಿಕ್ಚರ್ ಪ್ಲೇಬ್ಯಾಕ್‌ನಂತಹ ವಿಭಿನ್ನ ಫೀಚರ್ಸ್‌ಗಳು ಕೂಡ ಲಭ್ಯವಾಗಲಿದೆ.

Most Read Articles
Best Mobiles in India

English summary
YouTube Premium and Music subscribers who have finished six years of time with the service are getting this reward.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X