ಭಾರತದಲ್ಲಿ 1.1 ಮಿಲಿಯನ್ ವೀಡಿಯೊಗಳನ್ನು ರಿಮೂವ್‌ ಮಾಡಿದ ಯುಟ್ಯೂಬ್‌!

|

ಗೂಗಲ್‌ ಒಡೆತನದ ಯುಟ್ಯೂಬ್‌ ಭಾರತೀಯರಿಗೆ ಬಿಗ್‌ ಶಾಕ್‌ ನೀಡಿದೆ. 2022ರ ಮೊದಲ ಮೂರು ತಿಂಗಳ ಅವಧಿಯಲ್ಲಿ ಭಾರತದಲ್ಲಿ 1.1 ಮಿಲಿಯನ್ ವೀಡಿಯೊಗಳನ್ನು ತೆಗೆದುಹಾಕಿರುವುದಾಗಿ ಯುಟ್ಯೂಬ್‌ ಹೇಳಿದೆ. ಇದು ಇಡೀ ವಿಶ್ವದಲ್ಲಿಯೇ ಹೆಚ್ಚು ಎಂದು ವರದಿಯಾಗಿದೆ. ಇನ್ನು ಇದೇ ಅವಧಿಯಲ್ಲಿ ಯುಎಸ್‌ನಲ್ಲಿ 358,134 ವೀಡಿಯೊಗಳನ್ನು ತೆಗೆದುಹಾಕಿದೆ. ಅಂದರೆ ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆಯಾಗಿ 4.4 ಮಿಲಿಯನ್‌ ಚಾನಲ್‌ಗಳನ್ನು ರಿಮೂವ್‌ ಮಾಡಿದೆ.

ಯುಟ್ಯೂಬ್‌

ಹೌದು, ಯುಟ್ಯೂಬ್‌ ತನ್ನ ಕಮ್ಯೂನಿಟಿ ಗೈಡ್‌ಲೈನ್ಸ್‌ ಫಾಲೋ ಮಾಡದ ಹಲವು ಚಾನಲ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ರಿಮೂವ್‌ ಮಾಡಿದೆ. ಇದರಲ್ಲಿ ಭಾರತದ 1.1 ಮಿಲಿಯನ್ ವೀಡಿಯೊಗಳನ್ನು ರಿಮೂವ್‌ ಮಾಡಿರುವುದರ ಬಗ್ಗೆ ವರದಿಯಾಗಿದೆ. ಯುಟ್ಯೂಬ್‌ನ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಹೆಚ್ಚಿನ ಚಾನಲ್‌ಗಳನ್ನು ಕೊನೆಗೊಳಿಸಲಾಗಿದೆ ಎಂದು ಯುಟ್ಯೂಬ್‌ ಹೇಳಿಕೊಂಡಿದೆ. ಹಾಗಾದ್ರೆ ಯುಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ನಿಂದ ವೀಡಿಯೋಗಳನ್ನು ತೆಗೆದು ಹಾಕುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯುಟ್ಯೂಬ್‌

ಯುಟ್ಯೂಬ್‌ ತನ್ನ ಮಾರ್ಗಸೂಚಿಗಳನ್ನು ಪಾಲಿಸದ ಚಾನಲ್‌ಗಳ ವಿರುದ್ದ ಕ್ರಮಕ್ಕೆ ಮುಂದಾಗಿದೆ. ತನ್ನ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದಕ್ಕೆ ಜನರು ಮತ್ತು ತಂತ್ರಜ್ಞಾನದ ಸಂಯೋಜನೆಯನ್ನು ಅವಲಂಬಿಸಿದೆ. ಯುಟ್ಯೂಬ್‌ನಲ್ಲಿ ಸ್ಪ್ಯಾಮ್ ವಿಚಾರಗಳನ್ನು ತೆಗೆದುಹಾಕುತ್ತಿದೆ. ಇದರಲ್ಲಿ ವೀಕ್ಷಕರಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು, ವೀಕ್ಷಕರನ್ನು ದಾರಿತಪ್ಪಿಸುವ ರೀತಿಯ ಕಂಟೆಂಟ್‌ ನೀಡುವವರನ್ನು ಬ್ಲಾಕ್‌ ಮಾಡಲು ಮುಂದಾಗಿದೆ. ಅದರಂತೆ ಯುಟ್ಯೂಬ್‌ 2022 ರ ಜನವರಿ ಮತ್ತು ಮಾರ್ಚ್ ನಡುವೆ 3.8 ಮಿಲಿಯನ್ ವೀಡಿಯೊಗಳನ್ನು ತೆಗೆದುಹಾಕಿದೆ. ಇದರಲ್ಲಿ 91% ವೀಡಿಯೊಗಳನ್ನು ಮೊದಲು ಮನುಷ್ಯರಿಗಿಂತ ಹೆಚ್ಚಾಗಿ ಯಂತ್ರಗಳಿಂದ ಫ್ಲ್ಯಾಗ್ ಮಾಡಲಾಗಿದೆ.

ಯುಟ್ಯೂಬ್‌

ಇನ್ನು ಯುಟ್ಯೂಬ್‌ ಕಳೆದ ಮೂರು ತಿಂಗಳಲ್ಲಿ 4.4 ಮಿಲಿಯನ್‌ ಚಾನಲ್‌ಗಳನ್ನು ತೆಗೆದುಹಾಕಿದೆ. ಇದರಲ್ಲಿ ಅತಿಯಾಗಿ ಪೋಸ್ಟ್ ಮಾಡಲಾದ, ಪುನರಾವರ್ತಿತ ಕಂಟೆಂಟ್‌ ಅನ್ನು ಯುಟ್ಯೂಬ್‌ ತೆಗೆದುಹಾಕಿದೆ. ಕ್ಲಿಕ್‌ಗಳು, ವ್ಯೂವ್ಸ್‌ ಮೂಲಕ ವೇಗವಾಗಿ ಹಣ ಗಳಿಸುವ ಭರವಸೆಯನ್ನು ಯುಟ್ಯೂಬ್‌ ನೀಡಿದೆ. ಇದಲ್ಲದೆ ಹಾನಿಕಾರಕ ಸಾಫ್ಟ್‌ವೇರ್ ಅನ್ನು ಹರಡುವ ಸೈಟ್‌ಗಳಿಗೆ ಪ್ರೇಕ್ಷಕರು ಎಂಟ್ರಿ ನೀಡದಂತೆ ತಡೆಯಲು ಮುಂದಾಗಿದೆ.

ಯೂಟ್ಯೂಬ್

ಇದಲ್ಲದೆ ಇತ್ತೀಚಿಗೆ ಭಾರತ ಸರ್ಕಾರ ಕೂಡ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧ ಮಾಡಿದೆ. 2021ರ ಐಟಿ ನಿಯಮ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ತಪ್ಪು ಮಾಹಿತಿ ಹರಡುತ್ತಿದ್ದ ಪಾಕಿಸ್ತಾನದ ಮೂಲಕ 6 ಹಾಗೂ ಭಾರತದ 10 ಯೂಟ್ಯೂಬ್ ಚಾನೆಲ್ ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದೆ.

ಭಾರತ

ಭಾರತದ ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಾಂಗ ನೀತಿ, ಕೋಮು ಸಂಘರ್ಷಕ್ಕೆ ಪ್ರಚೋದನೆ, ಸಾರ್ವಜನಿಕ ಸುವ್ಯವಸ್ಥೆ ಕುರಿತು ವಿಚಾರಗಳನ್ನು ಮುಖ್ಯವಾಗಿಸಿ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದವು. ಈ ಚಾನೆಲ್‌ಗಳ ಮೇಲೆ ನಿಗಾ ವಹಿಸಿದ್ದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಕ್ರಮ ಕೈಗೊಂಡಿದೆ. ಸುಳ್ಳು ಮಾಹಿತಿ ಹರಡುವುದರ ಜೊತೆಗೆ ಈ ಯೂಟ್ಯೂಬ್ ಚಾನೆಲ್ ಗಳು ಅದಕ್ಕೆ ಸಂಬಂಧಿಸಿದ ನಿಖರ ಮಾಹಿತಿಗಳನ್ನು ಒದಗಿಸಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I and B) ತಿಳಿಸಿದೆ.

ಚಾನೆಲ್

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ಯೂಟ್ಯೂಬ್ ಚಾನೆಲ್ ಸೇರಿದಂತೆ ಡಿಜಿಟಲ್ ಮೀಡಿಯಾಗಳ ಮೇಲೆ ನಿಗಾ ಇರಿಸಿದೆ. ಈ ತಿಂಗಳ ಆರಂಭದಲ್ಲೂ ಕೇಂದ್ರ ಸರ್ಕಾರ ಪಾಕಿಸ್ತಾನ ಹಾಗೂ ಭಾರತದ ಸುಮಾರು 22 ಯೂಟ್ಯೂಬ್ ಚಾನೆಲ್ ನಿಷೇಧಿಸಿತ್ತು. ಸುಳ್ಳು ಸುದ್ದಿ ಪ್ರಸಾರ ಹಾಗೂ ದೇಶ ವಿರೋಧಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ಭಾರತದ 18 ಹಾಗೂ ಪಾಕಿಸ್ತಾನದ 4 ಯೂಟ್ಯೂಬ್‌ ಚಾನೆಲ್‌ಗಳ ಮೇಲೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧ ಹೇರಿದೆ. ಈ ಯೂಟ್ಯೂಬ್‌ ಚಾನೆಲ್‌ಗಳು ಜನಪ್ರಿಯ ಟಿವಿ ಚ್ಯಾನೆಲ್‌ಗಳ ಲೋಗೊ ಬಳಸಿ ಭಾರತದ ಸೇನೆ, ಜಮ್ಮು ಮತ್ತು ಕಾಶ್ಮೀರ ಸಂಬಂಧಿತ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದವು.

Best Mobiles in India

English summary
YouTube removed over 1.1 million videos in India in the first three months of 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X