ಸದ್ಯದಲ್ಲೇ ಯೂಟ್ಯೂಬ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌!

|

ಗೂಗಲ್‌ ಒಡೆತನದ ಯೂಟ್ಯೂಬ್‌ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ವೀಡಿಯೋ ಮಾತ್ರವಲ್ಲದೆ ಮ್ಯೂಸಿಕ್‌ ಕೂಡ ಲಭ್ಯವಿರುವುದರಿಂದ ಯೂಟ್ಯೂಬ್‌ ಬಳಕೆದಾರರ ಮನರಂಜನೆಯ ತಾಣವಾಗಿದೆ. ಇದೇ ಕಾರಣಕ್ಕೆ ಯೂಟ್ಯೂಬ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಯೂಟ್ಯೂಬ್ ತನ್ನ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಟೈಂ ರಿಯಾಕ್ಷನ್‌ ಫೀಚರ್ಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ತನ್ನ ಬಳಕೆದಾರರಿಗಾಗಿ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಟೈಂ ರಿಯಾಕ್ಷನ್‌ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ. ಯೂಟ್ಯೂಬ್‌ ಪ್ರಕಾರ, ಈ ಫೀಚರ್ಸ್‌ನಲ್ಲಿ ಎಂಟು ಎಮೋಜಿಗ ಮೂಲಕ ವೀಡಿಯೊದಲ್ಲಿ ನಿರ್ದಿಷ್ಟ ಕ್ಷಣಗಳಿಗೆ ಬಳಕೆದಾರರು ರಿಯಾಕ್ಷನ್‌ ಮಾಡಬಹುದಾಗಿದೆ. ಸದ್ಯ ಈ ಫೀಚರ್ಸ್‌ ಪ್ರಯೋಗಿಕ ಹಂತದ ಪರೀಕ್ಷೆಯಲ್ಲಿದೆ. ಇದು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಅಭಿವೃದ್ಧಿಯ ಸಮಯದಲ್ಲಿ ಫೀಚರ್ಸ್‌ ಬದಲಾವಣೆಗಳಿಗೆ ಒಳಗಾಗಬಹುದು ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಟ್ಯೂಬ್‌

ಯುಟ್ಯೂಬ್‌ ತನ್ನ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಟೈಂ ರಿಯಾಕ್ಷನ್‌ ಫೀಚರ್ಸ್‌ ಪರೀಕ್ಷಿಸುತ್ತಿದೆ. ಇದು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಈ ಫೀಚರ್ಸ್‌ ಮೂಲಕ ಬಳಕೆದಾರರು ಎಮೋಜಿಗಳ ಮೂಲಕ ನಿರ್ಧಷ್ಟ ಸಮಯದಲ್ಲಿ ರಿಯಾಕ್ಷನ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಈಗಾಗಲೇ ಯೂಟ್ಯೂಬ್‌ ತನ್ನ ವೀಡಿಯೊಗಳಿಗೆ ಡಿಸ್‌ಲೈಕ್‌ ಕೌಂಟ್‌ ಅನ್ನು ಬ್ಯಾನ್‌ ಮಾಡಿದೆ. ಬದಲಿಗೆ ವೀಡಿಯೊಗಳಲ್ಲಿ ಸೌಂಡ್‌ಕ್ಲೌಡ್‌ ರೀತಿಯ ಟೈಂ ಕಾಮೆಂಟ್‌ಗಳ ಮೂಲಕ ಸಂವಹನ ನಡೆಸಲು ಇತರ ಮಾರ್ಗಗಳನ್ನು ಪರೀಕ್ಷಿಸುತ್ತಿದೆ.

ಯೂಟ್ಯೂಬ್‌

ಸದ್ಯ ಯೂಟ್ಯೂಬ್‌ ವೆಬ್‌ಸೈಟ್‌ನಲ್ಲಿನ ಪ್ರಕಟಣೆಯಲ್ಲಿ, ಯೂಟ್ಯೂಬ್‌ ತನ್ನ ಟೈಂ ಕಾಮೆಂಟ್‌ಗಳ ಬೀಟಾ ಫೀಚರ್ಸ್‌ ಬಗ್ಗೆ ಮಾಹಿತಿ ನೀಡಿದೆ.ಟೈಂ ರಿಯಾಕ್ಷನ್‌ ಫೀಚರ್ಸ್‌ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ನಂತರ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ ಎಂದು ಬಹಿರಂಗಪಡಿಸಿದೆ. ಬಳಕೆದಾರರು ವೀಡಿಯೊದಲ್ಲಿ ನಿಖರವಾದ ಕ್ಷಣಗಳಲ್ಲಿ ಎಂಟು ಎಮೋಜಿಗಳೊಂದಿಗೆ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಅಲ್ಲದೆ ರಿಯಾಕ್ಷನ್‌ಗಳು ವೀಡಿಯೊದ ಪ್ರೊಗ್ರೇಸ್‌ ಬಾರ್‌ನಲ್ಲಿ ಕಾಣಿಸಲಿದೆ. ಇನ್ನು ಈ ರಿಯಾಕ್ಷನ್‌ಗಳನ್ನು ಯಾರು ಕಳುಹಿಸಿದ್ದಾರೆ ಎಂದು ತಿಳಿಯದಂತೆ ಮಾಡುತ್ತೇವೆ ಎಂದು ಯೂಟ್ಯೂಬ್‌ ಹೇಳಿದೆ.

ಯೂಟ್ಯೂಬ್‌

ಯೂಟ್ಯೂಬ್‌ನ ಹೊಸ ಫೀಚರ್ಸ್‌ನ ಪ್ರಯೋಗದ ಭಾಗವಾಗಿರುವ ವೀಡಿಯೊವನ್ನು ಬಳಕೆದಾರರು ವೀಕ್ಷಿಸುವಾಗ ನಿರ್ಧಷ್ಟ ಕ್ಷಣಕ್ಕೆ ರಿಯಾಕ್ಷನ್‌ ಮಾಡುವುದಕ್ಕೆ ಅವಕಾಶ ನೀಡಿದೆ.ಈ ವಿಭಾಗಕ್ಕೆ ನ್ಯಾವಿಗೇಟ್ ಮಾಡುವುದರಿಂದ ಬಳಕೆದಾರರ ಗುಂಪಿನ ಪ್ರತಿಕ್ರಿಯೆಗಳನ್ನು ಸಹ ತೋರಿಸುತ್ತದೆ. ಈ ಹೊಸ ಸಮಯದ ಪ್ರತಿಕ್ರಿಯೆಗಳ ಪ್ರಯೋಗದ ಭಾಗವಾಗಿ, ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಪ್ರತಿಕ್ರಿಯೆಗಳ 'ಮಲ್ಟಿ ಸೆಟ್'ಗಳನ್ನು ಪರೀಕ್ಷಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಹೊಸ ಟೈಂ ರಿಯಾಕ್ಷನ್‌ ಪ್ರಯೋಗವು ಅಂತಿಮವಾಗಿ ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಯೂಟ್ಯೂಬ್‌

ಇನ್ನು ಯೂಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ವಿಡಿಯೊ ಗುಣಮಟ್ಟ ಬದಲಿಸುವ ಆಯ್ಕೆ ಕೂಡ ಸೇರಿದೆ. ಇದು ನೀವು ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆ ಮಾಡುವಾಗ ಪ್ಲೇ ಆಗುತ್ತಿರುವ ವೀಡಿಯೊ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಅದಕ್ಕಾಗಿ ಬಲಕ್ಕೆ ಕಾಣುವ ಮೂರು ಡಾಟ್‌ಗಳ ಮೆನು ಬಟನ್ ಸೆಲೆಕ್ಟ್ ಮಾಡಿರಿ. ಆನಂತರ ಕಾಣಿಸುವ ಆಯ್ಕೆಗಳ ಪಟ್ಟಿಯಲ್ಲಿ ಕ್ವಾಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮಗೆ ಅಗತ್ಯವೆನಿಸುವ ಗುಣಮಟ್ಟದಲ್ಲಿ ಸೆಟ್‌ ಮಾಡಿ ವಿಡಿಯೊ ನೋಡಬಹುದಾಗಿದೆ.

ಯೂಟ್ಯೂಬ್‌

ಇದಲ್ಲದೆ ಫಾರ್ವರ್ಡ್ ಹಾಗೂ ಬ್ಯಾಕ್‌ವರ್ಡ್‌ ಯೂಟ್ಯೂಬ್‌ ವಿಡಿಯೊ ವೀಕ್ಷಿಸುವಾಗ ಫಾರ್ವರ್ಡ್‌ ಮತ್ತು ಬ್ಯಾಕ್‌ವರ್ಡ್‌ ಮಾಡಲು ಅವಕಾಶವಿದ್ದು, ಅದಕ್ಕಾಗಿ ಆಯ್ಕೆಗಳು ಇವೆ. ವಿಡಿಯೊವನ್ನು ಸುಮಾರು 10 ಸೆಕೆಂಡ್‌ಗೆ ಫಾರ್ವರ್ಡ್‌ ಮಾಡಲು ಪೇ ಆಗುತ್ತಿರುವ ವಿಡಿಯೊ ಡಿಸ್‌ಪ್ಲೇ ಬಲಕ್ಕೆ ಎರಡು ಟ್ಯಾಪ್‌ ಮಾಡಿರಿ. ಹಾಗೆಯೇ ಎಡಕ್ಕೆ ಡಬಲ್ ಟ್ಯಾಪ್ ಮಾಡಿದರೇ ವಿಡಿಯೊವು ಬ್ಯಾಕ್‌ವರ್ಡ್‌ ಆಗುತ್ತದೆ.

Best Mobiles in India

English summary
YouTube testing a timed reactions feature on its mobile apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X