ಜೂಮ್‌ ಆಪ್‌ನಲ್ಲಿ ಇನ್ಮುಂದೆ ಈ ಫೀಚರ್ಸ್‌ ಲಭ್ಯ; ಅವು ಯಾವುವು ಗೊತ್ತಾ?

|

ಜೂಮ್ ಕ್ಲೌಡ್ ಆಧಾರಿತ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಸಭೆಗಳು, ಆಡಿಯೊ ಕಾನ್ಫರೆನ್ಸಿಂಗ್, ವೆಬಿನಾರ್‌ಗಳು, ಲೈವ್ ಚಾಟ್‌ಗಾಗಿ ಇದನ್ನು ಬಳಕೆ ಮಾಡಲಾಗುತ್ತಿದ್ದು, ಇತ್ತೀಚೆಗೆ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅದರಂತೆ ಬಳಕೆದಾರರು ಇನ್ಮುಂದೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅನುಭವ ಪಡೆಯಬಹುದಾಗಿದೆ.

ಫೀಚರ್ಸ್‌

ಹೌದು, ಜೂಮ್ ಕಂಪೆನಿಯ ವಾರ್ಷಿಕ ಈವೆಂಟ್ Zoomtopia 2022 ನಲ್ಲಿ ಈ ಹೊಸ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಿದೆ. ಹಾಗೆಯೇ ಈ ಸಂಬಂಧ ಮಾತನಾಡಿರುವ ಜೂಮ್‌ನ ಸಿಇಒ ಎರಿಕ್ ಎಸ್. ಯುವಾನ್, ಕಂಪೆನಿಯು ಈ ವರ್ಷ ಜೂಮ್ ಪ್ಲಾಟ್‌ಫಾರ್ಮ್‌ನಲ್ಲಿ 1,500 ಕ್ಕೂ ಹೆಚ್ಚು ಫೀಚರ್ಸ್‌ಗಳನ್ನು ಪರಿಚಯಿಸಿದೆ ಎಂದು ತಿಳಿಸಿದ್ದಾರೆ. ಹಾಗಿದ್ರೆ ಜೂಮ್‌ನಲ್ಲಿ ಪ್ರಸ್ತುತ ಪರಿಚಯಿಸಲಾದ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಜೂಮ್ ಮೇಲ್ ಮತ್ತು ಕ್ಯಾಲೆಂಡರ್

ಜೂಮ್ ಮೇಲ್ ಮತ್ತು ಕ್ಯಾಲೆಂಡರ್

ಗೂಗಲ್ ಹಾಗೂ ಮೈಕ್ರೋಸಾಫ್ಟ್ ನೊಂದಿಗೆ ಸ್ಪರ್ಧಿಸಲು ಮುಂದಾಗಿರುವ ಜೂಮ್ ಹೊಸ ಮೇಲ್ ಮತ್ತು ಕ್ಯಾಲೆಂಡರ್ ಸೇವೆಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಹೊಸ ಜೂಮ್ ಮೇಲ್ ಮತ್ತು ಕ್ಯಾಲೆಂಡರ್ ಕ್ಲೈಂಟ್‌ಗಳು ಬಳಕೆದಾರರು ತಮ್ಮ ಇಮೇಲ್ ಮತ್ತು ಕ್ಯಾಲೆಂಡರ್ ಅನ್ನು ಪ್ರವೇಶಿಸಲು ಪ್ರತಿ ಬಾರಿ ವಿಡಿಯೋ ಕಾಲ್‌ ಮಾಡುವ ಪ್ಲಾಟ್‌ಫಾರ್ಮ್‌ ತೊರೆಯದಂತೆ ನೋಡಿಕೊಳ್ಳುತ್ತವೆ.

ಮೀಸಲಾದ ಐಟಿ ಸೇವೆ

ಇದರ ಜೊತೆಗೆ ಮೀಸಲಾದ ಐಟಿ ಸೇವೆಗಳನ್ನು ಹೊಂದಿಲ್ಲದ ಹಾಗೂ ಗೌಪ್ಯತೆ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕರಿಸಿದ ವ್ಯವಹಾರಗಳಿಗಾಗಿ, ಕಂಪೆನಿಯು ಈ ಇಮೇಲ್ ಮತ್ತು ಕ್ಯಾಲೆಂಡರ್ ಸೇವಾ ಆಯ್ಕೆಯನ್ನು ನೀಡಿದೆ. ಈ ಸೇವೆಯನ್ನು ನೇರವಾಗಿ ವಿಡಿಯೋ ಕರೆ ಮಾಡುವ ಜೂಮ್‌ ಪ್ಲಾಟ್‌ಫಾರ್ಮ್‌ ಜೊತೆ ಸಂಯೋಜಿಸಲಾಗುತ್ತದೆ. ಪ್ರಮುಖವಾಗಿ ಈ ಮೇಲ್ ಸೇವೆಯು ಎನ್‌ಕ್ರಿಪ್ಟ್ ಮಾಡಲ್ಪಟ್ಟಿದೆ ಎಂದು ಕಂಪೆನಿಯು ಖಚಿತಪಡಿಸಿದೆ.

ಜೂಮ್ ಸ್ಪಾಟ್‌ಗಳು

ಜೂಮ್ ಸ್ಪಾಟ್‌ಗಳು

ಜೂಮ್ ಸ್ಪಾಟ್‌ಗಳು ಕಂಪೆನಿಯು ಅಭಿವೃದ್ಧಿಪಡಿಸಿದ ವರ್ಚುವಲ್ ಕೋ- ವರ್ಕಿಂಗ್‌ ಸ್ಥಳವಾಗಿದೆ. ಇದು ವಿಡಿಯೋ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದ ನಿರಂತರವಾಗಿ ಬಳಕೆ ಮಾಡುವ ಪ್ಲೇಸ್‌ ಆಗಿದೆ. ಇದನ್ನು ಜೂಮ್ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸಲಾಗುತ್ತಿದ್ದು, 2023 ರ ಆರಂಭದಲ್ಲಿ ಬಳಕೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಅಂತರ್ಗತ ಚರ್ಚೆಗಳನ್ನು ಹೋಸ್ಟ್ ಮಾಡಲು, ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರಲು ಸಹಾಯ ಮಾಡಲಿದೆ.

ಜೂಮ್ ವರ್ಚುವಲ್ ಏಜೆಂಟ್ ಟೂಲ್ಸ್‌

ಜೂಮ್ ವರ್ಚುವಲ್ ಏಜೆಂಟ್ ಟೂಲ್ಸ್‌

ಜೂಮ್‌ನಲ್ಲಿ ಇದು ಪ್ರಮುಖವಾದ ಟೂಲ್ಸ್‌ ಆಗಿದೆ. ಈ ಮೂಲಕ ಗ್ರಾಹಕರಿಗೆ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತ್ವರಿತವಾಗಿ ಪರಿಹರಿಸಲು ಕಂಪೆನಿಯು ವಿನ್ಯಾಸಗೊಳಿಸಿದ AI ಮತ್ತು ಚಾಟ್‌ಬಾಟ್ ಟೂಲ್ಸ್‌ ಇದಾಗಿದ್ದು, ಮೆಷಿನ್ ಲರ್ನಿಂಗ್‌ ಭಾಷೆಯ ಆಯ್ಕೆಯನ್ನು ಇದರಲ್ಲಿ ಬಳಕೆ ಮಾಡಲಾಗುತ್ತದೆ. ಜೂಮ್ ವರ್ಚುವಲ್ ಏಜೆಂಟ್ ಬಹು ಬೆಂಬಲ ಚಾನಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸೌಲಭ್ಯ 2023 ರ ಆರಂಭದಲ್ಲಿ ಲಭ್ಯವಿರುತ್ತದೆ.

ಟೂಲ್ಸ್‌ ಬಳಕೆದಾರ

ಈ ಟೂಲ್ಸ್‌ ಬಳಕೆದಾರರಿಗೆ ಕರೆ ವಾಲ್ಯೂಮ್‌ಗಳನ್ನು ನಿಯಂತ್ರಣ ಮಾಡಲು ಸಹಾಯ ಮಾಡುವುದರ ಜೊತೆಗೆ ವ್ಯವಹಾರಗಳಿಗೆ ಸಂಬಂಧಿಸಿದ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಗೆ ಮಾಡುತ್ತದೆ.

ನಿರಂತರ ಸಹಯೋಗದ ಟೂಲ್ಸ್‌

ನಿರಂತರ ಸಹಯೋಗದ ಟೂಲ್ಸ್‌

ಜೂಮ್ ಒನ್ ಆಲ್-ಇನ್-ಒನ್ ಸಂವಹನ ಮತ್ತು ಸಹಯೋಗ ಪ್ಲಾಟ್‌ಫಾರ್ಮ್‌ ಆಗಿದ್ದು, ಇದು ಟೀಮ್ ಚಾಟ್, ಫೋನ್, ವೈಟ್‌ಬೋರ್ಡ್, ಮೀಟಿಂಗ್‌ಗಳು ಮತ್ತು ವರ್ಕ್‌ಸ್ಟ್ರೀಮ್‌ಗಳನ್ನು ಸಂಪರ್ಕಿಸಲು ಪರಿಕರಗಳನ್ನು ಒದಗಿಸಲಿದೆ. ಟೀಮ್ ಚಾಟ್ ಮತ್ತು ಇನ್-ಮೀಟಿಂಗ್ ಚಾಟ್ ನಡುವಿನ ಏಕೀಕರಣವು ಬಳಕೆದಾರರಿಗೆ ಹೆಚ್ಚಿನ ಸಹಾಯ ಮಾಡಲಿದೆ.

ಜೂಮ್ ಐಕ್ಯೂ ವರ್ಚುವಲ್ ಕೋಚ್

ಜೂಮ್ ಐಕ್ಯೂ ವರ್ಚುವಲ್ ಕೋಚ್

ಈ ಟೂಲ್ಸ್‌ಅನ್ನು ಮಾರಾಟ ಸೇವೆಗಾಗಿ ಬಳಕೆ ಮಾಡಬಹುದಾಗಿದೆ. ಜೂಮ್ ಐಕ್ಯೂ ವರ್ಚುವಲ್ ಕೋಚ್ ಮಾರಾಟಗಾರರಿಗೆ ತಮ್ಮ ಫೀಲ್ಡ್‌ನಲ್ಲಿ ಅಭ್ಯಾಸ ಮಾಡುವ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಹಾಗೆಯೇ ಬೇಕಾದ ಅಗತ್ಯ ಮಾಹಿತಿಯನ್ನು ನಿರಂತರವಾಗಿ ನೀಡುತ್ತಿರುತ್ತದೆ.

Best Mobiles in India

Read more about:
English summary
Zoom is a cloud-based video conferencing platform. Meanwhile, important features have now been introduced in Zoom.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X