ವಾಟ್ಸಾಪ್, ಇನ್‌ಸ್ಟಾಗ್ರಾಂ ಮತ್ತು ಮೆಸೆಂಜರ್ ಎಲ್ಲವೂ ಏಕ ಆಪ್‌ನಲ್ಲಿ!!

|

ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಆಪ್‌ಗಳ ಬಳಕೆ ಒಂದೇ ಆಪ್‌ನಲ್ಲಿ ಇದ್ದು, ಎಲ್ಲದಕ್ಕೂ ಒಂದೇ ಲಾಗಿನ್ ಅಕೌಂಟ್ ಇದ್ದರೆ ಹೇಗಿರುತ್ತದೆ?. ಹೌದು, ಭವಿಷ್ಯದಲ್ಲಿ ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್‌ಗಳು ಒಂದೇ ಆಪ್‌ನಲ್ಲಿ ಬರಲಿವೆ ಎಂದು ಹೇಳಲಾಗಿದೆ. ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಎಲ್ಲವಕ್ಕೂ ಒಂದೇ ಆಪ್ ರೂಪಿಸಲು ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಹೌದು, ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಪ್ರತಿಯೊಂದಕ್ಕೂ ಪ್ರತ್ಯೇಕ ಅಕೌಂಟ್ ಇದ್ದು, ಲಾಗಿನ್ ಅದು ಇದು ಎಂದೆಲ್ಲ ಕಿರಿಕಿರಿ ತಪ್ಪಿಸುವುದಕ್ಕಾಗಿಯೂ ಸಹ ಈ ಏಕ ಆಪ್‌ನಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಮಾರ್ಕ್ ಝುಕರ್ ‌ಬರ್ಗ್ ಅವರು ಜಾಹಿರಾತು ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಕೆಲ ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.

ವಾಟ್ಸಾಪ್, ಇನ್‌ಸ್ಟಾಗ್ರಾಂ ಮತ್ತು ಮೆಸೆಂಜರ್ ಎಲ್ಲವೂ ಏಕ ಆಪ್‌ನಲ್ಲಿ!!

ಈ ಏಕ ಆಪ್‌ ಅಭಿವೃದ್ದಿಯಾದರೂ ಸಹ ಈಗಿರುವಂತಯೇ ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಆಪ್‌ಗಳು ಪ್ರತ್ಯೇಕವಾಗಿಯೂ ಇರಲಿವೆ. ಅದರ ಜತೆಗೆ ಈ ಎಲ್ಲ ಮೂರು ಆಪ್‌ಗಳನ್ನು ಮಿಶ್ರ ಮಾಡಿ, ಎಲ್ಲವೂ ಒಂದೇ ಕಡೆ ದೊರೆಯುವಂತೆ ಮಾಡಲಾಗುತ್ತದೆ. ಮೂರು ಖಾತೆಗಳನ್ನು ಒಂದೇ ಆಪ್‌ನಲ್ಲಿ ಬಳಸಲು ಇಚ್ಚೆಯಿದ್ದವರು ಈ ಸಂಯುಕ್ತ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಲ್ಲದವರು ಬೇಕಾದ ಆಪ್‌ ಅನ್ನು ಉಪಯೋಗಿಸಬಹುದು ಎನ್ನಲಾಗಿದೆ.

ಫೇಸ್‌ಬುಕ್‌ನ ಈ ವಿಶೇಷ ಸಂಯುಕ್ತ ಆಪ್‌ನ ಮುಖ್ಯ ವಿಶೇಷವೆಂದರೆ, ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಮೂರರಲ್ಲೂ ಖಾತೆ ಹೊಂದಿರುವವರು ಮತ್ತು ಹೊಂದಿಲ್ಲದವರೂ ಸಹ ಒಬ್ಬರಿಗೊಬ್ಬರು ಸಂದೇಶ ಕಳುಹಿಸಬಹುದು. ಮತ್ತು ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿ, ಫೇಸ್‌ಬುಕ್ ಖಾತೆ ಇಲ್ಲದ, ಆದರೆ ವಾಟ್ಸ್‌ಆಪ್ ಖಾತೆ ಹೊಂದಿರುವ ವ್ಯಕ್ತಿಗೆ ಮೆಸೇಜ್ ಕಳುಹಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಲಾಗಿದೆ ಕುತೋಹಲಕಾರಿಯಾಗಿದೆ.

ವಾಟ್ಸಾಪ್, ಇನ್‌ಸ್ಟಾಗ್ರಾಂ ಮತ್ತು ಮೆಸೆಂಜರ್ ಎಲ್ಲವೂ ಏಕ ಆಪ್‌ನಲ್ಲಿ!!

ಇನ್ನು ಈ ಏಕ ಆಪ್‌ ಮತ್ತೊಂದು ವಿಶೇಷತೆಯನ್ನು ಸಹ ಹೊಂದಿರಲಿದೆ ಎಂದು ಹೇಳಲಾಗಿದೆ ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಖಾತೆಗಳನ್ನು ಒಂದರಲ್ಲಿಯೇ ಮಿಳಿತಗೊಳಿಸಿ, ಅದನ್ನೂ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಮಾಡಿ, ಬಳಕೆದಾರರಿಗೆ ಒದಗಿಸಲು ಝುಕರ್‌ಬರ್ಗ್ ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಾದರೆ, ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಎಲ್ಲದಕ್ಕೂ ಒಂದೇ ಲಾಗಿನ್ ಅಕೌಂಟ್ ಇದ್ದರೆ ಹೇಗಿರುತ್ತದೆ?. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Mark Zuckerberg, Facebook’s chief executive, plans to integrate the social network’s messaging services — WhatsApp, Instagram and Facebook Messenger. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X