ಅದ್ಭುತ! 15 ರ ಹರೆಯದ ಹುಡುಗನಿಂದ ಬಯಲಾದ ಮಾಯನ್ ನಾಗರೀಕತೆ

By Shwetha
|

1,700 ವರ್ಷಗಳ ಹಿಂದೆಯೇ ಜನ್ಮತಾಳಿದ್ದು ಎನ್ನಲಾದ ಮಾಯನ್ ನಾಗರೀಕತೆ ಅಪರೂಪದ ಕುರುಹುಗಳನ್ನು ಬಿಟ್ಟು ತಮ್ಮ ನಾಗರೀಕತೆ ಇಲ್ಲಿ ಇದ್ದುದು ಹೌದು ಎಂಬುದನ್ನು ಖಾತ್ರಿಪಡಿಸಿದೆ. ಆದರೆ ಈ ನಾಗರೀಕತೆಯ ಅನ್ವೇಷಣೆಯನ್ನು ಹದಿನೈದರ ಹರೆಯದ ಪೋರನೊಬ್ಬ ಹೊರತೆಗೆದಿದ್ದು ಈ ಪುರಾತನ ಮೆಕ್ಸಿಕನ್ ಜನರ ಸ್ಯಾಟಲೈಟ್ ಫೋಟೋಗಳು ಅಂತೆಯೇ ಮಾಯನ್ ನಗರದ ನಕ್ಷೆಯನ್ನು ಬಿತ್ತರಿಸಿದೆ. ಕಳೆದು ಹೋದ ನಗರವೆಂಬುದಾಗಿ ಈ ನಾಗರೀಕತೆ ಪ್ರಸಿದ್ಧವಾಗಿದ್ದು ಬೆಂಕಿಗೆ ಬಲಿಯಾಗಿತ್ತು ಎಂಬುದು ಸಾಕ್ಷ್ಯಗಳಿಂದ ತಿಳಿದು ಬಂದಿರುವುದು.

ಸ್ಯಾಟಲೈಟ್ ಚಿತ್ರಗಳು ಹೇಳಿರುವಂತೆ ಇದು ಅತ್ಯಂತ ಎತ್ತರದ ಕಟ್ಟಡಗಳನ್ನು ಹೊಂದಿತ್ತು ಎಂಬುದಾಗಿದ್ದು ಈ ನಾಗರೀಕತೆಯ ಜನನವಾಗಿರುವುದು 300 ಮತ್ತು 700 ಏಡಿಯಾಗಿದೆ. ಈ ನಾಗರೀಕತೆಯು ನಕ್ಷತ್ರಗಳನ್ನು ಪೂಜಿಸುತ್ತಿದ್ದವು ಮತ್ತು ತಮ್ಮ ನಗರಗಳನ್ನು ನದಿಗಳಿಂದ ಬಹುದೂರ ನಿರ್ಮಿಸಿದ್ದವು ಎಂದಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಈ ನಾಗರೀಕತೆಯ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ಪರಿಶೋಧಿಸೋಣ.

#1

#1

ಹದಿನೈದರ ಪೋರನು 23 ಮಾಯನ್ ಪುಂಜಗಳನ್ನು ಅಭ್ಯಸಿಸಿದ್ದು ಇವುಗಳನ್ನು ಒಟ್ಟುಗೂಡಿಸಿದಾಗ 142 ನಕ್ಷತ್ರಗಳಿಂದ 177 ಮಾಯನ್ ನಗರಗಳು ಸ್ಥಿತಿಯು ಒಗ್ಗೂಡಿದೆ ಎಂದಾಗಿದೆ.
ಚಿತ್ರಕೃಪೆ: ಡೈಲಿ ಮೇಲ್

#2

#2

ಈ ಹುಡುಗನ ಹೆಸರು ವಿಲಿಯಮ್ ಗೇಡರಿ ಎಂದಾಗಿದ್ದು ತನ್ನದೇ ಸಿದ್ಧಾಂತವನ್ನು ಬಳಸಿಕೊಂಡು ಮಾಯನ್ ನಗರದ ಅನ್ವೇಷಣೆಯನ್ನು ಪತ್ತೆಮಾಡಿದ್ದಾನೆ. ನಕ್ಷತ್ರಗಳನ್ನು ಈ ಜನಾಂಗವು ಪೂಜಿಸುತ್ತಿದ್ದುದರಿಂದ ಪುಂಜಗಳ ಮಾದರಿಯಲ್ಲೇ ಇವರುಗಳು ತಮ್ಮ ಕಟ್ಟಗಳನ್ನು ಸಾಲಾಗಿ ನಿರ್ಮಿಸಿದ್ದಾರೆ.
ಚಿತ್ರಕೃಪೆ: ಡೈಲಿ ಮೇಲ್

#3

#3

ಕ್ಯಾನಡಿಯನ್ ಸ್ಪೇಸ್ ಏಜೆನ್ಸಿಯಿಂದ ಚಿತ್ರಗಳನ್ನು ಈ ಹುಡುಗನು ಬಳಸಿಕೊಂಡಿದ್ದು ಕಟ್ಟಗಳ ಪತ್ತೆಗಾಗಿ ಗೂಗಲ್ ಅರ್ತ್ ಆಳವಾದ ಅರಣ್ಯವನ್ನು ಪರಿಶೋಧಿಸಿದೆ.
ಚಿತ್ರಕೃಪೆ: ಡೈಲಿ ಮೇಲ್

#4

#4

ಹೆಚ್ಚು ಗಾಢವಾದ ನಕ್ಷತ್ರಗಳಿಂದ ದೊಡ್ಡ ಕಟ್ಟಗಳು ಸಾಮ್ಯತೆಯನ್ನು ಪಡೆದುಕೊಂಡಿವೆ. ಹೆಚ್ಚು ಪ್ರಕಾಶಮಾನವಾಗಿರುವ ನಕ್ಷತ್ರಗಳು ಅತಿ ದೊಡ್ಡ ಮಾಯನ್ ನಗರಗಳಿಗೆ ತಾಳೆಯಾಗುತ್ತಿವೆ. ಇದಕ್ಕೆ ಸಂಪರ್ಕವನ್ನು ಪಡೆದುಕೊಂಡು ನಂತರ ಅಧ್ಯಯನವನ್ನು ನಡೆಸಬೇಕು ಎಂಬುದು ಗೇಡರಿ ಮಾತಾಗಿದೆ.
ಚಿತ್ರಕೃಪೆ: ಡೈಲಿ ಮೇಲ್

#5

#5

23 ನೇ ನಕ್ಷತ್ರ ಪುಂಜವು ಮೂರು ನಕ್ಷತ್ರಗಳನ್ನು ಒಳಗೊಂಡಿದ್ದು, ನಕ್ಷೆಯಲ್ಲಿರುವ ಎರಡು ನಗರಗಳಿಗೆ ಇದು ಹೊಂದಿಕೆಯಾಗುತ್ತಿದೆ. ಅದರಲ್ಲಿ ಒಂದನ್ನು ಇನ್ನೂ ಪತ್ತೆಮಾಡಬೇಕಾಗಿದೆ ಎಂದಾಗಿದೆ.
ಚಿತ್ರಕೃಪೆ: ಡೈಲಿ ಮೇಲ್

#6

#6

ಇನ್ನಷ್ಟು ಶೋಧನೆಯನ್ನು ನಡೆಸಲು, ಕ್ಯಾನಡಿಯನ್ ಸ್ಪೇಸ್ ಏಜೆನ್ಸಿಯಿಂದ ಸ್ಯಾಟಲೈಟ್ ಚಿತ್ರಗಳನ್ನು ಈತ ಬಳಸಿಕೊಂಡಿದ್ದು ಗೂಗಲ್ ಅರ್ತ್ ಕೂಡ ದಟ್ಟಾರಣ್ಯದಲ್ಲಿ ಕಟ್ಟಡಗಳಿಗಾಗಿ ಶೋಧ ಕಾರ್ಯವನ್ನು ನಡೆಸುತ್ತಿದೆ.
ಚಿತ್ರಕೃಪೆ: ಡೈಲಿ ಮೇಲ್

#7

#7

ಪಿರಾಮಿಡ್ ಆಕಾರದಲ್ಲಿ 30 ಕಟ್ಟಡಗಳು ಇರಬಹುದಾದ ಸಾಧ್ಯತೆ ಇದೆ ಎಂಬುದು ಯೂನಿವರ್ಸಿಟಿಯ ಪ್ರೊಫೆಸರ್ ಅರ್ಮಾಂಡ್ ಲಾ ರೋಕ್ ಮಾತಾಗಿದೆ. ಈ ಚೌಕವು ನೈಸರ್ಗಿಕವಲ್ಲ ಇದು ಕೃತಕವಾಗಿರುವ ಸಾಧ್ಯತೆ ಇದ್ದು ನೈಸರ್ಗಿಕ ವಿದ್ಯಮಾನಗಳಿಗೆ ಕಾರಣವಾಗಿರಬಹುದು ಎಂಬುದು ಅವರ ಮಾತಾಗಿದೆ.
ಚಿತ್ರಕೃಪೆ: ಡೈಲಿ ಮೇಲ್

#8

#8

ಸುಧಾರಿತ ಯಂತ್ರಗಳನ್ನು ಬಳಸಿಕೊಂಡು ಪುರಾತನ ಜನರು ಕಟ್ಟಡಗಳನ್ನು ನಿರ್ಮಿಸಿದ್ದು ಸುಧಾರಿತ ಕೃಷ್ಟಿ ಪದ್ಧತಿ ಮತ್ತು ನಿಖರ ಕ್ಯಾಲೆಂಡರ್‌ಗಳನ್ನು ಇವರುಗಳು ಪತ್ತೆಮಾಡಿದ್ದಾರೆ.
ಚಿತ್ರಕೃಪೆ: ಡೈಲಿ ಮೇಲ್

#9

#9

ಬ್ರಹ್ಮಾಂಡವು ತಮ್ಮ ಜೀವನವನ್ನು ಆಕಾರಪಡಿಸುತ್ತಿವೆ ಎಂಬುದಾಗಿ ಈ ನಾಗರೀಕತೆಯ ಜನರು ನಂಬಿದ್ದು ಬೆಳೆಗಳನ್ನು ಯಾವಾಗ ಬೆಳೆಸಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರವನ್ನು ಅನುಸರಿಸಿ ಮನಗಾಣುತ್ತಿದ್ದರು ಮತ್ತು ಕ್ಯಾಲೆಂಡರ್‌ಗಳನ್ನು ಅಂತೆಯೇ ಹೊಂದಿಸಿದ್ದರು.
ಚಿತ್ರಕೃಪೆ: ಡೈಲಿ ಮೇಲ್

#10

#10

ನಕ್ಷತ್ರ ಪುಂಜಗಳ ಮಾದರಿಯಂತೆಯೇ ಅವರುಗಳು ತಮ್ಮ ನಗರಗಳನ್ನು ಕಟ್ಟಿದ್ದರು ಎಂಬುದು ಪುರಾತನ ಮಾಹಿತಿಗಳಿಂದ ತಿಳಿದು ಬಂದಿರುವಂತಹದ್ದಾಗಿದೆ.
ಚಿತ್ರಕೃಪೆ: ಡೈಲಿ ಮೇಲ್

#11

#11

ಮಾಯನ್ ನಾಗರೀಕತೆಯನ್ನು ಪತ್ತೆಮಾಡಿರುವ ವಿಲಿಯಮ್ ಗೇಡರಿ ಈ ನಾಗರೀಕತೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ಹಾಗೂ ಅವರುಗಳ ಕ್ಯಾಲೆಂಡರ್‌ಗಳಲ್ಲಿ ವಿಶ್ವದ ಕೊನೆಯು 2012 ಎಂದಾಗಿತ್ತು.
ಚಿತ್ರಕೃಪೆ: ಡೈಲಿ ಮೇಲ್

#12

#12

ಮಾಯನ್ ಕೋಡೆಕ್ಸ್ ಮಾಡ್ರಿಡ್‌ನಲ್ಲಿ 22 ಪುಂಜಗಳನ್ನು ಇವನು ಪತ್ತೆಮಾಡಿದ್ದು ಇವುಗಳನ್ನು ನಕ್ಷತ್ರಗಳಿಗೆ ಜೋಡಿಸಿ ನಕ್ಷೆಯನ್ನು ಈತ ರಚಿಸಿದ್ದಾನೆ.
ಚಿತ್ರಕೃಪೆ: ಡೈಲಿ ಮೇಲ್

#13

#13

ನಗರಗಳು ಇರುವಂತಹ ಸ್ಥಳದಲ್ಲಿ ನಕ್ಷತ್ರಗಳ ಜೋಡಣೆಯನ್ನು ಹುಡುಕಿಕೊಂಡು ಗೂಗಲ್ ಅರ್ತ್‌ನ ಸ್ಯಾಟಲೈಟ್ ಚಿತ್ರಗಳನ್ನು ಬಳಸಿಕೊಂಡು ಪತ್ತೆಹಚ್ಚಿದ್ದಾನೆ.

#14

#14

ಸಂಪೂರ್ಣವಾಗಿ 142 ನಕ್ಷತ್ರಗಳು 117 ಮಾಯನ್ ನಗರಗಳಿಗೆ ಹೊಂದಿಕೆಯಾಗುತ್ತಿದ್ದು ಹೆಚ್ಚು ಪ್ರಕಾಶಮಾನವಾದ ನಕ್ಷತ್ರವು ದೊಡ್ಡ ನಗರಗಳನ್ನು ಸೂಚಿಸಿದೆ.
ಚಿತ್ರಕೃಪೆ: ಡೈಲಿ ಮೇಲ್

#15

#15

ಡಾ. ಲ ರಾಕ್ ಹೇಳುವಂತೆ ವಿಲಿಯಮ್ ಗೇಡರಿಯು ಪತ್ತೆಹಚ್ಚಿರುವ ದಾಖಲೆಗಳು ಕಳೆದು ಹೋಗಿರುವ ಮಾಯನ್ ನಾಗರೀಕತೆಯನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಗೇಡರಿಯ ಅನ್ವೇಷಣೆಯನ್ನು ಬ್ರೆಜಿಲ್‌ನ ಅಂತರಾಷ್ಟ್ರೀಯ ಸೈನ್ಸ್ ಫೇರ್‌ನಲ್ಲಿ ಇರಿಸಲಾಗಿದ್ದು ಪತ್ರಿಕೆಯಲ್ಲಿ ಮಾಹಿತಿಗಳನ್ನು ಪ್ರಕಟಿಸಲಾಗಿದೆ.
ಚಿತ್ರಕೃಪೆ: ಡೈಲಿ ಮೇಲ್

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!</a><br /><a href=ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!
2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು" title="ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!
2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು" />ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!
2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
15-year-old boy has studied astronomical charts devised by these ancient Mexican people, as well as satellite photos, to pinpoint the location of a forgotten Mayan city.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X