ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ

By Suneel
|

"Homunculus"(ಗಿಡ್ಡ ಮನುಷ್ಯ), ತಯಾರು ಮಾಡುವ ಒಂದು ಇತಿಹಾಸ 16ನೇ ಶತಮಾನದ್ದು. ರಾಸಾಯನಿಕ ಪಾಕವಿಧಾನದಿಂದ ತಯಾರಿಸುವ 'ಗಿಡ್ಡ ಮನುಷ್ಯ'ನನ್ನು ಇಂದಿಗೂ ಸಹ ಪ್ಯಾರಾಸೆಲ್ಸಸ್‌ ಎಂಬ ವಿಜ್ಞಾನಿಯ ಮಾದರಿಯಿಂದ ತಯಾರಿಸಲು ಹಲವು ವಿಜ್ಞಾನಿಗಳಲ್ಲದವರು ಸಹ ತಯಾರಿಸಲು ಪ್ರಯತ್ನಿಸುತ್ತಾರೆ. ಅಲ್ಲದೇ "ಗಿಡ್ಡ ಮನುಷ್ಯ" ತಯಾರಿಸುವ ಒಂದು ವಿಧಾನವು 19ನೇ ಶತಮಾನದ ವೈಜ್ಞಾನಿಕ ಬರಹಗಳಲ್ಲೂ ಪ್ರಖ್ಯಾತವಾಗಿರುವುದನ್ನು ನೋಡಬಹುದಾಗಿದೆ. ಬಹುಸಂಖ್ಯಾತ ಇಂಗ್ಲೀಷ್‌ ಸಿನಿಮಾಗಳಲ್ಲಿ "ಗಿಡ್ಡ ಮನುಷ್ಯ"ನ ಬಗ್ಗೆ ನೋಡಬಹುದಾಗಿದೆ. ಮನುಷ್ಯನ ಆಕಾರ ಇರುವ ಮಾನವ ಚಟುವಟಿಕೆ ಹೊಂದಿರುವ ಗಿಡ್ಡ ಮನುಷ್ಯನ ಬಗ್ಗೆ ಇಂದಿನ ಲೇಖನದಲ್ಲಿ ಹೇಳಲು ಕಾರಣವೆಂದರೆ ಪ್ರಸ್ತುತದಲ್ಲಿ ರಷ್ಯಾದ 'ಕಾರ್ನೆ" ಎಂಬುವವರು ಯಶಸ್ವಿಯಾಗಿ "ಗಿಡ್ಡ ಮನುಷ್ಯ"ನನ್ನು ಅಭಿವೃದ್ದಿಪಡಿಸಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

1

1

ಪ್ಯಾರಾಸೆಲ್ಸಸ್‌, ಸ್ವಿಸ್‌ ಜರ್ಮನ್‌ ತತ್ವಜ್ಞಾನಿ, ಭೌತಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞರು, ಹದಿನಾರನೇ ಶತಮಾನದ ಜ್ಯೋತಿಷಿ ಮಾತ್ರವಲ್ಲದೇ ಇವರು 'ಗಿಡ್ಡ ಮನುಷ್ಯ (Homunculus)" ಸೃಷ್ಟಿಸುವ ವಿಧಾನವನ್ನು ಬರೆದರು.

2

2

ಅಂದಹಾಗೆ ಗಿಡ್ಡ ಮನುಷ್ಯನನ್ನು ವರ್ಣರಂಜಿತವಾಗಿ ರಾಸಾಯನಿಕ ವಿಧಾನಗಳ ಮೂಲಕ ಪ್ಯಾರಾಸೆಲ್ಸಸ್‌'ರವರು ಅಭಿವೃದ್ದಿಪಡಿಸಿದ್ದರು. ಇದರಿಂದ ಅವರಿಗೆ ಸಿಕ್ಕ ಹೆಸರೆಂದರೆ "ಹುಚ್ಚು ವಿಜ್ಞಾನಿ".

3

3

ಪ್ಯಾರಾಸೆಲ್ಸಸ್'ರವರು ರಾಸಾಯನಿಕ ವಿಧಾನದಿಂದ 'ಗಿಡ್ಡ ಮನುಷ್ಯ"ನನ್ನು ತಯಾರಿಸುವ ಮುನ್ನ ಹಲವು ಉತ್ತಮವಾದ ಬರಹಗಳು ಬಂದಿದ್ದವು.

4

4

1775 ರಲ್ಲಿ 'ಕೌಂಟ್‌ ಜೊಹನ್‌ ಫರ್ಡಿನಾಂಡ್‌ ವೊನ್‌ ಕುಫ್‌ಸ್ಟೇನ್‌'ರವರು 'ಅಬ್ಬೆ ಗೆಲೊನಿ' ಜೊತೆಗೂಡಿ 10 ಗಿಡ್ಡ ಮುನುಷ್ಯಗಳನ್ನು ತಯಾರಿಸಿದ್ದರು. ಈ ಗಿಡ್ಡ ಮನುಷ್ಯಗಳನ್ನು ವಿಯೆನ್ನಾದಲ್ಲಿ 'ವೊನ್‌ ಕುಫ್‌ಸ್ಟೇನ್‌'ರ ಮಸಾನಿಕ್‌ ಲಾಡ್ಜ್‌ನಲ್ಲಿ ಗಾಜಿನ ಬಟ್ಟಲಿನಲ್ಲಿ ಶೇಖರಿಸಲಾಗಿತ್ತು.

5

5

ತಂತ್ರಜ್ಞಾನ ಯುಗದಲ್ಲಿರುವ ಎಲ್ಲರಿಗೂ ಇಂದಿಗೂ ಸಹ ಕೃತಕ ಗಿಡ್ಡ ಮನುಷ್ಯಗಳನ್ನು ತಯಾರಿಸುವುದು ಕುತೂಹಲವೇ ಆಗಿದೆ. ವಿಜ್ಞಾನಿಗಳು ಅಥವಾ ವಿಜ್ಞಾನಿಗಳಲ್ಲದವರು ಸಹ ಪ್ಯಾರಾಸೆಲ್ಸಸ್'ರವರ ರಾಸಾಯನಿಕ ಮೂಲ ಆಧಾರದಿಂದ ಗಿಡ್ಡ ಮನುಷ್ಯರನ್ನು ತಯಾರಿಸಲು ಪ್ರಯತ್ನಿಸುತ್ತಾರೆ.

6

6

ಪ್ರಸ್ತುತದಲ್ಲಿ ರಷ್ಯಾದ ಯೂಟ್ಯೂಬರ್‌'ಕಾರ್ನೆ' ಎಂಬುವವರು ಪ್ಯಾರಾಸೆಲ್ಸಸ್‌'ರವರ ರಾಸಾಯನಿಕ ಪಾಕವಿಧಾನದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ವೀಡಿಯೋವನ್ನು ಅವರ ಚಾನೆಲ್‌ "Как Сделать" ಅಪ್‌ಲೋಡ್‌ ಮಾಡಿದ್ದಾರೆ. ಮುಂದಿನ ಸ್ಲೈಡ್‌ನಲ್ಲಿ ವೀಡಿಯೋ ನೋಡಿ.

7

ಕಾರ್ನೆ'ರವರು ಗಿಡ್ಡ ಮುನುಷ್ಯನನ್ನು ತಯಾರಿಸಲು ಕುದುರೆ ಗೊಬ್ಬರ ಬಳಸುವ ಬದಲು ಮೊಟ್ಟೆಯನ್ನು (ಮಾರುಕಟ್ಟೆಯಲ್ಲಿ ಬಳಸುವ ಮೊಟ್ಟೆಯಲ್ಲ) ಮತ್ತು ಸೀಲೇಬಲ್‌ ಪ್ಲಾಸ್ಟಿಕ್‌ ಕಂಟೈನರ್‌ ಬಳಸಿ ಗಿಡ್ಡ ಮನುಷ್ಯನ ಮಾದರಿಗಳನ್ನು ಶೇಖರಿಸಿದ್ದಾರೆ.
ವೀಡಿಯೋ ಕೃಪೆ :"Как Сделать"

8

8

ವೀಡಿಯೋದಲ್ಲಿ ನೋಡಿದ ಗಿಡ್ಡ ಮನುಷ್ಯ ತಯಾರಿಕೆಯು ಕಾರ್ನೆ'ರವರ ಮೊದಲ ಪಯತ್ನವಾಗಿತ್ತು ಹಾಗೂ ಸಂಪೂರ್ಣ ಯಶಸ್ವಿಯಾಗಿ ತಯಾರು ಮಾಡಲಾಗಿತ್ತು. ಆದರೆ ಸ್ವಲ್ಪ ಏಲಿಯನ್‌ ರೀತಿಯಲ್ಲಿ ಕಾಣುತ್ತಿತ್ತು. ಬಹುಬೇಗ ತೀರಿಕೊಂಡಿತು ಎನ್ನಲಾಗಿದೆ.
ಮುಂದಿನ ವೀಡಿಯೋ ನೋಡಿ

9

ಅಂದಹಾಗೆ 2ನೇ, 3ನೇ, 4ನೇ ಪ್ರಯತ್ನಗಳು ಯಶಸ್ವಿಕಾಣಲಿಲ್ಲ. 5ನೇ ಪ್ರಯತ್ನದಲ್ಲಿ ಗಿಡ್ಡ ಮನುಷ್ಯ ಆಕ್ರಮಣಕಾರಿಯಾಗಿ ಪ್ರದರ್ಶಿತವಾಯಿತಂತೆ.
ವೀಡಿಯೋ ಕೃಪೆ :Как Сделать .

ಗಿಜ್‌ಬಾಟ್‌

ಗಿಜ್‌ಬಾಟ್‌

8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ

ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ</a><a href= ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು" title="ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು" />ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
This Russian Man Almost Successfully Created A Homunculus. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X