ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

By Suneel
|

ಯಾವುದೇ ಸಂಶಯವಿಲ್ಲದೇ ವಾಟ್ಸಾಪ್ ಪ್ರಪಂಚದ ಪ್ರಖ್ಯಾತ ಮೆಸೇಜಿಂಗ್ ಆಪ್‌ ಎಂದು ಹೇಳಬಹುದು. 1 ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಮೆಸೇಜಿಂಗ್ ಆಪ್‌ ವೈಫೈ ಸಂಪರ್ಕದಿಂದಲೂ ವರ್ಕ್‌ ಆಗುತ್ತದೆ. ಅಲ್ಲದೇ ಪ್ರಪಂಚದಾದ್ಯಂತ ಯಾವುದೇ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ಇತರೆ ದೇಶದಲ್ಲಿರುವ ಸ್ನೇಹಿತರಿಗೆ ಕರೆ ಮಾಡಲು ಕರೆ ದರ ಹೆಚ್ಚು ಎಂದು ಹೇಳಬಹುದು. ಆದರೆ ವಾಟ್ಸಾಪ್‌ನಲ್ಲಿ ಕರೆ ದರ, ಎಸ್‌ಎಂಎಸ್ ದರ, ವೀಡಿಯೊ ಕರೆ ದರ, ಈ ರೀತಿ ಹಣ ಕಡಿತಗೊಳ್ಳುವ ಯಾವುದೇ ಭಯವಿಲ್ಲದೇ ಯಾವುದೇ ದೇಶದ ಸ್ನೇಹಿತನಿಗೆ ಕರೆ ಮಾಡಬಹುದು.

ವಾಟ್ಸಾಪ್‌'ನಿಂದ ಬಳಕೆದಾರರು ಬಯಸುತ್ತಿರುವ ಟಾಪ್‌ 5 ಹೊಸ ಫೀಚರ್‌ಗಳಿವು!

ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ವಾಟ್ಸಾಪ್ ಇದೀಗತಾನೆ ವೀಡಿಯೊ ಕರೆ ಫೀಚರ್‌ ಅನ್ನು ಅಧಿಕೃತವಾಗಿ ಲಾಂಚ್‌ ಮಾಡಿದೆ. ಆದರೆ ಇದೇ ವಿಷಯ ಬಳಸಿಕೊಂಡು ಹಲವು ವಂಚಕರು ವಿವಿಧ ರೀತಿಯ ಮೆಸೇಜ್‌ಗಳನ್ನು ವಾಟ್ಸಾಪ್‌ನಲ್ಲಿ ಹರಿಯಬಿಡುತ್ತಿದ್ದಾರೆ. ಪ್ರಪಂಚದ ಎಲ್ಲಾ ಕಡೆಯು ಸಹ ವಾಟ್ಸಾಪ್ ಬಳಕೆದಾರರನ್ನು ಟಾರ್ಗೆಟ್ ಮಾಡಿ ವಂಚಿಸಲು ಹಲವು ರೀತಿಯ ಮೆಸೇಜ್‌ಗಳನ್ನು ರವಾನಿಸುತ್ತಿದ್ದಾರೆ. ಮೆಸೇಜ್‌ ಈ ಕೆಳಗಿನಂತಿದೆ.

ಪ್ರೈಜ್‌ ಸ್ಕೀಮ್‌ನಲ್ಲಿ ರೀಚಾರ್ಜ್ ಆಫರ್, ಬಂಡವಾಳ ಹೂಡಿಕೆ ಎಂಬ ವಂಚನೆಯ ಅಪ್‌ಡೇಟ್‌ಗಳು ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ಪ್ರಸ್ತುತದಲ್ಲಿ ಲೇಟೆಸ್ಟ್‌ ಆಗಿ ವಾಟ್ಸಾಪ್‌ನಲ್ಲಿ ಈಗ "Lucky Wheel, Video Calls Invitation' ಮತ್ತು ಪ್ರೈಜ್ ಕುರಿತ ವಂಚನೆಯ ಫೇಕ್ ಮೆಸೇಜ್‌ಗಳು ಹರಿದಾಡುತ್ತಿವೆ. ಈ ಬಗ್ಗೆ ವಾಟ್ಸಾಪ್‌ ಬಳಕೆದಾರರು ಎಚ್ಚರ ವಹಿಸಲೇಬೇಕಾದ ಮಾಹಿತಿಗಳನ್ನು ಮುಂದೆ ಓದಿರಿ.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ವಿಶೇಷ ಅಂದ್ರೆ Bit.ly URL bit(dot)ly/globalwheel ಈಗಾಗಲೇ ಒಟ್ಟಾರೆ 432.205 ಕ್ಲಿಕ್‌ ಪಡೆದಿದೆ. ಇದರಿಂದ ತಿಳಿಯಬೇಕಾದ ಗಾಬರಿ ಪಡುವ ಮಾಹಿತಿ ಎಂದರೆ ಇಷ್ಟು ಜನರು ಸಹ ಈಗಾಗಲೇ ವಂಚನೆಗೆ ಒಳಗಾಗಿದ್ದಾರೆ.

ಮೇಲೆ ತಿಳಿಸಿದ url ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಬ್ರೌಸರ್ ವೆಬ್‌ಸೈಟ್‌ ಓಪನ್ ಮಾಡುತ್ತದೆ. ನಂತರ ಶೀಘ್ರದಲ್ಲಿ xfgnh(dot)trackvoluum(dot)com/58ba40d7-5485-44c1-8150-020da320e90a ಲಿಂಕ್ ಓಪನ ಮಾಡುತ್ತದೆ. ಪುನಃ luckywheel(dot)mobpromo(dot)net/iphone/lp4/index.html ಈ ಲಿಂಕ್‌ಗೆ ರೀಡೈರೆಕ್ಟ್ ಆಗುತ್ತದೆ.


ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ಓಪನ್‌ ಆಗುವ ವೆಬ್‌ಪೇಜ್‌ ಫೇಸ್‌ಬುಕ್‌ ವಿನ್ಯಾಸದ ಪೇಜ್‌ ಒಂದನ್ನು ಡಿಸ್‌ಪ್ಲೇ ಮಾಡುತ್ತದೆ. ಇಲ್ಲಿ ವೀಲ್ ಸ್ಪಿನ್‌ ಮಾಡಲು ಅವಕಾಶ ನೀಡಲು ನೀಡಲಾಗಿರುತ್ತದೆ. ಈ ಪೇಜ್‌ಗೆ ಭೇಟಿ ನೀಡಿದ ಬಳಕೆದಾರ ದೀರ್ಘಕಾಲ ವೀಲ್ ಅನ್ನು ಪ್ಲೇ ಮಾಡಬಹುದು.

ಪೇಜ್‌ಗೆ ಭೇಟಿ ನೀಡಿದವರು ವೀಲ್ ಸ್ಪಿನ್‌ ಮಾಡುವ ಗೇಮ್‌ ಆಡಲು ಪ್ರಯತ್ನಿಸಿ, Spin ಆಪ್ಶನ್‌ ಕ್ಲಿಕ್‌ ಮಾಡಿದರೆ ನಂತರ ಪಾಪಪ್‌ ಸ್ಕ್ರೀನ್‌ ಒಂದು ಗೇಮ್‌ ಆರಂಭಿಸಲು ಓಕೆ ಕ್ಲಿಕ್ ಮಾಡಿ ಎಂದು ಹೇಳುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ಓಕೆ ಕ್ಲಿಕ್ ಮಾಡಿದ ನಂತರ, ಪ್ರತಿ ಸಿಂಗಲ್ ಕ್ಲಿಕ್ ನಂತರ, ಹೆಚ್ಚಿನ ಸ್ಪಿನ್‌'ಗಾಗಿ ಗೇಮ್‌ ಆಡಲು 'Win' ಎಂದು ಪಡೆಯುತ್ತೀರಿ.

ಹಲವು ಟ್ರಯಲ್‌ಗಳ ನಂತರ ಅಂತಿಮವಾಗಿ ನೀವು ಒಂದು ಡಯಲಾಗ್ ಬಾಕ್ಸ್ ಪ್ರದರ್ಶನ ಪಡೆಯುತ್ತೀರಿ. ಅದರಲ್ಲಿ "Congratulations!" ಎಂದು ಹೇಳಲಾಗಿರುತ್ತದೆ. ನಿಮ್ಮ ಗರಿಷ್ಟ ಫ್ರೈಜ್ : ಹೊಸ ಸ್ಯಾಮ್‌ಸಂಗ್ ಎಸ್‌6 ಸ್ಮಾರ್ಟ್‌ಫೋನ್‌, ಎಂದು ಹೇಳಲಾಗಿರುತ್ತದೆ. ನಂತರ ಪ್ರೈಜ್ ಗೆಲ್ಲಲ್ಲು ಪ್ಲೀಸ್ ಈ ಸೂಚನೆಗಳನ್ನು ಪಾಲಿಸಿ ಎಂದು ಹೇಳಿ ಒಂದು ಆಪ್ಶನ್‌ ಅನ್ನು ಕ್ಲಿಕ್ ಮಾಡಲು ನೀಡುತ್ತದೆ.


ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ಒಮ್ಮೆ ಕ್ಲಿಕ್ ಮಾಡಿದರೆ "Your samsung S6 has been reserved" ಎಂದು ಮೆಸೇಜ್ ಪ್ರದರ್ಶನವಾಗುತ್ತದೆ. ಆರ್ಡರ್‌ ಮಾಡಲು ಮುಂದುವರೆಸಬೇಕಾಗುತ್ತದೆ. ನಂತರ "Lucky Wheel" ಆಪ್ಶನ್ ಅನ್ನು ಶೇರ್‌ ಮಾಡಲು ಕೊಡಲಾಗಿರುತ್ತದೆ. ಇದನ್ನು 10 ವಾಟ್ಸಾಪ್ ಸ್ನೇಹಿತರಿಗೆ ಕಳುಹಿಸಬೇಕಾಗಿರುತ್ತದೆ.

ಬೇಸಿಕಲಿ ಈ ವಂಚನೆ ಮೆಸೇಜ್‌ ಅನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಬೇಕಾಗುತ್ತದೆ. ಅಲ್ಲದೇ ಈ ಆಫರ್ 300 ಸೆಕೆಂಡ್ ವರೆಗೆ ಮಾತ್ರ ಲಭ್ಯ ಎಂದು ಒತ್ತಡ ಹೇರಲಾಗಿರುತ್ತದೆ. ನೀವು ಕಂಡಿತ ವಂಚನೆ ಮೆಸೇಜ್‌ ಅನ್ನು ನಂತರ 10 ಸ್ನೇಹಿತರಿಗೆ ಕಳುಹಿಸುತ್ತೀರಿ. ಸ್ಯಾಮ್‌ಸಂಗ್ ರಿಸರ್ವ್‌ ಆಗಿದೆ, ಪ್ರೈಜ್‌ ಪಡೆಯಲು ನಿಮ್ಮ ಮೊಬೈಲ್ ನಂಬರ್‌ ಅನ್ನು ಮುಂದಿನ ಪೇಜ್‌ನಲ್ಲಿ ಖಚಿತಪಡಿಸಿ ಎಂದು ಮೆಸೇಜ್‌ ಡಿಸ್‌ಪ್ಲೇ ಆಗುತ್ತದೆ.

ಇನ್ನೇನೋ ಸ್ಯಾಮ್‌ಸಂಗ್‌ ಮೊಬೈಲ್ ಅನ್ನು 'Win' ಆಗಿ ಪಡೆಯುತ್ತೀದ್ದೀನಿ ಎಂಬ ನಿರೀಕ್ಷೆಯಲ್ಲಿ ಇರುತ್ತೀರಿ. ಆದರೆ ಯಾವುದೇ ಸ್ಯಾಮ್‌ಸಂಗ್ ಮೊಬೈಲ್ ನೋಡಲು ಆಗುವುದಿಲ್ಲ. ಪುನಃ ಹಲವು ವೆಬ್‌ಸೈಟ್‌ಗಳಿಗೆ ರೀಡೈರೆಕ್ಟ್ ಆಗುತ್ತೀರಿ.

ಎಚ್ಚರ..! ವಾಟ್ಸಾಪ್ ಲಕ್ಕಿ ವೀಲ್, ವೀಡಿಯೊ ಕರೆ ಆಹ್ವಾನಗಳು ಬಹುದೊಡ್ಡ ವಂಚನೆǃ

ಈ ರೀತಿಯ ಹಲವು ವಾಟ್ಸಾಪ್ ಸ್ಕ್ಯಾಮ್‌ ಮೆಸೇಜ್‌ಗಳಿದ್ದು, ವಾಟ್ಸಾಪ್‌ ಬಳಕೆದಾರರು ದೂರ ಉಳಿಯುವುದು ಒಳ್ಳೆಯದು. ಅಲ್ಲದೇ ನಿಮ್ಮ ಸ್ನೇಹಿತರಿಗೆ, ಗ್ರೂಪ್‌ಗೆ ಮೆಸೇಜ್‌ ಅನ್ನು ಫಾರ್ವರ್ಡ್‌ ಸಹ ಮಾಡಬೇಡಿ. ಇತ್ತ ಸ್ಮಾರ್ಟ್‌ಫೋನ್‌ ಡಾಟಾ ಖಾಲಿ, ಟೈಮ್‌ ಸಹ ವೇಸ್ಟ್, ಕೆಲವು ವೇಳೆ ಬ್ಯಾಂಕ್ ಖಾತೆ ಡಾಟಾ ಹ್ಯಾಕ್‌ ಮಾಡುವ ಸಂಭವವಿರುತ್ತದೆ. ಸಮಸ್ಯೆ ತಪ್ಪಿದಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Beware! WhatsApp Lucky Wheel, Video Calls Invitation are Scams. To know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X