ಫೋನ್ ಬ್ಯಾಟರಿ ಬಾಳಿಕೆಗಾಗಿ ಫೇಸ್‌ಬುಕ್ ಡಿಲೀಟ್ ಮಾಡಲೇಬೇಕು; 7 ಕಾರಣಗಳು
ಸ್ಮಾರ್ಟ್‌ಫೋನ್ ಮತ್ತು ಐಫೋನ್ ಬೆಲೆ ಎಷ್ಟೇ ಆಗಿರಲಿ ಅಥವಾ ಅವುಗಳ ಬ್ಯಾಟರಿ ಸಾಮರ್ಥ್ಯ ಎಷ್ಟೇ ಇರಲಿ. ಪ್ರತಿ ದಿನ ಚಾರ್ಜಿಂಗ್‌ಗೆ ಫೋನ್ ಕನೆಕ್ಟ್ ಮಾಡಲೇಬೇಕು. ಕಾರಣ ಇಂದು ಸ್ಮಾರ್ಟ್‌ಫೋನ್ ಬಳಸುವವರು ಉಪಯೋಗಿಸುವ ಆಪ್‌ಗಳು ಒಂದು ಮತ್ತು ಎರಡು ಮಾತ್ರವಲ್ಲ.
ನೀವು ಎಷ್ಟೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರು ಸಹ ಫೇಸ್‌ಬುಕ್ ಆಪ್ ಹೀರಿಕೊಳ್ಳುವಷ್ಟು ಬ್ಯಾಟರಿ ಪವರ್ ಅನ್ನು ಬೇರೆ ಯಾವುದೇ ಆಪ್ ಹೀರಿಕೊಳ್ಳುವುದಿಲ್ಲ. ಅಂದಹಾಗೆ ನಿಮ್ಮ ಫೋನ್ ಬ್ಯಾಟರಿಯ ದೀರ್ಘ ಬಾಳಿಕೆಗಾಗಿ ಫೇಸ್‌ಬುಕ್ ಆಪ್ ಅನ್ನು ಮೊಬೈಲ್‌ನಲ್ಲಿ ಅನ್‌ಇನ್‌ಸ್ಟಾಲ್ (ಡಿಲೀಟ್) ಮಾಡಲೇಬೇಕು. ಏಕೆ ಎಂದು ಸ್ಲೈಡರ್ ಕ್ಲಿಕ್ಕಸಿ ಮಾಹಿತಿ ತಿಳಿಯಿರಿ.
ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್ ಹೇಗೆ?

1
ಸ್ಮಾರ್ಟ್‌ಫೋನ್‌ಗಳಲ್ಲಿ ಶೇಕಡ 20 ರಷ್ಟು ಬ್ಯಾಟರಿ ಪವರ್ ಅನ್ನು ಫೇಸ್‌ಬುಕ್ ಆಪ್ ಕ್ಷೀಣಿಸುತ್ತಿದೆ. ಇದನ್ನು ಆಂಡ್ರಾಯ್ಡ್ ಕೇಂದ್ರ ಕಛೇರಿ ಪರೀಕ್ಷೆ ನಡೆಸಿ ಸಾಭೀತು ಪಡಿಸಿದೆ.

2
ಗಾರ್ಡಿಯನ್ ಸ್ಯಾಮ್ಯುಯೆಲ್ ಗಿಬ್ಸ್ ಎಂಬುವವರು ಐಫೋನ್‌ನಲ್ಲಿ ಫೇಸ್‌ಬುಕ್ ಆಪ್ಲಿಕೇಶನ್ ತೆಗೆದುಹಾಕಿ 1 ವಾರಗಳ ಕಾಲ ಐಫೋನ್ ಬಳಕೆಮಾಡಿದ್ದಾರೆ. ಇದರಿಂದ ಬ್ಯಾಟರಿ ಬಾಳಿಕೆಯಲ್ಲಿ ಶೇಕಡ 15 ರಷ್ಟು ಉಳಿತಾಯವಾಗಿರುವುದು ಕಂಡುಬಂದಿದೆ.

3
ಫೇಸ್‌ಬುಕ್ ಆಪ್ ಅನ್ನು ಪೋನ್‌ನಲ್ಲಿ ಹೊಂದುವುದರ ಬದಲು ಗಿಬ್ಬಾಸ್‌ರವರು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ವೆಬ್ ಬ್ರೌಸರ್ ಮೂಲಕ ಬಳಕೆಮಾಡಿದ್ದಾರೆ. ಉದಾಹರಣೆಗೆ ಗೂಗಲ್ ಸರ್ಚ್ ಇಂಜಿನ್ ಮೂಲಕ ಫೇಸ್‌ಬುಕ್ ಬಳಕೆ ಮಾಡುವುದು.

4
ಐಫೋನ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣ ಆಪ್‌ಗಳನ್ನು ಡಿಲೀಟ್ ಮಾಡುವುದರಿಂದ ಫೋನ್‌ನ ಸ್ಟೋರೇಜ್ ಉಳಿತಾಯವಾಗುತ್ತದೆ. ಇದರಿಂದ ಫೋನ್ ಕಾರ್ಯಚಟುವಟಿಕೆ ವೇಗವಾಗುತ್ತದೆ.

5
ನಿಮ್ಮ ಫೋನ್‌ನಲ್ಲಿನ ಫೇಸ್‌ಬುಕ್ ಆಪ್ 111MB ಸ್ಟೋರೇಜ್ ಆವರಿಸುತ್ತದೆ. ಅಲ್ಲದೇ ಅದನ್ನು ಹೆಚ್ಚು ಬಳಸಿದಂತೆಲ್ಲಾ ಕ್ಯಾಚಿ ಡೇಟಾ ಹೆಚ್ಚಾಗುತ್ತಾ ಫೋನ್ ವೇಗ ಕಡಿಮೆಯಾಗುತ್ತದೆ ಮತ್ತು ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ.

6
ಮೊಬೈಲ್ ವೆಬ್‌ಸೈಟ್‌ನಲ್ಲಿ ಫೇಸ್‌ಬುಕ್ ಬಳಸುವುದರಿಂದ, ಆಪ್‌ಗಿಂತ ಹೆಚ್ಚು ಫೀಚರ್‌ಗಳನ್ನು ಪಡೆಯಬಹುದಾಗಿದೆ.

7
ಬ್ಯಾಟರಿ ಬಾಳಿಕೆ ದೀರ್ಘತೆಗಾಗಿ ನೀವು ಫೇಸ್‌ಬುಕ್ ಆಪ್ ಮತ್ತು ಸ್ನ್ಯಾಪ್‌ಚಾಟ್ ಆಪ್ ಅನ್ನು ಸಹ ಡಿಲೀಟ್ ಮಾಡಿದರೆ ನಿಮ್ಮ ಬ್ಯಾಟರಿ ಬಾಳಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಗಿಜ್‌ಬಾಟ್



Click it and Unblock the Notifications








