ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

Written By:

  ಸ್ನೇಹಿತ ದೂರದಲ್ಲಿದ್ದಾನೆ. ಅರ್ಜೆಂಟ್‌ ಆಗಿ ಒಂದ್ ವೀಡಿಯೊ ಕಳಿಸಬೇಕು. ಹೇಗಪ್ಪಾ ಕಳಿಸೋದು? ಅಥವಾ ಸ್ನೇಹಿತನಿಗೆ ಒಂದ್‌ ಸಿನಿಮಾ ನೀಡಬೇಕಿತ್ತು. ಹತ್ತಿರದಲ್ಲಿ ಇದ್ದಿದ್ರೆ ಹೇಗೋ ಶೇರಿಟ್‌ ಆನ್‌ ಮಾಡಿ ಶೇರ್‌ ಮಾಡಬಹುದಾಗಿತ್ತು. ಆತ ಹತ್ತಿರದಲ್ಲೂ ಇಲ್ಲ.

  ನೀವು ಇದುವರೆಗೂ ಬಳಸದಿರುವ 6 ವಾಟ್ಸಾಪ್‌ ಫೀಚರ್‌ಗಳು

  ವಾಟ್ಸಾಪ್‌ನಲ್ಲಿ ಒಂದ್‌ ಸಿನಿಮಾ ಸೆಂಡ್‌ ಮಾಡೋಕು ಆಗಲ್ಲಾ. ಅದರಲ್ಲಿ ಕೇವಲ 16MB ವೀಡಿಯೊ ಮಾತ್ರ ಸೆಂಡ್‌ ಮಾಡೋಕೆ ಆಗೋದು. ಗೂಗಲ್‌ ಡ್ರೈವ್‌ನಲ್ಲಿ ಸಿನಿಮಾ ಅಥವಾ ಯಾವುದೇ ವೀಡಿಯೋ ಸೆಂಡ್ ಮಾಡಲು ಎರಡು ಭಾರಿ ವೀಡಿಯೋ ಅಪ್‌ಲೋಡ್‌ ಡೇಟಾ ಖಾಲಿಯಾಗುತ್ತೆ. ಹಾಗಾದ್ರೆ ಇತರ ಪ್ರದೇಶಗಳಲ್ಲಿ ಇರುವ ಸ್ನೇಹಿತರಿಗೆ ವೀಡಿಯೋ ಅಥವಾ ಸಿನಿಮಾಗಳನ್ನು ಉಚಿತವಾಗಿ ಶೀಘ್ರವಾಗಿ ಕಳುಹಿಸುವುದು ಹೇಗೆ? ಎಂಬ ಪ್ರಶ್ನೆ ಬಹುಸಂಖ್ಯಾತರನ್ನು ಕಾಡದೇ ಇರದು.

  ಉತ್ತರವನ್ನು ನಾವು ಹೇಳುತ್ತೇವೆ. ಕಂಪ್ಯೂಟರ್‌ನಲ್ಲಿ 'www.wetransfer.com' ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಉಚಿತವಾಗಿ 2GB ವರೆಗಿನ ವೀಡಿಯೋಗಳನ್ನು ಸುಲಭವಾಗಿ ನಿಮ್ಮ ಸ್ನೇಹಿತರಿಗೆ ಶೀಘ್ರವಾಗಿ ಸೆಂಡ್‌ ಮಾಡಬಹುದಾಗಿದೆ. ಅದು ಹೇಗೆ ಎಂದು ತಿಳಿಯಲು ಸ್ಲೈಡರ್‌ ಓದಿರಿ.

  ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

  ಅಂದಹಾಗೆ ಪ್ರಸ್ತುತದಲ್ಲಿ wetransfer ಸೇವೆ ಆನ್‌ಲೈನ್‌ ಮೂಲಕವಾದರೂ ಸಹ ಕೇವಲ ಕಂಪ್ಯೂಟರ್‌ ಮೂಲಕ ಮಾತ್ರ ಈ ಸೇವೆ ಪಡೆಯಬಹುದಾಗಿದೆ. ಮೊಬೈಲ್‌ನಲ್ಲಿ ಈ ಸೇವೆ ಲಭ್ಯವಿಲ್ಲ. ಆದರೆ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಲ್ಲಿ 2GB ವರೆಗೂ ವೀಡಿಯೋ ಶೇರ್‌ ಮಾಡಬಹುದು. ವೀಡಿಯೋ ಶೇರ್‌ ಮಾಡುವುದು ಹೇಗೆ ಎಂದು ಮುಂದಿನ ಸ್ಲೈಡರ್‌ ಓದಿ ತಿಳಿಯಿರಿ.

  ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

  ಮೊದಲಿಗೆ ನಿಮ್ಮ ಕಂಪ್ಯೂಟರ್ ಬ್ರೌಸರ್‌ನಲ್ಲಿ 'www.wetransfer.com' ಎಂದು ಟೈಪ್‌ ಮಾಡಿ ಎಂಟರ್‌ ಬಟನ್ ಪ್ರೆಸ್‌ ಮಾಡಿ.

  ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

  ನಂತರ ಓಪನ್‌ ಆದ ವೆಬ್‌ ಪೇಜ್‌ ಈ ಚಿತ್ರದಂತೆ ಇರುತ್ತದೆ. ಅದರಲ್ಲಿ ಮೊದಲಿಗೆ ಸಣ್ಣದಾಗಿ ಕಾಣುವ ವಿಂಡೊದಲ್ಲಿ "Add Files' ಎಂಬಲ್ಲಿ ಕ್ಲಿಕ್‌ ಮಾಡಿ ನೀವು ನಿಮ್ಮ ಸ್ನೇಹಿತರಿಗೆ ಸೆಂಡ್‌ ಮಾಡಬೇಕಿರುವ ವೀಡಿಯೋ ಅಥವಾ ಸಿನಿಮಾಗಳನ್ನು ಆಯ್ಕೆ ಮಾಡಿ. ನೀವು ಸೆಂಡ್‌ ಮಾಡಬೇಕಾದ ವೀಡಿಯೊ ಮೊದಲಿಗೆ ಕಂಪ್ಯೂಟರ್‌ನಲ್ಲಿ ಇರಬೇಕು.

  ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

  ಫೈಲ್‌ ಆಡ್‌ ಆದ ನಂತರ ನೀವು ವೀಡಿಯೊ ಕಳುಹಿಸಬೇಕಿರುವ ಸ್ನೇಹಿತರ ಇಮೇಲ್‌ ವಿಳಾಸ ಟೈಪ್‌ ಮಾಡಿ. ಒಂದಕ್ಕಿಂತ ಹೆಚ್ಚು ಸ್ನೇಹಿತರಿಗೆ ವೀಡಿಯೊ ಸೆಂಡ್‌ ಮಾಡಬೇಕಾದಲ್ಲಿ add more friends ಎಂಬಲ್ಲಿ ಕ್ಲಿಕ್‌ ಮಾಡಿ ಇತರ ಸ್ನೇಹಿತರ ಇಮೇಲ್‌ ವಿಳಾಸವನ್ನು ಟೈಪ್‌ ಮಾಡಿ.

  ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

  ಸ್ನೇಹಿತರ ಇಮೇಲ್‌ ವಿಳಾಸ ನೀಡಿದ ನಂತರ ಅದರ ಕೆಳಗಿನ ಕಾಲಂನಲ್ಲಿ ನಿಮ್ಮ ಇಮೇಲ್ ವಿಳಾಸ ಟೈಪ್‌ ಮಾಡಿ. ನಂತರದ ಕೆಳಗಿನ ಕಾಲಂನಲ್ಲಿ ಮೆಸೇಜ್‌ ಟೈಪ್‌ ಮಾಡಬಹುದು. ನಂತರ 'transfer' ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ. ನಂತರ ಶೇಕಡ 100 ಅಪ್‌ಲೋಡ್‌ ಆಗಿ ಟ್ರ್ಯಾನ್ಸ್‌ಫರ್‌ ಎಂದು ಬರುವವರೆಗೆ ಸಹ ವೆಬ್‌ಸೈಟ್‌ ಆಫ್‌ ಮಾಡದಿರಿ. ನಿಮ್ಮ ವೀಡಿಯೊ ಅಥವಾ ಸಿನಿಮಾ ನಿಮ್ಮ ಸ್ನೇಹಿತನಿಗೆ ಸೆಂಡ್‌ ಆಗಿರುತ್ತದೆ.

  ಗಿಜ್‌ಬಾಟ್‌

  ಕಳ್ಳತನದಿಂದ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆದವರ ಪತ್ತೆ ಹೇಗೆ?

  ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ದೃಶ್ಯ

  ಗಿಜ್‌ಬಾಟ್‌

  ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
  ಕನ್ನಡ.ಗಿಜ್‌ಬಾಟ್‌.ಕಾಂ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

   

  Read more about:
  English summary
  How to send large video with others if they are in other city. To know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more