Subscribe to Gizbot

ಮಿಸ್ ಮಾಡದಿರಿ: ಬಜೆಟ್ ಬೆಲೆಯ ಹುವಾವೆ 5ಸಿಯ ಅದ್ಭುತ ಗುಣಗಳು

Written By:

ಹುವಾವೆಯ ಸ್ಥಳೀಯ ಆನ್‌ಲೈನ್ ನಿರ್ದಿಷ್ಟ ಬ್ರ್ಯಾಂಡ್, ಹೋನರ್ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಆದ ಹೋನರ್ 5ಸಿ ಯನ್ನು ಲಾಂಚ್ ಮಾಡಿದ್ದು ತನ್ನ ಅತ್ಯುನ್ನತ ವಿಶೇಷತೆಗಳು, ಬಜೆಟ್ ಬೆಲೆ ರೂ 10,999 ರಿಂದ ಫೋನ್ ಮನೆಮಾತಾಗಿದೆ. ಡಿವೈಸ್‌ನ ಇನ್ನೊಂದು ವಿಶೇಷತೆ ಎಂದರೆ ಇದು 16 ಎನ್‌ಎಮ್ 650 ಚಿಪ್‌ಸೆಟ್ ಅನ್ನು ಹೊಂದಿರುವುದಾಗಿದೆ. ಆದರೆ ಇಷ್ಟೆಲ್ಲಾ ವಿಶೇಷತೆಗಳೊಂದಿಗೆ ಡಿವೈಸ್ ಇನ್ನಷ್ಟು ವಿಶೇಷತೆಗಳನ್ನು ಒಳಗೊಂಡು ಬಂದಿದ್ದು ಹೋನರ್ ಪ್ರೇಮಿಗಳು ಇದನ್ನು ಇಷ್ಟಪಡುವುದು ಖಂಡಿತ.

ಓದಿರಿ:ಹೋನರ್‌ನ ಬಜೆಟ್ ಬೆಲೆಯ ಟ್ಯಾಬ್ಲೆಟ್ ಲಾಂಚ್
ಓದಿರಿ:ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿರುವ ಹೋನರ್ ಬ್ರ್ಯಾಂಡ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೋನರ್ ಕಿಲ್ಲರ್ ಲುಕ್

#1

ಹೋನರ್ 5ಸಿ ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ಅಲಾಯ್ ಬಾಡಿಯನ್ನು ಪಡೆದುಕೊಂಡಿದ್ದು ಫೋನ್ ಅನ್ನು ಆಕರ್ಷಕವಾಗಿರಿಸಿದೆ. ನಿಮ್ಮ ಕೈಯಲ್ಲಿ ಭದ್ರವಾಗಿ ಕೂರುವ ಫೋನ್ ಇದಾಗಿದ್ದು ಸಿಂಗಲ್ ಹ್ಯಾಂಡ್‌ನಲ್ಲೇ ಇದನ್ನು ಆಪರೇಟ್ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರಿಗೂ ಈ ಫೋನ್ ಅನ್ನು ಅದರ ಫೀಚರ್‌ಗಳನ್ನು ಅಷ್ಟೇ ಸುಲಭವಾಗಿ ತೋರಿಸಿಕೊಡಬಹುದಾಗಿದೆ.

ವಿಶೇಷತೆ ಏನು?

#2

ಹೋನರ್ 5ಸಿಯು 5.2 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ರೆಸಲ್ಯೂಶನ್ 1920x1080 ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ, ಡಿಸ್‌ಪ್ಲೇ ಗಂಭೀರವಾಗಿದ್ದು, ಉತ್ತಮ ರೆಸಲ್ಯೂಶನ್ ಅನ್ನು ಪಡೆದುಕೊಂಡು ಗುಣಮಟ್ಟಚ ಚಿತ್ರವನ್ನು ನೀಡುತ್ತದೆ.

ಮಲ್ಟಿಟಾಸ್ಕ್ ಮತ್ತು ಗೆವಿ ಗ್ರಾಫಿಕ್ ಗೇಮ್ಸ್

#3

ಹೋನರ್ 5ಸಿಯನ್ನು ನೀವು ಇಷ್ಟಪಡುವುದೇ ಇದರ ಮಲ್ಟಿಟಾಸ್ಕಿಂಗ್ ವಿಶೇಷತೆ ಮತ್ತು ಹೆವಿ ಗ್ರಾಫಿಕ್ ಗೇಮ್ಸ್‌ಗಳಿಗೆ ಆಗಿದೆ. ಓಕ್ಟಾ ಕೋರ್ ಸಿಪಿಯು ಮತ್ತು 16 ಎನ್‌ಎಮ್ ಪ್ರೊಸೆಸಿಂಗ್ ಪವರ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಕಿರಿನ್ 650 ಚಿಪ್‌ಸೆಟ್ ಉತ್ತಮ ವೇಗದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ನಿಮ್ಮೆಲ್ಲಾ ಡೇಟಾವನ್ನು ಒಮ್ಮೆಲೇ ಸಂಗ್ರಹಿಸುತ್ತದೆ

#4

ನಿಮ್ಮ ಎಲ್ಲಾ ಡೇಟಾವನ್ನು ಫೋನ್‌ನಲ್ಲಿ ಒಮ್ಮೆಲೆ ಇರಿಸಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ, ಹಾಗಿದ್ದರೆ ಸೂಕ್ತವಾದ ಫೋನ್ ಅನ್ನೇ ನೀವು ಆರಿಸಿದ್ದೀರಿ! ಹೋನರ್ 5ಸಿ, 2ಜಿಬಿ RAM ಅನ್ನು ಪಡೆದುಕೊಂಡಿದ್ದು 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಇದು ಪಡೆದುಕೊಂಡಿದೆ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. ನಿಮ್ಮೆಲ್ಲಾ ಫೋಟೋಗಳು, ವೀಡಿಯೊ, ಚಲನಚಿತ್ರಗಳು ಮತ್ತು ಇತರ ಡೇಟಾಗಳನ್ನು ಫೋನ್‌ನಲ್ಲಿ ಇರಿಸಿಕೊಳ್ಳಬಹುದಾಗಿದೆ.

ಅದ್ಭುತ ಸ್ಮರಣೆಗಳು

#5

ಕ್ಯಾಮೆರಾ ಫೋನ್‌ನ ಅತಿಮುಖ್ಯ ಫೀಚರ್ ಎಂದೆನಿಸಿದ್ದು ಹೋನರ್ 5ಸಿಯ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ನೈಟ್ ಮೋಡ್, ಗುಡ್ ಫುಟ್, ಬ್ಯೂಟಿ ಮತ್ತು ಲೈಟ್ ಪೇಂಟಿಂಗ್ ಮೋಡ್‌ಗಳನ್ನು ಇದು ಹೊಂದಿದೆ. ಮುಂಭಾಗ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಡಿವೈಸ್ ಉತ್ತಮ ಫೋಟೋಗ್ರಫಿ ವಿಶೇಷತೆಗಳನ್ನು ಬಳಕೆದಾರರಿಗೆ ನೀಡುತ್ತದೆ.

ಫಿಂಗರ್ ಪ್ರಿಂಟ್ ವಿಶೇಷತೆ

#6

ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಫೀಚರ್ ಇದ್ದು ಇದನ್ನು ಕ್ಯಾಮೆರಾದ ಕೆಳಗೆ ನಾವು ನೋಡಬಹುದಾಗಿದೆ. ಇದು ಡಿವೈಸ್ ಅನ್ನು 0.5 ಸೆಕೆಂಡ್‌ಗಳಲ್ಲಿ ಅನ್‌ಲಾಕ್ ಮಾಡುತ್ತದೆ. ನಿಮ್ಮ ಫೋನ್ ಅನ್ನು ಭದ್ರಪಡಿಸುವ ಉತ್ತಮ ವಿಶೇಷತೆ ಇದಾಗಿದೆ ಎಂಬುದಾಗಿ ನಿಮಗನಿಸುವುದಿಲ್ಲವೇ?

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

#7

ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಓಎಸ್ ಇದರಲ್ಲಿದ್ದು ಈ ಬೆಲೆಯಲ್ಲಿ ನೀವು ತೆಗದುಕೊಳ್ಳಬಹುದಾದ ಅತ್ಯುತ್ತಮ ಡಿವೈಸ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Huawei's native online specific brand, Honor launched its new budget smartphone dubbed as Honor 5C in an event happened a day back in Delhi. The phone garnered attention and praises for its powerful set of specifications, against its price of Rs 10,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot