ಸೆಲ್ಫಿಯನ್ನು ಇನ್ನಷ್ಟು ಕಲಾತ್ಮಕವಾಗಿಸುವ ಸೆಲ್ಫಿ ಅಪ್ಲಿಕೇಶನ್‌ಗಳು

Posted By: Shwetha PS

  ಇಂದು ಸ್ಮಾರ್ಟ್‌ಫೋನ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿರುವವರಿಗೆ ಸೆಲ್ಫಿ ತೆಗೆಯುವುದು ಎಂದರೆ ಅದೊಂದು ಸಂತಸಕರ ಕ್ಷಣವಾಗಿದೆ. ನೀವಿರುವ ಯಾವುದೇ ಕ್ಷಣವಾಗಿರಲಿ, ಸಮಾರಂಭವಾಗಿರಲಿ ನಿಮಗೆ ಒಂದು ಸೆಲ್ಫಿ ಬೇಕೇ ಬೇಕು ಎಂದು ಆ ಸಮಯದಲ್ಲಿ ಅನಿಸುತ್ತದೆ ಮತ್ತು ಅದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಬೇಕೆಂಬ ಮನದಾಸೆ ಇದ್ದೇ ಇರುತ್ತದೆ.

  ಸೆಲ್ಫಿಯನ್ನು ಇನ್ನಷ್ಟು ಕಲಾತ್ಮಕವಾಗಿಸುವ ಸೆಲ್ಫಿ ಅಪ್ಲಿಕೇಶನ್‌ಗಳು

  ನಿಮ್ಮ ಸೆಲ್ಫಿಯನ್ನು ಇನ್ನಷ್ಟು ರಂಗು ರಂಗಾಗಿ ಕಾಣಬೇಕೆಂಬ ಮನದಾಸೆ ನಿಮಗಿದೆ ಎಂದಾದಲ್ಲಿ ಇದು ನಿಮ್ಮ ಸೆಲ್ಫಿಯನ್ನು ಇನ್ನಷ್ಟು ಆಕರ್ಷಕವಾಗಿಸಿ, ಸಾಮಾಜಿಕ ತಾಣದಲ್ಲಿ ಹೆಚ್ಚಿನ ಲೈಕ್‌ಗಳನ್ನು ಪಡೆಯಲು ನೆರವಾಗುವುದು ಖಂಡಿತ.

  ಇಂದಿನ ಲೇಖನದಲ್ಲಿ ಇಂತಹುದೇ ಸೆಲ್ಫಿ ಫೋಟೋಗಳನ್ನು ಇನ್ನಷ್ಟು ಮನಮೋಹಕಗೊಳಿಸುವ ಅಪ್ಲಿಕೇಶನ್‌ಗಳನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದು ನಿಮ್ಮ ಫೋನ್‌ನಲ್ಲಿ ಕೂಡ ಈ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಸ್ವೀಟ್ ಸೆಲ್ಫಿ

  ನಿಮಗೆ ಸೂಕ್ತವಾದ ಸೆಲ್ಫಿ ಬೇಕು ಎಂದಾದಲ್ಲಿ ಇದು ನಿಮ್ಮ ಆಯ್ಕೆಯಾಗಿದೆ. ಇದು ಆಟೊ ಬ್ಯೂಟಿಫೈ ಇಫೆಕ್ಟ್ ಅನ್ನು ಒಳಗೊಂಡಿದ್ದು ಕೆಲವೊಂದು ಸೆಲ್ಫಿ ಫಿಲ್ಟರ್‌ಗಳನ್ನು ಹೊಂದಿದೆ. ನಿಮ್ಮ ಸೆಲ್ಫಿಯಲ್ಲಿ ಇಮೋಜಿಗಳನ್ನು ಇದರ ಮೂಲಕ ಇರಿಸಬಹುದಾಗಿದೆ. ಸ್ಕ್ರೀನ್ ಫ್ಲ್ಯಾಶ್ ಅನ್ನು ಇದು ಒದಗಿಸುತ್ತಿದ್ದು ಕಡಿಮೆ ಬೆಳಕಿನಲ್ಲೂ ಈ ಅಪ್ಲಿಕೇಶನ್ ಬಳಸಿಕೊಂಡು ಅದ್ಭುತ ಸೆಲ್ಫಿಯನ್ನು ತೆಗೆದು ಪೋಸ್ಟ್ ಮಾಡಬಹುದಾಗಿದೆ.

  ಕ್ಯಾಂಡಿ ಕ್ಯಾಮೆರಾ

  ಇದು ಹೆಚ್ಚಿನ ಫಿಲ್ಟರ್‌ಗಳನ್ನು ಒಳಗೊಂಡಿದ್ದು, ಸೆಲ್ಫಿಗಳಿಗಾಗಿಯೇ ವಿಶೇಷವಾಗಿರುವ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರಿಯಲ್ ಟೈಮ್‌ನಲ್ಲಿ ಫಿಲ್ಟರ್‌ಗಳನ್ನು ಕಾಣಲು ಇದು ನಿಮಗೆ ಅನುಮತಿಸುತ್ತಿದ್ದು, ನೀವು ಸೆಲ್ಫಿ ತೆಗೆಯುವಾಗ ಇದು ಕಂಡುಬರಲಿದೆ. ಸ್ಲಿಮ್ಮಿಂಗ್, ವೈಟ್ನಿಂಗ್, ಕಾಂಕಿಯಲಿರ್, ಲಿಪ್‌ಸ್ಟಿಕ್, ಬ್ಲಶ್, ಐಲೈನರ್, ಮಸ್ಕಾರಾ ಮತ್ತು ಇನ್ನಷ್ಟು ಎಡಿಟಿಂಗ್ ಪರಿಕರಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ.

  ಬಿ6 12 ಸೆಲ್ಫಿಗೇನಿಕ್ ಕ್ಯಾಮೆರಾ

  ಲೈವ್ ಬ್ಯೂಟಿಫಿಕೇಶನ್ ಸರಿಹೊಂದಿಸುವಿಕೆಗಳನ್ನು ನಿಮ್ಮಷ್ಟಕ್ಕೆ ಮಾಡಿಕೊಂಡು ಸೆಲ್ಫಿ ತೆಗೆಯಬಹುದಾಗಿದೆ. ಇದು ಮೋಜಿನ ಸ್ಟಿಕ್ಕರ್‌ಗಳನ್ನು ಪಡೆದುಕೊಂಡಿದ್ದು ಅದ್ಭುತವಾಗಿರುವ ಏಆರ್ ಫಿಲ್ಟರ್‌ಗಳನ್ನು ಹೊಂದಿದೆ. ಇದರಲ್ಲಿರುವ ಫೋಟೋ ಇಫೆಕ್ಟ್‌ಗಳು ನಿಮ್ಮ ಸೆಲ್ಫಿಗಳಿಗೆ ಹೆಚ್ಚುವರಿ ಬಣ್ಣಗಳನ್ನು ನೀಡಲಿದ್ದು ಎಲ್ಲಾ ಸಮಯವೂ ಸುಂದರ ಸೆಲ್ಫಿಗಳನ್ನು ತೆಗೆಯಬಹುದಾಗಿದೆ.

  ಯೂಕ್ಯಾಮ್ ಫರ್ಫೆಕ್ಟ್

  ಈ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಫೋನ್‌ನಲ್ಲಿ ಫೋಟೋಗಳಿಗೆ ಮರುಸ್ಪರ್ಶ ನೀಡಬಹುದು. ಸ್ಕಿನ್ ಟೋನ್‌ ಹೊಂದಿಸುವುದು, ಫಿಲ್ಟರ್‌ಗಳ ಸೇರ್ಪಡೆ, ನೆರಿಗೆಗಳನ್ನು ತೆಗೆಯುವುದು, ಫ್ರೆಕ್ಕಲ್‌ಗಳನ್ನು ಸೇರಿಸುವುದು ಹೀಗೆ ಮೊದಲಾದ ಅಂಶಗಳನ್ನು ಮಾಡಬಹುದಾಗಿದೆ. ನಿಮಗೆ ನೂರರಷ್ಟು ಹೆಚ್ಚಿನ ಕೊಲಾಜ್‌ಗಳು, ಫ್ರೇಮ್‌ಗಳು, ಸ್ಟಿಕ್ಕರ್‌ಗಳು ಮತ್ತು ಮನರಂಜನೆ ದೃಶ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ವೀಡಿಯೊ ಸೆಲ್ಫಿಯನ್ನು ಈ ಅಪ್ಲಿಕೇಶನ್ ಮೂಲಕ ನಿಮಗೆ ತಯಾರಿಸಬಹುದಾಗಿದೆ. ಇದನ್ನು ಪ್ಲೇಸ್ಟೋರ್‌ನಲ್ಲಿ ನಿಮಗೆ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

  ಬ್ಯೂಟಿ ಪ್ಲಸ್

  100 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದು, ಇದು ಮಬ್ಬನ್ನು ತಿಳಿಯಾಗಿಸಲಿದೆ. ನಿಮ್ಮ ಕಣ್ಣುಗಳನ್ನು ಗಾಢವಾಗಿಸಲಿದೆ. ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲಿದೆ. ನಿಮ್ಮ ಕಣ್ಣಿನ ಬಣ್ಣವನ್ನು ಇಲ್ಲಿ ಎಡಿಟ್ ಮಾಡಬಹುದಾಗಿದೆ. ನಿಮಗೆ ಬೇಕಾದರೆ ಫಿಲ್ಟರ್‌ಗಳನ್ನು ಸೇರ್ಪಡೆ ಮಾಡಬಹುದಾಗಿದೆ. ಫೋಟೋ ಬ್ಲರ್ ಮಾಡುವುದನ್ನು ಇಲ್ಲಿ ನಡೆಸಬಹುದಾಗಿದೆ. ವೃತ್ತಿಪರ ಫೋಟೋ ಎಡಿಟಿಂಗ್ ಪರಿಕರವನ್ನು ಈ ಅಪ್ಲಿ ಒಳಗೊಂಡಿದ್ದು ನಿಮ್ಮ ತಾಣದಲ್ಲಿ ಈ ಅಪ್ಲಿಕೇಶನ್ ಬಳಸಿ ಫೋಟೋ ಎಡಿಟ್ ಮಾಡಿಕೊಂಡು ಹಂಚಿಕೊಳ್ಳಬಹುದಾಗಿದೆ.

  ರೆಟ್ರಿಕಾ - ಸೆಲ್ಫಿ, ಸ್ಟಿಕ್ಕರ್, ಜಿಫ್

  ಈ ಅಪ್ಲಿಕೇಶನ್ ಮೂಲಕ ರಿಯಲ್ ಟೈಮ್ ಫಿಲ್ಟರ್‌ಗಳನ್ನು ಬಳಸಿಕೊಂಡು ಸೆಲ್ಫಿ ತೆಗೆಯಬಹುದಾಗಿದೆ. ನಿಮಗೆ ಬಹು ಸೆಲ್ಫಿಗಳನ್ನು ತೆಗೆಯಬಹುದಾಗಿದೆ. ಸುಂದರವಾದ ಕೊಲಾಜ್ ಅನ್ನು ರಚಿಸಬಹುದು. ರೆಟ್ರಿಕಾ 100 ಸ್ಟಿಕ್ಕರ್‌ಗಳನ್ನು ಹೊಂದಿದ್ದು, ನಿಮ್ಮ ಸೆಲ್ಫಿ, ವೀಡಿಯೊವನ್ನು ಅಲಂಕರಿಸಿ ಅದನ್ನು ಎಡಿಟ್ ಮಾಡಬಹುದಾಗಿದೆ.

  ಬೆಸ್ಟ್‌ ಮೀ ಸೆಲ್ಫಿ ಕ್ಯಾಮೆರಾ

  ಇದು 100 ಕ್ಕಿಂತಲೂ ಹೆಚ್ಚಿನ ಫಿಲ್ಟರ್‌ಗಳನ್ನು ಪಡೆದಿದ್ದು ನಿಮಗೆ ಎಮೋಜಿಗಳನ್ನು ಸೇರಿಸಿಕೊಂಡು ಸೆಲ್ಫಿಯನ್ನು ಮನರಂಜಕವನ್ನಾಗಿಸಬಹುದಾಗಿದೆ. ಇದು ಮಿರರ್ ಫೋಟೋ ಕ್ಯಾಮೆರಾ ಫೀಚರ್ ಅನ್ನು ಹೊಂದಿದ್ದು ಜನಪ್ರಿಯ ಎಮೋಜಿ ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ.

  ಎಚ್‌ಡಿ ಸೆಲ್ಫಿ ಕ್ಯಾಮೆರಾ

  ಈ ಅಪ್ಲಿಕೇಶನ್ ಬಳಸಿಕೊಂಡು, ಸೀನ್ ಮೋಡ್ ಆಯ್ಕೆ, ಕಲರ್ ಇಫೆಕ್ಟ್, ವೈಟ್ ಬ್ಯಾಲೆನ್ಸ್ ಮತ್ತು ಎಕ್ಸ್‌ಪೋಶರ್ ಕಾಂಪನ್‌ಸೇಶನ್‌ಗಳನ್ನು ನೀವು ಆಯ್ಕೆಮಾಡಬಹುದು. ಇದು ಜಿಪಿಎಸ್ ಲೊಕೇಶನ್ ಅನ್ನು ಹೊಂದಿದ್ದು, ಫೋಟೋ ಮತ್ತು ವೀಡಿಯೊ ಎರಡಕ್ಕೂ ಇದು ಲಭ್ಯವಿದೆ. ಇದು ಎಚ್‌ಡಿ ಗುಣಮಟ್ಟದಲ್ಲಿಯೇ ಫೋಟೋಗಳನ್ನು ತೆಗೆಯುತ್ತದೆ.

  ಸೆಲ್ಫಿಸಿಟಿ

  ಇದು ಮೂವಿ ಥೀಮ್ ಫಿಲ್ಟರ್‌ಗಳನ್ನು ಹೊಂದಿದ್ದು ವೃತ್ತಿಪರ ಕಲಾವಿದರು ಇದರಲ್ಲಿದ್ದಾರೆ. ಇದು ಹಿನ್ನೆಲೆ ಬ್ಲರಿಂಗ್ ಅನ್ನು ಪಡೆದುಕೊಂಡಿದ್ದು ರಿಯಲ್ ಟೈಮ್ ರಿಟಚಿಂಗ್ ಇಫೆಕ್ಟ್‌ಗಳನ್ನು ಹೊಂದಿದೆ. ಉಚಿತವಾಗಿ ಪ್ಲೇಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದು.

  ಮೇಕಪ್ ಪ್ಲಸ್

  ಸೆಲ್ಫಿಗಳನ್ನು ಎಡಿಟ್ ಮಾಡಲು ಈ ಅಪ್ಲಿಕೇಶನ್ ಉತ್ತಮವಾದುದು. ಮೇಕಪ್ ಪ್ಲಸ್‌ನೊಂದಿಗೆ ನೀವು ಸಂಪೂರ್ಣ ಬೇರೆಯೇ ಚೌಕಟ್ಟನ್ನು ಸೆಲ್ಫಿಗೆ ಹಾಕಿಕೊಳ್ಳಬಹುದಾಗಿದೆ. ಲಿಪ್‌ಸ್ಟಿಕ್, ಐಲ್ಯಾಶಸ್, ಹುಬ್ಬುಗಳು, ಕೂದಲಿನ ಬಣ್ಣ ಹೀಗೆ ನಾನಾ ಬಗೆಯ ಎಡಿಟಿಂಗ್‌ಗಳನ್ನು ನಿಮಗೆ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ಬಳಸಿಕೊಂಡು ನೀವು ವಿಶೇಷ ವೀಡಿಯೊವನ್ನು ವೀಕ್ಷಿಸಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Gone are those when you try to take a good picture with a rear smartphone camera. Skip to the present, we have selfie camera and half of the phone company find its promotion solely on this term -- selfie.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more