ವಿಡಿಯೋವನ್ನು ಚಂದಗಾಣಿಸುವ ಎಡಿಟಿಂಗ್ ಆಪ್ಸ್‌!!ಯಾವುದು ಬೆಸ್ಟ್‌?!

By Avinash
|

ಆಧುನಿಕ ಲೋಕದಲ್ಲಿ ಎಲ್ಲವೂ ವಿಡಿಯೋಮಯ. ಬೆಳಗ್ಗೆಯಿಂದ ಮಲಗೋವರೆಗೂ ಎಲ್ಲರೂ ವಿಡಿಯೋ ನೋಡುವುದರಲ್ಲೋ ಅಥವಾ ನಿರ್ಮಿಸುವುದರಲ್ಲೋ ಬ್ಯುಸಿಯಾಗಿ ಇರ್ತಾರೆ. ಸ್ಮಾರ್ಟ್‌ಪೋನ್ ಬಂದ ನಂತರವಂತೂ ವಿಡಿಯೋ ಲೋಕಕ್ಕೆ ಬಹುದೊಡ್ಡ ಕೊಡುಗೆ ಸಿಕ್ಕಿದೆ. ಸ್ಮಾರ್ಟ್‌ಪೋನ್ ಕ್ಯಾಮೆರಾದಲ್ಲಿಯೇ ಸಿನಿಮಾಗಳನ್ನು ನಿರ್ಮಿಸುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ಯುಟ್ಯೂಬ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಕ್ಕೊಂದು ವಿಡಿಯೋ ಅಪಲೋಡ್‌ ಆಗುತ್ತಿವೆ ಎಂದರೆ ಸ್ಮಾರ್ಟ್‌ಪೋನ್ ಕಾರಣವಾಗಿದೆ.

ವಿಡಿಯೋವನ್ನು ಚಂದಗಾಣಿಸುವ ಎಡಿಟಿಂಗ್ ಆಪ್ಸ್‌!!ಯಾವುದು ಬೆಸ್ಟ್‌?!

ಹೌದು ನಿಮ್ಮ ವಿಡಿಯೋ ನಿರ್ಮಾಣಕ್ಕೆ ಸ್ಮಾರ್ಟ್‌ಪೋನ್ ಬಹುದೊಡ್ಡ ವೇದಿಕೆಯಾಗಿದ್ದು, ಸ್ಮಾರ್ಟ್‌ಪೋನ್ ಕ್ಯಾಮೆರಾದಿಂದಲೇ ಅದ್ಭುತ ವಿಡಿಯೋಗಳನ್ನು ಸೃಷ್ಟಿಸಬಹುದು. ಕ್ಯಾಮೆರಾ ಚೆನ್ನಾಗಿದ್ದರೆ ಸಾಕು, ಸ್ಮಾರ್ಟ್‌ಪೋನ್ ಲೋಕದಲ್ಲಿ ನಿಮ್ಮ ವಿಡಿಯೋ ಸೃಜನಾತ್ಮಕತೆಗೆ ಬೆಳಕು ಚೆಲ್ಲುವುದಕ್ಕೆ ತರಹೇವಾರಿ ಆಪ್‌ಗಳಿವೆ. ವಿಡಿಯೋ ಎಡಿಟಿಂಗ್‌ನ್ನು ಸುಲಭಗೊಳಿಸಿರುವ ಆಪ್‌ಗಳಲ್ಲಿ ಬೆಸ್ಟ್‌ ಆಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನೀವು ಕಿರುಚಿತ್ರ, ವಿಡಿಯೋವನ್ನು ಸ್ಮಾರ್ಟ್‌ಪೋನ್‌ನಲ್ಲಿಯೇ ನಿರ್ಮಿಸಬೇಕು ಎಂದು ಅಂದುಕೊಂಡಿದ್ದರೆ ಈ ಕೆಳಗಿನ ಆಪ್‌ಗಳನ್ನೊಮ್ಮ ಟ್ರೈ ಮಾಡಿ..

1. ಆಕ್ಷನ್ ಡೈರೆಕ್ಟರ್ ActionDirector

1. ಆಕ್ಷನ್ ಡೈರೆಕ್ಟರ್ ActionDirector

ಆಕ್ಷನ್ ಡೈರೆಕ್ಟರ್ ಕಂಪ್ಯೂಟರ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಈಗ ಆಂಡ್ರಾಯ್ಡ್‌ನಲ್ಲಿಯೂ ಲಭ್ಯವಿದ್ದು, ಬೇಸಿಕ್ ಎಡಿಟಿಂಗ್ ಮಾಡುವ ಅವಕಾಶವನ್ನು ಸೃಷ್ಟಿಸಿದೆ. ನೀವು ನಿಮ್ಮ ಕ್ಲಿಪ್ಸ್‌ನ್ನು ಇಂಪೋರ್ಟ್ ಮಾಡಿ ಎಡಿಟ್ ಮಾಡಿ, ರೇಂಡರ್ ಮಾಡಬಹುದು. ನಿಮ್ಮದೇ ಸಂಗೀತ, ಅಕ್ಷರಗಳನ್ನು ಸೇರಿಸುವ, ವಿಡಿಯೋ ಟ್ರಿಮ್ ಮಾಡುವ, ಸ್ಲೋಮೋಷನ್ ಮತ್ತೀತರ ಫೀಚರ್‌ಗಳಿವೆ. 4K ವಿಡಿಯೋಗೆ ಬೆಂಬಲಿಸುವ ಕೆಲವೇ ವಿಡಿಯೋ ಎಡಿಟಿಂಗ್ ಆಪ್‌ಗಳಲ್ಲಿ ಇದು ಸಹ ಒಂದು.

2. ಅಡೋಬ್ ಪ್ರಿಮಿಯರ್ ಕ್ಲಿಪ್ Adobe Premiere Clip

2. ಅಡೋಬ್ ಪ್ರಿಮಿಯರ್ ಕ್ಲಿಪ್ Adobe Premiere Clip

ವಿಡಿಯೋ ಎಡಿಟಿಂಗ್ ಹೆಸರು ಕೇಳಿದವರು ಅಡೋಬ್ ಪ್ರಿಮಿಯರ್ ಬಗ್ಗೆ ಕೇಳಿಯೇ ಕೇಳಿರುತ್ತಾರೆ. ಈಗ ಆಂಡ್ರಾಯ್ಡ್‌ನಲ್ಲಿಯೂ ಲಭ್ಯವಿದ್ದು, ಸಾಕಷ್ಟು ಫೀಚರ್ಸ್ ಇವೆ. ನಿಮ್ಮ ಇಮೇಜ್ ಮತ್ತು ವಿಡಿಯೋಗಳನ್ನು ಬಳಸಿಕೊಂಡು ವಿಡಿಯೋವನ್ನು ಆಟೋ ಜನರೇಟ್ ಮಾಡುವ ಸೌಲಭ್ಯ ಇರಲಿದೆ. ಅದಲ್ಲದೇ ಅನೇಕ ಟೂಲ್ಸ್‌, ಎಫೆಕ್ಟ್ಸ್‌ ಮತ್ತು ಸಂಗೀತ ಬಳಸಿ ವಿಡಿಯೋ ಎಡಿಟಿಂಗ್ ಮಾಡುವ ಅವಕಾಶ ಇದೆ. ನಿಮ್ಮದೇ ಆದ ಸಂಗೀತ ಬಳಸುವ ಅವಕಾಶ ಇದೆ. ಆದರೆ, ಈ ಸೌಲಭ್ಯ ಬಳಸುವಲ್ಲಿ ಸ್ವಲ್ಪ ಕಷ್ಟಪಡಬೇಕಾಗುತ್ತದೆ ಎಂಬ ರಿವ್ಯೂವ್ ಸಿಕ್ಕಿದೆ. ಇಷ್ಟು ಬಿಟ್ಟರೇ ಇದೊಂದು ಬೆಸ್ಟ್ ಎಡಿಟಿಂಗ್ ಆಪ್.

3. ಫಿಲ್ಮೋರಾ ಗೋ FilmoraGo

3. ಫಿಲ್ಮೋರಾ ಗೋ FilmoraGo

ವಂಡರ್‌ಶೇರ್‌ನ ವಿಡಿಯೋ ಎಡಿಟರ್ ಆಗಿರುವ ಫಿಲ್ಮೋರಾ ಗೋ ಸುಲಭವಾದ ವಿಡಿಯೋ ಎಡಿಟರ್ ಆಪ್‌ಗಳಲ್ಲಿ ಬೆಸ್ಟ್ ಆಗಿದೆ. ಇಲ್ಲಿ ನೀವು ವಿಡಿಯೋ ಕಟ್ ಮಾಡಬಹುದು, ಟ್ರಿಮ್ ಮಾಡಬಹುದು, ರೆಂಡರ್ ಮಾಡುವ ಆಯ್ಕೆ ಇದೆ. ವಿಡಿಯೋವನ್ನು ರಿವರ್ಸ್ ಆಗಿಯೂ ಪ್ಲೇ ಮಾಡಬಹುದು. ಇನ್ಸ್ಟಾಗ್ರಾಂಗೋಸ್ಕರ 1:1 ಚೌಕಾಕಾರದಲ್ಲಿಯೂ ವಿಡಿಯೋ ಮಾಡಬಹುದು, ಮತ್ತು ಯೂಟ್ಯೂಬ್‌ಗಾಗಿ 16:9 ವಿಡಿಯೋ ಮಾಡಬಹುದಾಗಿದೆ. ಸ್ಲೋ ಮೇಷನ್, ಟ್ರಾನ್ಸಿಷನ್ಸ್‌, ಮ್ಯೂಸಿಕ್, ಒವರ್‌ಲೇ ಮತ್ತಿತರ ಫೀಚರ್‌ಗಳು ಇವೆ.

4. ಫನ್ನಿಮೇಟ್ Funimate

4. ಫನ್ನಿಮೇಟ್ Funimate

ಫನ್ನಿಮೇಟ್ ಆಪ್ ಆಕಸ್ಮಿಕವಾಗಿ ಪ್ರಸಿದ್ಧಿ ಪಡೆದಿದೆ. ಆದರೆ, ಪವರ್‌ಫುಲ್ ವಿಡಿಯೋ ಎಡಿಟರ್ ಆಪ್‌ ಎನ್ನಲೂ ಆಗುವುದಿಲ್ಲ. ಫನ್ನಿಮೇಟ್ ಆಪ್ ಮ್ಯೂಸಿಕ್ ಮತ್ತು ಸಿಂಪಲ್ ವಿಡಿಯೋಗಳಿಗೆ ಬೆಸ್ಟ್‌ ಎಂದು ಹೇಳಿಕೊಂಡಿದೆ. 15 ವಿಡಿಯೋ ಫಿಲ್ಟರ್‌ಗಳಿದ್ದು, ಇವುಗಳ ಜತೆ ನೀವು ಆಟವಾಡಬಹುದು ಮತ್ತು ಹೊಸ ವಿಡಿಯೋ ಸೃಷ್ಟಿಸಬಹುದು. ನಿಮ್ಮ ಗಂಭೀರ ವಿಡಿಯೋಗಳಿಗೆ ಈ ಆಪ್ ಸೂಕ್ತವಾಗುವುದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲು ಬಳಸುವ ಸಣ್ಣ ವಿಡಿಯೋಗಳಿಗೆ ಉತ್ತಮ ಆಪ್.

5. ಕೈನ್ ಮಾಸ್ಟರ್ KineMaster

5. ಕೈನ್ ಮಾಸ್ಟರ್ KineMaster

ಲಭ್ಯವಿರುವ ಹೆಚ್ಚು ಪವರ್‌ಫುಲ್ ವಿಡಿಯೋ ಎಡಿಟರ್‌ಗಳಲ್ಲಿ ಕೈನ್ ಮಾಸ್ಟರ್ ಕೂಡ ಒಂದು.ಬೇರೆ ವಿಡಿಯೋ ಎಡಿಟರ್‌ಗಳಲ್ಲಿ ಮಾಡಿದಂತೆ ಇಲ್ಲಿಯೂ ಸಹ ಬೇಸಿಕ್ ಎಡಿಟಿಂಗ್ ಮಾಡುವ ಅವಕಾಶವಿದೆ. ಮಲ್ಟಿಪಲ್ ವಿಡಿಯೋ, ಇಮೇಜ್ ಮತ್ತು ಎಫೆಕ್ಟ್ ಲೇಯರ್ಸ್ ಹೊಂದಿದೆ. ಅದಲ್ಲದೇ ಆಡಿಯೋ ಫಿಲ್ಟರ್ಸ್, ಕ್ರೋಮಾ ಕೀ, ಅನೇಕ ವಿಡಿಯೋ ಎಫೆಕ್ಟ್ಸ್, ಟ್ರಾನ್ಸಿಷನ್‌ಗಳನ್ನು ಹೊಂದಿದೆ. ಡೆಸ್ಕಟಾಪ್ ಎಡಿಟರ್‌ನಷ್ಟು ಪವರ್‌ಫುಲ್ ಅಲ್ಲ. ಆದರೆ, ತನ್ನ ಸ್ಪರ್ಧಿಗಳಿಂದ ಒಂದು ಹೆಜ್ಜೆ ಮುಂದೆ ಇದೆ. ಯುಟ್ಯೂಬ್‌ನಂತಹ ವಿಡಿಯೋ ಪ್ಲಾಟ್‌ಫಾರ್ಮ್‌ಗೆ ವಿಡಿಯೋ ಎಡಿಟಿಂಗ್ ಮಾಡುವುದಕ್ಕೆ ಉತ್ತಮ.

6. ಮೂವಿ ಮೇಕರ್ ಫಿಲ್ಮ್‌ ಮೇಕರ್ Movie Maker Filmmaker

6. ಮೂವಿ ಮೇಕರ್ ಫಿಲ್ಮ್‌ ಮೇಕರ್ Movie Maker Filmmaker

ಬೆಸ್ಟ್‌ ಚಿಡಿಯೋ ಎಡಿಟರ್ ಆಪ್‌ಗಳಲ್ಲಿ ಇದು ಒಂದ. ಇಲ್ಲಿ ಟ್ರಿಮ್, ಕ್ರಾಪ್ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಬಹುದು. ಜತೆಗೆ ಫೋಕಲ್ ಪಾಯಿಂಟ್‌ಗಳನ್ನು ಸೆಟ್ ಮಾಡಬಹುದು. ಅನೇಕ ವಿಡಿಯೋ ಎಫೆಕ್ಟ್ಸ್‌ನ್ನು ಹೊಂದಿದೆ ಮತ್ತು ನಿಮ್ಮದೇ ಆದ ಫಿಲ್ಟರ್‌ನ್ನು ತಯಾರಿಸಬಹುದು. ಇದರ ಜೊತೆ ಬೇಸಿಕ್ ಫೀಚರ್ಸ್ ಇವೆ.

7. ಪವರ್ ಡೈರೆಕ್ಟರ್ PowerDirector

7. ಪವರ್ ಡೈರೆಕ್ಟರ್ PowerDirector

ಬಹಳ ಪ್ರಮುಖವಾದ ವಿಡಿಯೋ ಎಡಿಟಿಂಗ್ ಆಪ್ ಆಗಿದ್ದು, ಅನೇಕ ಫೀಚರ್ಸ್‌ಗಳಿಂದ ತುಂಬಿದೆ. ಕ್ವಿಕ್ ಎಡಿಟಿಂಗ್ ಟೂಲ್ ಸೇರಿ, ವಿವಿಧ ಎಫೆಕ್ಟ್‌ಗಳು, ಸ್ಲೋ ಮೋಷನ್ ಮತ್ತು ಕೋಲ್ಯಾಜ್ ಮೇಕರ್‌ನಂತಹ ವಿಡಿಯೋ ಎಡಿಟಿಂಗ್ ಫೀಚರ್ಸ್ ಹೊಂದಿದೆ. ಕ್ಲಾಸಿಕ್ ಟೈಮ್‌ಲೈನ್‌ ಎಡಿಟರ್ ಆಗಿದ್ದು, ಎಡಿಟಿಂಗ್ ಮಾಡಿದವರಿಗೆ ಬಹಳ ಹತ್ತಿರವಾದ ಆಪ್ ಆಗುತ್ತದೆ.

8. ಕ್ವಿಕ್ Quik

8. ಕ್ವಿಕ್ Quik

ಹೊಸ ರೀತಿಯ ವಿಡಿಯೋ ಎಡಿಟಿಂಗ್ ಆಪ್ ಆಗಿದ್ದು, ತುಂಬಾ ಸರಳವಾಗಿ ವಿಡಿಯೋ ಎಡಿಟ್ ಮಾಡಬಹುದು. 50 ಪೋಟೋವರೆಗೂ ಇಮೇಜ್‌ಗಳನ್ನು ಮತ್ತು ವಿಡಿಯೋ ತುಣುಕುಗಳನ್ನು ಸೇರಿಸುವ ಆಯ್ಕೆ ಇದೆ. ಇದು ನಿಮ್ಮ ಇನ್‌ಪುಟ್‌ನ್ನು ವಿಮರ್ಶಿಷಿ ಸಣ್ಣ ವಿಡಿಯೋ ಆಗಿ ಮಾಡಿನೀಡುತ್ತದೆ. ಇದು 24 ವಿಡಿಯೋ ವಿನ್ಯಾಸ್‌ಗಳನ್ನು ನೀಡುತ್ತದೆ. ವಿಡಿಯೋ ಎಕ್ಸಫೋರ್ಟ್ ಮಾಡುವ ಮುಂಚೆ ನೀವು ಅವುಗಳನ್ನು ರೀ ಆರ್ಡರ್ ಮಾಡಬಹುದು.

9. ವಿವಾ ವಿಡಿಯೋ VivaVideo

9. ವಿವಾ ವಿಡಿಯೋ VivaVideo

ಪಾಪುಲರ್ ವಿಡಿಯೋ ಎಡಿಟಿಂಗ್ ಆಪ್ ಇದಾಗಿದ್ದು, ಬಹಳಷ್ಟು ಜನ ಬಳಸುತ್ತಿರುವ ಆಪ್ ಇದಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೂಕ್ತವಾದ ಸಣ್ಣ ವಿಡಿಯೋ ತುಣಕುಗಳನ್ನು ಎಡಿಟಿಂಗ್ ಮಾಡಲು ವಿವಾ ವಿಡಿಯೋ ಆಪ್ ಸೂಕ್ತ. ಸ್ಟೋರಿ ಬೋರ್ಡ್‌ ವಿನ್ಯಾಸವನ್ನು ಹೊಂದಿದೆ. ಎಡಿಟ್ ಮತ್ತು ಟ್ರಿಮ್ ಮಾಡಬಹುದು, ಮತ್ತು ಮುಂದಿನ ಸಿಗ್ಮೆಂಟ್‌ಗೆ ಹೋಗಬಹುದಾಗಿದೆ. 200ಕ್ಕೂ ಹೆಚ್ಚು ವಿಡಿಯೋ ಫಿಲ್ಟರ್ಸ್ ಮತ್ತು ಎಫೆಕ್ಟ್ಸ್ ಹೊಂದಿದೆ. ಅಕ್ಷರಗಳನ್ನು ಬರೆಯಬಹುದು ಮತ್ತು ಸ್ಲೋ ಮೋಷನ್‌ಗೆ ಬೆಂಬಲಿಸುತ್ತದೆ.

WhatsApp group voice and video calling is now live - KANNADA GIZBOT
10. ವಿಡಿಯೋಶೋ ವಿಡಿಯೋ ಎಡಿಟರ್ VideoShow Video Editor

10. ವಿಡಿಯೋಶೋ ವಿಡಿಯೋ ಎಡಿಟರ್ VideoShow Video Editor

ಇದು ಸಹ ಪಾಪುಲರ್ ವಿಡಿಯೋ ಎಡಿಟಿಂಗ್ ಆಪ್ ಆಗಿದೆ. ಬಹಳ ಸುಲಭವಾಗಿದ್ದು, ಎಮೋಜಿ ಮತ್ತು ಟೆಕ್ಸ್ಟ್‌ನ್ನು ವಿಡಿಯೋಗೆ ಸೇರಿಸುವ ಆಯ್ಕೆ ಇದೆ. ವಿಡಿಯೋ ಎಫೆಕ್ಸ್ಟ್‌ಗಳು ಸ್ವಲ್ಪ ಮನರಂಜನೆಯನ್ನು ನೀಡುತ್ತವೆ. ಫೇಸ್‌ಬುಕ್, ಟ್ವಿಟರ್, ಇನ್ದ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ವಿಡಿಯೋ ಪ್ಲಾಟ್‌ಪಾರ್ಮ್‌ಗೆ ಇದು ಸೂಕ್ತವಾಗಿದೆ.

Best Mobiles in India

English summary
10 best video editor apps for Android. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X