Just In
Don't Miss
- News
10 ಗಂಟೆ ಸ್ಪಾಟ್ ನಲ್ಲಿ ಬಿದ್ದಿದ್ದವು ಅತ್ಯಾಚಾರಿಗಳ ಮೃತದೇಹ!
- Finance
ದುಬೈನಲ್ಲಿ ಒಂಟೆಗಳಿಗೆ ಐಷಾರಾಮಿ ಆಸ್ಪತ್ರೆ: ಜಗತ್ತಿನ ಏಕೈಕ ಆಸ್ಪತ್ರೆ
- Automobiles
ಫಾಸ್ಟ್ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
- Movies
ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!
- Lifestyle
ನೀರಿನ ಉಪವಾಸ: ಏನಿದರ ಪ್ರಯೋಜನ ಮತ್ತು ಏನಿವೆ ಅಡ್ಡ ಪರಿಣಾಮಗಳು?
- Sports
South Asian Games: ಈ ಬಾರಿ ಭಾರತದಿಂದ ಭರ್ಜರಿ ಬಂಗಾರದ ಬೇಟೆ!
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಅಪರಿಚಿತ ಕರೆಗಳನ್ನು ಗುರುತಿಸುತ್ತವೆ ಈ ಟಾಪ್ 10 ಆಪ್‌ಗಳು
ಯಾವುದೇ ಪ್ರಮುಖ ಮೀಟಿಂಗ್ ನಲ್ಲಿದ್ದಾಗ ಒಂದು ಕರೆ ಬರುತ್ತದೆ. ಫೋನ್ ತೆಗೆದು ನೋಡಿದರೆ ಅದ್ಯಾವುದೇ ಮಾರ್ಕೆಟಿಂಗ್ ಕರೆ. ನಿಜಕ್ಕೂ ಆ ಸಂದರ್ಬಕ್ಕೆ ಕೆಟ್ಟ ಕೋಪ ಬಂದಂತಾಗುತ್ತದೆ. ಅಷ್ಟೇ ಅಲ್ಲ ,ಕೆಲವು ಕರೆಗಳಿರುತ್ತದೆ ಅದನ್ನು ರಿಸೀವ್ ಮಾಡಿದರೆ ಸಾಕು ನಿಮ್ಮ ಫೋನಿನ ಅಕೌಂಟಿನಲ್ಲಿರುವ ದುಡ್ಡು ಕಟ್ ಆಗುತ್ತದೆ. ಅನಗತ್ಯ ಕರೆಗಳು ಕೆಲವೊಮ್ಮೆ ಭಾರೀ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಅವುಗಳನ್ನು ರಿಸೀವ್ ಮಾಡದೇ ಇರುವುದೇ ಲೇಸು. ಕಾಂಟ್ಯಾಕ್ಟ್ ನಲ್ಲಿ ಸೇವ್ ಇಲ್ಲ ಅನ್ನೋ ಮಾತ್ರಕ್ಕೆ ಎಲ್ಲಾ ಕರೆಗಳು ಅಪರಿಚಿತ ಕರೆಗಳೇ ಆಗಿರಬೇಕು ಎಂದೇನಿಲ್ಲ.
ಕೆಲವೊಮ್ಮೆ ಪರಿಚಿತ ವ್ಯಕ್ತಿಗಳೇ ಹೊಸ ನಂಬರ್ ನಿಂದ ಕರೆ ಮಾಡಿರಲೂ ಬಹುದು. ಹಾಗಾಗಿ ಕಾಂಟ್ಯಾಕ್ಟ್ ನಲ್ಲಿ ಸೇವ್ ಆಗಿರದ ಕರೆಯನ್ನೂ ಕೂಡ ಗುರುತಿಸುವಂತಾಗಿದ್ದರೆ ಒಳ್ಳೆಯದು ಅನ್ನುವುದು ಪ್ರತಿಯೊಬ್ಬರ ಆಸೆ. ಅದಕ್ಕಾಗಿಯೇ ಆಂಡ್ರಾಯ್ಡ್ ನಲ್ಲಿ ಕೆಲವು ಆಪ್ ಗಳಿವೆ. ಆದರೆ ಕೆಲವೇ ಕೆಲವು ಆಪ್ ಗಳು ಮಾತ್ರ ಪ್ರಸಿದ್ಧಿಯಾಗಿದೆ. ಹಾಗಾಗಿ ಈ ಲೇಖನದಲ್ಲಿ ನಾವು ಪ್ರಮುಖವಾಗಿ ಆಂಡ್ರಾಯ್ಡ್ ಗೆ ಸೂಕ್ತವಾಗುವ ರಿವರ್ಸ್ ನಂಬರ್ ಲುಕ್ ಅಪ್ ಆಪ್ ಗಳ ಬಗ್ಗೆ ತಿಳಿಸುತ್ತಿದ್ದೇವೆ.
ಜಾಹೀರಾತು ಮತ್ತು ಮಾರ್ಕೆಟಿಂಗ್ ಅನ್ನುವುದು ಪ್ರತಿ ಕಂಪೆನಿಯ ಅಭಿವೃದ್ಧಿಗೆ ಬಹಳ ಮುಖ್ಯವಾದುದ್ದು ಮತ್ತು ಅದು ಈಗ ಇಡೀ ಜಗತ್ತನ್ನು ಆವರಿಸಿ ಬಿಟ್ಟಿದೆ.ಅದೇ ಕಾರಣಕ್ಕೆ ಅದೆಷ್ಟೋ ಕಂಪೆನಿಗಳು ಗ್ರಾಹಕರನ್ನ ಸೆಳೆಯುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಗಳನ್ನು ತೆರೆದು ಆಗಾಗ ಕರೆಗಳನ್ನು ಮಾಡುತ್ತಲೇ ಇರುತ್ತವೆ. ಆದೆ ಇದು ಅದೆಷ್ಟೋ ಗ್ರಾಹಕರಿಗೆ ಕಿರಿಕಿರಿಯ ಅನುಭವವನ್ನು ಉಂಟು ಮಾಡುತ್ತದೆ. ಹೊಸ ಸೇವೆ ಮತ್ತು ಸರಕಿನ ಬಗ್ಗೆ ಮಾಹಿತಿ ನೀಡುವ ಇಂತಹ ಕೆಲವು ಮಾರ್ಕೆಟಿಂಗ್ ಕರೆಗಳು ಒಮ್ಮೊಮ್ಮೆ ಭಾರೀ ಹಿಂಸೆಗೆ ಕಾರಣವಾಗುತ್ತದೆ.
ಹೆಚ್ಚಿನ ಎಲ್ಲಾ ಗ್ರಾಹಕರು ಇಂತಹ ಮಾರ್ಕೆಟಿಂಗ್ ಸಂಬಂಧಿತ ಕರೆಗಳನ್ನು ಬ್ಲಾಕ್ ಮಾಡಬೇಕು ಎಂದೇ ಇಚ್ಛಿಸುತ್ತಾರೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ಪ್ಲೇ ಸ್ಟೋರ್ ನಲ್ಲಿ ಸ್ಪ್ಯಾಮ್ ಕರೆಗಳನ್ನು ತಡೆಯಲು ಹಲವಾರು ಆಪ್ ಗಳು ಲಭ್ಯವಿದೆ. ಆದರೆ ಅವುಗಳಲ್ಲಿ ಯಾವುದು ಬೆಸ್ಟ್?ಯಾವುದು ಬೆಸ್ಟ್ ಅಲ್ಲ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ಲೇಖನದಲ್ಲಿ ನಾವು ನಿಮ್ಮ ಕರೆಗಳ ಗುರುತಿಸುವಿಕೆಗೆ ಹೆಚ್ಚು ನೆರವು ನೀಡುವ ಆಪ್ ಗಳ ಬಗ್ಗೆ ವಿವರಣೆ ನೀಡುತ್ತಿದ್ದೇವೆ.

1 ಟ್ರೂ ಫೈಂಡರ್
ಡೆವಲಪರ್: ಟ್ರುತ್ ಫೈಂಡರ್
ಬೆಲೆ: ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ
ಇದು ಬೆಸ್ಟ್ ಆಂಡ್ರಾಯ್ಡ್ ಆಪ್ ಆಗಿದ್ದು, ಬಳಕೆದಾರರೂ ಕೂಡಲೇ ತಮ್ಮ ಕರೆಯ ನಂಬರ್ ನ ವಿವರವನ್ನು ಪಡೆಯಬಹುದು.ಇದನ್ನು ನಾವು ಬೆಸ್ಟ್ ಎಂದು ಹೇಳುತ್ತಿರಲು ಕಾರಣವೇನೆಂದರೆ ಈ ಆಪ್ ನಿಂದ ಬರುವ ರಿಸಲ್ಟ್ ಯಾವಾಗಲೂ ಹೆಚ್ಚು ಕಡಿಮೆ ನಿಖರವಾಗಿರುತ್ತದೆ ಮತ್ತು ಯಾವುದೇ ನಂಬರಿನ ವಿವರವನ್ನು ಬೇಕಿದ್ದರೂ ಈ ಆಪ್ ನೀಡುತ್ತದೆ. ಉಚಿತವಾದ ಆವೃತ್ತಿ ಕೂಡ ಇದರಲ್ಲಿ ಲಭ್ಯವಿದೆ ಮತ್ತು ಪಾವತಿ ಮಾಡಿ ಖರೀದಿಸಬಹುದಾದ ಆವೃತ್ತಿ ಕೂಡ ಇದೆ. ಈ ಆಪ್ ಮೂಲಕ ಯಾವುದೇ ಒಂದು ಫೋನ್ ನಂಬರಿನ ಮಾಲೀಕನ ವಿವರ, ವಿಳಾಸ, ಆತನ ಕ್ರೈಮ್ ಹಿಸ್ಟರಿ ಇತ್ಯಾದಿ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿದೆ. ಆ ಮೂಲಕ ಬಳಕೆದಾರರು ಅಂತಹ ಯಾವುದೇ ಕರೆಯನ್ನು ಬ್ಲಾಕ್ ಮಾಡಿಕೊಳ್ಳಲು ಆಪ್ ಮೂಲಕ ಅವಕಾಶವಿರುತ್ತದೆ.

2 ರಿವರ್ಸ್ ಲುಕ್ ಅಪ್
ಡೆವಲಪರ್:: ಸಾಕೆಟ್ ವಯರ್
ಬೆಲೆ: ಉಚಿತ
ಹೆಸರೇ ಹೇಳುವಂತೆ, ಇದು ಮಾಡುವ ಸಾಮಾನ್ಯ ಕೆಲಸವೆಂದರೆ ಯಾವುದಾದರೂ ಅಪರಿಚಿತ ಸಂಖ್ಯೆಯ ಕರೆಗಳು ಬಂದಾಗ ಅಂದರೆ ಅದು ನಿಮ್ಮ ಕಾಂಟ್ಯಾಕ್ಟ್ ಪಟ್ಟಿಲ್ಲಿ ಇಲ್ಲದ ಕರೆಗಳು ಬಂದಾಗ ಅದನ್ನು ಗುರುತಿಸುತ್ತದೆ. ಯಾವುದು ಅಪರಿಚಿತ ಕರೆಯಾಗಿರುತ್ತದೋ ಅದಕ್ಕೆ ಸಂಬಂಧಿಸಿದ ಸಿಮ್ ನ ಮಾಲೀಕರ ಹೆಸರನ್ನು ನೀವು ಇಂಟರ್ ನೆಟ್ ನಲ್ಲಿ ನೋಡಬಹುದು. ಇದರಲ್ಲಿ ಈ ಕೆಲಸವು ಸ್ವಯಂಚಾಲಿತವಾಗಿ ಆಗುತ್ತದೆ.ಈ ಆಪ್ ನ ಉಚಿತ ಆವೃತ್ತಿಯು ಲಭ್ಯವಿದ್ದು, ಪಾವತಿ ಮಾಡಿ ಪಡೆಯಬಹುದಾದ ಆಪ್ ಕೂಡ ಲಭ್ಯವಿದ್ದು ಕೇವಲ 2 ಡಾಲರ್ ಪಾವತಿ ಮಾಡಿ ಪಡೆದುಕೊಳ್ಳಬಹುದಾಗಿದೆ. ಉಚಿತವಾದ ಮತ್ತು ಪಾವತಿ ಮಾಡುವ ಎರಡು ವರ್ಷನ್ ಗಳಲ್ಲಿ ಭಾರೀ ವ್ಯತ್ಯಾಸವೇನೋ ಇಲ್ಲ. ಆದರೆ ಬಳಕೆದಾರರು ಪಾವತಿ ಮಾಡಿ ಖರೀದಿಸಿರುವುದರಲ್ಲಿ ಹೆಚ್ಚು ಅಡ್ವಾನ್ಸ್ಡ್ ಆಗಿರುವ ಹುಡುಕಾಟವನ್ನು ಬಳಕೆದಾರರು ಪಡೆಯುವ ಸಾಧ್ಯತೆ ಇದೆ.

3 ವೂಸ್ ಕಾಲ್
ಡೆವಲಪರ್:: ಗೋಗೋಲುಕ್
ಬೆಲೆ: ಫ್ರೀ+
ಇದು ಫೋನ್ ನಂಬರ್ ಲುಕ್ ಅಪ್ ನ ಮತ್ತೊಂದು ಆಂಡ್ರಾಯ್ಡ್ ಆಪ್ ಆಗಿದೆ. ಯಾವುದೇ ಕರೆ ಸ್ಪ್ಯಾಮ್ ಎಂದು ಅನ್ನಿಸಿದರೆ ಈ ಆಪ್ ನ ಸೆಟ್ಟಿಂಗ್ಸ್ ಮುಖಾಂತರ ಅದನ್ನು ಕೂಡಲೇ ಬ್ಲಾಕ್ ಮಾಡುವ ಅವಕಾಶ ನಿಮಗೆ ಸುಲಭವಾಗಿ ಈ ಆಪ್ ಮೂಲಕ ದೊರೆಯುತ್ತದೆ. ಇದು ನಂಬರ್ ಗಳನ್ನು ಗುರುತಿಸಲು ಬಹಳ ಸುಲಭ ಮತ್ತು ಸರಳವಾಗಿರುವ ಆಪ್ ಆಗಿದ್ದು, ಯಾವುದೇ ಏಷ್ಯಾದ ಕರೆಗಳನ್ನು ಈ ಆಪ್ ಮೂಲಕ ಗುರುತಿಸಲು ಸಾಧ್ಯವಿದೆ.

4 ಹಿಯಾ
ಡೆವಲಪರ್ : ಹಿಯಾ
ಬೆಲೆ: ಉಚಿತ
ಹಿಯಾ ಆಪ್ ಹೆಚ್ಚು ಕಡಿಮೆ ಟ್ರೂಕಾಲರ್ ನಂತೆಯೇ ಕೆಲಸ ನಿರ್ವಹಿಸುತ್ತದೆ. ಅನಗತ್ಯ ನಂಬರಿನ ಕರೆಗಳನ್ನು ಬ್ಲಾಕ್ ಮಾಡಲು, ಕರೆಗಳನ್ನು ಗುರುತಿಸಲು, ಸ್ಪ್ಯಾಮ್ ಕರೆಗಳನ್ನು ತಡೆಯಲು ನೆರವು ನೀಡುತ್ತದೆ. ಈ ಆಪ್ ನ್ನು ಬಳಸುವ 100 ಮಿಲಿಯನ್ ಗೂ ಅಧಿಕ ಫೋನ್ ನಂಬರ್ ಗಳ ಡಾಟಾಬೇಸ್ ನ್ನು ಇದು ಹೊಂದಿದೆ.

5 ಟ್ರೂಕಾಲರ್
ಡೆವಲಪರ್:ಟ್ರೂ ಸಾಫ್ಟ್ ವೇರ್ ಸ್ಕ್ಯಾಂಡಿನೇವಿಯಾ ಎಬಿ
ಬೆಲೆ:ಉಚಿತ+
ಇದು ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಆಪ್ ಗಳಲ್ಲಿ ಒಂದಾಗಿದೆ. ಅಪರಿಚಿತ ಕರೆಗಳನ್ನು ಗುರುತಿಸಲು, ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಲು,ಸ್ಪ್ಯಾಮ್ ಎಸ್ ಎಂಎಸ್ ಗಳನ್ನು ತಡೆಯಲು ಇದು ನೆರವಾಗುತ್ತದೆ. ಇದು ಅನಗತ್ಯ ಕರೆಗಳನ್ನು ಫಿಲ್ಟರ್ ಮಾಡಲು ಕೂಡ ಸಹಕಾರಿಯಾಗಿದೆ.

6 ಶೋ ಕಾಲರ್
ಡೆವಲಪರ್: ಶೇಕಾಲರ್ ಸ್ಟುಡಿಯೋ
ಬೆಲೆ: ಉಚಿತ+
ಮತ್ತೊಂದು ಆಂಡ್ರಾಯ್ಡ್ ಬೆಸ್ಟ್ ಆಪ್ ಇದಾಗಿದ್ದು ಫೇಕ್ ಕರೆಗಳನ್ನು ಗುರುತಿಸುವುದಕ್ಕಾಗಿಯೇ ಇದನ್ನು ಡಿಸೈನ್ ಮಾಡಲಾಗಿದೆ. ಬಳಕೆದಾರರಿಗೆ ಕಾಲರ್ ಐಡಿಯನ್ನು ಗುರುತಿಸಿಕೊಳ್ಳಲು ನೆರವಾಗುತ್ತದೆ ಆ ಮೂಲಕ ಸ್ಪ್ಯಾಮ್, ಸ್ಕ್ಯಾಮ್,ಟೆಲಿ ಮಾರ್ಕೆಟಿಂಗ್ ಕಾಲ್ ಗಳನ್ನು ಅವರು ತಡೆಹಿಡಿಯಬಹುದು. ಇದಿಷ್ಟೇ ಅಲ್ಲ, ಬಿಲ್ಟ್ ಇನ್ ಕಾಲ್ ಬ್ಲಾಕರ್, ನಂಬರ್ ಡಯಲರ್ ಮತ್ತು ಕಾಲ್ ರೆಕಾರ್ಡಿಂಗ್ ಗೂ ಇದು ಅವಕಾಶ ನೀಡುತ್ತದೆ.

7 ರಿಯಲ್ ಕಾಲರ್
ಡೆವಲಪರ್: ರಿಯಲಿ ಕ್ಲಿಕ್ಕಿಂಗ್
ಬೆಲೆ: ಉಚಿತ+
ರಿಯಲ್ ಕಾಲರ್ ಒಂದು ಜೆನ್ಯೂನ್ ಫೋನ್ ಬುಕ್ ನ್ನು ಸ್ಪ್ಯಾಮ್ ಕರೆಗಳ ಗುರುತಿಸುವಿಕೆಗೆ ಬಳಸುತ್ತದೆ. ಇದನ್ನು ರಿವರ್ಸ್ ನಂಬರ್ ಲುಕ್ ಅಪ್ ಗಾಗಿ ಬಳಸಲಾಗುತ್ತದೆ ಯಾಕೆಂದರೆ ಇದು ಬಳಕೆದಾರರಿಗೆ ಕಾಲರ್ ಐಡಿಯನ್ನು ಗುರುತಿಸಲು ನೆರವು ನೀಡುತ್ತದೆ. ಆದರೆ ಆಪ್ ಕೆಲಸ ಮಾಡಬೇಕು ಎಂದರೆ ಅಂತರ್ಜಾಲ ಸಂಪರ್ಕವಿರಬೇಕು. ಬಿಲ್ಟ್ ಇನ್ ಕಾಲ್ ಬ್ಲಾಕರ್ ಕೂಡ ಇದರಲ್ಲಿ ಲಭ್ಯವಿದ್ದು, ಬಳಕೆದಾರರು ಸ್ಪ್ಯಾಮ್ ಮತ್ತು ಸ್ಕ್ಯಾಮ್ ಕರೆಗಳನ್ನು ತಡೆಯಬಹುದು.

8 ಸಿಂಪ್ಲರ್
ಡೆವಲಪರ್:ಸಿಂಪ್ಲರ್ ಆಪ್ಸ್
ಬೆಲೆ:ಉಚಿತ
ಇಂತಹದ್ದೇ ರಿವರ್ಸ್ ನಂಬರ್ ಲುಕ್ ಅಪ್ ಆಪ್ ನ್ನು ಆಂಡ್ರಾಯ್ಡ್ ಗಾಗಿ ಹುಡುಕಾಡುತ್ತಿದ್ದರೆ ಡಯಲರ್, ಫೋನ್ ಕಾಲ್ ಬ್ಲಾಕ್ ಮತ್ತು ಕಾಂಟ್ಯಾಕ್ಟ್ ಬೈ ಸಿಂಪ್ಲರ್ ಆಪ್ ಕೂಡ ಒಂದು ಅತ್ಯುದ್ಭುತ ಆಯ್ಕೆ ಆಗಿರುತ್ತದೆ. ಈ ಆಪ್ ಉತ್ತಮ ಇಂಟರ್ ಫೇಸ್ ಹೊಂದಿದೆ ಮತ್ತು ಅನೇಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಬ್ಲಾಕ್ ಕಾಲ್ಸ್, ಟಿ9 ಡಿಯಲರ್, ಅಂದವಾದ ಥೀಮ್ ಗಳು ಇತ್ಯಾದಿಗಳನ್ನು ಇದು ಒಳಗೊಂಡಿದೆ. ಕಾಲರ್ ಐಡಿ ಯನ್ನು ಗುರುತಿಸಲು ಇದು ನೆರವಾಗುತ್ತದೆ. ಮೇಲೆ ತಿಳಿಸಿರುವ ಎಲ್ಲಾ ಆಪ್ ಗಳಿಗಿಂತ ಇದು ಹೆಚ್ಚು ಎಫೆಕ್ಟೀವ್ ಆಗಿದೆ ಎಂದರೆ ಅತಿಶಯೋಕ್ತಿ ಇಲ್ಲ.

9 ಕಾಲ್ ಆಪ್
ಡೆವಲಪರ್: ಕಾಲ್ ಆಪ್ ಕಾಲರ್ ಐಡಿ & ಕಾಲ್ ರೆಕಾರ್ಡಿಂಗ್ ಕಾಂಟ್ಯಾಕ್ಸ್
ಬೆಲೆ:ಉಚಿತ+
ಇನ್ನೊಂದು ಉತ್ತಮವಾದ ಮತ್ತು ಹೊಸ ಆಪ್ ವೊಂದು ಬಳಕೆದಾರರಿಗೆ ಕಾಲರ್ ಐಡಿ ಮತ್ತು ಅಪರಿಚಿತ ಕರೆಗಳ ಸಂಖ್ಯೆಯನ್ನ ಗುರುತಿಸಲು ನೆರವು ನೀಡುತ್ತದೆ. ಕಾಲ್ ಆಪ್ ಹಲವಾರು ಅತ್ಯದ್ಭುತವಾದ ವಿಶೇಷತೆಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಆಟೋ ಕಾಲ್ ರೆಕಾರ್ಡರ್, ಫೋನ್ ನಂಬರ್ ಲುಕ್ಕಿಂಗ್, ಕಾಲ್ ಬ್ಲಾಕರ್, ಟಿ9 ಡಯಲರ್, ಮತ್ತು ಕಾಂಟ್ಯಾಕ್ಸ್ ಆಪ್ ಇನ್ನು ಪಟ್ಟಿ ಹಲವಿದೆ. ಕಾಲರ್ ಐಡಿಯ ಪಬ್ಲಿಕ್ ಮಾಹಿತಿಗಳನ್ನು ಕೂಡ ಇದು ನೀಡುತ್ತದೆ.

10 ಶುಡ್ ಐ ಆನ್ಸರ್?
ಡೆವಲಪರ್: ಮಿಸ್ಟರ್ ಗ್ರೂಪ್ ಎಸ್ .ಆರ್.ಓ
ಬೆಲೆ: ಉಚಿತ
ನಿಜಕ್ಕೂ ಹೇಳಬೇಕೆಂದರೆ ಇದು ರಿವರ್ಸ್ ನಂಬರ್ ಲುಕ್ ಅಪ್ ಆಪ್ ಅಲ್ಲ ಇದನ್ನು ಮೊಬೈಲ್ ಸೆಕ್ಯುರಿಟಿ ಆಪ್ ಎಂದು ಪರಿಗಣಿಸುವುದು ಹೆಚ್ಚು ಸೂಕ್ತವಾದುದ್ದಿದೆ. ಈ ಆಪ್ ಫೋನ್ ನಂಬರ್ ರೇಟಿಂಗ್ ನ್ನು ಕೂಡಲೇ ತಿಳಿಸುತ್ತದೆ.ಟೆಲಿ ಮಾರ್ಕೆಟಿಂಗ್ ಕಾಲ್, ರೋಟೋ ಕಾಲ್, ಸ್ಪ್ಯಾಮ್ ಕರೆಗಳನ್ನು ತಡೆಯಲು ಇದು ನೆರವಾಗುತ್ತದೆ. ಆಫ್ ಲೈನ್ ನಲ್ಲಿ ವರ್ಕ್ ಮಾಡಲು ಕೂಡ ಇದು ಸಹಕಾರಿಯಾಗಿದ್ದು, ಅಂತರ್ಜಾಲ ಸಂಪರ್ಕವಿಲ್ಲದ ಸಂದರ್ಬದಲ್ಲೂ ಕೂಡ ಕೆಲಸ ನಿರ್ವಹಿಸುತ್ತದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090