ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳಿವು!!

|

ಪ್ರಪಂಚದಲ್ಲೇ ಅತೀ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್ ಗಳು ಯಾವುದು ಎಂದು ಯೋಚಿಸುತ್ತಿದ್ದೀರಾ? ಸ್ಮಾರ್ಟ್ ಫೋನ್ ಗಳು ಕೇವಲ ಹೆಸರುವಾಸಿ ಮಾತ್ರವಲ್ಲ ಬದಲಾಗಿ ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾಗುವ ವಸ್ತುಗಳು. ಕೌಂಟರ್ ಪಾಯಿಂಟ್ ಎಂಬ ರಿಸರ್ಚ್ ಸಂಸ್ಥೆಯು 2018 ರಲ್ಲಿ ಅಂದರೆ ಕಳೆದ ಮೂರು ತಿಂಗಳಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಯಾವುದು ಎಂಬ ಬಗ್ಗೆ ಒಂದು ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಸ್ಮಾರ್ಟ್ ಫೋನ್ ಕಂಪೆನಿಗಳಾದ ಆಪಲ್, ಸ್ಯಾಮ್ ಸಂಗ್, ಶಿಯೋಮಿ,ಓಪೋ ಗಳು ಇವೆ, ಹಾಗಾದ್ರೆ 2018 ರಲ್ಲಿ ಇದುವರೆಗೆ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳು ಯಾವುದು ಇಲ್ಲಿದೆ ನೋಡಿ ಲಿಸ್ಟ್...

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳಿವು!!

1.ಆಪಲ್ ಐಫೋನ್ ಎಕ್ಸ್

ಎಲ್ಲಾ ಶೋರೂಮ್ ರೂಮರ್ ಗಳನ್ನು ಹೊರತುಪಡಿಸಿ, ಆಪಲ್ ಐಫೋನ್ ಎಕ್ಸ್ 2018 ರಲ್ಲಿ ಇದುವರೆಗೆ ಮಾರಾಟವಾಗಿರುವ ಸ್ಮಾರ್ಟ್ ಫೋನ್ ಗಳಲ್ಲೇ ಅತೀ ಹೆಚ್ಚು ಮಾರಾಟವಾಗಿರುವ ಫೋನ್ ಆಗಿದೆ. ಆಫಲ್ ಫೋನ್ ಗಳು ಸ್ವಲ್ಪ ದುಬಾರಿಯಾಗಿದ್ದರೂ ಕೂಡ, ಅವು ಲಾಭದಾಯಕವಾಗಿರುವುದರಿಂದ ವಿಶ್ವದಾದ್ಯಂತ ಇದಕ್ಕೆ ಬೇಡಿಕೆ ಇದೆ. ಕೌಂಟರ್ ಪಾಯಿಂಟ್ ನಡೆಸಿದ ರೀಸರ್ಚ್ ಫ್ರಕಾರ,ಸ್ಮಾರ್ಟ್ ಫೋನ್ ಇಂಡಸ್ಟ್ರಿಯ ಒಟ್ಟು ಆದಾಯದ ಶೇಕಡಾ 35 ರಷ್ಟನ್ನು ಆಪಲ್ ಪಡೆದುಕೊಂಡಿದೆ.

2. ಆಪಲ್ ಐಫೋನ್ 8 ಪ್ಲಸ್

ನಂ 2 ಸ್ಥಾನದಲ್ಲಿ ಆಪಲ್ ಐಫೋನ್ 8 ಪ್ಲಸ್ ಇದೆ.ಸೆಪ್ಟೆಂಬರ್ 2017 ರಲ್ಲಿ ಇದು ಬಿಡುಗಡೆಗೊಂಡಿತ್ತು. ಆಪಲ್ ಐಫೋನ್ 7 ಗೆಲುವಿನ ನಂತರ ಬಂದ ಐಫೋನ್ ಇದು. ಒಟ್ಟು ಉದ್ಯಮದ ಶೇಕಡಾ 15.2 ರಷ್ಟು ಲಾಭವನ್ನು ಇದು ಪಡೆದುಕೊಂಡಿದೆ.

3. ಶಿಯೋಮಿ ರೆಡ್ ಮಿ 5 ಎ

ಮೂರನೇ ಸ್ಥಾನವನ್ನು ಶಿಯೋಮಿ ರೆಡ್ ಮಿ5 ಎ ಇದೆ.ನವೆಂಬರ್ 2017 ರಲ್ಲಿ ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು. ಇದರ ಸ್ಮಾರ್ಟಿಂಗ್ ಬೆಲೆ 5999 ರುಪಾಯಿಗಳು.ಈ ಡುಯಲ್ ಸಿಮ್ ಸ್ಮಾರ್ಟ್ ಫೋನ್ ರನ್ ಆಗುವುದು MIUI 9- Android Nougat ನಿಂದ ಮತ್ತು quad-core Qualcomm Snapdragon 425 ಸಾಕೆಟ್ ಇದರಲ್ಲಿದೆ. . ಇದು 5-inch HD (720x1280 pixels) ಡಿಸ್ಪ್ಲೇ ಹೊಂದಿದೆ ಮತ್ತು ಎರಡು ಸ್ತರದಲ್ಲಿ ಅಂದರೆ 2GB ಮತ್ತು 3GB RAM ನಲ್ಲಿ ಬರಲಿದೆ

4. ಓಪೋ ಎ83

ನಾಲ್ಕನೇ ಸ್ಥಾನದಲ್ಲಿ ಚೈನಾದ ಓಪೋ ಸ್ಮಾರ್ಟ್ ಫೋನ್ ಎ83 ಇದೆ. ಈ ವರ್ಷದ ಜನವರಿಯಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಫೀ ಗೆ ಹೆಚ್ಚು ಮಹತ್ವ ನೀಡಿದ ಸ್ಮಾರ್ಟ್ ಇದು.13990 ರೂಪಾಯಿಗೆ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

5. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9

5 ನೇ ಸ್ಥಾನವನ್ನು ಮುಡಿಗೇರಿಸಿಕೊಳ್ಳುವುದು ಸ್ಯಾಮಸಂಗ್ ಗ್ಯಾಲಕ್ಸಿ ಎಸ್ 9. ಸ್ಯಾಮ್ ಸಂಗ್ ನ ಶೇರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಫೋನ್ ಇದು. ಭಾರತದಲ್ಲೂ ಇದನ್ನು ಬಿಡುಗಡೆಗೊಳಿಸಿದ್ದು, ಇಲ್ಲಿ ಇದರ ಬೆಲೆ 64900 ರುಪಾಯಿಗಳು.

6.ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9+

6 ನೇ ಸ್ಥಾನದಲ್ಲಿ ಬಿಗ್ ಸ್ಕ್ರೀನ್ ವೇರಿಯಂಟ್ ಆಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9+ ಇದೆ. ಈ ವರ್ಷದ ಮಾರ್ಚ್ ನಲ್ಲಿ ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು. ಇಲ್ಲಿ ಇದರ ಬೆಲೆ 57900 ರುಪಾಯಿಗಳು. ಮಿಡ್ ನೈಟ್ ಬ್ಲಾಕ್,ಕೋರಲ್ ಬ್ಲೂ, ಪರ್ಪಲ್ ಬಣ್ಣದಲ್ಲಿ ಲಭ್ಯವಿದೆ.

7.ಆಪಲ್ ಐಫೋನ್ 7

ಸೆಪ್ಟೆಂಬರ್ 2016 ರಲ್ಲಿ ಬಿಡುಗಡೆಗೊಂಡಿರುವ ಸ್ಮಾರ್ಟ್ ಫೋನ್ ಇದಾಗಿದ್ದು ಪಟ್ಟಿಯ 7 ನೇ ಸ್ಥಾನದಲ್ಲಿದೆ.ಆಪಲ್ ಫೋನ್ ಗಳಲ್ಲೇ ವಿಶ್ವದಾದ್ಯಂತ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳಲ್ಲಿ ಮೂರನೇ ಸ್ಥಾನದಲ್ಲಿರುವುದು ಇದು. ಎರಡು ವರ್ಷ ಹಳೆಯದಾದ ಫೋನ್ ಈಗಲೂ ಅತೀ ಹೆಚ್ಚು ಲಾಭ ಗಳಿಸುತ್ತಿದ್ದು ನಾಲ್ಕನೇ ಅತೀ ಹೆಚ್ಚು ಲಾಭ ಗಳಿಕೆಯ ಫೋನ್ ಗಳಲ್ಲಿ ಒಂದೆನಿಸಿದೆ. ಉದ್ಯಮದ ಒಟ್ಟು ಲಾಭದ ಶೇಕಡಾ 6.2 ರಷ್ಟನ್ನು ಈ ಫೋನ್ ಪಡೆದುಕೊಳ್ಳುತ್ತಿದೆ.

8.ಆಪಲ್ ಐಫೋನ್ 8

ಕಳೆದ ವರ್ಷ ಬಿಡುಗಡೆಗೊಂಡಿರುವ ಮೂರುಆಪಲ್ ಐಫೋನ್ ಗಳಲ್ಲಿ ಕಡಿಮೆ ದರದ ಫೋನ್ ಇದು. ಲಾಭದ ಪ್ರಕಾರ ಹೇಳುವುದಾದರೆ ಪ್ರಪಂಚದಲ್ಲೇ ಎರಡನೇ ಅತೀ ಹೆಚ್ಚು ಲಾಭ ನೀಡಿದ ಸ್ಮಾರ್ಟ್ ಫೋನ್ ಗಳಲ್ಲಿ ಆಫಲ್ ಐಫೋನ್ 8 ಸೇರಲಿದೆ. ಈ ವರ್ಷದ ಮೊದಲಾರ್ಧದಲ್ಲಿ ಒಟ್ಟು ಸ್ಮಾರ್ಟ್ ಫೋನ್ ಉದ್ಯಮದ ಶೇಕಡಾ 19.1 ರಷ್ಟು ಲಾಭವನ್ನು ಇದು ಪಡೆದುಕೊಂಡಿದೆ.

9.ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ಪ್ರೋ

ಈ ಲಿಸ್ಟ್ ನಲ್ಲಿರುವ ಮೂರನೇ ಸ್ಯಾಮಸಂಗ್ ಸ್ಮಾರ್ಟ್ ಫೋನ್ ಇದಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ಪ್ರೋ ಮಧ್ಯಮ ವರ್ಗದ ಫೋನ್. 2017 ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಇತ್ತೀಚೆಗೆ ಭಾರತದಲ್ಲಿ ಇದರ ಬೆಲೆಯನ್ನೂ ಕಡಿಮೆಗೊಳಿಸಲಾಯಿತು. ಇದು 18,900 ರೂಪಾಯಿಗೆ ಲಭ್ಯವಿದೆ.

10.ಆಪಲ್ ಐಫೋನ್ 6

10 ನೇ ಸ್ಥಾನದಲ್ಲಿ ಆಪಲ್ ಡಿವೈಸ್ ಆಪಲ್ ಐಫೋನ್ 6 ಇದೆ.,ಸುಮಾರು 4 ವರ್ಷ ಹಿಂದಿನ ಫೋನ್.ಆದರೂ ತನ್ನ ಪ್ರಸಿದ್ಧಿ ಚಾರ್ಟ್ ನಲ್ಲಿ ಇನ್ನೂ ಕೂಡ ಮೇಲ್ದರ್ಜೆಯಲ್ಲೇ ಇದೆ.2014 ರಲ್ಲಿ ಇದು ಬಿಡುಗಡೆಗೊಂಡಿತ್ತು. ಉದ್ಯಮದಲ್ಲಿ ಶೇಕಡಾ 1.8 ರಷ್ಟು ಲಾಭವನ್ನು ಆಪನ್ ಐಫೋನ್ 6 ಪಡೆದುಕೊಂಡಿದೆ.

Best Mobiles in India

English summary
Wonder which are the highest-selling smartphones in the world? The smartphones that are not just popular but are also top in sales globally. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X