ಆಪಲ್ ಡಿಸೈನ್ ಅನ್ನು ಸ್ಯಾಮ್‌ಸಂಗ್ ನಕಲು ಮಾಡಿದ್ದು ಹೇಗೆ?..12 ಅಂಶಗಳು!!

|

ಹಲವಾರು ದಿನಗಳ ವಿಚಾರಣೆಯ ನಂತರ,ಯುಎಸ್ ನ ಸ್ಯಾನ್ ಜೋಸ್ ನಲ್ಲಿರುವ ಜಿಲ್ಲಾ ನ್ಯಾಯಾಲಯವು ಸ್ಯಾಮ್ ಸಂಗ್ ಕಂಪೆನಿಯು 539 ಮಿಲಿಯನ್ ಡಾಲರ್ ಆಪಲ್ ಕಂಪೆನಿಗೆ ಪರಿಹಾರಾರ್ತವಾಗಿ ನೀಡಲು ಆದೇಶ ಹೊರಡಿಸಿದೆ. ಹೌದು, ಆಪಲ್ ಕಂಪೆನಿಯ ಪೇಟೆಂಟ್ ಆಗಿರುವ ಸ್ಮಾರ್ಟ್ ಫೋನ್ ನ ವಿಶಿಷ್ಟ್ಯವನ್ನು ಸ್ಯಾಮ್ ಸಂಗ್ ಕದ್ದಿತ್ತು. ವರ್ಷಗಟ್ಟಲೇ ಈ ಕೇಸು ಕಾನೂನಿನ ಅನ್ವಯ ಕೋರ್ಟ್ ನಲ್ಲಿ ವಿಚಾರಣೆ ಮಾಡಲ್ಪಟ್ಟಿತ್ತು. ಆಪಲ್ ಕಂಪೆನಿಯು ಕೋರ್ಟ್ ನಲ್ಲಿ ತನ್ನ ಸ್ಮಾರ್ಟ್ ಫೋನಿನ ವೈಶಿಷ್ಟ್ಯಗಳನ್ನು ಸ್ಯಾಮ್ ಸಂಗ್ ಕಂಪೆನಿಯು ಯಾವುದೇ ಅನುಮತಿ ಇಲ್ಲದೆ ಕದ್ದು ಬಳಕೆ ಮಾಡುತ್ತಿದೆ ಎಂದು ದಾವೆ ಹೂಡಿತ್ತು. ಈ ಕೇಸಿನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಹಾಗಾದ್ರೆ ಯಾವೆಲ್ಲ ವೈಶಿಷ್ಟ್ಯವನ್ನು ಸ್ಯಾಮ್ ಸಂಗ್ ನಕಲು ಮಾಡಿತ್ತು ತಿಳಿದುಕೊಳ್ಳಿ.

ಆಪಲ್ ಡಿಸೈನ್ ಅನ್ನು ಸ್ಯಾಮ್‌ಸಂಗ್ ನಕಲು ಮಾಡಿದ್ದು ಹೇಗೆ?..12 ಅಂಶಗಳು!!


1. ಎರಡು ಕಂಪೆನಿಗಳು 2011 ರಿಂದ ಕೋರ್ಟ್ ನಲ್ಲಿ ಹೋರಾಟ ನಡೆಸುತ್ತಿತ್ತು.

ಈಗ ಬಂದಿರುವ ತೀರ್ಮಾನವು , 2011 ರಲ್ಲಿ ಆರಂಭವಾದ ಕಾನೂನು ಯುದ್ಧದ ಅಂತಿಮ ಹಂತ. ಈಗ ಆಪಲ್ ಸಂಸ್ಥೆಗೆ ಜಯ ಸಿಕ್ಕಿದೆ. ಆಪಲ್ ಸಂಸ್ಥೆಯವರೇ ಹಾಕಿದ್ದು ಕೇಸು ಇದಾಗಿತ್ತು. ತಮ್ಮ ಕಂಪೆನಿಗೆ ಸೇರಿದ ಡಿಸೈನ್ ನ್ನು ಸ್ಯಾಮ್ ಸಂಗ್ ನಕಲು ಮಾಡಿದೆ ಎಂಬ ದೂರನ್ನು ದಾಖಲಿಸಲಾಗಿತ್ತು.

2. ಡಿಸೈನಿನ ವೈಶಿಷ್ಯಗಳನ್ನು ನಕಲು ಮಾಡಲಾಗಿದೆ – ವೃತ್ತಾಕಾರದ ಅಂಚುಗಳಿರುವಂತೆ ಫೋನಿನ ಸ್ಕ್ರೀನಿನ ಆಕಾರ, ಅಂಚು ಮತ್ತು ಸಾಲುಗಳಲ್ಲಿರುವ ಐಕಾನ್ ಗಳ ಪ್ರದರ್ಶನದ ನಕಲು

ಡಿಸೈನಿನ ವಿಚಾರದಲ್ಲಿ 3 ಡಿಸೈನ್ ಗಳ ಹಕ್ಕುಪತ್ರವಿರುವುದು ಕೇಸಿನಲ್ಲಿ ನಮೂದಾಗಿದೆ. ಕಪ್ಪು ಬಣ್ಣದ ಐಫೋನಿನ ಸ್ಕ್ರೀನ್,ವೃತ್ತಾಕಾರದ ಅಂಚುಗಳಿರುವಂತೆ ಫೋನಿನ ಸ್ಕ್ರೀನಿನ ಆಕಾರ, ಅಂಚು ಮತ್ತು ಸಾಲುಗಳಲ್ಲಿರುವ ಐಕಾನ್ ಗಳ ಪ್ರದರ್ಶನದ ನಕಲು. ಆದರೆ ಸ್ಯಾಮ್ ಸಂಗ್ ಈ ಕೇಸ್ ಪ್ರಾರಂಭವಾದಾಗಿನಿಂದ ಇಂತಹ ಫೋನ್ ಗಳನ್ನು ತನ್ನ ಕಂಪೆನಿಯಿಂದ ಮಾರಾಟ ಮಾಡಿಲ್ಲ.

3. ಯುಟಿಲಿಟಿ ವೈಶಿಷ್ಟ್ಯಗಳನ್ನು ನಕಲು ಮಾಡಲಾಗಿದೆ - 'Bounce-back' ಮತ್ತು 'tap-to-zoom'

ಹಕ್ಕುಪತ್ರವಿರುವ ಎರಡು ಯುಟಿಲಿಟಿ ಫಂಕ್ಷನ್ ಗಳ ಬಗ್ಗೆಯೂ ಮೊಕದ್ದಮೆಯಲ್ಲಿ ಬರೆಯಲಾಗಿದ್ದು, ಅವುಗಳೆಂದರೆ 'Bounce-back' ಮತ್ತು 'tap-to-zoom'. ಇದಕ್ಕೆ ಸಂಬಂಧಿಸಿದಂತೆ ಪರಿಹಾರವಾಗಿ 5 ಮಿಲಿಯನ್ ಪರಿಹಾರವನ್ನು ಕೇಳಲಾಗಿತ್ತು.

4. ಆಪಲ್ ಕಂಪೆನಿಯವರು ಒಂದು ಬಿಲಿಯನ್ ಗೆ ಪ್ರಯತ್ನಿಸಿದ್ದರು

ಆಪಲ್ ಕಂಪೆನಿಯವರು ಪರಿಹಾರವಾಗಿ ಒಂದು ಬಿಲಿಯನ್ ಗೆ ವಾದ ಮಂಡಿಸಿ ಆಗ್ರಹಿಸಿದ್ದರು. ಆದರೆ ಸ್ಯಾಮ್ ಸಂಗ್ ನವರು ಅದು ಕೇವಲ 28 ಮಿಲಿಯನ್ ಎಂದು ಪ್ರತಿವಾದ ಮಂಡನೆ ಮಾಡಿದ್ದರು. ಆದರೆ ಪರಿಷ್ಕೃತ ಪರಿಹಾರ ದರವು ಆಪಲ್ ಕಂಪೆನಿಯ ಜಯವಾಗಿದೆ.

5. ಸ್ಯಾಮ್ ಸಂಗ್ 28 ಮಿಲಿಯನ್ ಆಪಲ್ ಗೆ ಕೊಡಲು ಒಪ್ಪಿಕೊಂಡಿತ್ತು.

ಡಿಸೈನಿನ ವೈಶಿಷ್ಟ್ಯಗಳನ್ನು ತಮ್ಮ ಫೋನಿನ ಅಂಗಗಳನ್ನಾಗಿ ಬಳಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ 28 ಮಿಲಿಯನ್ ಪರಿಹಾರ ಕೊಡಲು ಸ್ಯಾಮ್ ಸಂಗ್ ಹೋರಾಟ ನಡೆಸಿ ಪ್ರತಿವಾದ ಮಂಡಿಸಿತ್ತು.

6. ಆಪಲ್ - ಒಂದು ವೇಳೆ ತಮ್ಮ ಡಿಸೈನ್ ಗಳನ್ನು ಸ್ಯಾಮಸಂಗ್ ಕದಿಯದೇ ಇದ್ದಿದ್ದರೆ ಇಂದು ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಅತ್ಯುನ್ನತ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳುತ್ತಲೇ ಇರಲಿಲ್ಲ

ಗುಗಲ್ಸ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಳಸಿ ತಯಾರಿಸಿರುವ ಐಫೋನ್ ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಒಂದು ವೇಳೆ ಸ್ಯಾಮ್ ಸಂಗ್ ತಯಾರಿಕೆ ಮಾಡದೇ ಇದ್ದಿದ್ದರೆ ಇಂದು ಸ್ಯಾಮ್ ಸಂಗ್ ಕಂಪೆನಿ ವಿಶ್ವದಾದ್ಯಂತ ಪ್ರಸಿದ್ಧಿಯಾಗುತ್ತಲೇ ಇರಲಿಲ್ಲ ಮತ್ತು ಟಾಪ್ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳುತ್ತಲೂ ಇರಲಿಲ್ಲ.

7. ತೀರ್ಪುಗಾರರಿಗೆ ಆಪಲ್ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ

ಆಪಲ್ ಸಂಸ್ಥೆಯು ಕೋರ್ಟಿನ ತೀರ್ಪುಗಾರರಿಗೆ ತಮ್ಮ ಪ್ರೊಡಕ್ಟ್ ಗಳನ್ನು ಸ್ಯಾಮ್ ಸಂಗ್ ಸಂಸ್ಥೆ ನಕಲು ಮಾಡಿದೆ ಎಂದು ಪರಿಹಾರ ನೀಡಲ ಘೋಷಿಸಿದ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಿದೆ. ಕಂಪೆನಿಯು ಹೇಳಿಕೆ ಹೀಗಿದೆ “ ಈ ಮೊಕದ್ದಮೆಯು ಹಣಕ್ಕಿಂತಲೂ ಮಿಗಿಲಾದದ್ದು. ಆಪಲ್ ಸಂಸ್ಥೆಯು ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಒಂದು ಕ್ರಾಂತಿಯನ್ನೇ ಮಾಡಿದೆ. ಆದರೆ ಸ್ಯಾಮ್ ಸಂಗ್ ತಮ್ಮ ಡಿಸೈನ್ ನ್ನು ನಕಲು ಮಾಡಿದರು”ಎಂದು ಹೇಳಿದೆ.

8. ಆಪಲ್ ಹೇಳಿಕೆ ಏನೆಂದರೆ ಇದು ಹಣಕ್ಕಾಗಿ ನಡೆದ ಪ್ರಕರಣವಲ್ಲ ಬದಲಾಗಿ ದೊಡ್ಡ ತತ್ವ ಸಿದ್ಧಾಂತಗಳಿಗಾಗಿ ನಡೆದ ಹೋರಾಟ ಎಂದಿದೆ

ಆಪಲ್ ಹಲವು ವರ್ಷಗಳ ಕಾಲ ಈ ಪ್ರಕರಣವನ್ನು ನಡೆಸಿದ್ದು ಸ್ಯಾಮಸಂಗ್ ಸಂಸ್ಥೆಯಿಂದ ಹಣ ಪಡೆಯಬೇಕು ಎಂಬ ಒಂದೇ ಆಲೋಚನೆಯಿಂದ ಅಲ್ಲವಂತೆ. ಬದಲಾಗಿ ತನ್ನ ತತ್ವ ಸಿದ್ಧಾಂತಗಳಿಗಾಗಿ ಹೀಗೆ ಮಾಡಿದೆಯಂತೆ. ಆಪಲ್ ನ ಅಧ್ಯಕ್ಷ ಟಿಮ್ ಕುಕ್ 2014 ರಲ್ಲಿ ತೀರ್ಪುಗಾರರಿಗೆ ಹೀಗೆ ಹೇಳಿದ್ದರು ಕಾನೂನು ಅನ್ನುವುದು ಇರುವುದು ತತ್ವಗಳಿಗಾಗಿ, ಪದೇ ಪದೇ ಸ್ಯಾಮ್ ಸಂಗ್ ಗೆ ನಕಲು ಮಾಡದಿರುವಂತೆ ಸೂಚಿಸಿದರೂ ಕೂಡ ಮುಂದುವರಿಸಿದ ಹಿನ್ನೆಲೆಯಲ್ಲಿ ಕಾನೂನಿನ ಮೊರೆ ಹೋಗಬೇಕಾಯಿತು ಎಂದಿದ್ದರು.

9. ಹೋರಾಟ ಇನ್ನೂ ನಿಂತಿಲ್ಲ ಎನ್ನುತ್ತಿದೆ ಸ್ಯಾಮ್ ಸಂಗ್

ಸ್ಯಾಮ್ ಸಂಗ್ ಹೇಳುವಂತೆ “ ಇಂದಿನ ಸುಪ್ರೀಂ ಕೋರ್ಟ್ ನಿರ್ಧಾರವು ಕೇವಲ ಏಕಭಿಪ್ರಾಯವಾಗಿದೆ.

ಸೃಜನಶೀಲತೆಗೆ ತಡೆ ಒಡ್ಡದಂತ ಯಾವುದೇ ಪ್ರಯತ್ನವೂ ನಡೆಯಬಾರದು. ನಾವು ಎಲ್ಲಾ ರೀತಿಯ ಆಯ್ಕೆಗಳನ್ನು ಪರಿಗಣಿಸಿ ಗ್ರಾಹಕರಿಗೆ ಮತ್ತು ಕಂಪೆನಿಯವರಿಗೆ ನ್ಯಾಯಸಮ್ಮತವಾದ ತೀರ್ಪಿನ್ನು ನಿರೀಕ್ಷಿಸುತ್ತೇವೆ” ಎಂದು ಹೇಳಿದೆ.

10. ಕಳೆದ ತೀರ್ಮಾನವೂ ಕೂಡ ಸ್ಯಾಮಸಂಗ್ ಆಪಲ್ ನ ಹಕ್ಕುಪತ್ರವಿರುವ ಡಿಸೈನ್ ಗಳನ್ನು ಬಳಸಿಕೊಂಡಿತ್ತು ಎಂದು ಹೇಳಿತ್ತು

ಕಳೆದ ಬಾರಿಯ ತೀರ್ಮಾನವೂ ಕೂಡ ಈಗಾಗಲೇ ಸ್ಯಾಮಸಂಗ್ ನ ವಿರುದ್ಧವಾಗಿಯೇ ಬಂದಿತ್ತು. ಆಪಲ್ ಕಂಪೆನಿಯ ಹಕ್ಕುಪತ್ರವಿರುವ ಡಿಸೈನ್ ಗಳನ್ನು ಸ್ಯಾಮ್ ಸಂಗ್ ಬಳಸಿಕೊಂಡಿರುವುದು ನಿಜವೆಂದು ಕಾನೂನಾತ್ಮಕವಾಗಿ ಸಾಬೀತಾಗಿತ್ತು. ಇನ್ನೊಬ್ಬ ತೀರ್ಪುಗಾರರು 2012 ರಲ್ಲಿ 1.5 ಬಿಲಿಯನ್ ಡಾಲರ್ ಹಣವನ್ನು ಸ್ಯಾಮ್ ಸಂಗ್ ಸಂಸ್ಥೆಯು ಆಪಲ್ ಸಂಸ್ಥೆಗೆ ಪರಿಹಾರವಾಗಿ ನೀಡಬೇಕು ಎಂದು ತೀರ್ಪು ನೀಡಿದ್ದರು. ಆದರೆ ಯುಎಸ್ ನ ಜಿಲ್ಲಾ ನ್ಯಾಯಾಧೀಶ ಲಕ್ಕಿ ಕೋ ಈ ಮೊತ್ತವನ್ನು ಕಡಿಮೆಗೊಳಿಸಿ, 548 ಮಿಲಿಯನ್ ಡಾಲರ್ ಹಣ ಪಾವತಿಸಬೇಕು ಎಂದು ತೀರ್ಪು ನೀಡಿದರು.ಇದಕ್ಕೂ ಮೊದಲು ಸ್ಯಾಮಸಂಗ್ ಸಂಸ್ಥೆ 399 ಮಿಲಿಯನ್ ಡಾಲರ್ ಹಣವನ್ನು ಆಪಲ್ ಸಂಸ್ಥೆಗೆ ಹಕ್ಕಪತ್ರವಿರುವ ಡಿಸೈನ್ ಬಳಸಿದ್ದಕ್ಕಾಗಿ ಪರಿಹಾರವಾಗಿ ನೀಡಿದೆ. ಈಗಿನ ತೀರ್ಪಿನ ಅನ್ವಯ ಆಪಲ್ ಸಂಸ್ಥೆಗೆ ಸ್ಯಾಮ್ ಸಂಗ್ ಸಂಸ್ಥೆ 140 ಮಿಲಿಯನ್ ಡಾಲರ್ ಹಣವನ್ನು ಹೆಚ್ಚವರಿ ನೀಡಬೇಕಿದೆ.

11. ಆಪಲ್ ಕೋರ್ಟಿಗೆ ತಿಳಿಸಿರುವಂತೆ ಐಫೋನ್ ತನ್ನ ಕಂಪೆನಿಯ ಉಳಿದೆಲ್ಲಾ ವಸ್ತುಗಳಿಗೆ ಚಾಲೆಂಜ್ ಮಾಡುವಂತಿರುವ ವಸ್ತುವಾಗಿದೆ.

How to send WhatsApp Payments invitation to others - GIZBOT KANNADA

ಆಪಲ್ ಕೋರ್ಟಿಗೆ ತಿಳಿಸಿರುವಂತೆ ಆಪಲ್ ಕಂಪೆನಿಯೊಳಗಿನ ಎಲ್ಲಾ ವಸ್ತುಗಳಿಗಿಂತ ಐಫೋನ್ ತಮ್ಮ ಉತ್ಪಾದನಾಕಾರರ ಅಧ್ಬುತ ಸೃಷ್ಟಿ ಮತ್ತು ಅದು ಕಂಪೆನಿಯ ಇತರೆಲ್ಲ ಪ್ರೊಡಕ್ಟ್ ಗಳಿಗಿಂತ ಹೆಚ್ಚು ಬೆಲೆಬಾಳುವಂತದ್ದು ಎಂದು ತಿಳಿಸಿದೆ.

Best Mobiles in India

English summary
After nearly days of deliberations, a jury in the US District Court in San Jose has ordered Samsung to pay $539 million to Apple for copying the company's patented smartphonefeatures.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X