5,000mAH ಬ್ಯಾಟರಿ ಶಕ್ತಿಯಿರುವ 15,000 ರೂ. ಒಳಗಿನ ಬೆಸ್ಟ್ 5 ಸ್ಮಾರ್ಟ್‌ಫೋನ್‌ಗಳು!!

|

ಬಜೆಟ್ ಮತ್ತು ವೈಶಿಷ್ಟ್ಯಗಳೆರಡನ್ನೂ ಗಣನೆಗೆ ತೆಗೆದುಕೊಂಡು ಒಂದು ಮೊಬೈಲ್ ಖರೀದಿಸಬೇಕು ಎಂದರೆ ಗೊಂದಲಗಳ ಗೂಡಾಗಿಬಿಡುತ್ತೆ. ಯಾಕಂದ್ರೆ ಅಷ್ಟೊಂದು ವೆರೈಟಿ ಫೋನ್ ಗಳು ಮಾರುಕಟ್ಟೆಯಲ್ಲಿದೆ. ಕ್ಯಾಮರಾ ಹೇಗಿದೆ, ಡಿಸ್ಪೇ ಚೆನ್ನಾಗಿದ್ಯಾ, ಇಂತಹ ಕೆಲವು ವಿಚಾರಗಳನ್ನು ಪರಿಗಣಿಸಿ ಒಂದು ಮೊಬೈಲ್ ಖರೀದಿಸುತ್ತೀವಿ. ತುಂಬಾ ಪ್ರಮುಖವಾಗಿರುವುದೆಂದರೆ ಬ್ಯಾಟರಿ ಲೈಫ್.. ಹೌದು, ಬ್ಯಾಟರಿ ಲೈಫ್ ಚೆನ್ನಾಗಿದ್ಯಾ ಅನ್ನೋ ಕೀ-ಫೀಚರ್ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ನಾವಿವತ್ತು ಸಿಂಪಲ್ ಆಗಿ ಕಡಿಮೆ ಬಜೆಟ್ ನಲ್ಲಿ ಸಿಗುವ 5000mah ಬ್ಯಾಟರಿ ಸಾಮರ್ಥ್ಯದ ಫೋನ್ ಗಳ ವಿವರಣೆ ನೀಡುತ್ತಿದ್ದೇವೆ.

5,000mAH ಬ್ಯಾಟರಿ ಶಕ್ತಿಯಿರುವ 15,000 ರೂ. ಒಳಗಿನ ಬೆಸ್ಟ್ 5 ಸ್ಮಾರ್ಟ್‌ಫೋನ್ಸ್!

ದೊಡ್ಡ ಸಾಮರ್ಥ್ಯದ ಬ್ಯಾಟರಿಗಳು ಸ್ಮಾರ್ಟ್ ಫೋನ್ ಗಳನ್ನೂ ಕೂಡ ಬೃಹತ್ ಆಗುವಂತೆ ಮಾಡಿಬಿಡುತ್ತವೆ. ಆದ್ರೀಗ ದೊಡ್ಡದೊಡ್ಡ ಫೋನ್ ಗಳಿಂದ ಚಿಕ್ಕದಾಗಿರುವ, ಲೈಟ್ ವೈಟ್ ಆಗಿರುವ ಫೋನ್ ಗಳೇ ಎಲ್ಲರಿಗೂ ಲೈಕ್ ಆಗುವುದು ಅಲ್ವಾ? ಹಾಗಾಗಿ ಮೊಬೈಲ್ ಕಂಪೆನಿಯವರು ಕೂಡ ಸಾಫ್ಟ್ ವೇರ್ ಗಳ ಮೂಲಕ ಬ್ಯಾಟರಿ ಕೆಪಾಸಿಟಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. 15,000 ಬಜೆಟ್ ಒಳಗೆ 24 ರಿಂದ 30 ತಾಸು ಬ್ಯಾಟರಿ ಲೈಫ್ ಇರುವ ಸ್ಮಾರ್ಟ್ ಫೋನ್ ಗಳು ಸಿಗಲಿವೆ. ಇದರರ್ಥ ಪ್ರತಿದಿನ ನಾವು ನಮ್ಮ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡಲೇಬೇಕು. 15000 ರುಪಾಯಿಯ ಒಳಗೆ ನೀವು ಬೆಸ್ಟ್ ಬ್ಯಾಟರಿಯುಳ್ಳ ಸ್ಮಾರ್ಟ್ ಫೋನ್ ಗಳಿಗಾಗಿ ಹುಡುಕಾಡುತ್ತಿದ್ದರೆ ಖಂಡಿತ ಈ ಲೇಖನ ನಿಮಗೆ ಸಹಾಯ ಮಾಡಲಿದೆ.. ಮುಂದೆ ಓದಿ..

 ASUS ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಮ್ 1 – ಬೆಲೆ 10,999 ರುಪಾಯಿಗಳು

ASUS ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಮ್ 1 ಪ್ರಾರಂಭಿಕ ಬೆಲೆ 10,999 ರುಪಾಯಿಗಳು. 3ಜಿಬಿ RAM ಮತ್ತು 4ಜಿಬಿ RAM ಬೆಲೆ ಕ್ರಮವಾಗಿ 10,999ರುಪಾಯಿ ಮತ್ತು 12,999 ರುಪಾಯಿಗಳಿದೆ. ಎರಡೂ ಕೂಡ 5000mAh ಒಳಗೊಂಡಿದ್ದು 199 ಗಂಟೆಗಳ ಕಾಲ ಮ್ಯೂಸಿಕ್ ಕೇಳಬಹುದಂತೆ. ಜೊತೆಗೆ 34.1 ದಿನಗಳವರೆಗೆ 4ಜಿ ಸ್ಟ್ಯಾಂಡ್ ಬೈ ಆಗಿರಲಿದ್ದು,25.3 ಗಂಟೆಗಳ ಕಾಲ 1080ಪಿ ವೀಡಿಯೋ ಪ್ಲೇಬ್ಯಾಕ್ ಮಾಡಬಹುದು.

 ಪ್ಯಾನಸಾನಿಕ್ ಎಲುಗಾ ರೇ 700 – ಬೆಲೆ 9,999 ರುಪಾಯಿಗಳು

ಪ್ಯಾನಸಾನಿಕ್ ಎಲುಗಾ ರೇ 700 ದ ವೈಶಿಷ್ಟ್ಯಗಳನ್ನು ಗಮನಿಸಿದರೆ 5.5-ಇಂಚಿನ 1080ಪಿ ಫುಲ್ HD ಡಿಸ್ಪ್ಲೇ ಮತ್ತು ಆಂಡ್ರಾಯ್ಡ್ (Nougat)ಆಪರೇಟಿಂಗ್ ಸಿಸ್ಟಮ್ ನಲ್ಲಿ ಇದು ರನ್ ಆಗುತ್ತೆ. ಬ್ಯಾಟರಿ ಬಗ್ಗೆ ಹೇಳುವುದಾದರೆ 5000mAh ಬ್ಯಾಟರಿಯನ್ನು ಇದು ಒಳಗೊಂಡಿದೆ ಮತ್ತು ಬೆಲೆ ಕೇವಲ 9,999 ರುಪಾಯಿಗಳು. 1.3GHz ಅಕ್ಟಾ-ಕೋರ್ ಪ್ರೊಸೆಸರ್ ಮತ್ತು 3ಜಿಬಿ RAM ಮತ್ತು 32ಜಿಬಿ ಸ್ಟೋರೇಜ್ ನ್ನು ಒಳಗೊಂಡಿರುತ್ತೆ 128ಜಿಬಿವರೆಗೆ ಈ ಸ್ಟೋರೇಜ್ ನ್ನು ಹಿಗ್ಗಿಸಿಕೊಳ್ಳಬಹುದು 13MP rear ಕ್ಯಾಮರಾ ಮತ್ತು 13MP ಸೆಲ್ಫೀ ಕ್ಯಾಮರಾಗಳ ಲಭ್ಯತೆ ಈ ಫೋನಿನಲ್ಲಿದೆ.

 ASUS ಝೆನ್ ಫೋನ್ 3ಎಸ್ ಮ್ಯಾಕ್ಸ್ – ಬೆಲೆ 10,999 ರುಪಾಯಿಗಳು

ಇದು ಕೂಡ ಮತ್ತೊಂದು ಬಜೆಟ್ ಒಳಗೆ ಬರುವ ದೊಡ್ಡ ಬ್ಯಾಟರಿ ಸೌಲಭ್ಯ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. 5000mAh ಬ್ಯಾಟರಿ ಹೊಂದಿದ್ದು ಮಾರಾಟದ ಬೆಲೆ 10,999 ರುಪಾಯಿಗಳಾಗಿದೆ.34 ದಿನಗಳ ಸ್ಟಾಂಡ್ ಬೈ ಸಮಯವನ್ನು ಇದು ನೀಡುತ್ತೆ ಮತ್ತು ಇತರೆ ಡಿವೈಸ್ ಗಳನ್ನು ಇದರಿಂದ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. 5 ವಿವಿಧ ರೀತಿಯ ಬ್ಯಾಟರಿ ಮೋಡ್ ಗಳಲ್ಲಿ ಲಭ್ಯವಿದ್ದು, ಬಳಕೆದಾರರು ಮೊಬೈಲ್ ಬ್ಯಾಟರಿಯನ್ನು ವಿವಿಧ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಾದ ಅವಕಾಶವನ್ನು ಈ ಮೊಬೈಲ್ ನೀಡಲಿದೆ


 ಶಿಯೋಮಿ ಎಮ್ ಐ ಮ್ಯಾಕ್ಸ್ 2 – ಬೆಲೆ 13,999 ರುಪಾಯಿಗಳು

5300mAh ಬ್ಯಾಟರಿ ಕೆಪಾಸಿಟಿಯನ್ನು ಶಿಯೋಮಿ ಎಮ್ ಐ ಮ್ಯಾಕ್ಸ್ 2 ಹೊಂದಿದೆ. ಪ್ರಾರಂಭಿಕ ಬೆಲೆ 12,999 ರುಪಾಯಿಗಳಾಗಿದ್ದು, ಬ್ಯಾಟರಿ Qualcomm 3.0 Quick Charge support ನ್ನು ಒಳಗೊಂಡಿದೆ ಮತ್ತು ಕಂಪೆನಿ ಹೇಳುವ ಪ್ರಕಾರ ಒಂದು ಗಂಟೆಯಲ್ಲಿ 68 ಶೇಕಡಾ ಬ್ಯಾಟರಿಯು ಚಾರ್ಜ್ ಆಗಲಿದ್ಯಂತೆ. ಎರಡು ದಿನಗಳ ವರೆಗೆ ಬ್ಯಾಟರಿ ಬ್ಯಾಕ್ ಅಪ್ ಇರಲಿದೆ. ಎಂಐ ಮ್ಯಾಕ್ಸ್ ನಲ್ಲಿ 6.44-ಇಂಚಿನ ಫುಲ್ HD ಡಿಸ್ಪ್ಲೇ ಜೊತೆಗೆ 1080x1920 ಪಿಕ್ಸಲ್ ರೆಸೊಲ್ಯೂಷನ್ ಇದೆ.

Corning Gorilla Glass 4 ನಿಂದ ಡಿಸ್ಪ್ಲೇಯನ್ನು ಪ್ರೊಟೆಕ್ಟ್ ಮಾಡಲಾಗುತ್ತೆ. Android 7.0 Nougat ಆಪರೇಟಿಂಗ್ ಸಿಸ್ಟಮ್ ಮುಖಾಂತರ ಡಿವೈಸ್ ರನ್ ಆಗುತ್ತೆ.

 ಮೈಕ್ರೋಮ್ಯಾಕ್ಸ್ ಭಾರತ್ 5 ಪ್ಲಸ್ - ಬೆಲೆ 7,999 ರುಪಾಯಿಗಳು

ಮೈಕ್ರೋಮ್ಯಾಕ್ಸ್ ಭಾರತ್ 5 ಪ್ಲಸ್ ನಲ್ಲಿ 5.2-ಇಂಚಿನ HD ,720p ಡಿಸ್ಪ್ಲೇ ಇದೆ.1.3GHz quad-core MediaTek ಪ್ರೊಸೆಸರ್ 2ಜಿಬಿ RAMನೊಂದಿಗೆ ಪೇರ್ ಆಗಿರುತ್ತೆ. ಕ್ಯಾಮರಾ ಬಗ್ಗೆ ಹೇಳುವುದಾದರೆ 8MP rear ಸೆನ್ಸರ್ ಜೊತೆಗೆ LED ಫ್ಲ್ಯಾಶ್ ಮತ್ತು 5MP ಮುಂಭಾಗದ ಕ್ಯಾಮರಾವು ಲಭ್ಯವಿದೆ. 16GB ಇಂಟರ್ನಲ್ ಸ್ಟೋರೇಜ್ ಮತ್ತು 64 ಜಿಬಿ ವರೆಗಿನ ಮೈಕ್ರೋ ಎಸ್.ಡಿ ಕಾರ್ಡ್ ಬಳಸಲು ಅವಕಾಶ ನೀಡಲಿದೆ. . 5000mAh ಬ್ಯಾಟರಿ ಇದ್ದು ಇದರ ಸ್ಟ್ಯಾಂಡ್ ಬೈ ಟೈಮ್ 21 ದಿನಗಳು. ಕನೆಕ್ಟಿವಿಟಿ ವಿಚಾರಕ್ಕೆ ಬರೋದಾದ್ರೆ 4G VoLTE, ವೈಫೈ, ಬ್ಲೂಟೂತ್ ಮತ್ತು ಎಫ್.ಎಂ ರೇಡಿಯೋ ಸೌಲಭ್ಯವಿದೆ.

Best Mobiles in India

English summary
The challenge in packing bigger batteries in smartphones involves major tinkering with design and aesthetics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X