ಆಂಡ್ರಾಯ್ಡ್ ನ 5 ಉತ್ತಮ ಮ್ಯೂಸಿಕ್ ವಿಡ್ಜೆಟ್ ಗಳು ಇವು...!

By Tejaswini P G
|

ಆಂಡ್ರಾಯ್ಡ್ ನ ನಿಜವಾದ ಶಕ್ತಿ ಅಡಗಿರುವುದು ಅದರ ವಿಡ್ಜೆಟ್ ಗಳ ಬಳಕೆಯಲ್ಲಿ! ಈ ಮಿನಿ ಆಪ್ ಗಳು ಕೇವಲ ಐಕಾನ್ ಗಳಂತೆ ಕಂಡರೂ ಅದಕ್ಕಿಂತ ಹೆಚ್ಚಿನ ಕಾರ್ಯ ನಿರ್ವಹಿಸುತ್ತದೆ ಮತ್ತು ತುಂಬ ಇಂಟರ್ಯಾಕ್ಟಿವ್ ಆಗಿರುತ್ತದೆ.ಆಂಡ್ರಾಯ್ಡ್ ನ ಮೂಲ ಆವೃತ್ತಿಯಲ್ಲಿ ಇರದ ಬಹಳಷ್ಟು ಕಸ್ಟಮ್ ವಿಜೆಟ್ ಗಳನ್ನು ಮೊಬೈಲ್ ಉತ್ಪಾದಕರು ತಮ್ಮ ಮೊಬೈಲ್ ನಲ್ಲಿ ನೀಡುತ್ತಾರೆ. ಕ್ಲಾಕ್ ವಿಜೆಟ್, ಹವಾಮಾನದ ವಿಜೆಟ್, ಮೂಸಿಕ್ ಪ್ಲೇಯರ್, ಗ್ಯಾಲರಿ , ಕ್ಯಾಲೆಂಡರ್ ವಿಜೆಟ್ - ಹೀಗೆ ಹಲವು ರೀತಿಯ ವಿಜೆಟ್ಗಳನ್ನು ನೀವು ಬಳಸಿರುತ್ತೀರಿ. ಈ ವಿಜೆಟ್ ಗಳ ಅಭಿವೃದ್ಧಿಯಲ್ಲಿ ಬಹಳಷ್ಟು ಸುಧಾರಣೆ ಕಂಡುಬಂದಿದ್ದು, ಮ್ಯೂಸಿಕ್ ವಿಜೆಟ್ಗಳ ಅಭಿವೃದ್ಧಿ ತುಂಬಾ ಮುಂದುವರೆದಿದೆ.

ಆಂಡ್ರಾಯ್ಡ್ ನ 5 ಉತ್ತಮ ಮ್ಯೂಸಿಕ್ ವಿಡ್ಜೆಟ್ ಗಳು ಇವು...!

ಈ ವಿಜೆಟ್ಗಳ ಅಭಿವೃದ್ಧಿಯಲ್ಲಿ ಗಮನಿಸಬೇಕಾದ ಅಂಶಗಳು ಹಲವು. ವಿಜೆಟ್ಗಳು ನಿಮ್ಮ ವಾಲ್ಪೇಪರ್ ಮತ್ತು ಐಕಾನ್ ಗಳೊಂದಿಗೆ ಚೆನ್ನಾಗಿ ಬೆರೆಯಬೇಕು, ಸಾಕಷ್ಟು ಕಾಂಟ್ರಾಸ್ಟ್ ಹೊಂದಿರಬೇಕು, ಇದರೊಂದಿಗಿನ ಇಂಟರ್ಯಾಕ್ಶನ್ ಸುಗಮವಾಗಿರಬೇಕು ಮತ್ತು ನೋಡಲು ಆಕರ್ಷಕವಾಗಿರಬೇಕು. ಕೆಲವು ಆಪ್ಗಳಂತೂ ವಿಜೆಟ್ ಗಳ ಎಕ್ಸ್ಟೆನ್ಶನ್ ಆಗಿರುತ್ತದೆ ಮತ್ತು ವಿಜೆಟ್ ಗಳ ಕಸ್ಟಮೈಸೇಶನ್ ಗೆ ಬಳಕೆಯಾಗುತ್ತದೆ. ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಉತ್ತಮ 5 ಮ್ಯೂಸಿಕ್ ವಿಜೆಟ್ಗಳ ಮಾಹಿತಿಯನ್ನು ಈ ಲೇಖನದಲ್ಲಿ ಸಂಪಾದಿಸಲಾಗಿದೆ.

ಯುಬಿಕ್ವಿಟಿ ಮ್ಯೂಸಿಕ್ ವಿಜೆಟ್

ಯುಬಿಕ್ವಿಟಿ ಮ್ಯೂಸಿಕ್ ವಿಜೆಟ್

KWGT(ಕಸ್ಟಮ್ಸ್ ವಿಜೆಟ್) ಗೇಮ್ ಚೇಂಜರ್ ಎನಿಸಿದ್ದು, ಯುಬಿಕ್ವಿಟಿ ಸರಳವಾದ ಅನುಭವವನ್ನು ನೀಡುತ್ತದೆ. ಅದು 'ಕಸ್ಟಮ್ಸ್' ನ ಎಡಿಟರ್ ಅನ್ನು ಬಳಸುವುದಿಲ್ಲ. ಇನ್ನು ಇದರ ವಿನ್ಯಾಸದ ಕುರಿತು ಹೇಳುವುದಾದರೆ ಇದರಲ್ಲಿ ಅತ್ಯಲ್ಪ ಫೀಚರ್ಗಳಿದ್ದು,ಆಲ್ಬಮ್ ಆರ್ಟ್ ನಿಂದ ವಿನ್ಯಾಸಗಳನ್ನು ಬಳಸುತ್ತದೆ. ಅದರ ಇತರ ಪ್ರಾಪರ್ಟಿಗಳು ವಾಲ್ಪೇಪರ್ ನ ಕಾಂಟ್ರಾಸ್ಟ್ ಗೆ ತೊಂದರೆಯನ್ನುಂಟು ಮಾಡಬಹುದು. ನಿಮ್ಮ ಸ್ಕ್ರೀನ್ ನೊಂದಿಗೆ ಹೊಂದಾಣಿಕೆಯಾಗುವ ವಿನ್ಯಾಸವನ್ನು ಆಯ್ಕೆ ಮಾಡಿ

ಮೆಲೊಡಿ

ಮೆಲೊಡಿ

'ಕಸ್ಟಮ್' ಗೆಂದು ವಿನ್ಯಾಸಗೊಳಿಸಲಾಗಿರುವ ಈ ವಿಜೆಟ್ ಪ್ಯಾಕ್ ನಲ್ಲಿ 'ಕಾಂಪೋನೆಂಟ್ಸ್' ('ಕಸ್ಟಮ್' ನ ವಿಜೆಟ್ಸ್) ನಿಂದ ಮಾಡಲಾಗಿರುವ 17 ವಿಜೆಟ್ ಗಳಿದ್ದು, ಅದನ್ನು 'ಕಸ್ಟಮ್' ಆಪ್ ಗಳಲ್ಲಿ ಬಳಸಬಹುದಾಗಿದೆ. ಇದು ಬಹಳ ಸರಳವಾಗಿದ್ದು ಗಾತ್ರ ಹೆಚ್ಚು ಕಡಿಮೆ ಮಾಡುವ ಮತ್ತು ಬಣ್ಣ ಬದಲಾಯಿಸುವ ಎರಡು ಫೀಚರ್ಗಳನ್ನು ಮಾತ್ರ ಒಳಗೊಂಡಿದೆ. ಈ ವಿಜೆಟ್ಗಳು ವಿಭಿನ್ನವಾಗಿದೆ ಮತ್ತು ನಾವೀನ್ಯತೆಯಿಂದ ಕೂಡಿದೆ

ಮೆಟೀರಿಯಲ್ ಮ್ಯೂಸಿಕ್ ಕಾಂಪೋನೆಂಟ್

ಮೆಟೀರಿಯಲ್ ಮ್ಯೂಸಿಕ್ ಕಾಂಪೋನೆಂಟ್

'ಕಸ್ಟಮ್' ಆಧಾರಿತವಾಗಿರುವ ಇದರಲ್ಲಿ ಮೂರು ವಿಜೆಟ್ ಗಳಿವೆ. ಇದು ಲಾರ್ಜ್, ರೆಗ್ಯುಲರ್ ಮತ್ತು ಕಂಪ್ಯಾಕ್ಟ್ ಎನ್ನುವ ಮೂರು ಗಾತ್ರಗಳಲ್ಲಿ ಬರುತ್ತದೆ. ಮೆಟೀರಿಯಲ್ ಮ್ಯೂಸಿಕ್ ಸರಳವಾದ ಕಂಟ್ರೋಲ್ ಗಳನ್ನು ಒಳಗೊಂಡಿದೆ. ವಿಜೆಟ್ ನ ವಿವಿಧ ಭಾಗಗಳ ಬಣ್ಣ ಬದಲಾಯಿಸಬಹುದಾಗಿದ್ದು, ಆಂಡ್ರಾಯ್ಡ್ ನ ವಿನ್ಯಾಸದೊಂದಿಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಕೆಮ್ಯೂಸಿಕ್ ಮತ್ತು ಕೆಮ್ಯೂಸಿಕ್2

ಕೆಮ್ಯೂಸಿಕ್ ಮತ್ತು ಕೆಮ್ಯೂಸಿಕ್2

ಕೆಮ್ಯೂಸಿಕ್ ಸ್ಪಾಟಿಫೈ, ಆಪಲ್ ಮ್ಯೂಸಿಕ್, ಪ್ಲೇ ಮ್ಯೂಸಿಕ್ ನಂತಹ ಬೇರೆ ಬೇರೆ ಜನಪ್ರಿಯ ಮ್ಯೂಸಿಕ್ ಆಪ್ಗಳ ಮೇಲೆ ಆಧಾರಿತ ವಿಜೆಟ್ ಗಳನ್ನು ಹೊಂದಿದೆ. ಅದರದ್ದೇ ಸ್ವಂತ ವಿಜೆಟ್ ಕೂಡ ಇದೆ. ಕೆಮ್ಯೂಸಿಕ್ ನಲ್ಲಿ 'ಕಾಂಪೋನೆಂಟ್ಸ್' ಇರದ ಕಾರಣ ಅದನ್ನು ನಮಗೆ ಬೇಕಾದ ಹಾಗೆ ಕಸ್ಟಮೈಸ್ ಮಾಡಬಹುದಾಗಿದೆ. ಆದರೆ ಅದಕ್ಕಾಗಿ ನಾವು ಸಾಕಷ್ಟು ಅನ್ವೇಷಣೆ ನಡೆಸಬೇಕು ಮತ್ತು ಈ ಪ್ರಕ್ರಿಯೆ ಅಷ್ಟು ಸರಳವಾಗಿಲ್ಲ. ಅನ್ವೇಷಣೆಗೆ ಸಾಕಷ್ಟು ಅವಕಾಶ ಹೊಂದಿರುವ ಈ ಆಪ್ಗಳನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಒಳಿತು.

How to Check Your Voter ID Card Status (KANNADA)
KWGT ಕಸ್ಟಮ್ ವಿಜೆಟ್ ಮೇಕರ್

KWGT ಕಸ್ಟಮ್ ವಿಜೆಟ್ ಮೇಕರ್

KWGT ನಮಗೆ ಕಸ್ಟಮೈಸ್ಡ್ ವಿಜೆಟ್ ಗಳ ಒಂದು ಪ್ರಪಂಚವನ್ನೇ ನೀಡುತ್ತದೆ. ಡಿಜಿಟಲ್ ,ಅನಲಾಗ್ ಕ್ಲಾಕ್ ಗಳು, ಹವಾಮಾನ ಸೂಚಿಸುವ ವಿಜೆಟ್ಗಳು, ಟೆಕ್ಸ್ಟ್, ಬ್ಯಾಟರಿ ಮೊದಲಾದ ವಿಜೆಟ್ಗಳು ಇದರಲ್ಲಿ ಲಭ್ಯವಿದೆ. ಸ್ಮಾರ್ಟ್ಫೋನ್ ನಲ್ಲಿ ಬಳಕೆಯಾಗುವ ಎಲ್ಲಾ ರೀತಿಯ ವಿಜೆಟ್ಗಳು ಇದರಲ್ಲಿವೆ. ಇದರ ಮ್ಯೂಸಿಕ್ ವಿಜೆಟ್ ಗಳು ವಿಶೇಷವಾಗಿ ಚೆನ್ನಾಗಿದ್ದು, ಈಗಾಗಲೇ ತಿಳಿಸಿರುವಂತೆ ವಿಭಿನ್ನ ಎಕ್ಸ್ಟೆನ್ಶನ್ ಗಳೊಂದಿಗೆ ಇಂಟಗ್ರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇದರ ಗಾತ್ರ ಹಿರಿದಾಗಿದೆ. ವಿವಿಧ ಸ್ಕಿನ್ ಗಳು, ಕಸ್ಟಮ್ ಫಾಂಟ್ ಗಳು, ಬಣ್ಣಗಳು, ಆಕಾರಗಳು, 3D ಟ್ರಾನ್ಸ್ಫರ್ಮೇಶನ್ ಗಳು, ಸ್ಟೇಟಸ್ ಬಾರ್ ನೋಟಿಫೀಕೇಶನ್ ಗಳು ಹೀಗೆ ನಿಮ್ಮನ್ನು ದಿನವಿಡೀ ತೊಡಗಿಸಿಕೊಳ್ಳಲು ಸಾಕಾಗುವಷ್ಟು ಅಂಶಗಳು ಇದರಲ್ಲಿದೆ.

Best Mobiles in India

English summary
5 best music widgets for Android. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X