ನಿಮ್ಮ ಸ್ಮಾರ್ಟ್‌ಫೋನ್‌ಗೆ ಸೂಕ್ತ ಈ ಬ್ಯಾಕ್‌ಗ್ರೌಂಡ್, ವಾಲ್‌ಪೇಪರ್ ಆಪ್‌ಗಳು

By GizBot Bureau
|

ವಾಲ್ ಪೇಪರ್ ಗಳು ಎಲ್ಲಾ ಕಡೆಗಳಲ್ಲೂ ಇರುತ್ತದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕ್ಲಿಕ್ಕಿಸಿದರೆ ಅದೆಷ್ಟೋ ಸಾವಿರ ಬರುತ್ತದೆ. ಆನ್ ಲೈನ್ ನಲ್ಲಿ ಇನ್ನು ಹೆಚ್ಚು ಹುಡುಕಾಟ ನಡೆಸಬಹುದು. ಆದರೆ ಕೆಲವರು ಫೋಟೋಗ್ರಫಿ ಪ್ರಿಯರಿರುತ್ತಾರೆ. ಕೆಲವು ಫೋಟೋಗಳಲ್ಲಿ ಅತ್ಯಂತ ಹೆಚ್ಚು ರೆಸಲ್ಯೂಷನ್ ಇರುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಸೂಕ್ತ ಈ ಬ್ಯಾಕ್‌ಗ್ರೌಂಡ್, ವಾಲ್‌ಪೇಪರ್ ಆಪ್‌ಗಳು

ಹೀಗೆ ಅತ್ಯುತ್ತಮ ಫೋಟೋಗಳನ್ನು ಪ್ರೀತಿಸುವ ಫೋಟೋಗ್ರಫಿ ಪ್ರಿಯರಿಗೆ ಆಂಡ್ರಾಯ್ಡ್ ನಲ್ಲಿ ಕೆಲವು ಅತ್ಯುತ್ತಮ ಫೋಟೋಗ್ರಫಿ ಬ್ಯಾಕ್ ಗ್ರೌಂಡ್ ಆಪ್ ಗಳಿವೆ. ಅವುಗಳ ಟಾಪ್ 5 ಲಿಸ್ಟ್ ನ ಪರಿಚಯ ಇಲ್ಲಿದೆ.

ಗೂಗಲ್ ಸರ್ಚ್ 

ಗೂಗಲ್ ಸರ್ಚ್ 

ಎಲ್ಲರಿಗೂ ತಿಳಿದಿರುವ ಆಪ್ ನಿಂದಲೇ ಮೊದಲು ಆರಂಭಿಸೋಣ.ಗೂಗಲ್ ಸರ್ಚ್ ನಿಮಗೆ ಬೇಕೆನ್ನಿಸುವ ನಿಖರ ವಾಲ್ ಪೇಪರ್ ಹುಡುಕಾಟಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ಆಪ್ ಗಳು ಮಾಡುವಂತೆ ಒಂದೇ ವಾಲ್ ಪೇಪರ್ ತೋರಿಸುವುದೋ ಅಥವಾ ಲಿಂಕ್ ತೋರಿಸುವುದನ್ನು ಇದು ಮಾಡುವುದಿಲ್ಲ ಬದಲಾಗಿ ಹಲವು ವೆಬ್ ಸೈಟ್ ಗಳನ್ನು ಇದು ತೋರಿಸುತ್ತದೆ.
ಇಲ್ಲಿ ಹುಡುಕಾಟದಲ್ಲಿ ನೀವು ಕೆಲವು ಪ್ಯಾರಾಮೀಟರ್ ಗಳನ್ನು ಕೂಡ ಸೇರಿಸಲು ಅವಕಾಶವಿರುತ್ತದೆ. ಉದಾಹರಣೆಗೆ ಇಂತಿಷ್ಟೇ ರೆಸಲ್ಯೂಷನ್ ನ ಫೋಟೋಗಳು, ಫೋಟೋ ಟೈಪ್ ಇತ್ಯಾದಿ. ಹೆಚ್ಚಾಗಿ ಇದು ನಿಮ್ಮ ಫೋನ್ ನಲ್ಲಿ ಇನ್ ಬಿಲ್ಟ್ ಆಗೇ ಇರುತ್ತದೆ. ಹಾಗಾಗಿ ಖಂಡಿತ ನಿಮಗೆ ತಿಳಿದೇ ಇರುತ್ತದೆ.

 ರೆಡ್ಡಿಟ್ ಮತ್ತು ಇಮ್‌ಗುರು (Reddit and Imgur)

ರೆಡ್ಡಿಟ್ ಮತ್ತು ಇಮ್‌ಗುರು (Reddit and Imgur)

ಫೋಟೋಗ್ರಫಿ ಬ್ಯಾಕ್ ಗ್ರೌಂಡ್ ಮತ್ತು ವಾಲ್ ಪೇಪರ್ ಗಳಿಗಾಗಿ ಇರುವ ಮತ್ತೊಂದು ಬೆಸ್ಟ್ ಆಪ್ ಅಂದರೆ ಅದು ರೆಡ್ ಇಟ್. ಇದರಲ್ಲಿ ಫೋಟೋಗ್ರಫಿ ಸಬ್ ರೆಡ್ಡಿಟ್ಸ್ ಗಳಿರುತ್ತಾರೆ.ಅವರಲ್ಲಿ ಟನ್ ಗಟ್ಟಲೆ ಫೋಟೋಗಳಿರುತ್ತದೆ ಮತ್ತು ನೀವು ಅವುಗಳಲ್ಲಿ ಬೇಕಾದವುಗಳನ್ನು ಆಯ್ಕೆ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಹೋಮ್ ಸ್ಕ್ರೀನ್ ಮಾಡಬಹುದು. ಇದು ಉಚಿತವಾಗಿರುತ್ತದೆ. ಆದರೆ ನೀವು ಇದರಲ್ಲಿ ಬರುವ ಜಾಹೀರಾತುಗಳನ್ನು ಅವಾಯ್ಡ್ ಮಾಡಲು ಇಚ್ಛಿಸುವುದಾದರೆ ರೆಡ್ಡಿಟ್ ಗೋಲ್ಡ್ ಚಂದಾದಾರಿಕೆಯನ್ನು ಖರೀದಿಸಬಹುದು ಮತ್ತು ಇದರಲ್ಲಿ ಕೆಲವು ಅತ್ಯಧಿಕ ವೈಶಿಷ್ಟ್ಯತೆಗಳೂ ಕೂಡ ನಿಮಗೆ ಲಭ್ಯವಾಗುತ್ತದೆ.

ವಾಲಿ (Walli)

ವಾಲಿ (Walli)

ವಾಲಿ ಹೊಸದಾಗಿ ಬಂದಿರುವ ಫೋಟೋಗ್ರಫಿ ಬ್ಯಾಕ್ ಗ್ರೌಂಡ್ ಆಪ್ ಆಗಿದೆ. ಇದರಲ್ಲಿ ಫೋಟೋಗ್ರಫಿ ಹೊರತು ಪಡಿಸಿ ಹಲವು ವಿಧಧ ಕೆಟಗರಿ ಕೂಡ ಇರುತ್ತದೆ. ಆದರೆ ಫೋಟೋಗ್ರಫಿಯೂ ಇದರಲ್ಲಿ ಪ್ರಮುಖವಾದದ್ದೇ ಆಗಿದೆ. ಇದರಲ್ಲಿ ಚಿತ್ರಕಾರನಿಗೆ ಆತನ ಚಿತ್ರಕ್ಕೆ ಕ್ರೆಡಿಟ್ ಕೂಡ ಇದರಲ್ಲಿ ಸಿಗುತ್ತದೆ.ಹಾಗಂತ ಅದು ದೊಡ್ಡ ಮೊತ್ತವೇನಲ್ಲ ಆದರೆ ಅಷ್ಟಾದ್ರೂ ಚಿತ್ರಕಾರನಿಗೆ ಸಿಕ್ಕುತ್ತಲ್ಲ ಎಂಬುದೇ ಸಂತೋಷ. ಯಾವುದೇ ಮೊಬೈಲ್ ಸ್ಕ್ರೀನ್ ಗೂ ಸಾಕಾಗುವ ರೆಸಲ್ಯೂಷನ್ ನ ಫೋಟೋಗಳು ಇದರಲ್ಲಿ ಇರುತ್ತದೆ.

ವಾಲ್ ಪೇಪರ್ಸ್ ಬೈ ಗೂಗಲ್ (Wallpapers by Google)

ವಾಲ್ ಪೇಪರ್ಸ್ ಬೈ ಗೂಗಲ್ (Wallpapers by Google)

ವಾಲ್ ಪೇಪರ್ಸ್ ಅನ್ನುವುದು ಗೂಗಲ್ ನ ವಾಲ್ ಪೇಪರ್ ಆಪ್ ಆಗಿದೆ. ಇತರೆ ಕೆಲವು ಆಪ್ ಗಳಂತೆ ಇದರಲ್ಲಿ ಆಯ್ಕೆಯು ಬಹಳ ದೊಡ್ಡ ಮಟ್ಟದಲ್ಲೇನೂ ಇರುವುದಿಲ್ಲ.ಆದರೆ ಇದರಲ್ಲಿರುವ ಪ್ರತಿಯೊಂದು ವಾಲ್ ಪೇಪರ್ ಯಾವುದೋ ಒಂದು ಚಿತ್ರವಾಗಿರುತ್ತದೆ. ಇದರಲ್ಲಿ ಹೆಚ್ಚಾಗಿ ಭೂಪ್ರದೇಶ ಮತ್ತು ಕರಾವಳಿ ಪ್ರದೇಶದ ಚಿತ್ರಗಳು ಅಧಿಕವಾಗಿರುತ್ತದೆ. ಕೆಲವು ಯೋಗ್ಯ ವಾಲ್ ಪೇಪರ್ ಗಳಿಗಾಗಿ ನೀವಿಲ್ಲಿ ಖಂಡಿತ ಹುಡುಕಾಟ ನಡೆಸಬಹುದು.ಕೆಲವು ಸ್ಪರ್ಧೆಯೊಡ್ಡುವ ಆಪ್ ಗಳಿಂದ ಖಂಡಿತ ಇದು ಸಣ್ಣ ಪ್ರಮಾಣದ್ದೇ ಇರಬಹುದು ಆದರೆ ಇದರಲ್ಲಿ ಜಾಹೀರಾತುಗಳ ಕಿರಿಕಿರಿ ಇಲ್ಲ ಮತ್ತು ಇದು ಉಚಿತವಾಗಿ ಇರುತ್ತದೆ.

ವಂಡರ್ ವಾಲ್ (Wonderwall)

ವಂಡರ್ ವಾಲ್ (Wonderwall)

ವಂಡರ್ ವಾಲ್ ಒಂದು ಅತ್ಯುತ್ತಮ ವಾಲ್ ಪೇಪರ್ ಅಪ್ಲಿಕೇಷನ್ ಗಳಲ್ಲಿ ಒಂದಾಗಿದೆ. ಇದರಲ್ಲ ಕೇವಲ ಫೋಟೋಗ್ರಫಿ ಬ್ಯಾಕ್ ಗ್ರೌಂಡ್ ಗಳಿರುತ್ತದೆ. ಕೈಯಿಂದ ಆರಿಸ್ಪಟ್ಟ ಕೆಲವು ಫೋಟೋಗ್ರಫಿ ವಾಲ್ ಪೇಪರ್ ಗಳು, ಮೇಟಿರಿಯಲ್ ಡಿಸೈನ್ ಯುಐಗಳು ಇತ್ಯಾದಿ ಕೆಲವು ವೈಶಿಷ್ಟ್ಯತೆಗಳು ಇದರಲ್ಲಿ ಅಡಕವಾಗಿರುತ್ತದೆ.

ಕೆಲವು ಗೂಗಲ್ ಪ್ಲೇ ವಿಮರ್ಷೆಗಳು ತಿಳಿಸುವಂತೆ ಇದರ ಕೆಲವು ಆಟೋ ಸೆಟ್ ಕೆಪ್ಯಾಬಲಿಟಿಗಳು ಯಾವಾಗಲೂ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳುತ್ತದೆ. ಆದರೆ ಆಪ್ ನ ಇತರೆ ವಿಷಯಗಳು ಸ್ಪಷ್ಟ ಮತ್ತು ಸ್ವಚ್ಚವಾಗಿದೆಯಂತೆ. ಕೆಲವು ಗಂಭೀರ ವಾಲ್ ಪೇಪರ್ ಗಳಿಗೆ ಇಲ್ಲಿ ಹುಡುಕಾಟ ನಡೆಸುವುದು ಸೂಕ್ತವಾಗಿದೆ. ಸಂಪೂರ್ಣ ಉಚಿತವಾಗಿರುವ ಮತ್ತು ಯಾವುದೇ ಜಾಹೀರಾತುಗಳನ್ನು ಒಳಗೊಂಡಿರದ ಆಪ್ ಇದಾಗಿದೆ. ಹಾಗಂತ ಇದರಲ್ಲಿ ಖರೀದಿಸಿ ಪಡೆಯಬಹುದಾದ ಕೆಲವು ವೈಶಿಷ್ಟ್ಯತೆಗಳೂ ಕೂಡ ಇದೆ.

Best Mobiles in India

English summary
5 best photography background apps and wallpaper apps for Android!. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X