Subscribe to Gizbot

ಸ್ಮಾರ್ಟ್‌ಫೋನ್‌ ಖರೀದಿಸಿ ಆಯ್ತು!! ಇನ್ನೇನು ಮಾಡೋದು?

Written By:

ಸ್ಮಾರ್ಟ್‌ಫೋನ್‌ ತೆಗೆದುಕೊಂಡ ತಕ್ಷಣ ಏನ್‌ ಮಾಡಬೇಕು ಅಂದ್ರೆ ಏನ್‌ ಹೇಳ್ತಿರಾ? ಬಹುಶಃ ಎಲ್ಲಾ ಉತ್ತರಗಳು ಸಹ ವಿಭಿನ್ನವಾಗಿರುತ್ತವೆ. ಆದ್ರೆ ನಿಮಗಿಷ್ಟ ಬಂದಂತೆ ಸಿಮ್‌ ಇನ್‌ಸ್ಟಾಲ್‌ ಮಾಡುವೊದೋ, ಅಥವಾ ಫೋನ್‌ ಅನ್ನು ಎಲ್ಲಾ ರೀತಿಯಲ್ಲೂ ಪರಿಶೀಲನೆ ನಡೆಸುವುದೊ ಮಾಡಿ. ಆದರೆ ಇಂದು ಸ್ಮಾರ್ಟ್‌ಫೋನ್‌ ಖರೀದಿಸಿದ ತಕ್ಷಣ ಮಾಡಲೇಬಾರದ ಕೆಲವು ವಿಷಯಗಳಿವೆ. ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷತೆಗಾಗಿ ನಾವು ಇಂದು ತಿಳಿಸುವ 5 ವಿಷಯಗಳನ್ನು ನೀವು ಸ್ಮಾರ್ಟ್‌ಫೋನ್‌ ಖರೀದಿಸಿದಾಗ ಮಾಡಲೇಬೇಡಿ. ಅಂದಹಾಗೆ ಅವುಗಳು ಯಾವುವು ಎಂದು ತಿಳಿದು ಅನುಸರಿಸಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಯಾವುದೇ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಬೇಡಿ

1

ಕೆಲವು ಆಪ್‌ಗಳು ಪ್ರಖ್ಯಾತವಾಗಿರಬಹುದು. ಆದರೆ ಕೆಲದಿನಗಳ ತನಕ ಮೊದಲು ಸ್ಮಾರ್ಟ್‌ಫೋನ್‌ನಲ್ಲಿನ ಆಪ್‌ಗಳನ್ನು ಬಳಕೆಮಾಡಿ ವೇಗದ ಸಾಮರ್ಥ್ಯ ಹೇಗಿದೆ ಎಂದು ಮೊದಲು ತಿಳಿಯಿರಿ. ಹಾಗೆಯೇ ಕೆಲವು ಆಪ್‌ಗಳು ಅಸುರಕ್ಷಿತವಾಗಿದ್ದು ಸ್ಮಾರ್ಟ್‌ಫೋನ್‌ ಖರೀದಿಸಿದ ತಕ್ಷಣ ಇನ್‌ಸ್ಟಾಲ್‌ ಮಾಡಬೇಡಿ.

ಬ್ಯಾಟರಿ ಬೂಸ್ಟರ್‌ ಆಪ್‌ ಬಳಕೆ ಮಾಡದಿರಿ

2

ಸ್ಮಾರ್ಟ್‌ಫೋನ್‌ ಖರೀದಿಸಿದಾಗಲೇ ಬ್ಯಾಟರಿ ಬೂಸ್ಟರ್‌ಗಳಂತಹ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡದಿರಿ. ಕಾರಣ ಮೊದಲೇ ಇಂತಹ ಚಟುವಟಿಕೆಗಳು ನಿಮ್ಮ ಹೊಸ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗಲು ಕಾರಣವಾಗುವುದರಲ್ಲಿ ಸಂಶಯವಿಲ್ಲ.

ಫೋನ್‌ನಲ್ಲಿ ಸಂಪರ್ಕಗಳನ್ನು ಉಳಿಸಬೇಡಿ

3

ಸ್ಮಾರ್ಟ್‌ಫೋನ್‌ನಲ್ಲಿ ಸಂಪರ್ಕಗಳನ್ನು (Contacts) ಉಳಿಸಬೇಡಿ(Save). ಎಲ್ಲಾ ಸಂಪರ್ಕಗಳನ್ನು ಗೂಗಲ್‌ ಖಾತೆಗೆ ಬ್ಯಾಕಪ್‌ ಮಾಡಿಕೊಳ್ಳಿ.

ಪಾಸ್‌ವರ್ಡ್‌ ನೀಡಿ

4

ಸ್ಮಾರ್ಟ್‌ಫೋನ್‌ ಖರೀದಿಸಿ ಬಳಕೆ ಮಾಡಲು ಪ್ರಾರಂಭಿಸಿದ ಮೇಲೆ ಓಪನ್‌ ಮಾಡಲು ಪಾಸ್‌ವರ್ಡ್‌ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಫೋನ್‌ ಅನ್ನು ಇತರರು ಆಕ್ಸೆಸ್‌ ಮಾಡಲು ಆಗುವುದಿಲ್ಲ ಹಾಗೂ ಸುರಕ್ಷಿತವಾಗಿರುತ್ತದೆ

ಫೋನ್‌ ರೂಟ್‌ ಮಾಡದಿರಿ

5

ನೀವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನ ಮೊದಲ ಬಳಕೆದಾರರೆ ಆದಲ್ಲಿ ಫೋನ್‌ ರೂಟಿಂಗ್‌ ಮಾಡುವ ಚಟುವಟಿಕೆ ಮಾಡದಿರಿ. ಕಾರಣ ರೂಟಿಂಗ್‌ ಮಾಡಲು ಫೋನ್‌ ಬಗೆಗಿನ ಸಾಮಾನ್ಯ ಜ್ಞಾನ ಬೇಕಾಗಿರುತ್ತದೆ.

 ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಖಾತೆ ತೆರೆಯಿರಿ

6

ಹೊಸದಾಗಿ ಖರೀದಿಸಿದ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಖಾತೆ ತೆರೆಯಿರಿ. ಇದರಿಂದ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್‌ ಸಂಪರ್ಕವಿದ್ದರೆ ಆಗಾಗ ಆಪ್‌ಗಳ ಅಪ್‌ಡೇಟ್‌ ಆಗುತ್ತದೆ. ಹಾಗೂ ನಿಮ್ಮ ಸಂವಹನ ಸಂಪರ್ಕಗಳು ಬ್ಯಾಕಪ್‌ ಆಗುತ್ತವೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?

ಟಾಪ್ 10 ಬ್ಯಾಟರಿ ಬ್ಯಾಕಪ್ ಫೋನ್ಸ್ ಖರೀದಿಸಲು ಮರೆಯದಿರಿ

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 things to not do when you get your first Android Phone. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot