ಆಫ್‌ಲೈನ್‌ನಲ್ಲಿ ಉಪಯೋಗಿಸಬಹುದಾದ ಅತ್ಯುತ್ತಮ ಐದು ಆಪ್‌ಗಳು ಇವು!?

ನಾವು ಇಂದು ನಿಮಗೆ ಇಂಟರ್‌ನೆಟ್ ಇಲ್ಲದೆ ಉಪಯೋಗಿಸಬಹುದಾದ ಅತ್ಯುತ್ತಮ ಐದು ಆಪ್‌ಗಳು ಯಾವುವು ? ಎಂಬುದನ್ನು ಇಲ್ಲಿ ತಿಳಿಸುತ್ತೇವೆ.

|

ಇಂಟರ್‌ನೆಟ್ ಸಂಪರ್ಕ ಹೊಂದಿರದ ಸ್ಮಾರ್ಟ್‌ಫೋನ್ ಕೈನಲ್ಲಿದ್ದರೆ ಆಗುವ ತಳಮಳವೆ ಬೇರೆ!. ಏನೋ ಒಂದು ಕಳೆದುಕೊಂಡ ಅನುಭವ! ಅದರಲ್ಲಿಯೂ ಫೇಸ್‌ಬುಕ್ ,ವಾಟ್ಸ್‌ಆಪ್ ಉಪಯೋಗಿಸದೆ ಇರುವುದಾದರೂ ಹೇಗೆ? ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಈ ರೀತಿಯ ಪರಿಸ್ಥಿತಿ ಒಮ್ಮೆಯಾದರೂ ಬಂದಿರುತ್ತದೆ.

ಇಂತಹ ಸಮಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿನ ಇರುವ ಇತರ ಆಪ್‌ಗಳನ್ನು ನಾವು ತೆರೆದು ನೋಡುತ್ತೇವೆ. ಆದರೆ ಆಪ್‌ಗಳನ್ನು ಉಪಯೋಗಿಸಲು ಇಂಟರ್‌ನೆಟ್ ಬೇಕಾಗಿರುತ್ತದೆ. ಇದು ತುಂಬಾ ಬೇಸರವೆನಿಸುತ್ತದೆ. ಜೊತೆಗೆ ಅತ್ಯವಶ್ಯಕ ಕಾರ್ಯನಿರ್ವಹಣೆಗೂ ಕೆಲವೊಂದು ಆಪ್‌ಗಳು ಅವಶ್ಯಕವಾಗಿರುತ್ತವೆ. ಹಾಗಾಗಿ, ನಾವು ಇಂದು ನಿಮಗೆ ಇಂಟರ್‌ನೆಟ್ ಇಲ್ಲದೆ ಉಪಯೋಗಿಸಬಹುದಾದ ಅತ್ಯುತ್ತಮ ಐದು ಆಪ್‌ಗಳು ಯಾವುವು ? ಎಂಬುದನ್ನು ಇಲ್ಲಿ ತಿಳಿಸುತ್ತೇವೆ.

ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದು!?

ಇಂಟರ್‌ನೆಟ್ ಇಲ್ಲದೆ ಉಪಯೋಗಿಸಬಹುದಾದ ಅತ್ಯುತ್ತಮ ಐದು ಆಪ್‌ಗಳು ಯಾವುವು ? ಮತ್ತು ಅವುಗಳಿಂದ ಇರುವ ಪ್ರಯೋಜನವೇನು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

#1 ಅಮೇಜಾನ್ ಕಿಂಡಲ್ ( Amazon Kindle)

#1 ಅಮೇಜಾನ್ ಕಿಂಡಲ್ ( Amazon Kindle)

ಅಮೇಜಾನ್ ಕಿಂಡಲ್ ಒಂದು ಇ-ಬುಕ್ ಆಗಿದ್ದು, ನಿಮಗೇನಾದರೂ ಬುಕ್‌ಗಳನ್ನು ಓದುವ ಹವ್ಯಾಸವಿದ್ದರೆ ಅಮೇಜಾನ್ ಕಿಂಡಲ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆಫ್‌ಲೈನ್‌ನಲ್ಲಿ ಉಪಯೋಗಿಸಬಹುದಾದ ಅತ್ಯುತ್ತಮ ಆಪ್‌ ಇದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ಗೂಗಲ್ ಡ್ರೈವ್.(Google drive)

#2 ಗೂಗಲ್ ಡ್ರೈವ್.(Google drive)

ಇಂಟರ್‌ನೆಟ್ ಇಲ್ಲದೇ ಎಲ್ಲಾ ಡಾಕ್ಯುಮೆಂಟ್ಸ್‌ಗಳನ್ನು ಎಡಿಟ್ ಮಾಡುವ ಅವಕಾಶ ಗೂಗಲ್ ಡ್ರೈವ್ ನಲ್ಲಿದೆ. ಇನ್ನು ಎಡಿಟ್ ಮಾಡಿದ ತಂತ್ರಾಂಶಗಳನ್ನು ಆಪ್‌ ಮೂಲಕ ಸ್ಮಾರ್ಟ್‌ಫೋನ್‌ಗೆ ಸೇವ್ ಮಾಡಬಹುದಾದ್ದರಿಂದ ಗೂಗಲ್‌ ಡ್ರೈವ್ ಅತ್ಯವಶ್ಯಕ ಆಪ್‌.

#3 ಪಾಕೆಟ್ಸ್ (Pocket)

#3 ಪಾಕೆಟ್ಸ್ (Pocket)

ಅಂಕಣಗಳನ್ನು ದಿನವೂ ತಪ್ಪದೇ ಓದುವವರಿಗೆ ಪಾಕೆಟ್ಸ್ ಆಪ್‌ ಅತ್ಯುತ್ತಮ ಎನ್ನಬಹುದು. ಪಾಕೆಟ್ಸ್ ಆಪ್‌ನಲ್ಲಿ ಎಲ್ಲಾ ಆರ್ಟಿಕಲ್‌ಗಳು ಮೊದಲೇ ಸೇವ್ ಆಗಿರುವುದರಿಂದ ನಿಮಗೆ ಇಂಟರ್‌ನೆಟ್ ಅವಶ್ಯಕತೆ ಇರುವುದಿಲ್ಲ.

#4 ಗೂಗಲ್‌ ಟ್ರಾನ್ಸ್‌ಲೇಟ್( Google Translate)

#4 ಗೂಗಲ್‌ ಟ್ರಾನ್ಸ್‌ಲೇಟ್( Google Translate)

ಎಲ್ಲರಿಗೂ ತಿಳಿದಿರುವ ಬಹು ಉಪಯೋಗಿ ಆಪ್‌ ಗೂಗಲ್‌ ಟ್ರಾನ್ಸ್‌ಲೇಟ್ ಆಫ್‌ಲೈ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂದು ಎಷ್ಟೋ ಜನರಿಗೆ ತಿಳಿದಿರರುವುದಿಲ್ಲ. ಹಾಗಾಗಿ ಗೂಗಲ್‌ ಟ್ರಾನ್ಸ್‌ಲೆಟ್ ಆಪ್‌ ಅನ್ನು ತಕ್ಷನವೇ ನಿಮ್ಮ ಮೊಬೈಲ್‌ನಲ್ಲಿ ಹೊಂದಿರಿ.

#5 ಗೂಗಲ್ ಮ್ಯಾಪ್ಸ್. ( Google Maps)

#5 ಗೂಗಲ್ ಮ್ಯಾಪ್ಸ್. ( Google Maps)

ಗೂಗಲ್‌ ಮ್ಯಾಪ್‌ ಆಫ್‌ಲೈನ್‌ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಆದರೆ, ಆನ್‌ಲೈನನಲ್ಲಿದ್ದಾಗಲೇ ನಮಗೆ ಬೇಕಾದ ನಗರಗಳ ಲೋಕೆಶನ್‌ಗಳನ್ನು ಸೇವ್‌ ಮಾಡಬಹದು. ಇದರಿಂದ ಆಫ್‌ಲೈನ್‌ನಲ್ಲಿಯೂ ನಿವು ದಾರಿಯನ್ನು ಕಂಡುಕೊಳ್ಳಬಹುದು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
there are many apps that you can use even when there’s no internet coverage. To Know More This Visit To Kannada.giZbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X