ಏರ್‌ಟೆಲ್‌ನ ಡಿಜಿಟಲ್ ನಡೆ!..ಹೊಸದಾಗಿ 'ಇ-ಪುಸ್ತಕ' ಸೇವೆ ಆರಂಭ!
ಪ್ರಸ್ತುತ ಎಲ್ಲ ವ್ಯವಹಾರಗಳು ಕಾಗದ ರಹಿತವಾಗಿ ಎಲ್ಲವೂ ಡಿಜಟಲೀಕರಣ ಆಗುತ್ತಿದ್ದು, ಇದೀಗ ಏನೇ ಕೆಲಸ ಮಾಡಲು ಸ್ಮಾರ್ಟ್‌ಫೋನ್ ಒಂದಿದ್ದರೆ ಸಾಕು ಎನ್ನುವಂತಾಗಿದೆ. ಹಾಗೇ ಪುಸ್ತಕಗಳು ಡಿಜಿಟಲ್ ರೂಪ ಪಡೆಯುತ್ತಿದ್ದು, ಇ-ಟೆಕ್ಸ್ಟ್ ಮಾದರಿಯಲ್ಲಿ ಓದಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಏರ್‌ಟೆಲ್ ನೆಟವರ್ಕ್ ಕಂಪನಿಯು ಇ-ಪುಸ್ತಕ ಸೇವೆಯನ್ನು ಹೊಸದಾಗಿ ಪರಿಚಯಿಸಿದೆ.

ಹೌದು, ಭಾರತೀಯ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ಇ-ಪುಸ್ತಕ ಸೇವೆಯನ್ನು ಇತ್ತೀಚಿಗೆ ಬಿಡುಗಡೆ ಮಾಡಿದ್ದು, ಪ್ರಸ್ತುತ ಸುಮಾರು 70,000 ಇ-ಪುಸ್ತಕಗಳು ಲಭ್ಯ ಇವೆ. ಭಾರತೀಯ ಪ್ರಸಿದ್ಧ ಲೇಖಕರ ಪುಸ್ತಕಗಳು ಸೇರಿದಂತೆ ಅಂತರಾಷ್ಟ್ರೀಯ ಲೇಖಕರ ಹಲವು ವಿಷಯಗಳ ಇ-ಪುಸ್ತಕಗಳು ದೊರೆಯಲಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರು ಏರ್‌ಟೆಲ್ ಇ-ಪುಸ್ತಕಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೇ ಏರ್‌ಟೆಲ್ ಇ-ಪುಸ್ತಕ ಸೇವೆಯು ಏನೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ.

ಹೊಸದಾಗಿ ಇ-ಪುಸ್ತಕ ಸೇವೆ ಸೇರ್ಪಡೆ
ಏರ್‌ಟೆಲ್ ಟೆಲಿಕಾಂ ಕಂಪನಿಯು ಈಗಾಗಲೇ Wynk ಮ್ಯೂಸಿಕ್ ಸೇವೆ ಮತ್ತು ಏರ್‌ಟೆಲ್ ಟಿವಿ ಸೇರಿದಂತೆ ಹಲವು ಇ-ಸೇವೆಗಳನ್ನು ಪರಿಚಯಿಸಿದ್ದು, ಅವುಗಳ ಸಾಲಿಗಿಗ ಇ-ಪುಸ್ತಕ ಸೇವೆ ಹೊಸದಾಗಿ ಸೇರಿಕೊಂಡಿದೆ. ಕಂಪನಿಯ ಬಳಕೆದಾರ ಜೊತೆಗೆ ಇತರೆ ನೆಟವರ್ಕ್‌ಬಳಕೆದಾರರು ಸಹ ಸ್ಮಾರ್ಟ್‌ಫೋನಿನಲ್ಲಿ ಪುಸ್ತಕ ಓದಬಹುದಾಗಿದೆ.

70,000 ಇ-ಪುಸ್ತಕಗಳು
ಡಿಜಿಟಲೀಕರಣದ ಹಾದಿಯಲ್ಲಿ ಸಾಗುತ್ತಿರುವ ಏರ್‌ಟೆಲ್ ಇ-ಪುಸ್ತಕ ಸೇವೆಯನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈಗಾಗಲೇ ಸುಮಾರು 70,000 ಇ-ಪುಸ್ತಕಗಳು ಏರ್‌ಟೆಲ್ ಇ-ಪುಸ್ತಕ ಭಂಡಾರದಲ್ಲಿ ಲಭ್ಯವಿದ್ದು, ಇವುಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೇಖಕರ ಪ್ರಮುಖ ಜನಪ್ರಿಯ ಪುಸ್ತಕಗಳು ದೊರೆಯಲಿವೆ.

30 ದಿನಗಳು ಉಚಿತ
ಏರ್‌ಟೆಕ್ ಇ-ಪುಸ್ತಕ ಸೇವಯನ್ನು ಬಳಸುವ ಬಳಕೆದಾರರಿಗೆ ಕಂಪನಿಯು 30 ದಿನಗಳ ಉಚಿತ (ಟ್ರಾಯಲ್) ಸೇವೆಯನ್ನು ಒದಗಿಸಲಿದೆ. ಈ ಅವಧಿಯಲ್ಲಿ ಬಳಕೆದಾರರು ರೀಡರ್ಸ್ ಕ್ಲಬ್‌ನಲ್ಲಿ ಉಚಿತ ಎಂದು ನಮೂದಿಸಿರುವ ಇ ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆ. ಈ ಸೇವೆ ಏರ್‌ಟೆಲ್ ಮತ್ತು ನಾನ್ ಏರ್‌ಟೆಲ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದೆ.

ರೀಡರ್ಸ್ ಕ್ಲಬ್
ಇ ಪುಸ್ತಕ ಸೇವೆಯಲ್ಲಿ ರೀಡರ್ಸ್ ಕ್ಲಬ್ ಇದ್ದು, ಇಲ್ಲಿ ಸುಮಾರು 5000 ಇ ಪುಸ್ತಕಗಳ ಸಂಗ್ರಹವಿದ್ದು, ಬಳಕೆದಾರರಿಗೆ ಇ ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳಬಹುದು. ಹೊಸದಾಗಿ ಈ ಸೇವೆಗೆ ಎಂಟ್ರಿ ಬಳಕೆದಾರರಿಗೆ ಒಂದು ಬಾರಿ 5 ಪೇಯ್ಡ್ ಇ ಪುಸ್ತಕ ಓದುವ ಅವಕಾಶ ಸೀಗಲಿದೆ. ರೀಡರ್ಸ್ ಕ್ಲಬ್‌ನಲ್ಲಿನ ಯಾವುದಾರೂ 5 ಪುಸ್ತಕ ಓದಬಹುದು.

ಯಾವೆಲ್ಲ ಪುಸ್ತಕ ಲಭ್ಯ
ಏರ್‌ಟೆಲ್ ಇ ಪುಸ್ತಕ ಸೇವೆಯಲ್ಲಿ ಕಥೆ, ಕಾದಂಬರಿ, ಅಪರಾಧ ಕುರಿತಾದ ಪುಸ್ತಕಗಳು, ಪ್ರೇಮ ಪುಸ್ತಕಗಳು, ಬ್ಯುಸಿನೆಸ್ ಪುಸ್ತಕಗಳು, ಇತಿಹಾಸದ ಪುಸ್ತಕಗಳು, ರಾಜಕೀಯ ಪುಸ್ತಕಗಳು, ಫಿಟ್‌ನೆಸ್ ಕುರಿತಾದ ಪುಸ್ತಕಗಳು ಮತ್ತು ಆಧ್ಯಾತ್ಮಿಕ ಕುರಿತಾದ ಪುಸ್ತಕಗಳು ಸೇರಿದಂತೆ ಇನ್ನೂ ಅನೇಕ ವಿಷಯಗಳ ಇ ಪುಸ್ತಕಗಳು ಓದಿಗೆ ಲಭ್ಯವಿರಲಿವೆ.

ಸೇವೆಯ ಚಂದಾ ಶುಲ್ಕ
ಏರ್‌ಟೆಲ್ ಕಂಪನಿಯ 'ಇ ಪುಸ್ತಕ' ಸೇವೆಯಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಸೇವೆಯನ್ನು ಪಡೆಯಲು ಚಂದಾದಾರರಾಗಬೇಕಿದ್ದು, ಈ ಸೇವೆಯ 6 ತಿಂಗಳ ಚಂದಾ ಶುಲ್ಕವು 129ರೂ.ಗಳು ಆಗಿದೆ. ಹಾಗೇ ಒಂದು ವರ್ಷದ ಚಂದಾದಾರಿಕೆ ಸೇವೆಯನ್ನು ಪಡೆಯಲು 199ರೂ.ಗಳನ್ನು ಪಾವತಿಸಬೇಕಿದೆ. ಬಳಕೆದಾರರು ರಿಯಾಯಿತಿಯಲ್ಲಿ ಪುಸ್ತಕಗಳನ್ನು ಖರೀದಿಸುವ ಆಯ್ಕೆ ಸಹ ನೀಡಲಾಗಿದೆ.

ಸೇವೆ ಲಭ್ಯತೆ
ಏರ್‌ಟೆಲ್‌ನ ಹೊಸ ಇ ಪುಸ್ತಕ ಸೇವೆಯು ಏರ್‌ಟೆಲ್ ಬಳಕೆದಾರರು ಸೇರಿದಂತೆ ಇತರೆ ನೆಟ್‌ವರ್ಕ್ ಬಳಕೆದಾರರು ಸಹ ಈ ಸೇವೆಯನ್ನು ಬಳಸಬಹುದಾಗಿದೆ. ಹಾಗೇ ಆಂಡ್ರಾಯ್ಡ್ ಓಎಸ್ ಮತ್ತು ಐಓಎಸ್ ಬಳಕೆದಾರರು ಸಹ ಏರ್‌ಟೆಲ್ ಇ ಪುಸ್ತಕ ಸೇವೆಯನ್ನು ಪಡೆಯಬಹುದಾಗಿದೆ.


Click it and Unblock the Notifications








