ವಾಟ್ಸ್‌ಆಪ್‌ ಬತ್ತಳಿಕೆಗೆ ಮತ್ತೊಂದು ಹೊಸ ಫೀಚರ್‌..!

|

ಬಳಕೆದಾರರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ವಾಟ್ಸ್ ಆಪ್ ಯಾವಾಗಲೂ ಹೊಸ ವೈಶಿಷ್ಟ್ಯತೆಯನ್ನು ತಯಾರಿಸುವ ಬಗ್ಗೆ ಯೋಚಿಸುತ್ತಲೇ ಇರುತ್ತದೆ ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುತ್ತದೆ.

ವಾಟ್ಸ್‌ಆಪ್‌ ಬತ್ತಳಿಕೆಗೆ ಮತ್ತೊಂದು ಹೊಸ ಫೀಚರ್‌..!

ಇದೀಗ ವರದಿಯೊಂದು ಹೇಳುವ ಪ್ರಕಾರ ಸ್ಟಿಕ್ಕರ್ಸ್ ಮತ್ತು ಪಿಕ್ಸ್ ಗಳಿಗೆ ಇನ್ನಷ್ಟು ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಕೆಲಸ ಮಾಡುತ್ತಿದೆ.

ಟೆಸ್ಟಿಂಗ್ ಆರಂಭ

ಟೆಸ್ಟಿಂಗ್ ಆರಂಭ

ಮೆಸೇಜಿಂಗ್ ಆಪ್ ಈಗಾಗಲೇ ಇನ್ ಲೈನ್ ಫೋಟೋಗಳನ್ನು ನೋಟಿಫಿಕೇಷನ್ ಬಾರ್ ನಲ್ಲೇ ಕಾಣಿಸುವಂತೆ ಮಾಡಿ ಸ್ವಲ್ಪ ಸಮಯ ಹಿಡಿದಿದೆ. ಇದೀಗ ಕಂಪೆನಿಯು ಎನ್ ಲಾರ್ಜ್ ಫೋಟೋ ಫಾರ್ಮೇಟ್ ಬಗ್ಗೆ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲದೆ ಈ ವೈಶಿಷ್ಟ್ಯತೆಯನ್ನು ಆಂಡ್ರಾಯ್ಡ್ ಪೈ ಬೆಟಾ ವರ್ಷನ್ ನಲ್ಲಿ ಟೆಸ್ಟಿಂಗ್ ಕೂಡ ನಡೆಸುತ್ತಿದೆ.
ವಾಟ್ಸ್ ಆಪ್ ಬಿಲ್ಡ್ ಆನ್ ಆಂಡ್ರಾಯ್ಡ್ ಪೈ ಈಗಾಗಲೇ ಅಪ್ ಡೇಟ್ ಆಗಿದ್ದು ಹೊಸ ಫಾರ್ಮೇಟ್ ನಲ್ಲಿ ರಿಸೀವ್ ಮಾಡಿದ ಇಮೇಜ್ ಗಳನ್ನು ನೋಟಿಫಿಕೇಷನ್ ಪೆನಲ್ ನಲ್ಲಿಯೇ ನೋಡುವ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ.

GIFs, ವೀಡಿಯೋಗಳಿಗೆ ಬೆಂಬಲವಿಲ್ಲ

GIFs, ವೀಡಿಯೋಗಳಿಗೆ ಬೆಂಬಲವಿಲ್ಲ

ಆಂಡ್ರಾಯ್ಡ್ ಪೋಲೀಸರು ನೀಡಿರುವ ಮಾಹಿತಿಯ ಪ್ರಕಾರ, ಹೊಸ ಫಾರ್ಮೇಟ್ ನಲ್ಲಿ ನೋಟಿಫಿಕೇಷನ್ ಬಾರ್ ನಲ್ಲಿಯೇ ಇಮೇಜ್ ಗಳನ್ನು ನೋಡಬಹುದಾಗಿದೆ. ನೋಟಿಫಿಕೇಷನ್ ನ್ನು ಎಕ್ಸ್ ಪಾಂಡ್ ಮಾಡಿದಾಗ ಇಮೇಜ್ ಗಳು ಎನ್ ಲಾರ್ಜ್ ಆಗುತ್ತದೆ. ಇದೇ ವೈಶಿಷ್ಟ್ಯತೆಯು ಸ್ಟಿಕ್ಕರ್ ಗಳಿಗೂ ಕೆಲಸ ಮಾಡುತ್ತದೆ. ಆದರೆ ಈ ವೈಶಿಷ್ಟ್ಯತೆಯು GIFs ಮತ್ತು ವೀಡಿಯೋಗಳಿಗೆ ಬೆಂಬಲ ನೀಡುವುದಿಲ್ಲ.

ಗ್ರೂಪ್ ಚಾಟ್ ನಲ್ಲೂ ಕಾರ್ಯ:

ಗ್ರೂಪ್ ಚಾಟ್ ನಲ್ಲೂ ಕಾರ್ಯ:

ಗ್ರೂಪ್ ಚಾಟ್ ನಲ್ಲೂ ಕೂಡ ಈ ವೈಶಿಷ್ಟ್ಯತೆಯು ಕೆಲಸ ಮಾಡುತ್ತದೆ. ಯಾವಾಗ ಬಳಕೆದಾರರು ಇಮೇಜ್ ನ್ನು ರಿಸೀವ್ ಮಾಡುತ್ತಾರೋ ಆಗ ಸಣ್ಣದೊಂದು ಥಂಬ್ ನೈಲ್ ನೋಟಿಫಿಕೇಷನ್ ನ ಎಡ ಬದಿಯಲ್ಲಿ ಕಾಣಿಸುತ್ತದೆ. ಯಾವಾಗ ಬಳಕೆದಾರರು ಅದನ್ನು ಕ್ಲಿಕ್ಕಿಸಿ ಎಕ್ಸ್ ಪಾಂಡ್ ಮಾಡುತ್ತಾರೋ ಆಗ ಬಲ ಬದಿಯಲ್ಲಿ ಉಳಿದ ಟೆಕ್ಸ್ಟ್ ಗಳ ಜೊತೆಗೆ ಇಮೇಜ್ ತೆರೆದುಕೊಳ್ಳುತ್ತದೆ. ಸದ್ಯ ಕಂಪೆನಿಯು ಆಂಡ್ರಾಯ್ಡ್ ಪೈ ಬಳಕೆದಾರರ ಜೊತೆ ಈ ವೈಶಿಷ್ಟ್ಯತೆಯ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ ಆದರೆ ಇದು ಹಳೆಯ ವರ್ಷನ್ ಗಳಲ್ಲೂ ಕೂಡ ಬಿಡುಗಡೆಗೊಳ್ಳಲಿದೆ.

ಫೇಕ್ ನ್ಯೂಸ್ ಗಳ ವಿರುದ್ಧ ಕ್ಯಾಂಪೇನ್:

ಫೇಕ್ ನ್ಯೂಸ್ ಗಳ ವಿರುದ್ಧ ಕ್ಯಾಂಪೇನ್:

ತಿಂಗಳು ವಾಟ್ಸ್ ಆಪ್ ಕೆಲವು ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸಿ ಫೇಕ್ ನ್ಯೂಸ್ ಗಳಿಗೆ ಕಡಿವಾಣ ಹಾಕಲು ಭಾರತದಲ್ಲಿ ಪ್ರಯತ್ನ ನಡೆಸಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ರೇಡಿಯೋ ಕ್ಯಾಂಪೇನ್ ನ್ನೂ ಕೂಡ ವಾಟ್ಸ್ ಆಪ್ ನಡೆಸಿದ್ದು, ಫಾರ್ವಡ್ ಮೆಸೇಜ್ ಗಳನ್ನು ರಿಸೀವ್ ಮಾಡಿದಾಗ ಅದರ ಸತ್ಯಾಸತ್ಯತೆಯನ್ನು ತಿಳಿಯಿರಿ ಮತ್ತು ಫಾರ್ವರ್ಡ್ ಲೇಬಲ್ ನ ಮಹತ್ವದ ಬಗ್ಗೆ ಜನರಿಗೆ ತಿಳಿಸಿ ಹೇಳುವ ಕಾರ್ಯವನ್ನು ಮಾಡಿದೆ.

 ಇಂದಿನಿಂದ ಪ್ರಸಾರ

ಇಂದಿನಿಂದ ಪ್ರಸಾರ

ರೇಡಿಯೋ ಕ್ಯಾಂಪೇನ್ ಇವತ್ತಿನಿಂದ ಹಿಂದಿ ಭಾಷೆಯ 46 ಸ್ಟೇಷನ್ ಗಳಲ್ಲಿ (ಆಲ್ ಇಂಡಿಯಾ ರೇಡಿಯೋ) ದಲ್ಲಿ ಪ್ರಸಾರವಾಗಲಿದೆ. ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಛತ್ತೀಸ್ ಘಡ, ರಾಜಸ್ತಾನ, ಉತ್ತರ ಪ್ರದೇಶ, ಮತ್ತು ಉತ್ತರಾಖಂಡ ಗಳಲ್ಲಿ ಪ್ರಸಾರವಾಗಲಿದೆ ಎಂದು ವಾಟ್ಸ್ ಆಪ್ ವಕ್ತಾರರು ತಿಳಿಸಿದ್ದಾರೆ.

Best Mobiles in India

English summary
Android users to get this new WhatsApp feature soon. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X