ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಆಪ್‌ಗಳಿಂದಲೂ ಬರುತ್ತಿದೆ ಮಾಲ್ವೇರ್ ಸಮಸ್ಯೆ!

|

ನಕಲಿ ಆಪ್‌ಗಳ ವಿರುದ್ಧ ಸಮರ ಸಾರಿರುವ ಗೂಗಲ್ ಪ್ಲೇ ಸ್ಟೋರ್‌ನಿಂದ ಸಾಕಷ್ಟು ನಕಲಿ ಆಪ್‌ಗಳನ್ನು ಕಿತ್ತು ಹಾಕುತ್ತಿದೆ. ಆದರೂ ಸಹ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸುಮಾರು 172 ಆಪ್‌ಗಳಿಂದ ಮತ್ತೆ ಮಾಲ್‌ವೇರ್ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಜಾಹೀರಾತು, ವಿವಿಧ ಸೇವೆಗಳ ಚಂದಾದಾರಿಕೆ, ಎಸ್‌ಎಂಎಸ್ ಚಂದಾ, ಉಚಿತ ಆಪ್‌ ಹೀಗೆ ವಿವಿಧ ರೀತಿಯಲ್ಲಿ ನಕಲಿ ಆಪ್‌ಗಳ ಮೂಲಕ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಪ್ರವೇಶಿಸಿರುವ ಸಾಧ್ಯತೆಯಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಬಳಕೆದಾರರಿಗೆ ಅರಿವಿಲ್ಲದಂತೆಯೇ

ಹೌದು, ಗೂಗಲ್ ನಕಲಿ ಆಪ್‌ ವಿರುದ್ಧ ಕಾಲಕಾಲಕ್ಕೆ ಸಮರ ಸಾರುತ್ತಿದ್ದು, ಪ್ಲೇ ಸ್ಟೋರ್‌ನಿಂದ ಅವುಗಳನ್ನು ಕಿತ್ತು ಹಾಕುತ್ತಿದೆ. ಅಲ್ಲದೆ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ದೃಢೀಕರಿಸಿದ ಆಪ್‌ಗಳನ್ನು ಮಾತ್ರ ಬಳಸುವಂತೆ ಸೂಚನೆ ನೀಡುತ್ತದೆ. ಆದರೆ, ಕೆಲವೊಂದಿಷ್ಟು ಆಪ್‌ಗಳು ಬಳಕೆದಾರರಿಗೆ ಅರಿವಿಲ್ಲದಂತೆಯೇ, ಅವರ ಅನುಮತಿಯಿಲ್ಲದೆ ಆಡ್‌ವೇರ್‌ಗಳನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುತ್ತದೆ. ಅವು ಬಳಕೆದಾರರ ಮಾಹಿತಿ ಕದಿಯುವ ಜತೆಗೆ, ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆಗೂ ಸಮಸ್ಯೆ ಸೃಷ್ಟಿಸುತ್ತಿವೆ ಎಂದು ಹೇಳಲಾಗಿದೆ.

ಗೂಗಲ್‌ ಕಣ್ಣಿಗೂ ಮರೆಮಾಚಿ

ಗೂಗಲ್‌ ಕಣ್ಣಿಗೂ ಮರೆಮಾಚಿ ಕಾರ್ಯನಿರ್ವಹಿಸುವ ಇಂತಹ ಆಪ್‌ಗಳು ನೋಡಲು ಅತ್ಯುತ್ತಮ ಎನ್ನುವಂತೆ ಕಾಣಿಸುತ್ತವೆ. ಆದರೆ, ಗ್ರಾಹಕರಿಂದ ಇಲ್ಲಸಲ್ಲದ ಸೇವೆಗಳಿಗೆ ಅನುಮತಿ ಪಡೆದು ಮಾಲ್‌ವೇರ್‌ಗಳನ್ನು ಮತ್ತು ಇತರೆ ವೈರಸ್‌ಗಳನ್ನು ಇನ್‌ಸ್ಟಾಲ್ ಮಾಡುವಲ್ಲಿ ಯಶಸ್ವಿಯಾಗುತ್ತಿವೆ. ಹಾಗಾಗಿ, ಕೆಲವೊಂದು ಆಪ್‌ಗಳು ಕೇಳುವ ಅನುಮತಿಯನ್ನು ನೀಡಲು ಬಳಕೆದಾರರು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ವಿವಿಧ ರೀತಿಯಲ್ಲಿ ಆಪ್ ಮೂಲಕ ಮಾಲ್ವೇರ್ ಬಳಕೆದಾರರ ಸ್ಮಾರ್ಟ್‌ಫೋನ್ ಪ್ರವೇಶಿಸಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಅಧಿಕೃತ ಆಪ್‌ಸ್ಟೋರ್‌

ಇನ್ನು ಆಪ್‌ ಸ್ಟೋರ್‌ಗಳಲ್ಲಿ ಫೇಕ್ ಆಪ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಅಧಿಕೃತ ಆಪ್‌ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡುವುದು ಒಳ್ಳೆಯದು. ಆದರೆ, ಅದರಲ್ಲೂ ಸಹ ಕೆಲ ಫೇಕ್ ಆಪ್‌ಗಳು ಇರಬಹುದು. ಹಾಗಾಗಿ, ಬಳಕೆದಾರರು ನೀಡಿರುವ ರಿವ್ಯೂವ್ ಮತ್ತು ತಪ್ಪು ಮಾಹಿತಿಯನ್ನು ಕಂಡುಹಿಡಿದು ಕೊಂಡು ಅವುಗಳ ಬಗ್ಗೆ ಎಚ್ಚರಿಕೆ ವಹಿಸಿಸಬೇಕು. ಕೆಲವರಿಗೆ ಪ್ಲೇ ಸ್ಟೋರ್ ನಲ್ಲಿ ನೋಡಿದ ಎಲ್ಲಾ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಅಂತವರು ಇನ್ನುಮುಂದೆ ಹೆಚ್ಚು ಜಾಗರೂಕವಾಗಿರಬೇಕು ಎಂದು ವರದಿ ತಿಳಿಸಿದೆ.

ಡೆವಲಪರ್ ಯಾರು

ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮುನ್ನ ಆ ಆಪ್‍ ಬಗ್ಗೆ ಬಳಕೆದಾರರು ನೀಡಿರುವ ರಿವ್ಯೂವ್‌ಗಳನ್ನು ಓದಿ. ಅದೊಂದು ಫೇಕ್ ಆಪ್ ಆಗಿದ್ದರೆ ಬಳಕೆದಾರರು ಆ ಬಗ್ಗೆ ಬರೆದಿರುತ್ತಾರೆ. ಅದರ ಪ್ಲಸ್ / ಮೈನಸ್ ಪಾಯಿಂಟ್ ಎಲ್ಲವೂ ಅಲ್ಲಿರುತ್ತದೆ.ಇದನ್ನೆಲ್ಲಾ ಓದಿದ ನಂತರವೇ ಆ ಆಪ್ ಇನ್‍ಸ್ಟಾಲ್ ಮಾಡಿ. ಆಪ್ ಡೆವಲಪರ್ ಯಾರು ಎಂಬುದನ್ನು ಸಹ ತಿಳಿದುಕೊಳ್ಳಿ. ಆ ಡೆವಲಪರ್‌ಗಳ ವೆಬ್‌ಸೈಟ್‌ಗೆ ಭೇಟಿ ನೀಡಿ. ಆ ಡೆವಲಪರ್‌ಗಳು ಯಾವುದೇ ಸಾಮಾಜಿಕ ಮಾಧ್ಯಮಗಳ ಲಿಂಕ್‌ಗಳನ್ನು ಹೊಂದಿಲ್ಲ ಎಂದಾದರೆ ಆ ಆಪ್ ಇನ್‍ಸ್ಟಾಲ್ ಮಾಡದಿದ್ದರೆ ಒಳ್ಳೆಯದು.

Best Mobiles in India

English summary
When first installed, the app’s icon is still visible on the device, enabling the user to open and interact with the app normally. However. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X