ಆಂಡ್ರಾಯ್ಡ್ ಡಿವೈಸ್‌ಗಳಿಗೆ ಸಂಪೂರ್ಣ ಉಚಿತವಾಗಿರುವ ಟಾಪ್ ಅಪ್ಲಿಕೇಶನ್‌ಗಳು

ಇಂದಿನ ಲೇಖನದಲ್ಲಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ನೀಡುತ್ತಿದ್ದು ನಿಮ್ಮ ಫೋನ್‌ನಲ್ಲಿ ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಿ.

By Shwetha Ps
|

ನೀವು ಮೊದಲ ಬಾರಿಗೆ ಆಂಡ್ರಾಯ್ಡ್ ಫೋನ್‌ಗಳನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೀವು ಕೆಲವೊಂದು ವಿಷಯಗಳ ಬಗ್ಗೆ ಅರಿತುಕೊಳ್ಳಲೇಬೇಕಾಗುತ್ತದೆ. ನಿಮ್ಮ ಫೋನ್ ಅನ್ನು ಇನ್ನಷ್ಟು ಸ್ನೇಹಮಯವಾಗಿ ನೀವು ಬಳಸಬೇಕು ಎಂದಾದಲ್ಲಿ ನೀವು ಕೆಲವೊಂದು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.

ಆಂಡ್ರಾಯ್ಡ್ ಡಿವೈಸ್‌ಗಳಿಗೆ ಸಂಪೂರ್ಣ ಉಚಿತವಾಗಿರುವ ಟಾಪ್ ಅಪ್ಲಿಕೇಶನ್‌ಗಳು

ಇನ್ನು ಹೊಸ ಹೊಸ ಓಎಸ್‌ಗಳನ್ನು ಪರಿಚಯಿಸಿದಾಗ ಅದನ್ನು ಕುರಿತಾದ ಕೆಲವೊಂದು ಸೂಚನೆಗಳನ್ನು ನೀವು ಅರಿಯಲೇಬೇಕು. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಅಪ್ಲಿಕೇಶನ್‌ಗಳ ಕುರಿತಾದ ಮಾಹಿತಿಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು ಇದನ್ನು ಕುರಿತು ಅರಿತುಕೊಳ್ಳಿ. ಈ ಅಪ್ಲಿಕೇಶನ್‌ಗಳ ವಿಶೇಷತೆ ಏನೆಂದರೆ ನಿಮಗೆ ಟೈಪ್ ಮಾಡಲು ಇದು ಸಲೀಸಾಗಿದೆ. ಅಂತೆಯೇ ನಿಮ್ಮ ಟೈಪಿಂಗ್‌ನಲ್ಲಿ ಏನಾದರೂ ಗ್ರಾಮರ್ ಸಂದೇಹಗಳಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಬನ್ನಿ ಹಾಗಿದ್ದರೆ ಆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್‌ಗಳ ಕುರಿತಾದ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಸ್ವಿಫ್ಟ್‌ಕೀ

ಸ್ವಿಫ್ಟ್‌ಕೀ

ನೀವು ಈ ಕೀಗಳನ್ನು ಬಳಸಿಕೊಂಡು ಸ್ವೈಪ್ ಮಾಡಬಹುದಾಗಿದೆ. ಇದರಿಂದ ನಿಮ್ಮ ಕೀಬೋರ್ಡ್ ಲುಕ್ ಅನ್ನು ನೀವು ಇನ್ನಷ್ಟು ವೈಶಿಷ್ಟ್ಯಗೊಳಿಸಬಹುದು.

ಎವರ್‌ನೋಟ್

ಎವರ್‌ನೋಟ್

ಇದೊಂದು ವರ್ಚುವಲ್ ನೋಟ್‌ಬುಕ್ ಆಗಿದ್ದು ನೀವು ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‌ನಲ್ಲಿಯೇ ನೋಟ್ ಮಾಡುವ ವೈಶಿಷ್ಟ್ಯವನ್ನು ಇದು ಹೊಂದಿದೆ.

ಹೋಟೆಲ್ ಟು ನೈಟ್

ಹೋಟೆಲ್ ಟು ನೈಟ್

ಇದು ನಿಮಗೆ ಸಮೀಪವಿರುವ ಹೋಟೆಲ್‌ಗಳನ್ನು ಪತ್ತೆಮಾಡಲು ನೆರವನ್ನು ನೀಡಲಿದೆ.

ಉಬರ್ ಅಥವಾ ಓಲಾ ಕ್ಯಾಬ್

ಉಬರ್ ಅಥವಾ ಓಲಾ ಕ್ಯಾಬ್

ಈ ವ್ಯವಸ್ಥೆಯ ಮೂಲಕ ಅತಿ ಕಡಿಮೆ ದರದಲ್ಲಿ ನಿಮಗೆ ಓಲಾ ಇಲ್ಲವೇ ಉಬರ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ನೀವು ಈ ಎರಡೂ ಸೌಲಭ್ಯವಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪಿಕ್‌ಸಾರ್ಟ್

ಪಿಕ್‌ಸಾರ್ಟ್

ಇದು ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ ಫೋಟೋಶಾಪ್ ಫೀಚರ್ ಉಳ್ಳ ಅಪ್ಲಿಕೇಶನ್ ಆಗಿದ್ದು ಅಡೋಬ್ ಫೋಟೋಶಾಪ್‌ನಂತೆ ಇದು ಕಾರ್ಯನಿರ್ವಹಿಸಲಿದೆ.

ನಿಮಗೆ ತಿಳಿಯದ ಗೂಗಲ್ ನ ಅದ್ಬುತ ಆಪ್ ಗಳು..!ನಿಮಗೆ ತಿಳಿಯದ ಗೂಗಲ್ ನ ಅದ್ಬುತ ಆಪ್ ಗಳು..!

ಜಿಮೇಲ್ ಇನ್‌ಬಾಕ್ಸ್

ಜಿಮೇಲ್ ಇನ್‌ಬಾಕ್ಸ್

ನಿಮ್ಮ ಜಿಮೇಲ್ ಖಾತೆ ನಿಮ್ಮ ಬಳಿ ಇದೆ ಎಂದಾದಲ್ಲಿ ಈ ಅಪ್ಲಿಕೇಶನ್ ಅನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಸಂದೇಶಗಳನ್ನು ಇದು ಸಂಘಟಿಸಿ ಇಡುತ್ತದೆ ಮತ್ತು ತ್ವರಿತವಾಗಿ ಸಂದೇಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ವೇಜ್

ವೇಜ್

ನಿಮಗೆ ಗೊತ್ತಿಲ್ಲದೇ ಇರುವ ಸ್ಥಳಕ್ಕೆ ನೀವು ಹೋಗುತ್ತಿದ್ದೀರಿ ಎಂದಾದಲ್ಲಿ ವೇಜ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ನಿಮಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ನಿಮ್ಮನ್ನು ಆದಷ್ಟು ಬೇಗನೇ ಈ ಸ್ಥಳಕ್ಕೆ ತಲುಪಿಸುತ್ತದೆ.

ಕ್ಯಾಶ್

ಕ್ಯಾಶ್

ಇದು ಸುಲಭವಾಗಿ ಹಣವನ್ನು ವರ್ಗಾಯಿಸಲು ಅನುವುಮಾಡಿಕೊಡುವ ಅಪ್ಲಿಕೇಶನ್ ಆಗಿದೆ. ನೀವು ಇದಕ್ಕೆ ಸೈನ್ ಇನ್ ಮಾಡಬೇಕು ಮತ್ತು ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಇದರಲ್ಲಿ ನಮೂದಿಸಿರಬೇಕು.

ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್

ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್

ಶಾಪಿಂಗ್ ಮಾಡಲು ಅನುವು ಮಾಡಿಕೊಡುವಂತಹ ರಿಟೈಲ್ ತಾಣಗಳಾಗಿದ್ದು ಇವುಗಳ ಮುಖಾಂತರ ನೀವು ವಿನಾಯಿತಿಗಳನ್ನು ಪಡೆದುಕೊಂಡು ಕಡಿಮೆ ಮೌಲ್ಯದಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.

ಸ್ಪಾಟಿಫೈ

ಸ್ಪಾಟಿಫೈ

ನೀವು ಸಂಗೀತ ಪ್ರಿಯರು ಎಂದಾದಲ್ಲಿ ಈ ಅಪ್ಲಿಕೇಶನ್ ನಿಮಗೆ ಸಹಕಾರಿಯಾಗಲಿದೆ. ನಿಮಗೆ ಬೇಕಿದ್ದಾಗ ಈ ಅಪ್ಲಿಕೇಶನ್ ಮೂಲಕ ಸಂಗೀತವನ್ನು ಈ ಆಪ್ ಮೂಲಕ ಆಲಿಸಬಹುದಾಗಿದೆ.

ಕ್ರೋಮ್ ಬ್ರೌಸರ್ - ಗೂಗಲ್

ಕ್ರೋಮ್ ಬ್ರೌಸರ್ - ಗೂಗಲ್

ನಿಮ್ಮ ಬ್ರೌಸಿಂಗ್ ಅನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಕ್ರೋಮ್ ಬ್ರೌಸರ್ ಸಹಕಾರಿ ಎಂದೆನಿಸಲಿದೆ. ಇದು ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಪೂರ್ವಲೋಡ್ ಆಗಿ ಬಂದಿರುತ್ತದೆ.

ಎಕ್ಸೆಂಡರ್

ಎಕ್ಸೆಂಡರ್

ಒಂದು ಆಂಡ್ರಾಯ್ಡ್ ಫೋನ್‌ನಿಂದ ಇನ್ನೊಂದು ಫೋನ್‌ಗೆ ವೈರ್‌ಲೆಸ್ ಡೇಟಾ ವರ್ಗಾವಣೆಯನ್ನು ಮಾಡಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ.

ಕ್ಲೀನ್ ಮಾಸ್ಟರ್

ಕ್ಲೀನ್ ಮಾಸ್ಟರ್

ಇದೊಂದು ಉತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು, 740 ಮಿಲಿಯನ್ ಬಳಕೆದಾರರು ಇದನ್ನು ಬಳಸಿಕೊಂಡಿದ್ದಾರೆ. ನಿಮ್ಮ ಫೋನ್‌ ಅನ್ನು ವೇಗವಾಗಿ ಚಾಲನೆಮಾಡಲು ಈ ಆಪ್ ಸಹಕಾರಿಯಾಗಿದೆ. ಬೇಡದೇ ಇರುವ ವಿಷಯಗಳನ್ನು ಇದು ನಿವಾರಿಸುತ್ತದೆ ಕೂಡ.

ಎಮ್‌ಎಕ್ಸ್ ಪ್ಲೇಯರ್

ಎಮ್‌ಎಕ್ಸ್ ಪ್ಲೇಯರ್

ಇದೊಂದು ವೀಡಿಯೊ ಪ್ಲೇಯರ್ ಆಗಿದ್ದು ಎಲ್ಲಾ ರೀತಿಯ ವೀಡಿಯೊ ಸ್ವರೂಪಕ್ಕೆ ಇದು ಬೆಂಬಲವನ್ನು ನೀಡುತ್ತದೆ.

ಸ್ಪೀಡ್‌ಟೆಸ್ಟ್

ಸ್ಪೀಡ್‌ಟೆಸ್ಟ್

ಈ ಅಪ್ಲಿಕೇಶನ್ ಮೂಲಕ ನಿಮ್ಮ ಫೋನ್‌ನ ಇಂಟರ್ನೆಟ್ ವೇಗವನ್ನು ನೀವು ಪರಿಶೀಲಿಸಿಕೊಳ್ಳಬಹುದಾಗಿದೆ.

Best Mobiles in India

Read more about:
English summary
Are you new to android, here are the best beginners apps you may need

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X