ಕ್ರೋಮ್ ಬಳಕೆದಾರರ ಸಹಾಯಕ್ಕಾಗಿ ಈ ಮಾಹಿತಿ..!

Written By: Lekhaka

ಗೂಗಲ್ ಒಡೆತದ ಕ್ರೋಮ್ ಬ್ರೌಸರ್ ಬಳಕೆದಾರರ ಸಂಖ್ಯೆಯು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿನ್ನಲೆಯಲ್ಲಿ ಕ್ರೋಮ್ ನೊಂದಿಗೆ ಬಳಕೆ ಮಾಡಿಕೊಳ್ಳಲು ಹಲವಾರು ಎಕ್ಸಟೆಷನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದರಲ್ಲಿ ಹಲವು ಎಕ್ಸಟೆಷನ್ ಗಳು ಬಳಕೆದಾರರಿಗೆ ಮಾರಕವಾಗಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರು ಯಾವ ಎಕ್ಸಟೆಷನ್ ಗಳಿಂದ ಎಚ್ಚರವಾಗಿರ ಬೇಕು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. 

ಕ್ರೋಮ್ ಬಳಕೆದಾರರ ಸಹಾಯಕ್ಕಾಗಿ ಈ ಮಾಹಿತಿ..!

ಅಲಿಸಿಸ್ಟ್ ಐಸ್ ಬಗ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಚೆಂಜ್ HTTP ರಿಕ್ವೆಸ್ಟ್ ಹೆಡರ್, ಲೈಟ್ ಬುಕ್ ಮಾರ್ಕ್, ಸ್ಟಿಕೀಸ್ ಮತ್ತು ನ್ಯೂಗಲಿಯಂತಹ ಎಕ್ಸಟೆಷನ್ ಗಳನ್ನು ಬಳಕೆ ಮಾಡಿಕೊಂಡರೆ ಹೆಚ್ಚಿನ ತೊಂದರೆಯನ್ನು ಎದುರಿಸಬೇಕಾಗುತ್ತಿದೆ. ಇದರಿಂದಾಗಿ ಬಳಕೆದಾರರ ಮಾಹಿತಿಯೂ ಕಳ್ಳತನವಾಗಲಿದೆ, ಅಲ್ಲದೇ ಇವುಗಳ ಸಹಾಯದಿಂದ ವಂಚನೆಯನ್ನು ಮಾಡಬಹುದಾಗಿದೆ.

ಚೆಂಜ್ HTTP ರಿಕ್ವೆಸ್ ಎಕ್ಸಟೆಷನ್ ಅನ್ನು ಹೆಚ್ಚಿನ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದು, ಇದು ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರ ಮಾಹಿತಿಯನ್ನು ಕದಿಯುತ್ತದೆ ಎನ್ನಲಾಗಿದೆ. ಇದು ಕಳ್ಳತನವನ್ನು ಮಾಡಲು ಸಹ ಸಹಾಯ ಮಾಡುತ್ತಿದೆ. ಹೆಚ್ಚಿನ ಇದನ್ನು ಬಳಕೆ ಮಾಡಿಕೊಳ್ಳದೆ ಇರುವುದು ಉತ್ತಮವಾಗಿದೆ.

ಈ ಎಕ್ಸಟೆಷನ್ ಗಳನ್ನು ಬಳಕೆ ಮಾಡಿಕೊಳ್ಳುವುದರಿಂದಾಗಿ ತೊಂದರೆಯನ್ನು ಅನುಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ, ಈಗಾಗಲೇ ಹಲವಾರು ಫೇಕ್ ಎಕ್ಸಟೆಷನ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಇವುಗಳಿಂದ ದೂರಉಳಿಯುವುದೇ ಉತ್ತಮವಾಗಿದೆ.

ಪ್ರವಾಸ ಮಾಡುವ ಸಂದರ್ಭದಲ್ಲಿ ಇರಲೇಬೇಕಾದ ಗ್ಯಾಜೆಟ್ ಗಳು..!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಈಗಾಗಲೇ ಈ ಮಾದರಿಯ ಎಕ್ಸಟೆಷನ್ಗಳನ್ನು ತೆಗೆದು ಹಾಕುವಂತಹ ಕಾರ್ಯವನ್ನು ಗೂಗಲ್ ಮಾಡುತ್ತಿದ್ದು, ನೀವು ಈ ಮಾದರಿಯ ಎಕ್ಸಟೆಷನ್ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರೇ ಶೀಘ್ರವೇ ಅವುಗಳನ್ನು ಬಂದ್ ಮಾಡುವುದು ಸೂಕ್ತ ಇಲ್ಲವಾದರೆ ನೀವು ದೊಡ್ಡ ಪ್ರಮಾಣದ ತೊಂದರೆಯನ್ನು ಎದುರಿಸಬೇಕಾಗಲಿದೆ.
English summary
Researchers at enterprise security firm Iceberg have discovered four malicious extensions in the Google Chrome Web store, that have apparently affected more than half a million Google Chrome users around the world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot