Subscribe to Gizbot

ಆಂಡ್ರಾಯ್ಡ್‌ನಲ್ಲಿ ಗೂಗಲ್ ಬದಲಿಗೆ ಬಳಕೆ ಮಾಡಿಕೊಳ್ಳಬಹುದಾದ ಹೊಸ ಆಪ್‌ಗಳು..!

Posted By: Tejaswini P G

ಆಂಡ್ರಾಯ್ಡ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆಪ್ ಗಳೆಂದರೆ ಅದು ಗೂಗಲ್ ನ ಆಪ್ ಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಒಂದೇ ಆಪ್ ಅನ್ನು ಪದೇ ಪದೇ ಬಳಸುವುದು ನೀರಸವೆನಿಸಬಹುದು. ಹಾಗಾಗಿ ಯಾವಾಗಲಾದರೊಮ್ಮೆ ಗೂಗಲ್ ಆಪ್ ಗಳ ಬದಲಾಗಿ ಅದಕ್ಕೆ ತಕ್ಕ ಪರ್ಯಾಯ ಆಪ್ ಬಳಸುವುದರಿಂದ ಮನಸ್ಸಿಗೆ ಹಿತವೆನಿಸಬಹುದು. ಈ ಲೇಖನದಲ್ಲಿ ನಾವು ಕೆಲವು ಗೂಗಲ್ ಆಪ್ ಗಳಿಗೆ ಉತ್ತಮ ಪರ್ಯಾಯ ಆಪ್ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಬೋರ್ಡ್ ಗೆ ಪರ್ಯಾಯ ಆಪ್ ಸ್ವಿಫ್ಟ್ಕೀ

ಜಿಬೋರ್ಡ್ ಗೆ ಪರ್ಯಾಯ ಆಪ್ ಸ್ವಿಫ್ಟ್ಕೀ

ಜಿಬೋರ್ಡ್ ಮತ್ತು ಸ್ವಿಫ್ಟ್ಕೀ ಆಪ್ಗಳು ಕಟು ಪ್ರತಿಸ್ಪರ್ಧಿಗಳಾಗಿದ್ದು ಎರಡರಲ್ಲೂ ಉತ್ತಮ ಫೀಚರ್ಗಳನ್ನು ನೀವು ನಿರೀಕ್ಷಿಸಬಹುದು. ಸ್ವಿಫ್ಟ್ಕೀ ಕೂಡ ಟೆಕ್ಸ್ಟ್ ಮೆಸೇಜ್ ಕಳುಹಿಸುವಾಗ ಇಮೋಜಿ ಗಳನ್ನು ಬಳಸುವ ಸೌಲಭ್ಯ ನೀಡುತ್ತದೆ. ಇದರ ವರ್ಡ್ ಪ್ರಡಿಕ್ಶನ್ ಅಂದರೆ ಪದಗಳನ್ನು ಸೂಚಿಸುವ ಸಾಮರ್ಥ್ಯವೂ ಉತ್ತಮವಾಗಿದ್ದು ಚ್ಯಾಟ್ ಮಾಡುವಾಗ ಬಹಳಷ್ಟು ಸಮಯವನ್ನು ಉಳಿಸುತ್ತದೆ. ಕರ್ಸರ್ ಕಂಟ್ರೋಲ್, ಜಿಫ್ ಮತ್ತು ಸುಂದರ ಸ್ಟಿಕರ್ಗಳನ್ನ ಹೊಂದಿರುವ ಸ್ವಿಫ್ಟ್ಕೀ ನಲ್ಲಿ ಗೆಸ್ಚರ್ ಗಳ ಮೂಲಕ ಕೀಬೋರ್ಡ್ ಅನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ಸ್ವಿಫ್ಟ್ಕೀ ವಿಭಿನ್ನ ಥೀಮ್ಗಳನ್ನು ಹೊಂದಿದ್ದು ನಿಮ್ಮ ಅಭಿರುಚಿಗೆ ತಕ್ಕಂತೆ ಬೇಕಾದುದನ್ನು ಆಯ್ಕೆಮಾಡಬಹುದಾಗಿದೆ.

ಗೂಗಲ್ ಲಾಂಚರ್ ನ ಬದಲಿಗೆ ಬಳಸಿ ನೋವಾ ಲಾಂಚರ್

ಗೂಗಲ್ ಲಾಂಚರ್ ನ ಬದಲಿಗೆ ಬಳಸಿ ನೋವಾ ಲಾಂಚರ್

ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಜನಪ್ರಿಯ ಲಾಂಚರ್ಗಳ ಪೈಕಿ ನೋವಾ ಲಾಂಚರ್ ಕೂಡ ಒಂದಾಗಿದೆ. ಎಲ್ಲವನ್ನೂ ತಮ್ಮ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಇದು ತನ್ನ ಬಳಕೆದಾರರಿಗೆ ನೀಡುತ್ತದೆ. ಈ ಲಾಂಚರ್ ಫೋಲ್ಡರ್, ಗೆಸ್ಚರ್ ಮತ್ತು ನೋಟಿಫಿಕೇಶನ್ ಕೋಡ್ಗಳನ್ನು ಬೆಂಬಲಿಸುತ್ತದೆ. ರಾತ್ರಿಯ ಹೊತ್ತು ಫೋನ್ ಬಳಕೆ ಸುಲಭವಾಗಿಸಲು ಇದರಲ್ಲಿ ನೈಟ್ ಮೋಡ್ ಕೂಡ ಇದೆ. ಇದರ ವಿಜೆಟ್ ಓವರ್ಲ್ಯಾಪ್ ಮತ್ತು ಐಕಾನ್ ಥೀಮ್ಗಳು ನೋವಾ ಲಾಂಚರ್ ನ ಉತ್ತಮ ಫೀಚರ್ಗಳು ಎಂದರೆ ತಪ್ಪಾಗಲಾರದು.

ಗೂಗಲ್ ಕ್ಯಾಲೆಂಡರ್ ಗೆ ಪರ್ಯಾಯ ಆಪ್ ಬಿಸ್ನೆಸ್ ಕ್ಯಾಲೆಂಡರ್

ಗೂಗಲ್ ಕ್ಯಾಲೆಂಡರ್ ಗೆ ಪರ್ಯಾಯ ಆಪ್ ಬಿಸ್ನೆಸ್ ಕ್ಯಾಲೆಂಡರ್

ಗೂಗಲ್ ಪ್ಲೇಸ್ಟೋರ್ ನ ಎಡಿಟರ್ಸ್ ಚಾಯ್ಸ್ ಲಿಸ್ಟ್ ನಲ್ಲಿ ಸ್ಥಾನಪಡೆದಿರುವ ಬಿಸ್ನೆಸ್ ಕ್ಯಾಲೆಂಡರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಕ್ಯಾಲೆಂಡರ್ ಆಪ್ ಗಳ ಪೈಕಿ ಒಂದಾಗಿದೆ. ವಿಭಿನ್ನ ವ್ಯೂಗಳು, ಜಾಗತಿಕ ಹವಾಮಾನ ಮುನ್ಸೂಚನೆ, ಹುಟ್ಟಿದ ಹಬ್ಬದ ರಿಮೈಂಡರ್ಗಳು ಮತ್ತು ರಜಾದಿನಗಳ ಸೂಚನೆ ಇದರ ಉತ್ತಮ ಫೀಚರ್ಗಳಾಗಿವೆ. ಕ್ಯಾಲೆಂಡರ್ನಲ್ಲಿ ವಿವಿಧ ಬಣ್ಣಗಳ ಕೋಡಿಂಗ್ ಬಳಸುವ ಮೂಲಕ ನಿಮ್ಮ ಮಾಹಿತಿಯನ್ನು ವ್ಯವಸ್ಥಿತವಾಗಿ ಇರಿಸಬಹುದು. ಅಷ್ಟೇ ಅಲ್ಲದೆ ಬಿಸ್ನೆಸ್ ಕ್ಯಾಲೆಂಡರ್ ಅನ್ನು ಗೂಗಲ್ ಕ್ಯಾಲೆಂಡರ್ ನೊಂದಿಗೆ ಸಿಂಕ್ ಮಾಡಬಹುದಾಗಿದೆ. ತನ್ನ ವಿಜೆಟ್ ಗಳಿಗೆ ವಿಭಿನ್ನ ರೀತಿಯ ಕಸ್ಟಮೈಸೇಶನ್ ಆಯ್ಕೆಗಳನ್ನು ಬಿಸ್ನೆಸ್ ಕ್ಯಾಲೆಂಡರ್ ನೀಡುತ್ತದೆ.

ಗೂಗಲ್ ಕ್ರೋಮ್ ಬದಲಿಗೆ ಬಳಸಿ ಫಯರ್ಫಾಕ್ಸ್

ಗೂಗಲ್ ಕ್ರೋಮ್ ಬದಲಿಗೆ ಬಳಸಿ ಫಯರ್ಫಾಕ್ಸ್

ನಮ್ಮ ಆಂಡ್ರಾಯ್ಡ್ ಸಾಧನಗಳಿಗೆ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಬ್ರೌಸರ್ ಎಂದರೆ ಅದು ಗೂಗಲ್ ಕ್ರೋಮ್. ಆದರೆ ಇನ್ನೂ ಉತ್ತಮ ಅನುಭವ ಪಡೆಯಬೇಕಾದರೆ ಬಳಸಿ ಫಯರ್ಫಾಕ್ಸ್ ಬ್ರೌಸರ್. ಮೊಝಿಲ್ಲಾ ಇತ್ತೀಚೆಗಷ್ಟೇ ತನ್ನ ಫಯರ್ಫಾಕ್ಸ್ ಬ್ರೌಸರ್ ನ ಸುಧಾರಿತ ಆವೃತ್ತಿಯೊಂದನ್ನು ಹೊರತಂದಿದೆ. ಈ ಹೊಸ ಆವೃತ್ತಿಯು ಗೂಗಲ್ ಕ್ರೋಮ್ ಗಿಂತಲೂ ಉತ್ತಮ ಯೂಸರ್ ಇಂಟರ್ಫೇಸ್ ಹೊಂದಿದೆ. ಇದು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದಲ್ಲದೆ ವೆಬ್ ಬ್ರೌಸಿಂಗ್ ಅನುಭವವನ್ನು ಉತ್ತಮವಾಗಿಸುತ್ತದೆ. ಇದರ ಫೀಚರ್ಗಳು ಕ್ರೋಮ್ ನಂತೆಯೇ ಇದ್ದು ಫಯರ್ಫಾಕ್ಸ್ ಬಳಸುವಾಗ ನೀವು ಕ್ರೋಮ್ ಅನ್ನು ಖಂಡಿತ ಮಿಸ್ ಮಾಡುವುದಿಲ್ಲ.

ಗೂಗಲ್ ಕೀಪ್ ಗೆ ಪರ್ಯಾಯ ಆಪ್ ಎವರ್ನೋಟ್

ಗೂಗಲ್ ಕೀಪ್ ಗೆ ಪರ್ಯಾಯ ಆಪ್ ಎವರ್ನೋಟ್

ನಿಮ್ಮ ಫೈಲ್ಗಳನ್ನು ವ್ಯವಸ್ಥಿತವಾಗಿರಿಸಲು ಗೂಗಲ್ ಕೀಪ್ ಉಪಯುಕ್ತ ಆಪ್ ಆಗಿದ್ದು ಎವರ್ನೋಟ್ ಅದಕ್ಕಿಂತಲೂ ಉತ್ತಮ ಆಪ್ ಆಗಿದೆ. ಎವರ್ನೋಟ್ ನಿಮ್ಮ ಪ್ರಾಜೆಕ್ಟ್ಗಳಿಗೆ ಫೋಲ್ಡರ್ಗಳನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದಲ್ಲದೆ ಅದರಲ್ಲಿ ನೀವು ನೋಟ್ಬುಕ್ ಗಳನ್ನೂ ಸೃಷ್ಟಿಸಬಹುದಾಗಿದೆ. ಈ ನೋಟ್ಬುಕ್ಗಳು ಅನಿಯಮಿತ ಪೇಜ್ಗಳನ್ನು ಹೊಂದಬಹುದು. ಅಷ್ಟೇ ಅಲ್ಲದೆ ಎವರ್ನೋಟ್ ನಲ್ಲಿ ನೀವು ವೆಬ್ ನ ಲೇಖನಗಳ ತುಣುಕುಗಳನ್ನು ಕಾಪಿ ಮಾಡಬಹುದು, ಸ್ಕೆಚ್ ಮಾಡಬಹುದು ಮತ್ತು ಟು-ಡು-ಲಿಸ್ಟ್ ಅನ್ನು ತಯಾರಿಸಬಹುದು. ನೀವು ಎವರ್ನೋಟ್ ನಲ್ಲಿ ಬಿಸ್ನೆಸ್ ಕಾರ್ಡ್ ಗಳನ್ನು ವ್ಯವಸ್ಥಿತವಾಗಿ ಜೋಡಿಸಬಹುದಲ್ಲದೆ ಡಾಕ್ಯುಮೆಂಟ್ ಗಳನ್ನು ಸೇವ್ ಮಾಡಬಹುದು. ಒಟ್ಟಾಗಿ ಹೇಳುವುದಾದರೆ ನಿಮ್ಮ ಎಲ್ಲಾ ಫೈಲ್ಗಳನ್ನು ವ್ಯವಸ್ಥಿತವಾಗಿರಿಸಲು ಎವರ್ನೋಟ್ ಉತ್ತಮ ಪರಿಹಾರವಾಗಿದ್ದು ಇದು ನಿಮ್ಮ ಜೀವನವನ್ನು ಸರಳವಾಗಿಸುವುದರಲ್ಲಿ ಸಂಶಯವಿಲ್ಲ.

Here's how the Face ID of the newly launched Oppo A83 works (KANNADA)
ಸಾರಾಂಶ

ಸಾರಾಂಶ

ಜನಪ್ರಿಯ ಗೂಗಲ್ ನ ಆಪ್ಗಳಿಗೆ ನೀವು ಪ್ಲೇಸ್ಟೋರ್ ನಲ್ಲೇ ಪರ್ಯಾಯ ಆಪ್ ಗಳನ್ನು ಪಡೆಯಬಹುದಾಗಿದೆ. ನಾವಿಲ್ಲಿ ಐದು ಉತ್ತಮ ಪರ್ಯಾಯ ಆಪ್ಗಳನ್ನು ಸೂಚಿಸಿದ್ದೇವೆ. ಅದನ್ನು ಬಳಸಿ ನಿಮ್ಮ ಅನುಭವವನ್ನು ಖಂಡಿತ ತಿಳಿಸಿ. ಅಲ್ಲದೆ ಪ್ಲೇಸ್ಟೋರ್ ನಲ್ಲಿ ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿರುವ ಗೂಗಲ್ ಆಪ್ಗಳಿಗೆ ಮತ್ತಷ್ಟು ಪರ್ಯಾಯ ಆಪ್ಗಳನ್ನು ಹುಡುಕಿ , ಬಳಸಿ ಮತ್ತು ಇತರರೊಂದಿಗೂ ಹಂಚಿಕೊಳ್ಳಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Best alternatives to popular Google apps on Android. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot