ನಿಮ್ಮ ಫಿಟ್ನೆಸ್ ಹೇಗಿದೆ..? ಟ್ರಾಕ್ ಮಾಡಲಿವೆ ಈ ಆಪ್ ಗಳು..!!!

Posted By: Precilla Dias

  ಇಂದಿನ ದಿನದಲ್ಲಿ ಯುವ ಜನತೆಯು ಹೆಚ್ಚು ಫಿಟ್ ನೆಸ್ ಕಡೆಗೆ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಫಿಟ್ ನೆಸ್ ಟ್ರಾಕಿಂಗ್ ಇಂಡೆಸ್ಟ್ರಿಯೂ ವೇಗವಾಗಿ ಬೆಳೆಯುತ್ತಿದ್ದು, ತಮ್ಮ ಕೈನಲ್ಲಿರುವ ಮೊಬೈಲ್ ನಲ್ಲೇ ತಮ್ಮ ಫಿಟ್ ನೆಸ್ ಮಾಹಿತಿ ಪಡೆಯಲು ಉತ್ಸುಕವಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಫಿಟ್ ಬಿಟ್ ಆಪ್ ಗಳ ಮಾಹಿತಿ ಇಲ್ಲಿದೆ.

  ನಿಮ್ಮ ಫಿಟ್ನೆಸ್ ಹೇಗಿದೆ..? ಟ್ರಾಕ್ ಮಾಡಲಿವೆ ಈ ಆಪ್ ಗಳು..!!!

  ಈ ಆಪ್ ಗಳನ್ನು ನಿಮ್ಮ ಫಿಟ್ ಬಿಟ್ ನೊಂದಿಗೆ ಲಿಂಕ್ ಮಾಡಬಹುದಾಗಿದ್ದು, ಇವುಗಳಲ್ಲಿ ರನಿಂಗ್ ಆಪ್ ಗಳು, ಕ್ಯಾಲರಿ ಕೌಟ್ ಆಪ್ ಗಳು, ಸೆಪ್ ಚಾಲೆಂಜ್ ಆಪ್ ಗಳನ್ನು ಕಾರಬಹುದಾಗಿದ್ದು, ಅವುಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಸ್ಟರವ:

  ಈ ಆಪ್ ಜಿಪಿಎಸ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ರನ್ನಿಂಗ್ ಮತ್ತು ಸೈಕಲಿಂಗ್ ಅನ್ನು ಟ್ರಾಕಿಂಗ್ ಮಾಡುವ ಮತ್ತು ಅನಲೈಸ್ ಆಪ್ ಗಳಲ್ಲಿ ಒಂದಾಗಿದೆ. ಈ ಆಪ್ ನೀವು ರನ್ ಮಾಡಿದ ಮತ್ತು ಸೈಕಲಿಂಗ್ ಮಾಡಿದ ಮಾರ್ಗದ ಸಂಪೂರ್ಣ ವಿವರವನ್ನು ನೀಡಲಿದೆ. ಅಲ್ಲದೇ ಇದು ಪ್ರೀಮಿಯಮ್ ವರ್ಷನ್ ಸಹ ಇದ್ದು, ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.

  ಮ್ಯಾಪ್ ಮೈ ರನ್:

  ರನ್ನಿಂಗ್ ಟ್ರಾಕ್ ಮಾಡಲು ಸದ್ಯ ಲಭ್ಯವಿರುವ ಆಪ್ ಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಇದು ರನ್ನಿಂಗ್ ಮಾರ್ಗವನ್ನು ಟ್ರಾಕ್ ಮಾಡುವುದಲ್ಲದೇ ಅದೇ ಹೊಸ ಮಾರ್ಗವನ್ನು ಸೂಚಿಸಲಿದೆ. ಅಲ್ಲದೇ ಅದೇ ನಿಮಗೊಂದು ರೂಟ್ ಮ್ಯಾಪ್ ಅನ್ನು ಹಾಕಿಕೊಡಲಿದೆ. ಅಲ್ಲದೇ ನೀವು ಓಡಾಡುವ ದಾರಿಯಲ್ಲೇ ಮ್ಯಾಪ್ ಹಾಕಿಕೊಡಲಿದೆ.

  ಮೈ ಫಿಟ್ನೆಸ್ ಪಲ್:

  ಕ್ಯಾಲರಿ ಕೌಂಟಿಗ್ ಬಗ್ಗೆ ಮಾಹಿತಿ ಬೇಕಾದಲ್ಲಿ ಮೈ ಫಿಟ್ನೆಸ್ ಪಲ್ ಹೆಚ್ಚಿನ ಸಹಾಯಕಾರಿಯಾಗಲಿದ್ದು, ನಿಮ್ಮ ದಿನ ನಿತ್ಯದ ಊಟ ತಿಂಡಿಯನ್ನು ಟ್ರಾಕ್ ಮಾಡಿ. ಕ್ಯಾಲರಿ ಪ್ಲಾನಿಂಗ್ ಮಾಡಲಿದೆ. ಅಲ್ಲದೇ 1 ಮಿಲಿಯನ್ ಗೂ ಹೆಚ್ಚಿನ ವಿವಿಧ ಅಡುಗೆ ಖಾದ್ಯಗಳ ಬಗ್ಗೆ ಮಾಹಿತಿಯನ್ನು ಇದು ಹೊಂದಿದೆ ಎನ್ನಲಾಗಿದೆ, ಇದು ಬೇರೆ ಬೇರೆ ಫಿಟ್ ಬಿಟ್ ನೊಂದಿಗೆ ಸಿಂಕ್ ಆಗಲಿದೆ.

  ಫೈಂಡ್ ಮೈ ಫಿಟ್ ಬಿಟ್:

  ಈ ಆಪ್ ಸದ್ಯ ಮಾರುಕಟ್ಟೆಯಲ್ಲಿರುವ ಫಿಟ್ ಬಿಟ್ ಮತ್ತು ಬ್ಲೂಟೂತ್ ಮೂಲಕ ನಿಮ್ಮ ಫಿಟ್ ಬಿಟ್ ಹೂಡುಕಲು ಸಹಾಯಕವಾಗಲಿದೆ. ನಿಮ್ಮ ಫಿಟ್ ಬಿಟ್ ಸಿಗದಿದ್ದ ಸಂದರ್ಭದಲ್ಲಿ ಸಹಾಯ ಮಾಡಲಿದೆ.

  ಡ್ರೈವ್ ಬಿಟ್:

  ಇದು ನಿಮ್ಮ ಡೈಲಿ ಫಿಟ್ ನೆಸ್ ಅಳತೆ ಮಾಡಲು ಇದು ಸಹಾಯಕಾರಿಯಾಗಲಿದೆ. ಅಲ್ಲದೇ ದೀರ್ಘಕಾಲದ ಫಿಟ್ ನೆಸ್ ಗುರಿ ಇಟ್ಟುಕೊಂಡವರಿಗೆ ಇದು ಬಹಳ ಸಹಾಯಕಾರಿಯಾಗದೆ. ಇದರಲ್ಲಿ ನೀವು ಮ್ಯಾನುವಲ್ ಇನ್ ಪುಟ್ ನೀಡಬಹುದಾಗಿದೆ. ಅಲ್ಲದೇ ನಿಮ್ಮ ಟ್ರೈವಿಂಗ್ ಆಕ್ಟಿವಿಟಿಗಳನ್ನು ಟ್ರಾಕ್ ಮಾಡಲು ಇದು ಸಹಾಯಕವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  When it comes to the fitness tracking industry, Fitbit is the forerunner with some devices. Even though it doesn't a large portfolio of devices, it has many third party applications that interface very well with their trackers.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more