ಆಂಡ್ರಾಯ್ಡ್ ಗಾಗಿ ಟಾಪ್ 5 ಬೆಸ್ಟ್ ವೈಫೈ ಹಾಟ್ ಸ್ಪಾಟ್ ಆಪ್ಸ್ ಗಳು

By Gizbot Bureau
|

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ವೈಫೈ ಹಾಟ್ ಸ್ಪಾಟ್ ಆಪ್ಸ್ ಗಳು ಲಭ್ಯವಿದೆ. ಆದರೆ ಎಲ್ಲವೂ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ನಾವು ಈ ಲೇಖನದಲ್ಲಿ ಮ್ಯಾನುವಲ್ ಆಗಿ ಪರೀಕ್ಷೆ ಮಾಡಿದ ಕೆಲವು ಆಪ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಹಾಗಾಗಿ ಈ ಆಪ್ ಗಳು 100% ಕೆಲಸ ಮಾಡುತ್ತದೆ ಮತ್ತು ಹತ್ತಿರದ ಉಚಿತ ಹಾಟ್ ಸ್ಪಾಟ್ ನ್ನು ಹುಡುಕುವುದಕ್ಕೆ ನೆರವು ನೀಡುತ್ತದೆ. ಹಾಗಾದ್ರೆ ಬೆಸ್ಟ್ ಆಂಡ್ರಾಯ್ಡ್ ಆಪ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್

ನಮ್ಮ ಸುತ್ತಲಿನ ಪ್ರದೇಶವನ್ನು ಗಮನಿಸಿದಾಗ ಹೆಚ್ಚುಕಡಿಮೆ ಪ್ರತಿಯೊಬ್ಬರ ಕೈಯಲ್ಲೂ ಕೂಡ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಇದ್ದೇ ಇರುತ್ತದೆ. ಪ್ರತಿಯೊಂದು ವಿಭಿನ್ನ ಆಪರೇಟಿಂಗ್ ಸಿಸ್ಟಮ್ ಗಳಿಗೆ ಹೋಲಿಕೆ ಮಾಡಿದರೆ ಆಂಡ್ರಾಯ್ಡ್ ನಲ್ಲಿ ಲಭ್ಯವಿರುವ ಆಪ್ ಗಳ ಸಂಖ್ಯೆ ಅಧಿಕವಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಆಪ್ ಗಳ ಬಗ್ಗೆಯೇ ಹೇಳುತ್ತಾ ಹೋದರೆ ಪ್ರತಿಯೊಂದು ವಿಭಿನ್ನ ಕೆಲಸಕ್ಕೂ ಕೂಡ ವಿಭಿನ್ನ ಆಪ್ ಗಳಿರುತ್ತದೆ. ಲಾಂಚರ್ ಆಪ್ ಗಳು, ವೈಫೈ ಆಪ್ ಗಳು, ನೋಟ್ ಟೇಕಿಂಗ್ ಆಪ್ ಗಳು ಇತ್ಯಾದಿ.

ಸಾಮಾನ್ಯವಾಗಿ ಬಿಲ್ಟ್ ಇನ್ ಹಾಟ್ ಸ್ಪಾನ್ ಫೀಚರ್ ಆಂಡ್ರಾಯ್ಡ್ ನಲ್ಲಿ ಬಹಳ ಸುಲಭವಾಗಿ ಆಪರೇಟ್ ಮಾಡುವಂತಿರುತ್ತದೆ. ಆದರೆ ಒಂದು ವೇಳೆ ನೀವು ಥರ್ಡ್ ಪಾರ್ಟಿ ಹಾಟ್ ಸ್ಪಾಟ್ ಆಪ್ಸ್ ನ್ನು ಬಳಕೆ ಮಾಡದೇ ಇದ್ದರೆ ಸ್ಟಾಕ್ ಹಾಟ್ ಸ್ಪಾಟ್ ಫೀಚರ್ ಪ್ರತಿಯೊಂದು ಉಪಯುಕ್ತ ಫೀಚರ್ ಗಳನ್ನು ಹೊಂದಿರುವುದಿಲ್ಲ.

ಆಂಡ್ರಾಯ್ಡ್ ಗಾಗಿ ಟಾಪ್ 5 ಬೆಸ್ಟ್ ವೈಫೈ ಹಾಟ್ ಸ್ಪಾಟ್ ಆಪ್ಸ್ ಗಳು

ಆಂಡ್ರಾಯ್ಡ್ ಗಾಗಿ ಟಾಪ್ 5 ಬೆಸ್ಟ್ ವೈಫೈ ಹಾಟ್ ಸ್ಪಾಟ್ ಆಪ್ಸ್ ಗಳು

ದಿನದಿಂದ ದಿನಕ್ಕೆ ಮೊಬೈಲ್ ಡಾಟಾ ಪ್ಲಾನ್ ಗಳು ಬಹಳ ಕಡಿಮೆ ಅಂದರೆ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಆದರೂ ಕೂಡ ವೈಫೈ ಹಾಟ್ ಸ್ಪಾಟ್ ಗಳ ಬಳಕೆಯನ್ನು ಕಡಿಮೆಗೊಳಿಸಲು ಸಾಧ್ಯವಾಗಿಲ್ಲ. ನೀವಿದರಲ್ಲಿ ಉಚಿತ ಮತ್ತು ಅನಿಯಮಿತ ಅಂತರ್ಜಾಲದ ಆಕ್ಸಿಸ್ ನ್ನು ಹೊಂದಬಹುದಾಗಿದೆ. ಹಾಗಾಗಿ ಈ ಲೇಖನದಲ್ಲಿ ನಾವು ಆಂಡ್ರಾಯ್ಡ್ ಗಾಗಿ ಬೆಸ್ಟ್ ವೈಫೈ ಹಾಟ್ ಸ್ಪಾಟ್ ಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಇವುಗಳು ನಿಮಗೆ ಹತ್ತಿರದ ಉಚಿತ ಹಾಟ್ ಸ್ಪಾಟ್ ಗಳಿಗೆ ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.

#1 ವೈಫೈ ಮ್ಯಾಪ್

#1 ವೈಫೈ ಮ್ಯಾಪ್

ವೈಫೈ ಮ್ಯಾಪ್ ಒಂದು ಅತ್ಯುತ್ತಮವಾಗಿರುವ ವೈಫೈ ಹಾಟ್ ಸ್ಪಾನ್ ಆಪ್ ಆಗಿದ್ದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಬಹುದಾದ ಆಪ್ ಗಳಲ್ಲಿ ಟಾಪ್ ನಲ್ಲಿದೆ. ವೈಫೈ ಮ್ಯಾಪ್ ಸಾಮಾನ್ಯವಾಗಿ ಬಳಕೆದಾರರು ತಮ್ಮ ವೈಫೈ ಹಾಟ್ ಸ್ಪಾಟ್ ನ ಪಾಸ್ ವರ್ಡ್ ಗಳನ್ನು ಹಂಚಿಕೊಳ್ಳುವ ಫ್ಲ್ಯಾಟ್ ಫಾರ್ಮ್ ಆಗಿದೆ.ಸದ್ಯ ಗೂಗಲ್ ಪ್ಲೇ ಸ್ಟೋರ್ ಹೇಳುವ ಪ್ರಕಾರ ವೈಫೈ ಮ್ಯಾಪ್ ನ್ನು ಸುಮಾರು 100 ಮಿಲಿಯನ್ ಬಳಕೆದಾರರು ಬಳಸುತ್ತಿದ್ದಾರೆ ಮತ್ತು ಸುಮಾರು 120 ಮಿಲಿಯನ್ ವೈಫೈ ನೆಟ್ ವರ್ಕ್ ನ್ನು ಇದು ಹೊಂದಿದೆ. ಈ ಆಪ್ ಇಂಟರ್ಯಾಕ್ಟೀವ್ ಮ್ಯಾಪ್ ನಲ್ಲಿ ಹಾಟ್ ಸ್ಪಾಟ್ ನ್ನು ಡಿಸ್ಪೇಲ ಮಾಡುತ್ತದೆ.ಹಾಗಾಗಿ ವೈಫೈ ಮ್ಯಾಪ್ ಆಂಡ್ರಾಯ್ಡ್ ನಲ್ಲಿ ಬಳಸಬಹುದಾದ ಬೆಸ್ಟ್ ಆಪ್ ಗಳಲ್ಲಿ ಒಂದೆನಿಸಿದೆ.

#2 ವೈಮನ್ ನಿಂದ ಉಚಿತ ವೈಫೈ (Free WiFi from Wiman)

#2 ವೈಮನ್ ನಿಂದ ಉಚಿತ ವೈಫೈ (Free WiFi from Wiman)

ವೈಮನ್ಸ್ ನ ಉಚಿತವಾಗಿರುವ ವೈಫೈ ಆಪ್ ಮತ್ತೊಂದು ಬೆಸ್ಟ್ ಆಂಡ್ರಾಯ್ಡ್ ಆಪ್ ಆಗಿದ್ದು ಹತ್ತಿರದ ವೈಫೈ ಹಾಟ್ ಸ್ಪಾಟ್ ನ್ನು ಹುಡುಕಾಡುವುದಕ್ಕೆ ಬಹಳ ನೆರವಾಗುತ್ತದೆ.ಇದರ ಪ್ರಮುಖವಾದ ಗ್ರೇಟ್ ವಿಷಯ ಏನೆಂದರೆ ಇದರ ಡಾಟಾಬೇಸ್ ಸುಮಾರು 60 ಮಿಲಿಯನ್ ಹಾಟ್ ಸ್ಪಾನ್ ಗಳನ್ನು ಹೊಂದಿದೆ.ವೈಫೈ ಮ್ಯಾಪ್ ನಂತೆಯೇ ಫ್ರೀ ವೈಫೈ ಕೂಡ ಇಂಟರ್ಯಾಕ್ಟೀವ್ ಮ್ಯಾಪ್ ನ್ನು ಹೊಂದಿದ್ದು ಕೆಲವು ಲೊಕೇಷನ್ ನಲ್ಲಿರುವ ವೈಫೈ ಹಾಟ್ ಸ್ಪಾಟ್ ಗಳನ್ನು ತೋರಿಸುತ್ತದೆ. ಇದರಲ್ಲಿರುವ ಬಹಳ ಆಕರ್ಷಣೀಯವಾಗಿರುವ ವಿಚಾರವೇನೆಂದರೆ ಇದು ನೆಟ್ ವರ್ಕ್ ಮತ್ತು ಹಾಟ್ ಸ್ಪಾಟ್ ನ ವೇಗವನ್ನು ಕೂಡ ತೋರಿಸುತ್ತದೆ.

#3 ವೈಫೈ ಮ್ಯಾಪರ್

#3 ವೈಫೈ ಮ್ಯಾಪರ್

ಓಪನ್ ಸಿಗ್ನಲ್ ನ ವೈಫೈಮ್ಯಾಪರ್ ಕೂಡ ಈ ಲಿಸ್ಟ್ ನಲ್ಲಿರುವ ಬೆಸ್ಟ್ ವೈಫೈ ಆಪ್ ಆಗಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಕ್ಕಾಪಟ್ಟೆ ಪ್ರಸಿದ್ಧಿಯಾಗಿದೆ ಮತ್ತು ಹತ್ತಿರದ ವೈಫೈ ಹಾಟ್ ಸ್ಪಾಟ್ ನ್ನು ಗುರುತಿಸುವುದಕ್ಕೆ ಇದು ನೆರವು ನೀಡುತ್ತದೆ. ಮೇಲೆ ತಿಳಿಸಿರುವ ಎರಡು ಆಪ್ ಗಳಂತೆ ವೈಫೈ ಮ್ಯಾಪರ್ ಕೂಡ ಬಳಕೆದಾರರಿಗೆ ಹಾಟ್ ಸ್ಪಾಟ್ ನೆಟ್ ವರ್ಕಿನ ಪಾಸ್ ವರ್ಡ್ ಹಂಚಿಕೆಗೆ ನೆರವು ನೀಡುತ್ತದೆ. ನೀವು ನಂಬಲಿಕ್ಕಿಲ್ಲ. ವೈಫೈಮ್ಯಾಪರ್ ಸದ್ಯ 500 ಮಿಲಿಯನ್ ಹಾಟ್ ಸ್ಪಾಟ್ ಲಿಸ್ಟ್ ನ್ನು ಹೊಂದಿದೆ. ಇದನ್ನು ಇಂಟರ್ನೆಟ್ ನಲ್ಲಿ ಉಚಿತವಾಗಿ ಆಕ್ಸಿಸ್ ಮಾಡಬಹುದು. ಹಾಗಾಗಿ 2019 ರಲ್ಲಿ ಬಳಕೆ ಮಾಡಬಹುದಾಗಿದ್ದ ಬೆಸ್ಟ್ ವೈಫೈ ಹಾಟ್ ಸ್ಪಾಟ್ ಆಪ್ ಗಳಲ್ಲಿ ವೈಫೈ ಮ್ಯಾಪರ್ ಕೂಡ ಒಂದು.

#4 ವೈಫೈ ಫೈಂಡರ್

#4 ವೈಫೈ ಫೈಂಡರ್

ಒಂದು ವೇಳೆ ನೀವು ಹತ್ತಿರದ ಉಚಿತ ವೈಫೈ ಹಾಟ್ ಸ್ಪಾಟ್ ಏರಿಯಾವನ್ನು ಹುಡುಕುವುದಕ್ಕಾಗಿ ಯಾವುದೇ ಮಾರ್ಗವನ್ನು ಹುಡುಕಾಡುತ್ತಿದ್ದರೆ ವೈಫೈ ಫೈಂಡರ್ ನ್ನು ಬಳಕೆ ಮಾಡಿ ನೋಡಬಹುದು. ವೈಫೈ ಫೈಂಡರ್ ಕೂಡ ಲಿಸ್ಟ್ ನಲ್ಲಿರುವ ಇತರೆ ಹಾಟ್ ಸ್ಪಾಟ್ ಆಪ್ ಗಳಂತೆಯೇ ಕಾರ್ಯ ನಿರ್ವಹಿಸುತ್ತದೆ. ಹಾಟ್ ಸ್ಪಾಟ್ ಮೂಲಕ ಉಚಿತವಾಗಿ ಇಂಟರ್ನೆಟ್ ಬಳಸುವುದಕ್ಕಾಗಿ ಯಾವ ಬಳಕೆದಾರರು ಪಾಸ್ ವರ್ಡ್ ಹಂಚಿಕೆಯನ್ನು ಮಾಡಿಕೊಳ್ಳುತ್ತಾರೋ ಅಂತಹ ದೊಡ್ಡ ವೈಫೈ ಬಳಕೆದಾರರ ಸಮೂಹವನ್ನು ಇದು ಹೊಂದಿದೆ.ಒಂದು ವೇಳೆ ನಿಮ್ಮ ಬಳಿಯೂ ಉಚಿತ ಅನಿಯಮಿತ ಇಂಟರ್ ನೆಟ್ ಇದ್ದಲ್ಲಿ ನೀವೂ ಕೂಡ ನಿಮ್ಮ ನೆಟ್ ವರ್ಕ್ ಪಾಸ್ ವರ್ಡ್ ನ್ನು ಶೇರ್ ಮಾಡಬಹುದು. ಹಾಗಾಗಿ ವೈಫೈ ಫೈಂಡರ್ ಕೂಡ 2019 ರಲ್ಲಿ ಬಳಕೆ ಮಾಡಬಹುದಾದ ಆಂಡ್ರಾಯ್ಡ್ ನ ವೈಫೈ ಹಾಟ್ ಸ್ಪಾಟ್ ಆಪ್ ಗಳಲ್ಲಿ ಪ್ರಧಾನವಾಗಿದೆ.

#5 ವೈಫೈ ಅನಲೈಸರ್

#5 ವೈಫೈ ಅನಲೈಸರ್

ವೈಫೈ ಅನಲೈಸರ್ ಮತ್ತೊಂದು ಬೆಸ್ಟ್ ವೈಫೈ ಆಪ್ಸ್ ಆಗಿದ್ದು ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರೂ ಕೂಡ ಖಂಡಿತ ಬಳಸಬಹುದು. ಇದು ಈ ಲೇಖನದಲ್ಲಿ ಹೇಳಿರುವ ಬೇರೆ ಎಲ್ಲಾ ಆಪ್ಸ್ ಗಳಿಗಿಂತ ವಿಭಿನ್ನವಾಗಿದೆ.ಇದು ಬಳಕೆದಾರರಿಗೆ ಉಚಿತ ವೈಫೈ ಹಾಟ್ ಸ್ಪಾಟ್ಸ್ ಗಳ ಜೊತೆಗೆ ಕನೆಕ್ಟ್ ಆಗುವುದಕ್ಕೆ ಸಹಾಯ ಮಾಡುವ ಬದಲಾಗಿ ಎಲ್ಲಾ ಹಾಟ್ ಸ್ಪಾಟ್ ಗಳನ್ನು ಸ್ಕ್ಯಾನ್ ಮಾಡುವುದಕ್ಕೆ ಬಳಕೆದಾರರಿಗೆ ಇದು ನೆರವು ನೀಡುತ್ತದೆ ಮತತು ಅತ್ಯಂತ ಕಡಿಮೆ ದಟ್ಟಣೆ ಇರುವ ಚಾನಲ್ ನ್ನು ಇದು ಗುರುತಿಸುತ್ತದೆ.ಹಾಗಾಗಿ ಅನಲೈಸರ್ ಬೆಸ್ಟ್ ವೈಫೈ ಸಿಗ್ನಲ್ ಅನಲೈಸರ್ ಆಪ್ ಆಗಿದ್ದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಬಹುದು.

ಇವುಗಳು ಬೆಸ್ಟ್ 5 ವೈಫೈ ಹಾಟ್ ಸ್ಪಾಟ್ ಆಪ್ ಗಳಾಗಿದ್ದು ಆಂಡ್ರಾಯ್ಡ್ ನಲ್ಲಿ ಬಳಕೆ ಮಾಡಬಹುದಾಗಿದೆ. ಈ ಆಪ್ ಗಳ ಬಗ್ಗೆ ನಿಮ್ಮ ಆಭಿಪ್ರಾಯವೇನು ಎಂಬ ಬಗ್ಗೆ ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Most Read Articles
Best Mobiles in India

English summary
Best Apps To Use Wi-Fi Hotspot On Your Android Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X