ಇಂಟರ್‌ನೆಟ್ ಇಲ್ಲದೆಯೂ ಕೆಲಸ ಮಾಡುವ ಅತ್ಯುತ್ತಮ ಆಪ್‌ಗಳು!!

|

ಕ್ಷಣ ಕ್ಷಣಕ್ಕೂ ನಮ್ಮನ್ನು ಕಾಡುವ ಫೇಸ್‌ಬುಕ್, ವಾಟ್ಸ್‌ಆಪ್ ಉಪಯೋಗಿಸದೆ ಇರುವುದಾದರೂ ಹೇಗೆ.? ಇಂತಹ ಪರಿಸ್ಥಿತಿಯನ್ನು ತಂದೊಡ್ಡುವ ಇಂಟರ್‌ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್ ಕೈನಲ್ಲಿದ್ದರೆ ಆಗ ಆಗುವ ತಳಮಳವೇ ಬೇರೆ. ಏನೋ ಒಂದು ಕಳೆದುಕೊಂಡ ಅನುಭವ. ಹಾಗಂತ ಸ್ಮಾರ್ಟ್‌ಫೋನ್‌ ಅನ್ನು ನಾವು ಮಾತ್ರ ಕೈಯಿಂದ ಬಿಡುವುದಿಲ್ಲ.

ಹೌದು, ಇಂಟರ್‌ನೆಟ್ ಇಲ್ಲದಿದರೂ ನಾವು ನಮ್ಮ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತೇವೆ. ಈ ಸಮಯದಲ್ಲಿ ಇಂಟರ್‌ನೆಟ್ ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸುತ್ತೇವೆ. ಸ್ಮಾರ್ಟ್‌ಫೋನ್‌ನಲ್ಲಿನ ಇರುವ ಇತರ ಆಪ್‌ಗಳನ್ನು ನಾವು ತೆರೆದು ನೋಡುತ್ತೇವೆ ಅಲ್ಲವೇ.? ಇಂತಹ ಪರಿಸ್ಥಿತಿ ನಿಮಗೂ ಸಹ ಎದುರಾಗಿಯೇ ಇರುತ್ತದೆ ಎಂಬುದು ನನ್ನ ಅಭಿಪ್ರಾಯ.

ಇಂಟರ್‌ನೆಟ್ ಇಲ್ಲದೆಯೂ ಕೆಲಸ ಮಾಡುವ ಅತ್ಯುತ್ತಮ ಆಪ್‌ಗಳು!!

ಹಾಗಾಗಿ, ಇಂದಿನ ಲೇಖನದಲ್ಲಿ ಇಂಟರ್‌ನೆಟ್ ಇಲ್ಲದೆ ಉಪಯೋಗಿಸಬಹುದಾದ ಅತ್ಯುತ್ತಮ ಆಪ್‌ಗಳು ಯಾವುವು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ನಾವು ತಿಳಿಸಿಕೊಡುತ್ತೇನೆ. ಇಂಟರ್‌ನೆಟ್ ಇಲ್ಲದೆ ಉಪಯೋಗಿಸಬಹುದಾದ ಈ ಆಪ್‌ಗಳು ನಿಮ್ಮ ಬೇಸರವನ್ನು ಕಳೆಯುವುದರ ಜೊತೆಗೆ, ನಿಮಗೆ ಬೇಕಿರುವ ಅತ್ಯವಶ್ಯಕ ಕಾರ್ಯಗಳನ್ನು ಸಹ ಪೂರೈಸುತ್ತವೆ.

#1 ಅಮೇಜಾನ್ ಕಿಂಡಲ್ ( Amazon Kindle)

#1 ಅಮೇಜಾನ್ ಕಿಂಡಲ್ ( Amazon Kindle)

ಅಮೇಜಾನ್ ಕಿಂಡಲ್ ಒಂದು ಇ-ಬುಕ್ ಆಗಿದ್ದು, ನಿಮಗೇನಾದರೂ ಬುಕ್‌ಗಳನ್ನು ಓದುವ ಹವ್ಯಾಸವಿದ್ದರೆ ಅಮೇಜಾನ್ ಕಿಂಡಲ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆಫ್‌ಲೈನ್‌ನಲ್ಲಿ ಉಪಯೋಗಿಸಬಹುದಾದ ಅತ್ಯುತ್ತಮ ಆಪ್‌ ಇದು.

#2 ಗೂಗಲ್ ಡ್ರೈವ್.(Google drive)

#2 ಗೂಗಲ್ ಡ್ರೈವ್.(Google drive)

ಇಂಟರ್‌ನೆಟ್ ಇಲ್ಲದೇ ಎಲ್ಲಾ ಡಾಕ್ಯುಮೆಂಟ್ಸ್‌ಗಳನ್ನು ಎಡಿಟ್ ಮಾಡುವ ಅವಕಾಶ ಗೂಗಲ್ ಡ್ರೈವ್ ನಲ್ಲಿದೆ. ಇನ್ನು ಎಡಿಟ್ ಮಾಡಿದ ತಂತ್ರಾಂಶಗಳನ್ನು ಆಪ್‌ ಮೂಲಕ ಸ್ಮಾರ್ಟ್‌ಫೋನ್‌ಗೆ ಸೇವ್ ಮಾಡಬಹುದಾದ್ದರಿಂದ ಗೂಗಲ್‌ ಡ್ರೈವ್ ಅತ್ಯವಶ್ಯಕ ಆಪ್‌.

#3 ಪಾಕೆಟ್ಸ್ (Pocket)

#3 ಪಾಕೆಟ್ಸ್ (Pocket)

ಅಂಕಣಗಳನ್ನು ದಿನವೂ ತಪ್ಪದೇ ಓದುವವರಿಗೆ ಪಾಕೆಟ್ಸ್ ಆಪ್‌ ಅತ್ಯುತ್ತಮ ಎನ್ನಬಹುದು. ಪಾಕೆಟ್ಸ್ ಆಪ್‌ನಲ್ಲಿ ಎಲ್ಲಾ ಆರ್ಟಿಕಲ್‌ಗಳು ಮೊದಲೇ ಸೇವ್ ಆಗಿರುವುದರಿಂದ ನಿಮಗೆ ಇಂಟರ್‌ನೆಟ್ ಅವಶ್ಯಕತೆ ಇರುವುದಿಲ್ಲ.

#4 ಗೂಗಲ್‌ ಟ್ರಾನ್ಸ್‌ಲೇಟ್( Google Translate)

#4 ಗೂಗಲ್‌ ಟ್ರಾನ್ಸ್‌ಲೇಟ್( Google Translate)

ಎಲ್ಲರಿಗೂ ತಿಳಿದಿರುವ ಬಹು ಉಪಯೋಗಿ ಆಪ್‌ ಗೂಗಲ್‌ ಟ್ರಾನ್ಸ್‌ಲೇಟ್ ಆಫ್‌ಲೈ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂದು ಎಷ್ಟೋ ಜನರಿಗೆ ತಿಳಿದಿರರುವುದಿಲ್ಲ. ಹಾಗಾಗಿ ಗೂಗಲ್‌ ಟ್ರಾನ್ಸ್‌ಲೆಟ್ ಆಪ್‌ ಅನ್ನು ತಕ್ಷಣವೇ ನಿಮ್ಮ ಮೊಬೈಲ್‌ನಲ್ಲಿ ಹೊಂದಿರಿ.

#5 ಗೂಗಲ್ ಮ್ಯಾಪ್ಸ್. ( Google Maps)

#5 ಗೂಗಲ್ ಮ್ಯಾಪ್ಸ್. ( Google Maps)

ಗೂಗಲ್‌ ಮ್ಯಾಪ್‌ ಆಫ್‌ಲೈನ್‌ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಆದರೆ, ಆನ್‌ಲೈನನಲ್ಲಿದ್ದಾಗಲೇ ನಮಗೆ ಬೇಕಾದ ನಗರಗಳ ಲೋಕೆಶನ್‌ಗಳನ್ನು ಸೇವ್‌ ಮಾಡಬಹದು. ಇದರಿಂದ ಆಫ್‌ಲೈನ್‌ನಲ್ಲಿಯೂ ನಿವು ದಾರಿಯನ್ನು ಕಂಡುಕೊಳ್ಳಬಹುದು.

#6 ಆಪ್‌ಲಾಕ್ (Applock)

#6 ಆಪ್‌ಲಾಕ್ (Applock)

ಇದು ನನ್ನ ನೆಚ್ಚಿನ ಆಪ್ ಆಗಿದ್ದು, ನಾನು ಕೆಲವು ವರ್ಷಗಳಿಂದ ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದೇನೆ. ಈ ಆಪ್ ನಿಮ್ಮ ಇತರೆ ಆಪ್‌ಗಳು ಸೇರಿದಂತೆ ಚಿತ್ರಗಳು ಅಥವಾ ವೀಡಿಯೊವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಯನ್ನು ನೀವು ಕಾಪಾಡಿಕೊಳ್ಳಬಹುದು.

Best Mobiles in India

English summary
Although mobile data and Wi-Fi are easier to come by than ever, there are still times (on vacation or at the end of the month) when you're in the e-dark and in need of an app that works offline.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X