ಕ್ರೋಮ್ ನಲ್ಲಿ ಫೇಸ್ ಬುಕ್ ಮೇಸೆಂಜರ್ ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರ..!

By Lekhaka
|

ಈ ವರ್ಷದಲ್ಲಿ ಜಾಗತಿಕವಾಗಿ ಹಲವಾರು ಸೈಬರ್ ಕ್ರೈಮ್ ಪ್ರಕರಣಗಳು ವರದಿಯಾಗಿದ್ದು, ಡಿಜಿಟಲ್ ಜೀವನ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ರಾಮ್ಸ್ ವೇರ್ ಗಳು ಮತ್ತು ಮಾಲ್ವೇರ್ ಗಳು ಈ ಹಿಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ದಾಳಿಯನ್ನು ನಡೆಸಿದ್ದು, ಭಾರೀ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ. ಇದೇ ಮಾದರಿಯಲ್ಲಿ ಹೊಸದಾಗಿ ಮತ್ತೊಂದು ಮಾಲ್ವೇರ್ ಕಾಣಿಸಿಕೊಂಡಿದೆ.

ಕ್ರೋಮ್ ನಲ್ಲಿ ಫೇಸ್ ಬುಕ್ ಮೇಸೆಂಜರ್ ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರ..!


ದಿನದಿಂದ ದಿನಕ್ಕೆ ಫೇಸ್ ಬುಕ್ ಮೇಸೆಂಜರ್ ಆಪ್ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಫೇಸ್ ಬುಕ್ ಮೇಸೆಂಜರ್ ಮೂಲಕ ದಾಳಿ ಮಾಡುವ ಡಿಗ್ ಮೈನ್ ಎನ್ನುವ ಮಾಲ್ವೇರ್ ವೊಂದು ಕಾಣಿಸಿಕೊಂಡಿದ್ದು, ಈಗಾಗಲೇ ಹಲವು ರಾಷ್ಟ್ರಗಳಲ್ಲಿ ತನ್ನ ಪರಕ್ರಮವನ್ನು ತೋರಿಸಿದ್ದು, ಭಾರತಕ್ಕೂ ಕಾಲಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಅತೀ ಹೆಚ್ಚು ಮಂದಿ ಕ್ರೋಮ್ ಬಳಕೆದಾರರಿದ್ದು, ಈ ಹಿನ್ನಲೆಯಲ್ಲಿ ಡಿಗ್ ಮೈನ್ ಮಾಲ್ವೇರ್ ಕ್ರೋಮ್ ಮೂಲಕವೇ ಹೆಚ್ಚಿನ ದಾಳಿಯನ್ನು ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಕ್ರೋಮ್ ನಲ್ಲಿ ಮೇಸೆಂಜರ್ ಬಳಕೆ ಮಾಡಿಕೊಳ್ಳುವವರು ಬೇರೆ ಬ್ರೌಸರ್ ಮೂಲಕ ಮೇಸೆಂಜರ್ ಬಳಕೆ ಮಾಡುವುದು ಸೂಕ್ತ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಯೂಟ್ಯೂಬ್ ಮಾದರಿಯಲ್ಲೇ ಅಮೇಜಾನ್ ಟ್ಯೂಬ್ ಲಾಂಚ್ ಮಾಡಲಿದೆಯೇ ಅಮೇಜಾನ್?ಯೂಟ್ಯೂಬ್ ಮಾದರಿಯಲ್ಲೇ ಅಮೇಜಾನ್ ಟ್ಯೂಬ್ ಲಾಂಚ್ ಮಾಡಲಿದೆಯೇ ಅಮೇಜಾನ್?

ಈ ಮಾಲ್ವೇರ್ ನಿಮ್ಮ ಎಲ್ಲಾ ಮಾಹಿತಿಯನ್ನು ಅಪಹರಿಸುವ ಸಾಧ್ಯತೆ ಇದ್ದು, ಇದರಿಂದ ನೀವು ಹೆಚ್ಚಿನ ಪ್ರಮಾಣದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಅಪರಿಚಿತರು ಕಳುಹಿಸುವ ಮೇಸೆಜ್ ಗಳನ್ನು ಫೈಲ್ಗಳನ್ನು ಓಪನ್ ಮಾಡದೆ ಇರವುದು ಸೂಕ್ತ ಎನ್ನಲಾಗಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!

ಈಗಾಗಲೇ ಮಾಲ್ವೇರ್ ಅನ್ನು ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇನ್ನು ನಿಯಂತ್ರಣಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಈ ಮಾಲ್ವೇರ್ ಕಾಟದಿಂದ ತಪ್ಪಿಸಿಕೊಳ್ಳಲು ನೀವು ಸೂಕ್ತವಾದ ಅಂಟಿ ವೈರಸ್ ಗಳನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತ.

Best Mobiles in India

English summary
A new cryptocurrency-mining bot, named "Digmine", that was first observed in South Korea, is spreading fast through Facebook Messenger across the world,

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X