ಈ ಒಂದು ವಿಚಿತ್ರ ಘಟನೆಯ ನಂತರ ಎಲ್ಲರೂ 'ಟ್ರೂ ಕಾಲರ್' ಆಪ್ ಡಿಲೀಟ್ ಮಾಡುತ್ತಿದ್ದಾರೆ!!

|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರೂ ಕಾಲರ್ ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ. ಹೌದು, ಸ್ಮಾರ್ಟ್‌ಫೋನ್ ಬಳಸುತ್ತಿರುವ ಹೆಚ್ಚಿನವರಿಗೆ ಟ್ರೂ ಕಾಲರ್ ಆಪ್ ಹೆಚ್ಚು ಉಪಯೋಗ ಎಂದು ಅನಿಸಬಹುದು. ಆದರೆ, ಟ್ರೂ ಕಾಲರ್ ಆಪ್ ಬಳಕೆಯೇ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಹೆಚ್ಚು ತೊಂದರೆ ಎಂದರೆ ನೀವು ನಂಬಲೇಬೇಕು.!

ಇತ್ತೀಚಿಗೆ ಟ್ರೂಕಾಲರ್ ಮತ್ತು ಫೇಸ್‌ಬುಕ್ ನಂಬಿಕೊಂಡು ಕನ್ನಡ ನಿರ್ದೇಶಕನ ಮೇಲೆ ಹಲ್ಲೆ ನಡೆದಿರುವ ವಿಚಿತ್ರ ಘಟನೆಯೊಂದು ನಡೆದ ನಂತರ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಶಿವಕುಮಾರ್.ಎನ್ ಎಂಬುವರನ್ನು ಹುಡುಕಲು ಹೋಗಿ ಕನ್ನಡದ ಓರ್ವ ನಿರ್ದೇಶಕನ ಮೇಲೆ ಹಲ್ಲೆ ನಡೆದಿರುವ ವಿಚಿತ್ರ ಘಟನೆಗೆ ಬೆಂಗಳೂರು ನಗರವೇ ಸಾಕ್ಷಿ ಆಗಿದೆ.!

ಒಂದು ವಿಚಿತ್ರ ಘಟನೆಯ ನಂತರ ಎಲ್ಲರೂ 'ಟ್ರೂ ಕಾಲರ್' ಆಪ್ ಡಿಲೀಟ್ ಮಾಡುತ್ತಿದ್ದಾರೆ!

ಹಾಗಾಗಿ, ಇಂದಿನ ಲೇಖನದಲ್ಲಿ, ಟ್ರೂ ಕಾಲರ್ ಆಪ್ ಬಳಕೆ ಏಕೆ ಒಳ್ಳೆಯದಲ್ಲ? ಟ್ರೂಕಾಲರ್ ಮತ್ತು ಫೇಸ್‌ಬುಕ್ನಿಂದ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆ ಏನು? ಟ್ರೂ ಕಾಲರ್ ಆಪ್ ಬಳಸಿದರೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಗಬುಹುದಾದ ತೊಂದರೆಗಳು ಏನೇನು? ಎಂಬೆಲ್ಲಾ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ನಾವು ತಿಳಿಯೋಣ.

ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ!!

ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ!!

ಶಿವಕುಮಾರ್ ಎಂಬುವರನ್ನು ಹುಡುಕಿ ಎರಡು ಲಕ್ಷ ಸಾಲ ವಸೂಲಿ ಮಾಡುವಂತೆ ರಂಗನಾಥ್ ಎಂಬುವವರು ಇಬ್ಬರು ಹುಡುಗರಿಗೆ ಸೂಚಿಸಿದ್ದರು. ಹಾಗೇ ಅವರ ಫೋನ್ ನಂಬರ್ ಕೊಟ್ಟಿದ್ದರು. ರಂಗನಾಥ್ ಕೊಟ್ಟ ಫೋನ್ ನಂಬರ್ ನ ಟ್ರೂ ಕಾಲರ್ ಗೆ ಹಾಕಿದಾಗ, 'ಶಿವಕುಮಾರ್.ಎನ್.ಎಸ್' ಎಂಬ ಹೆಸರು ಬಂದಿದೆ. ಅದೇ ಹೆಸರನ್ನ ಫೇಸ್‌ಬುಕ್ ನಲ್ಲಿ ಹುಡುಕಿದಾಗ ಆ ಇಬ್ಬರು ಹುಡುಗರಿಗೆ ಕಾಣಿಸಿದ್ದು ಕನ್ನಡ ನಿರ್ದೇಶಕ ಶಿವಕುಮಾರ್.ಎನ್.ಎಸ್ ರವರ ಫೋಟೋ.! ಹೀಗಾಗಿ, ಹಿಂದು ಮುಂದು ನೋಡದೆ, ಹೊಟ್ಟೆ ತುಂಬ ಎಣ್ಣೆ ಇಳಿಸಿ ಶಿವಕುಮಾರ್.ಎನ್.ಎಸ್ ಮೇಲೆ ಹಲ್ಲೆ ನಡೆಸಿದ್ದಾರೆ.!

ಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್.!

ಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್.!

ನಿಮ್ಮ ಅತ್ಯಂತ ವ್ಯಕ್ತಿಗತವಾಗಿರುವ ಫೋನ್‌ಗೆ ಅಪರಿಚಿತರ ಕರೆ ಬರುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎನ್ನುತ್ತಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್. ಇನ್ನು ಈ ಆಪ್‌ ಬಗ್ಗೆ ಸರಿಯಾಗಿ ತಿಳಿಯದ ಬಳಕೆದಾರರ ಸಂಖ್ಯೆಯೂ ಕೂಡ ಹೆಚ್ಚಿದೆ.!

ಟ್ರೂ ಕಾಲರ್ ಆಪ್ ಕಾರ್ಯವೇ ಸರಿಯಾಗಿಲ್ಲ.!

ಟ್ರೂ ಕಾಲರ್ ಆಪ್ ಕಾರ್ಯವೇ ಸರಿಯಾಗಿಲ್ಲ.!

ನಿಜವಾಗಿಯೂ ಟ್ರೂ ಕಾಲರ್ ಆಪ್ ಸರಿಯಾಗಿ ಕಾರ್ಯನಿರ್ವಹಣೆ ನೀಡುವುದಿಲ್ಲ. ಕೆಲವೊಂದು ಸರಿಯಾದ ಕಾಂಟಾಕ್ಟ್ಸ್ ಹೆಸರನ್ನು ತೋರಿಸಿದರೆ, ಹಲವು ಬಾರಿ ತಪ್ಪು ತಪ್ಪು ಮಾಹಿತಿಯನ್ನೇ ನೀಡುತ್ತದೆ. ಯಾವ ಟ್ರೂ ಕಾಲರ್ ಬಳಕೆದಾರನು ಸರಿಯಾದ ಮಾಹಿತಿ ಪಡೆಯಲು ಅಸಾಧ್ಯ.!

ನಿಮ್ಮ ಕಾಂಟ್ಯಾಕ್ಟ್ ಬಾಚಿಕೊಳ್ಳುತ್ತಿದೆ ಟ್ರೂ ಕಾಲರ್!

ನಿಮ್ಮ ಕಾಂಟ್ಯಾಕ್ಟ್ ಬಾಚಿಕೊಳ್ಳುತ್ತಿದೆ ಟ್ರೂ ಕಾಲರ್!

ಟ್ರೂ ಕಾಲರ್ ಆಪ್ ಇನ್‌ಸ್ಟಾಲ್ ಮಾಡಿದ ನಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.!

ಅಂತನೂ ಹೆಸರು ತೋರಿಸುತ್ತೆ.!!

ಅಂತನೂ ಹೆಸರು ತೋರಿಸುತ್ತೆ.!!

ನಿಮ್ಮ ಗೆಳೆಯರು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೇಗೆ ಸೇವ್ ಮಾಡಿಕೊಂಡಿರುತ್ತಾರೋ ಹಾಗೆಯೇ ಟ್ರೂಕಾಲರ್ ಕೂಡ ತೋರಿಸುತ್ತದೆ. ಉದಾಹರಣೆಗೆ, ನಿಮ್ಮ ಗೆಳೆಯರು ನಿಮಗೆ ಅಡ್ಡ ಹೆಸರಿಟ್ಟಿದ್ದರೆ, ನಿಮ್ಮ ಮೊಬೈಲ್‌ನಿಂದ ಬೇರೆಯವರಿಗೆ ಫೋನ್ ಮಾಡಿದರೆ ಆ ನಿಮ್ಮ ಅಡ್ಡ ಹೆಸರನ್ನೇ ಅವರಿಗೆ ತೋರಿಸುತ್ತದೆ. ಹಾಗಾಗಿ, ಟ್ರೂ ಕಾಲರ್ ಬಳಕೆ ಅಪಯಕಾರಿ ಎನ್ನಬಹುದು.

ಪ್ರೈವೆಸಿಗೆ ಅರ್ಥವೇ ಇಲ್ಲಾ!

ಪ್ರೈವೆಸಿಗೆ ಅರ್ಥವೇ ಇಲ್ಲಾ!

ಯಾರು ಬೇಕಾದರೂ ಟ್ರೂಕಾಲರ್ ಡೇಟಾಬೇಸ್‌ಗೆ ನಿಮ್ಮ ಸಂಖ್ಯೆ, ಹೆಸರನ್ನು ಸೇರಿಸಬಹುದಾಗಿದೆ. ಮತ್ತು ಯಾರು ಸೇರಿಸದಿದ್ದರೂ ಟ್ರೂಕಾಲರ್ ನಿಮ್ಮ ಮಾಹಿತಿಯನ್ನು ನಿಮ್ಮ ಪರ್ಮಿಷನ್ ಇಲ್ಲದೆಯೇ ಸೇರಿಸಿಕೊಳ್ಳುತ್ತದೆ.!ಇನ್ನು ನಿಮ್ಮ ನಂಬರ್ ಟ್ರೂಕಾಲರ್‌ನಿಂದ ತೆರೆಯಲು ನೀವೆ ಆಪ್‌ ಡೌನ್‌ಲೋಡ್ ಮಾಡಿ ಸೆಟ್ಟಿಂಗ್ಸ್ ಮಾಡಿಕೊಳ್ಳಬೇಕಾಗುತ್ತದೆ. ಹೇಗಿದೆ ನೋಡಿ!!

ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ

ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ

ಟ್ರೂಕಾಲರ್‌ನಲ್ಲಿ ನಮ್ಮ ಹೆಸರನ್ನು ಸೇರಿಸಿಕೊಳ್ಳದಂತೆ ಮಾಡುವುದು ನಮ್ಮ ಕೈಯಲ್ಲಿರುವುದಿಲ್ಲವಾದುದರಿಂದ, ಪ್ರೈವೆಸಿಗೆ ಧಕ್ಕೆ ಎಂಬ ಕಾರಣಕ್ಕೆ ಟ್ರೂ ಕಾಲರ್ ಅನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ ಮಾಡಲಾಗಿತ್ತು. ಆದರೆ, ಇಂಡಿಯಾದಲ್ಲಿ ಇದಿನ್ನು ಚೆನ್ನಾಗಿಯೇ ಬೆಳೆಯುತ್ತಿದೆ.!

ಸುಮ್ನೆ ಮತ್ತೊಂದು ಒಂದು ಉದಾಹರಣೆ

ಸುಮ್ನೆ ಮತ್ತೊಂದು ಒಂದು ಉದಾಹರಣೆ

ಟಿಫಿನ್ ಮಾಡ್ತಾ ಇದ್ದೆ..
ಪಕ್ಕದಲ್ಲೇ ಫೋನ್ ಕೂಡ ಇತ್ತು.
ಫೋನ್ ರಿಂಗಾಯ್ತು,
ಪೂಜಾ ಅಂತ ಟ್ರೂ ಕಾಲರ್ ಹೇಳ್ತಾ ಇತ್ತು.
ಪಟ್ಟನೆ ರಿಸೀವ್ ಮಾಡ್ದೆ,
"ನಾನು ದತ್ತು ಮಾವ ಮಾತಾಡೋದು" ಅಂತು ಆ ಕಡೆ ಪಾರ್ಟಿ..ಇದೇನಪ್ಪ ಹೊಸ ಮಾವ ಹುಟ್ಕಂಡ ಅಂತ ಅಂದ್ಕೊಂಡು,ಹೇಳಿ ಅಂದೆ..
ನಿನ್ನತ್ತೆಗೆ ನೀನು ಕೊಟ್ಟಿದ್ದ ಕೊಲೆಸ್ಟರಾಲ್ ಚೀಟಿ ಕಳೆದು ಹೋಗಿದೆ,ಬೇರೆ ಕೊಡೊಕಾಗತ್ತಾ ಅಂತ ಕೇಳಿದ್ರು.
wrong number ಅಂತ ಕಟ್ ಮಾಡ್ದೆ..
ಟ್ರೂ ಕಾಲರ್ ಕೂಡ ಸುಳ್ಳು ಹೇಳ್ತು ಮುಂಡೇದು!!Tongue outWink

ವಾಟ್ಸ್‌ಆಪ್‌ನಲ್ಲಿ ಪೇಮೆಂಟ್ ಮಾಡುತ್ತಿರುವವರಿಗೆ ಇದು ಶಾಕಿಂಗ್ ಸುದ್ದಿ!!

ವಾಟ್ಸ್‌ಆಪ್‌ನಲ್ಲಿ ಪೇಮೆಂಟ್ ಮಾಡುತ್ತಿರುವವರಿಗೆ ಇದು ಶಾಕಿಂಗ್ ಸುದ್ದಿ!!

ಭಾರತದ ಜನಪ್ರಿಯ ಮೆಸೇಂಜಿಂಗ್ ಆಪ್ ವಾಟ್ಸ್‌ಆಪ್‌ನಲ್ಲಿ ಇದೀಗ ಬಂದಿರುವ ಬಹುನಿರೀಕ್ಷಿತ 'ವಾಟ್ಸ್‌ಆಪ್ ಪೇಮೆಂಟ್' ಫೀಚರ್ ಬಳಕೆದಾರರಿಗೆ ಫೇಸ್‌ಬುಕ್ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ತಾನು ಒದಗಿಸುತ್ತಿರುವ ಪಾವತಿ ಸೇವೆಗಳ ಸೀಮಿತ ಮಾಹಿತಿಯನ್ನು ತನ್ನ ಮಾತೃಸಂಸ್ಥೆ ಫೇಸ್‌ಬುಕ್‌ ಜತೆ ಹಂಚಿಕೊಳ್ಳಲಾಗುತ್ತಿದೆ ಎಂದು ವಾಟ್ಸ್‌ಆಪ್‌ ತಿಳಿಸಿದೆ.

ವಾಟ್ಸ್ಆಪ್ ಬಳಕೆದಾರರು ಪಾವತಿ ಸೇವೆಯನ್ನು ಬಳಸಿಕೊಂಡಾಗ, ಹಣ ಕಳುಹಿಸುವವರು ಮತ್ತು ಪಡೆದುಕೊಳ್ಳುವವರ ನಡುವೆ ಅಗತ್ಯ ಸಂಪರ್ಕವನ್ನು ಆಪ್ ಸೃಷ್ಟಿಸುತ್ತದೆ. ಇದಕ್ಕಾಗಿ ಇಲ್ಲಿ ಫೇಸ್‌ಬುಕ್‌ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಾಟ್ಸ್‌ಆಪ್‌ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿರುವುದು ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ.

ಭಾರತದಲ್ಲಿರುವ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯ ಸುರಕ್ಷತೆಯ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೆಚ್ಚು ಕಳವಳಗೊಂಡಿದ್ದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಹಾಗಾದರೆ, ವಾಟ್ಸ್‌ಆಪ್ ಆಪ್ ಬಳಕೆದಾರರು ಪೇಮೆಂಟ್ ಸೇವೆ ಬಳಸಿದರೆ ಯಾವೆಲ್ಲಾ ಮಾಹಿತಿ ಫೇಸ್‌ಬುಕ್ ಜೊತೆ ಹಂಚಿಕೆಯಾಗುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

ಫೇಸ್‌ಬುಕ್ ಜೊತೆ ಮಾಹಿತಿ ಹಂಚಿಕೆ!

ಫೇಸ್‌ಬುಕ್ ಜೊತೆ ಮಾಹಿತಿ ಹಂಚಿಕೆ!

ಬಳಕೆದಾರರು ಪಾವತಿ ಸೇವೆಯನ್ನು ಬಳಸಿಕೊಂಡಾಗ, ಹಣ ಕಳುಹಿಸುವವರು ಮತ್ತು ಪಡೆದುಕೊಳ್ಳುವವರ ನಡುವೆ ಅಗತ್ಯ ಸಂಪರ್ಕವನ್ನು ಆಪ್ ಸೃಷ್ಟಿಸುವುಕ್ಕಾಗಿ ಇಲ್ಲಿ ಫೇಸ್‌ಬುಕ್‌ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಾಟ್ಸ್‌ಆಪ್‌ ತಿಳಿಸಿದೆ. ಈ ದತ್ತಾಂಶವನ್ನು ವಾಣಿಜ್ಯ ಉದ್ದೇಶಗಳಿಗೆ ಫೇಸ್‌ಬುಕ್‌ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದೆ.

ತಂತ್ರಜ್ಞಾನ ಸಚಿವಾಲಯ ಕಳವಳ!

ತಂತ್ರಜ್ಞಾನ ಸಚಿವಾಲಯ ಕಳವಳ!

ವಾಟ್ಸ್ಆಪ್‌ ಪಾವತಿ ಸೇವೆಯು ನಿಯಮಗಳಿಗೆ ಬದ್ಧವಾಗಿದೆಯೇ ಮತ್ತು ಅದು ಫೇಸ್‌ಬುಕ್‌ ಜತೆಗೆ ಮಾಹಿತಿ ಹಂಚಿಕೆ ಮಾಡುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎನ್‌ಪಿಸಿಐಗೆ ತಿಳಿಸಿತ್ತು .ಕೇಂಬ್ರಿಜ್‌ ಅನಲಿಟಿಕಾ, ಫೇಸ್‌ಬುಕ್‌ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡಿರುವುದು ಇದಕ್ಕೆ ಕಾರಣವಾಗಿತ್ತು.

ಗ್ರಾಹಕರಿಗೆ ನೆರವಾಗುವುದಕ್ಕಾಗಿ!

ಗ್ರಾಹಕರಿಗೆ ನೆರವಾಗುವುದಕ್ಕಾಗಿ!

ವಾಟ್ಸ್ಆಪ್ ಪಾವತಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಬ್ಯಾಂಕುಗಳು ಮತ್ತು ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ತಲುಪಿಸುವ ಕೆಲಸವನ್ನಷ್ಟೇ ಮಾಡುತ್ತಿದೆ. ಕೆಲವೊಮ್ಮೆ, ಗ್ರಾಹಕರಿಗೆ ನೆರವಾಗುವುದಕ್ಕಾಗಿ ಮತ್ತು ಪಾವತಿಯನ್ನು ಸುರಕ್ಷಿತವಾಗಿಸಲು ಈ ಮಾಹಿತಿಯನ್ನು ಫೇಸ್‌ಬುಕ್ ಬಳಕೆ ಮಾಡುತ್ತಿದೆ ಎಂದು ವಾಟ್ಸ್‌ಆಪ್‌ ಹೇಳಿದೆ.

ಮಾಹಿತಿ ಹಂಚಿಕೆಗೆ ಮಿತಿಯಿದೆ!

ಮಾಹಿತಿ ಹಂಚಿಕೆಗೆ ಮಿತಿಯಿದೆ!

ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನರು ವಾಟ್ಸ್‌ಆಪ್‌ ಪಾವತಿ ಸೇವೆ ಬಳಸುತ್ತಿದ್ದಾರೆ. ಇವರ ಕೆಲವು ಮಾಹಿತಿಗಳನ್ನಷ್ಟೇ ನಾವು ಫೇಸ್‌ಬುಕ್‌ ಜೊತೆ ವಿನಿಮಯ ಮಾಡಲಾಗುವುದು. ಇಲ್ಲಿ ಒಂದು ಬಾರಿಯ ಪಾಸ್‌ವರ್ಡ್‌ನಂತಹ ಮಾಹಿತಿ ಮತ್ತು ಬ್ಯಾಂಕ್‌ ಖಾತೆ ಸಂಖ್ಯೆ, ಡೆಬಿಟ್‌ ಕಾರ್ಡ್‌ ಸಂಖ್ಯೆಯನ್ನು ಸಂಗ್ರಹಿಸುವುದಿಲ್ಲ ಎಂದು ವಾಟ್ಸ್‌ಆಪ್ ತಿಳಿಸಿದೆ.

Check your Aahdaar update history - GIZBOT KANNADA
ಸುರಕ್ಷತೆ ನಿಮ್ಮ ಕೈಯಲ್ಲಿದೆ.!

ಸುರಕ್ಷತೆ ನಿಮ್ಮ ಕೈಯಲ್ಲಿದೆ.!

ಭಾರತದಲ್ಲಿ ಈಗ ವಾಟ್ಸ್‌ಆಪ್‌ನ ಪಾವತಿ ಸೇವೆಯ ಬೀಟಾ ಆವೃತ್ತಿ ಇದೆ. ಒಟ್ಟು ವಾಟ್ಸ್‌ಆಪ್ ಬಳಕೆದಾರರಲ್ಲಿ 10 ಕೋಟಿಗೂ ಹೆಚ್ಚು ಜನರು ವಾಟ್ಸ್‌ಆಪ್‌ ಪಾವತಿ ಸೇವೆ ಬಳಸುತ್ತಿದ್ದಾರೆ. ಹಾಗಾಗಿ, ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ನೀವು ಕೂಡ ಬಳಸುತ್ತಿದ್ದರೆ ಈ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ. ಏಕೆಂದರೆ, ಈಗ ಯಾರನ್ನೂ ಸಹ ನಂಬುವಂತಿಲ್ಲ.!!

Best Mobiles in India

English summary
In this way, true caller is safe as it is not uploading your personal phonebook. But it definitely takes your details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X