ಏನಿದು ಡಿಜಿ ಲಾಕರ್.? ಈ ಆಪ್ ಬಳಕೆಯ ಅನುಕೂಲ-ಅನಾನುಕೂಲಗಳೇನು..?

|

ಸಾರಿಗೆ ಇಲಾಖೆಯು ವಾಹನ ಸವಾರರ ಸಹಾಯಕ್ಕೆ ಲಾಂಚ್ ಮಾಡಿರುವ ಹೊಸ ಯೋಜನೆಯೇ ಡಿಜಿ ಲಾಕರ್. ಕೋಟಿ ಸಂಖ್ಯೆಯಲ್ಲಿ ವಾಹನಗಳು ಮತ್ತು ವಾಹನ ಸವಾರರು ಈ ಡಿಜಿ ಲಾಕರ್ ಆಪ್ ಲಾಭವನ್ನು ಪಡೆಯಬಹುದಾಗಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು ಅದರ ಸಾಫ್ಟ್ ಕಾಪಿಯನ್ನು (ಡಿಜಿಟಲ್ ರೂಪ) ತೋರಿಸುವ ಆಪ್ ಇದಾಗಿದೆ.

ಏನಿದು ಡಿಜಿ ಲಾಕರ್.? ಈ ಆಪ್ ಬಳಕೆಯ ಅನುಕೂಲ-ಅನಾನುಕೂಲಗಳೇನು..?

ವಾಹನದ ಮತ್ತು ಚಾಲನೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಆಪ್ ಇದಾಗಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಂಡರೆ ಓರ್ಜಿನಲ್ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ. ಮೊಬೈಲ್‌ ನಲ್ಲಿಯೇ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಪೊಲೀಸರು ಕೇಳಿದ ಸಂದರ್ಭದಲ್ಲಿ ಪ್ರದರ್ಶಿಸಬಹುದಾಗಿದೆ.

ಡಿಜಿ ಲಾಕರ್ ಬಳಸುವುದು ಸುಲಭ

ಡಿಜಿ ಲಾಕರ್ ಬಳಸುವುದು ಸುಲಭ

ವಾಹನ ಸವಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Digilocker ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯತೆ ಇಲ್ಲ ಎನ್ನಲಾಗಿದೆ. ಇದೊಂದು ಉಚಿತ ಸೇವೆಯಾಗಿದೆ. ಸ್ಮಾರ್ಟ್‌ಫೋನ್‌ ಇರವವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು

ರಿಜಿಸ್ಟರ್ ಮಾಡಿಕೊಳ್ಳಬೇಕು

ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಸ್ಮಾರ್ಟ್‌ಫೋನಿನಲ್ಲಿ ಇನ್ಸ್‌ಸ್ಟಾಲ್ ಮಾಡಬೇಕಾಗಿದೆ. ನಂತರ ಆಪ್ ತೆರೆದು ಮೊಬೈಲ್‌ ಸಂಖ್ಯೆ ಬಳಸಿ ಲಾಗ್‌- ಇನ್‌ ಆಗಬೇಕು. ನಂತರ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್‌ ಮಾಡಬಹುದಾಗಿದೆ.

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ:

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ:

ನೀವು ಬೇರೆ ಯಾರದ್ದರೂ ವಾಹನವನ್ನು ಓಡಿಸುತ್ತಿರುವ ಸಂಧರ್ಭದಲ್ಲಿ ಪೊಲೀಸರು ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಮಾಲೀಕರ ಡಿಎಲ್‌ ಸಂಖ್ಯೆಯನ್ನು ತಿಳಿಸಿದರೂ ಸಾಕು. ಆದರೆ ವಾಹನದ ಮಾಲೀಕರು ಡಿಜಿ ಲಾಕರ್ ಬಳಕೆ ಮಾಡಿಕೊಳ್ಳುತ್ತಿರ ಬೇಕು ಎನ್ನಲಾಗಿದೆ.

ಈ ಆಪ್ ಉಪಯೋಗಗಳೇನು..?

ಈ ಆಪ್ ಉಪಯೋಗಗಳೇನು..?

ಈ ಆಪ್ ಬಳಕೆಯಿಂದಾಗಿ ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದ್ದು, ಓರ್ಜಿನಲ್ ದಾಖಲೆ ಕಳೆದುಹೋಗುವ ಭಯವಿಲ್ಲ, ಇದಲ್ಲದೇ ಇ-ಆಧಾರ್ ಡಿಜಿಲಾಕರ್​ನಲ್ಲೇ ಸಿಗಲಿದೆ. ಹೀಗಾಗಿ ಈ ಆಪ್ ಬಳಕೆಯೂ ಸಾಕಷ್ಟು ಸಹಾಯವನ್ನು ಮಾಡುತ್ತದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಈ ಆಪ್ ಅನಾನುಕೂಲಗಳೇನು..?

ಈ ಆಪ್ ಅನಾನುಕೂಲಗಳೇನು..?

ವಾಹನ ಸವಾರರು ಈ ಡಿಜಿ ಲಾಕ್ ಸೇವಯನ್ನು ಬಳಕೆ ಮಾಡಿಕೊಳ್ಳಲು ಸ್ಮಾರ್ಟ್ ಫೋನ್ ಬೇಕಾಗಿದ್ದು, ಸಾಮಾನ್ಯ ಫೋನಿನಲ್ಲಿ ಬಳಕೆಯೂ ಸಾಧ್ಯವಿಲ್ಲ. ಇದಲ್ಲದೇ ಈ ಆಪ್ ಕಾರ್ಯನಿರ್ವಹಿಸಲು ಇಂಟರ್​ನೆಟ್ ಬೇಕು. ಇದಲ್ಲದೇ ಆಧಾರ್ ಕಾರ್ಡ್ ಮಾಡಿಸದೆ ಹೋದರೆ ಈ ಆಪ್ ಬಳಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ಓದಿರಿ: ಭೂಮಿಯಿಂದ ಮಂಗಳ ಗ್ರಹಕ್ಕೆ ಹಾರಿದ ಮೊದಲ ಎಲೆಕ್ಟ್ರಿಕ್ ಕಾರು: ಸಾಗಿದ್ದು ಹೇಗೆ...?

Best Mobiles in India

English summary
DigiLocker - Android Apps on Google Play. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X