Subscribe to Gizbot

ಭೂಮಿಯಿಂದ ಮಂಗಳ ಗ್ರಹಕ್ಕೆ ಹಾರಿದ ಮೊದಲ ಎಲೆಕ್ಟ್ರಿಕ್ ಕಾರು: ಸಾಗಿದ್ದು ಹೇಗೆ...?

Posted By:

ಕನಸಿಗಳನ್ನು ನನಸಾಗಿಸುವ ದಿಟ್ಟ ಇಯನ್ ಮಾಸ್ಕ್ ದೊಡ್ಡದೊಂದು ಸಾಹಸದಲ್ಲಿ ಯಶಸ್ವಯಾಗಿದ್ದಾರೆ. ಅವರ ಒಡೆತನದ ಸ್ಪೆಸ್ X ಹೊಸದೊಂದು ಇತಿಹಾಸವನ್ನು ನಿರ್ಮಿಸಿದ್ದು, ಜಗತ್ತಿನ ಅತೀ ಪವರ್ ಫುಲ್ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಫಾಲ್ಕನ್ ಹೈವಿ ಹೆಸರಿನ ರಾಕೆಟ್ ಟೆಲ್ಸಾದ ಎಲೆಕ್ಟ್ರಿಕ್ ಕಾರನ್ನು ಆಗಸಕ್ಕೆ ಸೇಫ್ ಆಗಿ ತಲುಪಿಸಿದ್ದು, ರಾಕೆಟ್ ಹಾರಲು ಸಹಕಾರಿಯಾಗಿದ್ದ ಮೂರು ಬೂಸ್ಟರ್ ಗಳು ಮತ್ತೆ ಭೂಮಿಗೆ ಹಿಂತಿರುಗಿ, ಸೇಫ್ ಆಗಿ ಲ್ಯಾಂಡ್ ಆಗಿದೆ ಎನ್ನಲಾಗಿದೆ.

ಭೂಮಿಯಿಂದ ಮಂಗಳ ಗ್ರಹಕ್ಕೆ ಹಾರಿದ ಮೊದಲ ಎಲೆಕ್ಟ್ರಿಕ್ ಕಾರು: ಸಾಗಿದ್ದು ಹೇಗೆ...?

ಮಂಗಳನ ಅಂಗಳಕ್ಕೆ ಮಾನವವನ್ನು ಕಳುಹಿಸುವ ಇಯನ್ ಮಾಸ್ಕ್ ಪ್ರಯತ್ನಕ್ಕೆ ಇದು ಮುನ್ನುಡಿಯನ್ನು ಬರೆದಿದ್ದು, ಫಾಲ್ಕನ್ ಹೈವಿ ಸದ್ಯ ವಿಶ್ವದಲ್ಲಿ ಬಳಕೆಯಾಗುತ್ತಿರುವ ಅತೀ ಪವರ್ ಫುಲ್ ರಾಕೆಟ್ ಎನ್ನಲಾಗಿದ್ದು, ಇದು ಮಂಗಳ ಅಂಗಳಕ್ಕೆ ಮಾನವನ್ನು ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದೆ ಎನ್ನುವ ವಿಶ್ವಾಸವನ್ನು ಮೂಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಫಾಲ್ಕನ್ ಹೈವಿ ರಾಕೆಟ್:

ಸ್ಪೆಸ್ X ನಿರ್ಮಾಣದ ಫಾಲ್ಕನ್ ಹೈವಿ ರಾಕೆಟ್ ಹಲವು ದಿನಗಳ ಕಠಿಣ ಪರಿಶ್ರಮದ ಫಲವಾಗಿದ್ದು, ಇದರಲ್ಲಿ 27 ಇಂಜಿನ್‌ಗಳನ್ನು ಕಾಣಬಹದಾಗಿದೆ. ಇದರ ನಿರ್ಮಾಣಕ್ಕೆ 5 ಮಿಲಿಯನ್ ಪೌಂಡ್ ಗಳು ಖರ್ಚಾಗಿದ್ದು, ಈ ಬೆಲೆಯಲ್ಲಿ 18 ಬೋಯಿಂಗ್ 747 ವಿಮಾನಗಳನ್ನು ಖರೀದಿಸಬಹುದಾಗಿತ್ತು ಎನ್ನಲಾಗಿದೆ.

ಹೆಚ್ಚು ತೂಕವನ್ನು ಹೊರಲಿದೆ:

ಸ್ಪೆಸ್ X ನಿರ್ಮಾಣದ ಫಾಲ್ಕನ್ ಹೈವಿ ರಾಕೆಟ್ ಅತೀ ಹೆಚ್ಚಿನ ಭಾರವನ್ನು ಖಗೋಳಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಇದು 140000 ಪೌಡ್ ತೂಕವನ್ನು ಹೊತ್ತು ಸಾಗುವ ಸಾಮಾರ್ಥ್ಯವನ್ನು ಹೊಂದಿದೆ. ಈ ಭಾರವೂ ಬೋಯಿಂಗ್ 737 ವಿಮಾವು ಫುಲ್ ಲೋಡ್ ಆದರೆ ಎಷ್ಟು ಭಾರವಿರಲಿದೆಯೋ ಅಷ್ಟು ಭಾರಕ್ಕೆ ಸಮವಾಗಿದೆ.

ನಾಶವಾಗುವ ಸಾಧ್ಯತೆ ಇತ್ತು:

ಸ್ಪೆಸ್ X ನಿರ್ಮಾಣದ ಫಾಲ್ಕನ್ ಹೈವಿ ರಾಕೆಟ್ ಲಾಂಚ್ ಮಾಡುವ ಮುನ್ನ ಸ್ಪೆಸ್ X ಮುಖ್ಯಸ್ಥ ಇಯನ್ ಮಾಸ್ಕ್ ಮಾತನಾಡಿ, ಇದೊಂದು ಪರೀಕ್ಷಾರ್ಥ ಉಡಾವಣೆಯಾಗಿದ್ದು, ಇದು ಫೇಲ್ ಆಗುವ ಎಲ್ಲಾ ಸಾಧ್ಯತೆಗಳು ಇದೆ ಎಂದಿದ್ದರೂ ಆದರೆ ಇದು ಯಶಸ್ವಿಯಾಗಿದ್ದು, ತನ್ನ ಕಾರ್ಯಚರಣೆಯನ್ನು ಮಾಡಿದೆ.

Here's how the Face ID of the newly launched Oppo A83 works (KANNADA)

ಆಗಸದಲ್ಲಿ ಹಾರುತ್ತಿದೆ ಕಾರು:

ಸ್ಪೆಸ್ X ನಿರ್ಮಾಣದ ಫಾಲ್ಕನ್ ಹೈವಿ ರಾಕೆಟ್ ಪರೀಕ್ಷಾರ್ಥ ಉಡಾವಣೆ ಸಂದರ್ಭದಲ್ಲಿ ಇದರೊಂದಿಗೆ ಟೆಲ್ಸಾ ನಿರ್ಮಾಣದ ಎಲೆಕ್ಟ್ರಿಕ್ ಕಾರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದು, ಈ ಕಾರು ಅಲ್ಲಿಯೇ ಲಕ್ಷಾಂತರ ವರ್ಷಗಳ ಕಾಲ ಅಲ್ಲಿಯ ಸುತ್ತಲಿದೆ. ಆದರೆ ಯಾವುದೋ ಒಂದು ಸಂಧರ್ಭದಲ್ಲಿ ಮಾತ್ರವೇ ಮಂಗಳ ಗ್ರಹಕ್ಕೆ ಡಿಕ್ಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೂಸ್ಟರ್ ಗಳು ಹಿಂದಕ್ಕೆ:

ಇದಲ್ಲದೇ ಸ್ಪೆಸ್ X ನಿರ್ಮಾಣದ ಫಾಲ್ಕನ್ ಹೈವಿ ರಾಕೆಟ್ ಲಾಂಚ್ ವಿಶೇಷತೆ ಎಂದರೆ, ರಾಕೆಟ್ ಉಡಾವಣೆಗೆ ಬಳಸಲಾಗಿದ್ದ ಬೂಸ್ಟರ್ ಗಳು ತಮ್ಮ ಕಾರ್ಯವನ್ನು ಯಶಸ್ವಿಯಾಗಿಸಿದ ನಂತರದಲ್ಲಿ ಮತ್ತೆ ಭೂಮಿಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದು, ತಮಗೆ ಗುರುತಿಸಿದ ಜಾಗವನ್ನು ತಲುಪಿವೆ. ಎರಡು ಭೂಮಿಯ ಮೇಲೆ ಇಳಿದರೆ ಆದರೆ ಇನ್ನೊಂದು ಸಮುದ್ರದ ಮೇಲೆ ಇಳಿದಿದೆ.

ಹೊಸ ಮೈಲಿಗಲ್ಲು:

ಬಾಹ್ಯಕಾಶ ಇತಿಹಾಸದಲ್ಲಿಯೇ ಇದೊಂದು ದೊಡ್ಡ ಮೈಲಿಗಲ್ಲು ಎನ್ನಲಾಗಿದೆ. ವಿಶ್ವದಲ್ಲಿ ಹಲವು ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾಗಿರುವ ಇಯಾನ್ ಮಾಸ್ಕ್ ರ ಕನಸು ನನಸಾಗುವ ಕಾಲ ಸಮೀಪವಾಗಿದ್ದು, ಶೀಘ್ರವೇ ಮಂಗಳನ ಅಂಗಳಕ್ಕೆ ಮಾನವನನ್ನು ಸಾಗಿಸುವ ಕಾರ್ಯವು ನಡೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಇನ್ನು ಆಧಾರ್ ಕಾರ್ಡ್ ಮಾಡಿಸುವುದು ಬಲು ದುಬಾರಿ..! ಶೇ.18 GST ವಿಧಿಸಿದ ಕೇಂದ್ರ..!

English summary
Elon Musk Sends Electric Car Into Space. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot