ಕಾಸಿದ್ದವರು ಮಾತ್ರವೇ ಖರೀದಿಸುವ ಆಪ್ ಗಳು: ಇದನ್ಯಾರು ಖರೀಸುತ್ತಾರೆ ಎನ್ನಬೇಡಿ..!!!

ಶೋಕಿಗಾಗಿ ದುಬಾರಿ ಬೆಲೆಯನ್ನು ನೀಡಿ ಆಪ್ ಮಾರುಕಟ್ಟೆಯಲ್ಲಿ ದೊರೆಯುವ ಆಪ್ ಗಳನ್ನು ಖರೀದಿಸುತ್ತಾರೆ.

By Precilla Dias
|

ಇಂದು ಆಪ್ ಮಾರುಕಟ್ಟೆಯಲ್ಲಿ ಯಾರು ಸಹ ದುಡ್ಡು ಕೊಟ್ಟು ಆಪ್ ಖರೀದಿಸುವುದಿಲ್ಲ. ಆದರೆ ಕೆಲವರು ಶೋಕಿಗಾಗಿ ದುಬಾರಿ ಬೆಲೆಯನ್ನು ನೀಡಿ ಆಪ್ ಮಾರುಕಟ್ಟೆಯಲ್ಲಿ ದೊರೆಯುವ ಆಪ್ ಗಳನ್ನು ಖರೀದಿಸುತ್ತಾರೆ. ಈ ಹಿನ್ನಲೆಯಲ್ಲಿ ಸದ್ಯ ಆಪ್ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತೀ ಹೆಚ್ಚಿನ ಬೆಲೆ ಆಪ್ ಗಳ ಕುರಿತ ಮಾಹಿತಿ ಇಲ್ಲಿದೆ.

ಕಾಸಿದ್ದವರು ಮಾತ್ರವೇ ಖರೀದಿಸುವ ಆಪ್ ಗಳು: ಇದನ್ಯಾರು ಖರೀಸುತ್ತಾರೆ ಎನ್ನಬೇಡಿ..!!

ಆಪ್ ಮಾರುಕಟ್ಟೆಯಲ್ಲಿ ನೂರು ರೂಗಳಿಂದ ಹಿಡಿದು ಸಾವಿರಾರು ರೂ. ವರೆಗಿನ ಆಪ್ ಗಳನ್ನು ನಾವು ನೋಡಬಹುದಾಗಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಆಂಡ್ರಯ್ಡ್ ಆಪ್ ಗಳ ಬೆಲೆ ರೂ.26,000 ರೂಗಳು ಎಂದರೆ ನೀವು ನಂಬಲೇ ಬೇಕು. ಹೀಗೆ ಮಾರುಕಟ್ಟೆಯಲ್ಲಿರುವ ಅತೀ ಹೆಚ್ಚಿನ ಬೆಲೆಯ ಆಪ್ ಗಳು ಯಾವುವು ಎಂಬುದನ್ನು ತಿಳಿಯುವ.

ಮೋಸ್ಟ್ ಏಕ್ಸ್ ಪೆನ್ಸಿವ್ ಆಂಡ್ರಾಯ್ಡ್ ಆಪ್:

ಮೋಸ್ಟ್ ಏಕ್ಸ್ ಪೆನ್ಸಿವ್ ಆಂಡ್ರಾಯ್ಡ್ ಆಪ್:

ಈ ಆಪ್ ನಿಮ್ಮನ್ನು ಇತರೆ ಆಂಡ್ರಾಯ್ಡ್ ಬಳಕೆದಾರರಿಂದ ಬೇರೆ ಮಾಡಲಿದ್ದು, ಇದು ಶ್ರೀಮಂತರು ತಮ್ಮ ಅಂತಸ್ತನ್ನು ತೋರಿಸಿಕೊಳ್ಳುವ ಸಲುವಾಗಿ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ ಅಷ್ಟೆ, ಈ ಆಪ್ ಡೌನ್ ಲೋಡ್ ಮಾಡಿಕೊಂಡವರಿಗೆ ‘ಮೊಸ್ಟ್ ಎಕ್ಸ್ ಪೆನ್ಸಿವ್ ಆಂಡ್ರಾಯ್ಡ್ ವಿಡ್ ಗೆಟ್ ‘ ಎಂಬ ಸ್ಟೆಟಸ್ ಸಿಂಬಲ್ ತೋರಿಸಲಿದ್ದು, ಅದನ್ನು ನೋಡಿ ಬೀಗಬೇಕಾಗಿದೆ.

ಏಕ್ಸ್ ಪೆನ್ಸಿವ್ ಡಿಜಿಟಲ್ ವ್ಯಾಲೆಟ್:

ಏಕ್ಸ್ ಪೆನ್ಸಿವ್ ಡಿಜಿಟಲ್ ವ್ಯಾಲೆಟ್:

ಈ ಆಪ್ ಬೆಲೆ ರೂ.2,419 ಆಗಿದ್ದು, ನೀವು ಮಾಡುವ ಖರ್ಚುಗಳನ್ನು ಟ್ರಾಕ್ ಮಾಡಲಿದ್ದು, ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ. ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡುವುದಲ್ಲದೇ, ಆಪ್ ಗಳ ಮೂಲಕ ನೀವು ಮಾಡಿದ ಖರ್ಚು ವೆಚ್ಚಗಳ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಿದೆ.

ಮೋಸ್ಟ್ ಏಕ್ಸ್ ಪೆನ್ಸಿವ್ ಆಪ್:

ಮೋಸ್ಟ್ ಏಕ್ಸ್ ಪೆನ್ಸಿವ್ ಆಪ್:

ಇದು ಸಹ ಕೇವಲ ತೋರಿಸಿಕೊಳ್ಳುವ ಇರುವಂತಹ ಆಪ್ ಆಗಿದೆ. ಸದ್ಯ ದೊರೆಯುತ್ತಿರುವ ಅತೀ ಹೆಚ್ಚಿನ ಬೆಲೆಯ ಆಪ್ ಇದಾಗಿದೆ. ಇದರ ಬೆಲೆ ರೂ.26,000 ಗಳಾಗಿದ್ದು, ಇದು ಕೇವಲ ಅಮೆಜಿಂಗ್ ಡೈಮೆಂಡ್ ಆನ್ ಯುವರ್ ಸ್ಮಾರ್ಟ್ ಫೋನ್ ಎಂಬ ಮೇಸೆಜ್ ಮಾತ್ರವೇ ತೋರಿಸಲಿದೆ. ಅದನ್ನು ಬಿಟ್ಟು ಬೇರೆನನ್ನು ತೋರಿಸುವುದಿಲ್ಲ.

ನಂಬಿದ್ರೆ ನಂಬಿ...ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ ಇದೇ ತಿಂಗಳು!! ದಿನಾಂಕ ಯಾವುದು?ನಂಬಿದ್ರೆ ನಂಬಿ...ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಬಿಡುಗಡೆ ಇದೇ ತಿಂಗಳು!! ದಿನಾಂಕ ಯಾವುದು?

5 ಮಿನಿಟ್ ಸ್ಪೋರ್ಟ್ಸ್ ಮೆಡಿಸನ್”

5 ಮಿನಿಟ್ ಸ್ಪೋರ್ಟ್ಸ್ ಮೆಡಿಸನ್”

ಈ ಆಪ್ ಬೆಲೆ ರೂ.5,491 ಆಗಿದ್ದು, ಸ್ಟೋಟ್ಸ್ ಸಂಬಂಧಿತ ಮೆಡಿಕಲ್ ಇಷ್ಯೂಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ. ಅದನ್ನು ನಿಮ್ಮ ಮೊಬೈಲ್ ನಲ್ಲೇ ಓದಗಿಸಲಿದೆ. ಇದರಲ್ಲಿ ಸುಮಾರು 280 ಟಾಪಿಕ್ ಗಳಿದ್ದುಮ ನಿಮ್ಮ ಆರೋಗ್ಯವನನ್ನು ಕಾಪಡಲು ಇರುವ ವಿಷಯಗಳ ಕುರಿತು ಮಾಹಿತಿ ನೀಡಲಿದೆ. .

ಡಾ.ವೆಬ್ ಸೆಕ್ಯೂರಿಟಿ ಸ್ಪೆಸ್ ಲೈಟ್:

ಡಾ.ವೆಬ್ ಸೆಕ್ಯೂರಿಟಿ ಸ್ಪೆಸ್ ಲೈಟ್:

ಈ ಆಪ್ ನಿಮ್ಮ ಸ್ಮಾರ್ಟ್ ಫೋನ್ ಮೇಲೆ ದಾಳಿ ಮಾಡುವ ಮಾಲ್ವೇರ್ ಗಳಿಂದ ನಿಮ್ಮ ಸ್ಮಾರ್ಟ್ ಫೋನ್ ಅನ್ನು ರಕ್ಷಿಸುವ ಭರವಸೆಯನ್ನು ನೀಡಲಿದೆ. ಇದರ ಬೆಲೆ ರೂ.4050 ಆಗಲಿದ್ದು, ರಿಯಲ್ ಟೈಮ್ ಫೈಲ್ ಸ್ಕ್ಯಾನಿಂಗ್, ಬ್ಯಾಟರಿ ರಿಸೋರ್ಸ್ ಗಳ ಕುರಿತು ಮಾಹಿತಿಯನ್ನು ನೀಡಲಿದೆ.

 ಆಟ್ಲಾಸ್ ಆಫ್ ಇಂಟರ್ನಲ್ ಮೆಡಿಸನ್:

ಆಟ್ಲಾಸ್ ಆಫ್ ಇಂಟರ್ನಲ್ ಮೆಡಿಸನ್:

ಆಟ್ಲಾಸ್ ಆಫ್ ಇಂಟರ್ನಲ್ ಮೆಡಿಸನ್ ಆಪ್ ಸುಮಾರು 2000ಕ್ಕೂ ಹೆಚ್ಚು ಮೆಡಿಕಲ್ ರಿಲೆಟೆಡ್ ಇಮೇಜ್ ಗಳನ್ನು ಹೊಂದಿದ್ದು, ಅದಕ್ಕೆ ಇರುವ ಪರಿಹಾರವನನು ನೀಡಲಿದೆ. ಇದರಲ್ಲಿ ಅವುಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಐಮ್ ರಿಚ್ ಮ್ಯಾನ್-ಮೋಸ್ಟ್ ಏಕ್ಸ್ ಪೆನ್ಸಿವ್

ಐಮ್ ರಿಚ್ ಮ್ಯಾನ್-ಮೋಸ್ಟ್ ಏಕ್ಸ್ ಪೆನ್ಸಿವ್

ಈ ಆಪ್ ಖರೀದಿಸಲು ರೂ.26,000 ಆಗಿದೆ. ಇದನ್ನು ಕೇವಲ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ಮಾತ್ರವೇ ಈ ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಕೇವಲ ಸ್ಟೋನ್ ಗಳನ್ನು ಹೋಮ್ ಸ್ಕ್ರಿನ್ ನಲ್ಲಿ ತೋರಿಸಲಿದೆ.

ಮೋಸ್ಟ್ ಏಕ್ಸ್ ಪೆನ್ಸಿವ್ ಆಪ್:

ಮೋಸ್ಟ್ ಏಕ್ಸ್ ಪೆನ್ಸಿವ್ ಆಪ್:

ಇದರ ಬೆಲೆ ರೂ. 10,000ವಾಗಿದ್ದು, ಇದು ಕೇಲವ ಶೋ ಆಫ್ ಜನರಿಗಾಗಿಯೇ ನಿರ್ಮಿಸಲಾಗಿದೆ, ಇದು ಸಹ ಯಾವುದೇ ರೀತಿಯಲ್ಲೂ ನಿಮಗೆ ಸಹಾಯಕಾರಿಯಾದ ಕಾರ್ಯಗಳನ್ನು ಮಾಡುವುದಿಲ್ಲ. ನೀವು ಕೋಟ್ಯಾಧಿಪತಿ ಎನ್ನುವುದನ್ನು ನಿಮ್ಮ ಸ್ಕ್ರಿನ್ ಮೇಲೆ ತೋರಿಸಲಿದೆ.

Best Mobiles in India

Read more about:
English summary
We have listed some of the most expensive Android apps that you can download on your Android device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X