Subscribe to Gizbot

ಫೇಸ್ ಬುಕ್ ಭಾರತೀಯ ಆಧಾರ್ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ..!

Written By: Lekhaka

ಇದೇ ಒಂದು ದಿನ ಹಿಂದೆ ಫೇಸ್ ಬುಕ್ ಇನ್ನು ಮುಂದೆ ಹೊಸ ಆಕೌಂಟ್ ತೆರೆಯಲು ಹಾಗೂ ಹಳೇಯ ಆಕೌಂಟ್ ಗಳಿಗೆ ಆಧಾರ್ ಲಿಂಕ್ ಮಾಡುವ ಹೊಸ ನಿಯಮವನ್ನು ಜಾರಿಗೆ ತರಲಿದೆ ಎನ್ನುವ ವಿಚಾರವು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಫೇಸ್ ಬುಕ್ ಸ್ಪಷ್ಟನೆಯನ್ನು ನೀಡಿದೆ. ಭಾರತೀಯ ಆಧಾರ್ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎನ್ನಲಾಗಿದೆ.

ಫೇಸ್ ಬುಕ್ ಭಾರತೀಯ ಆಧಾರ್ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ..!

ಫೇಸ್ ಬುಕ್ ತನ್ನ ಬಳಕೆದಾರರು ತಮ್ಮ ನಿಜವಾದ ಹೆಸರು ಮತ್ತು ವಿಳಾಸದೊಂದಿಗೆ ಲಾಗ್ ಆಗಲಿ ಎನ್ನುವ ಕಾರಣಕ್ಕೆ ಮಾತ್ರವೇ ಆಧಾರ್ ಕಾರ್ಡ್ ನಂಬರ್ ಅನ್ನು ಲಿಂಕ್ ಮಾಡಲಿ ಎಂದು ಕೇಳಿತ್ತು. ಆದರೆ ಇದು ಕಡ್ಡಾಯವಲ್ಲ ಎಂದು ಫೇಸ್ ಬುಕ್ ಸ್ಪಷ್ಟ ಪಡಿಸಿದೆ ಎನ್ನಲಾಗಿದೆ. ಬಳಕೆದಾರನ್ನು ಸ್ನೇಹಿತರೊಂದಿಗೆ ಮತ್ತು ಬಂಧುಗಳೊಂದಿಗೆ ಕನಕ್ಟ್ ಮಾಡಲು ಆಧಾರ್ ನಂಬರ್ ಬಳಕೆ ಮಾಡಿಕೊಳ್ಳಲು ಮುಂದಾಗಿತ್ತು ಎನ್ನಲಾಗಿದೆ.

ಈ ಕುರಿತು ಫೇಸ್ ಬುಕ್ ಪರೀಕ್ಷೆಯೊಂದನ್ನು ನಡೆಸಿದ್ದು, ಆದರೆ ಇದರಲ್ಲಿ ಬಳಕೆದಾರರು ಆಧಾರ ಕಾರ್ಡ್ ನೀಡುಲು ಹಿಂದೆಟ್ಟು ಹಾಕಿದ್ದಾರೆ. ಇದಲ್ಲದೇ ಫೇಸ್ ಬುಕ್ ನಕಲಿ ಆಕೌಂಟ್ ಗಳನ್ನು ನಿರ್ಮೂಲನೆ ಮಾಡಲು ಈ ಕ್ರಮಕ್ಕೆ ಮುಂದಾಗಿತ್ತು. ಅಸಲಿ ಮಾಹಿತಿಯನ್ನು ನೀಡುದರಿಂದ ಸ್ನೇಹಿತರನ್ನು ಹುಡುಕುವುದು ಸುಲಭ ಎನ್ನಲಾಗಿದೆ.

ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

ಆದರೆ ಫೇಸ್ ಬುಕ್ ನಡೆಸಿದ ಪರೀಕ್ಷೆಯೂ ಅತ್ಯಂತ ಸಣ್ಣದಾಗಿದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಜಾರಿಗೆ ತರುವ ಯಾವುದೇ ಆಲೋಚನೆ ಇಲ್ಲ ಎಂದು ತಿಳಿಸಿದೆ. ಅಲ್ಲದೇ ಬಳಕೆದಾರರ ಆಧಾರ್ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ತಿಳಿಸಿದೆ.

ಈಗಾಗಲೇ ಭಾರತದಲ್ಲಿ 217 ಮಿಲಿಯನ್ ಬಳಕೆದಾರರನ್ನು ಫೇಸ್ ಬುಕ್ ಹೊಂದಿದೆ ಎನ್ನಲಾಗಿದೆ. ಇದರಲ್ಲಿ 212 ಮಿಲಿಯನ್ ಮಂದಿ ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಬುಕ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ 2.1 ಬಿಲಿಯನ್ ಮಂದಿ ಜಾಗತಿಕವಾಗಿ ಫೇಸ್ ಬುಕ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಫೇಸ್ ಬುಕ್ ತಿಳಿಸಿದೆ.

English summary
Social media giant Facebook has now clarified that it is not collecting Aadhaar data and that some people have misinterpreted the information.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot