ಫೇಸ್ಬುಕ್ ನ ಹೊಸ ಗ್ರೂಪ್ ವೀಡಿಯೋ ಚ್ಯಾಟ್ ಆಪ್ - ಬಾನ್ಫೈರ್

By: Tejaswini P G

ಫೇಸ್ಬುಕ್ ಲಾಂಚ್ ಮಾಡಿದೆ ಹೊಸದೊಂದು ಲೈವ್ ಗ್ರೂಪ್ ವೀಡಿಯೋ ಚ್ಯಾಟ್ ಆಪ್, ಬಾನ್ಫೈರ್. ಈ ಆಪ್ ಮೊದಲ ಬಾರಿಗೆ ಸೆಪ್ಟಂಬರ್ನಲ್ಲಿ ಐಓಎಸ್ ನಲ್ಲಿ ಕಾಣ ಸಿಕ್ಕಿತ್ತಾದರೂ ಕೇವಲ ಕೆಲವೇ ಮಂದಿಗಷ್ಟೇ ಇದು ಲಭ್ಯವಾಗಿತ್ತಂತೆ.ಈಗ ಈ ಆಪ್ ಆಂಡ್ರಾಯ್ಡ್ ಗೂ ಬಂದಿದೆ.

ಫೇಸ್ಬುಕ್ ನ ಹೊಸ ಗ್ರೂಪ್ ವೀಡಿಯೋ ಚ್ಯಾಟ್ ಆಪ್ - ಬಾನ್ಫೈರ್

ಬಾನ್ಫೈರ್ : ಗ್ರೂಪ್ ವೀಡಿಯೋ ಚ್ಯಾಟ್, ಇದೊಂದು ಗ್ರೂಪ್ ವೀಡಿಯೋ ಚ್ಯಾಟ್ ಗೆ ಅನುವು ಮಾಡಿಕೊಡುವ ಆಪ್ ಆಗಿದ್ದು, ಫೇಸ್ಬುಕ್ ನ ಈ ಆಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದರೂ, ಸಧ್ಯಕ್ಕೆ ಕೆಲವೇ ಪ್ರದೇಶಗಳಿಗಷ್ಟೇ ಸೀಮಿತವಾಗಿದೆ.ಆದರೆ ಆಂಡ್ರಾಯ್ಡ್ ಬಳಕೆದಾರರು APK Mirror ನಿಂದ ಈ ಆಪ್ ನ APK ಫೈಲ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಈ ಆಪ್ ಅನ್ನು ತಮ್ಮ ಮೊಬೈಲ್ಗಳಲ್ಲಿ ಪಡೆಯಬಹುದು.

ಫೇಸ್ಬುಕ್ ಬಾನ್ಫೈರ್ ಇಂದಿನ ಯುವಜನತೆಯನ್ನೇ ತನ್ನ ಗುರಿಯಾಗಿಸಿಕೊಂಡಿದ್ದು, ಸ್ನ್ಯಾಪ್ಚ್ಯಾಟ್ ನಂತೆ ಹಲವಾರು ಫಿಲ್ಟರ್ಗಳನ್ನು ಆಪ್ನಲ್ಲಿ ನೀಡಿದೆ. ಫೇಸ್ಬುಕ್ ತನ್ನ ಯುವ ಬಳಕೆದಾರರ ಸಂಖ್ಯೆಯಲ್ಲಿ ಕುಸಿತವನ್ನು ಗಮನಿಸಿದ್ದು, ಅವರನ್ನು ಸೆಳೆಯಲೆಂದೇ ಈ ಆಪ್ ಅನ್ನು ಅಭಿವೃದ್ಧಿಪಡಿಸಿದೆಯಂತೆ. ಈ ಆಪ್ ನ ಗ್ರೂಪ್ ವೀಡಿಯೋ ಚ್ಯಾಟ್ ಸೌಲಭ್ಯ ಯುವ ಜನತೆಯ ಅಗತ್ಯಗಳನ್ನು ಪೂರೈಸಲಿದೆ.

'ಭಾರತದ ಯುವ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಿದೆ ಗೂಗಲ್'

ಫೇಸ್ಬುಕ್ ಅಭಿವೃದ್ಧಿಪಡಿಸಿರುವ ಇತರ ಆಪ್ಗಳಂತೆ, ಬಾನ್ಫೈರ್:ಗ್ರೂಪ್ ವೀಡಿಯೋ ಚ್ಯಾಟ್ ಆಪ್ ಸಹ ಫೇಸ್ಬುಕ್ ನ ಅಪ್ಲಿಕೇಶನ್ ಸ್ಯೂಟ್ ನಲ್ಲಿರುವ ಫೇಸ್ಬುಕ್, ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ ಜೊತೆ ಇಂಟಗ್ರೇಟ್ ಅಗಿದೆ.ಬಾನ್ಫೈರ್ ನಲ್ಲಿ ಬಳಕೆದಾರರು ತಮ್ಮ ವೀಡಿಯೋ ಚ್ಯಾಟ್ ನ ಫೋಟೋ ಸರೆಹಿಡಿಯಬಹುದಾಗಿದ್ದು, ಈ ಫೋಟೋಗಳನ್ನು ಫೇಸ್ಬುಕ್ ನ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಗಳಾಗಿರುವ ಫೇಸ್ಬುಕ್, ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಇತರರೊಂದಿಗೆ ಹಂಚಿಕೊಳ್ಳಬಹುದು.

ಬಾನ್ಫೈರ್ ವೀಡಿಯೋ ಚ್ಯಾಟ್ ಮತ್ತೊಂದು ಖ್ಯಾತ ವೀಡಿಯೋ ಚ್ಯಾಟ್ ಆಪ್ ಆಗಿರುವ ಹೌಸ್ಪಾರ್ಟಿ ಆಪ್ನಂತೆಯೇ ಇದ್ದು, ಅದೇ ರೀತಿಯ ಫೀಚರ್ಗಳನ್ನು ನೀಡುತ್ತದೆ. ಫೇಸ್ಬುಕ್ ನ ಹೊಸ ವೀಡಿಯೋ ಆಪ್ ತಮ್ಮ ಗ್ರೂಪ್ ವೀಡಿಯೋ ಚ್ಯಾಟ್ನಲ್ಲಿ ಒಂದೇ ಬಾರಿಗೆ ಎಂಟು ಮಂದಿ ಭಾಗಿಯಾಗಲು ಅವಕಾಶ ಮಾಡಿಕೊಡುತ್ತದೆ. ಈ ಆಪ್ ನ ಸೆಟಪ್ ಬಹಳ ಸರಳವಾಗಿದ್ದು,ಬಹಳಷ್ಟು ಸ್ಟಿಕರ್ಗಳು ಮತ್ತು ಎಫೆಕ್ಟ್ಗಳನ್ನು ಕೂಡ ಹೊಂದಿದೆ.

ಗೂಗಲ್ ಪ್ಲೇಸ್ಟೋರ್ ನಲ್ಲಿ ಫೇಸ್ಬುಕ್ ನ ಬಾನ್ಫೈರ್: ಗ್ರೂಪ್ ವೀಡಿಯೋ ಚ್ಯಾಟ್ ನ ವಿವರ ಹೀಗಿದೆ. "ಬಾನ್ಫೈರ್ ಒಂದು ಗ್ರೂಪ್ ವೀಡಿಯೋ ಚ್ಯಾಟ್ ಆಪ್ ಆಗಿದ್ದು, ನಿಮ್ಮ ಗೆಳೆಯರೊಂದಿಗೆ ಕಾಲಕಳೆಯುವುದಲ್ಲದೆ, ಹೊಸ ಗೆಳೆಯರನ್ನು ಕೂಡ ಬೇಟಿಮಾಡಬಹುದು. ಆಪ್ ಅನ್ನು ತೆರೆಯುತ್ತಿದ್ದಂತೆಯೇ ನಿಮ್ಮ ಸ್ನೆಹಿತರೊಂದಿಗೆ ವೀಡಿಯೋ ಚ್ಯಾಟ್ ಶುರು ಮಾಡಿ! ಹೋಮ್ವರ್ಕ್ ಮಾಡುವುದರಿಂದ ಹಿಡಿದು ಹರಟೆ ಹೊಡೆಯುತ್ತಾ ಕಾಲ ಕಳೆಯಲು ಬಾನ್ಫೈರ್ ಆಪ್ ಸೂಕ್ತವಾಗಿದ್ದು, ನಿಮ್ಮೆಲ್ಲಾ ಗೆಳೆಯರೊಂದಿಗೆ ಸಮಯ ಕಳೆಯಲು ಬಾನ್ಫೈರ್ ಉತ್ತಮ ಆಯ್ಕೆ."Read more about:
English summary
Facebook has announced the launch of a new group video chat app called Bonfire aimed at the young users.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot