ಫೇಸ್ ಬುಕ್ ಹೊಸ ಆಯ್ಕೆ: ‘ಫೈಂಡ್ ವೈ-ಫೈ’

By: Precilla Dias

ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಆಪ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಿರುವವರು ತಾನೇ ಬಿಡುಗಡೆ ಮಾಡಿರುವ ವೈ-ಫೈ ಮೂಲಕ ಡೇಟಾ ಇಲ್ಲದೆಯೇ ಫೇಸ್ ಬುಕ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಈ ಆಯ್ಕೆ ಕೆಲವೇ ದೇಶಗಳಲ್ಲಿ ಮಾತ್ರವೇ ಇದು ಲಭ್ಯವಿದೆ.

ಫೇಸ್ ಬುಕ್ ಹೊಸ ಆಯ್ಕೆ: ‘ಫೈಂಡ್ ವೈ-ಫೈ’

ಫೈಂಡ್ ಫೇಸ್ ಬುಕ್ ಎಂಬ ಹೊಸ ವೈ-ಫೈ ಆಯ್ಕೆಯನ್ನು ನೀಡಲಾಗಿದ್ದು, ಇದು ನೀವು ಟ್ರಾವಲ್ ಮಾಡುವ ಸಂದರ್ಭದಲ್ಲಿ ವೈ-ಫೈ ಹಾಟ್ ಸ್ಪಾಟ್ ಸನಿಹದಲ್ಲಿರುವುದನ್ನು ಹುಡುಕಬಹುದಾಗಿದೆ.

ಈ ಆಯ್ಕೆಯನ್ನು ಫೇಸ್ ಬುಕ್ ಎಲ್ಲಾ ದೇಶಗಳಲ್ಲಿ ಪರಿಚಯಿಸಲು ಮುಂದಾಗಲಿದೆ ಎನ್ನಲಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ಇಡೀ ವಿಶ್ವದಲ್ಲಿ ಸಂಚರಿಸುವ ಸಂದರ್ಭದಲ್ಲಿ ಯಾವುದೇ ಅಡೆತಡೆಯಲ್ಲಿದೇ ಫೇಸ್ ಬುಕ್ ಬಳಸಿಕೊಳ್ಳಲಿ ಎಂಬುದು ಈ ಸೇವೆಯ ಉದ್ದೇಶವಾಗಿದೆ.

ಫೇಸ್ ಬುಕ್ ಹೊಸ ಆಯ್ಕೆ: ‘ಫೈಂಡ್ ವೈ-ಫೈ’

ಫೇಸ್ ಬುಕ್ ನಲ್ಲೇ ವೈ-ಫೈ ಹುಡುಕುವ ಆಯ್ಕೆಯನ್ನು ನೀಡಲಾಗಿದ್ದು, ಇದರಲ್ಲಿ ಎಲ್ಲೆಲ್ಲಿ ಹಾಟ್ ಸ್ಪಾಟ್ ಲಭ್ಯವಿದೆ ಎನ್ನುವುದನ್ನು ತಿಳಿಸಲಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವೈ-ಫೈ ಅನ್ನು ಆನ್ ಮಾಡಿಟ್ಟುಕೊಳ್ಳಬೇಕಾಗಿದೆ. ಫೇಸ್ ಬುಕ್ ನಲ್ಲಿರುವ ಮ್ಯಾಪ್ ಹಾಟ್ ಸ್ಪಾಟ್ ಗಳನ್ನು ತೋರಿಸಿಕೊಡಲಿದೆ.

ಈ ಸೇವೆಯೂ ಲಭ್ಯವಿರುವ ದೇಶಗಳಲ್ಲಿ ಆಪ್ಡೇಟ್ ಲಭ್ಯವಿದ್ದು, ಅದರಲ್ಲಿ ಫೈಂಡ್ ವೈ-ಫೈ ಆಯ್ಕೆಯು ದೊರೆಯಲಿದೆ. ಇದು ಸೋಶಿಯಲ್ ಮೀಡಿಯಾ ಲೋಕದಲ್ಲಿ ಹೊಸ ಗಾಳಿಯನ್ನು ಬೀಸಲಿದೆ. ಇದು ನಿಮ್ಮ ಡೇಟಾವನ್ನು ಉಳಿಸಿಕೊಡಲಿದೆ ಎನ್ನಲಾಗಿದೆ.Read more about:
English summary
Facebook is expanding the Find Wi-Fi feature to the global users by rolling out the update to Android and iOS apps.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot