Subscribe to Gizbot

ಫೇಸ್‌ಬುಕ್‌ನಿಂದ ನೂತನ ಹೈ-ಸ್ಪೀಡ್ ವೈಫೈ ಆಪ್ ಬಿಡುಗಡೆ!!

Written By:

ತನ್ನ ಬಳಕೆದಾರರಿಗೆ ಉಚಿತ ಬೇಸಿಕ್ ಇಂಟರ್‌ನೆಟ್ ನೀಡುವ ಯೋಜನೆಗೆ ಬ್ರೇಕ್ ಬಿದ್ದ ನಂತರ ಫೇಸ್‌ಬುಕ್ ಇನ್ನಿತರ ಮಾರ್ಗಗಳ ಮೂಲಕ ತನ್ನ ಬಳಕೆದಾರರನ್ನು ತಲುಪಲು ಮುಂದಾಗಿದೆ.! ಯಾವುದೇ ಮಾಧ್ಯಮ ಪ್ರಕಟಣೆಯನ್ನು ನೀಡದೇ ತನ್ನ ಬಳಕೆದಾರರಿಗೆ ಕೈಗೆಟುಕುವ ಬೆಲೆಯ ಅಂತರ್ಜಾಲ ಪ್ರವೇಶಿಸುವ ಸಾಧ್ಯತೆಯನ್ನು ಫೇಸ್‌ಬುಕ್ ನೀಡುತ್ತದೆ.!

ಮೊಬೈಲ್ ಡೇಟಾ ನೆಟ್ವಕ್‌ಗಳ ಬಳಕೆಗೆ ಪರ್ಯಾಯವಾಗಿ ಫೇಸ್‌ಬುಕ್ ಹೈ-ಸ್ಪೀಡ್ ವೈಫೈ ಕನೆಕ್ಟಿವಿಟಿಗಾಗಿ ಅಪ್ಲಿಕೇಶನ್ ಒಂದನ್ನು ಅಭಿವೃದ್ದಿಪಡಿಸಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಬಳಕೆದಾರರಿಗೆ ಹೈ ಸ್ಪೀಡ್ ಬ್ರಾಡ್ಬ್ಯಾಂಡ್ ಅಂತರ್ಜಾಲವನ್ನು ಕೈಗೆಟುಕುವ ಬೆಲೆಯಲ್ಲಿ ತಲುಪಿಸುವ ಸಲುವಾಗಿ ಫೇಸ್‌ಬುಕ್ ಈ ಆಪ್ ಅಭಿವೃದ್ದಿಪಡಿಸಿದೆ.!!

ಫೇಸ್‌ಬುಕ್‌ನಿಂದ ನೂತನ ಹೈ-ಸ್ಪೀಡ್ ವೈಫೈ ಆಪ್ ಬಿಡುಗಡೆ!!

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಪ್ರವೇಶ ಆ ಪ್ರದೇಶಗಳಲ್ಲಿನ ಫೇಸ್‌ಬುಕ್ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಹಾಗಾದರೆ, ಫೇಸ್‌ಬುಕ್ ಹೈ-ಸ್ಪೀಡ್ ವೈಫೈ ಕನೆಕ್ಟಿವಿಟಿ ಆಪ್ ಯಾವುದು? ಈ ಆಪ್‌ನಿಂದ ಕಡಿಮೆ ಬೆಲೆಯಲ್ಲಿ ವೈಫೈ ಬಳಕೆ ಹೇಗೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸ್‌ಪ್ರೆಸ್ ವೈಫೈ!!

ಎಕ್ಸ್‌ಪ್ರೆಸ್ ವೈಫೈ!!

ಫೇಸ್‌ಬುಕ್ ಹೈ-ಸ್ಪೀಡ್ ವೈಫೈ ಕನೆಕ್ಟಿವಿಟಿಗಾಗಿ ಅಪ್ಲಿಕೇಶನ್ ಒಂದನ್ನು ಅಭಿವೃದ್ದಿಪಡಿಸಿ ಅದಕ್ಕೆ ಎಕ್ಸ್‌ಪ್ರೆಸ್ ವೈಫೈ ಎಂದು ಹೆಸರಿಟ್ಟಿದೆ. ಹತ್ತಿರದ Wi-Fi ವಲಯಗಳನ್ನು ವೀಕ್ಷಿಸಲು, ಡೇಟಾ ಪ್ಯಾಕ್ ಕೊಡುಗೆಗಳು ಹಾಗೂ ಫೇಸ್‌ಬುಕ್ ವೈಫೈಗಳನ್ನು ಕೆನೆಕ್ಟ್ ಮಾಡಿಕೊಳ್ಳಬಹುದಾದ ಆಯ್ಕೆಗಳನ್ನು ನೂತನ ಆಪ್‌ನಲ್ಲಿ ನೀಡಲಾಗಿದೆ.!!

ಸರಳ ಮತ್ತು ಸುರಕ್ಷಿತಇಂಟರ್‌ನೆಟ್!!

ಸರಳ ಮತ್ತು ಸುರಕ್ಷಿತಇಂಟರ್‌ನೆಟ್!!

ಎಕ್ಸ್‌ಪ್ರೆಸ್ ವೈ-ಫೈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರಾರಂಭಿಸಲಾಗಿದೆ. ಈ ಎಕ್ಸ್‌ಪ್ರೆಸ್ ವೈ-ಫೈ ಆಪ್‌ ಮೂಲಕ ಬಳಕೆದಾರರು ತ್ವರಿತವಾಗಿ ಮತ್ತು ಅನುಕೂಲಕರವಾಗಿ ಇಂಟರ್ನೆಟ್ ಪ್ರವೇಶಿಸಬಹುದಾಗಿದೆ. ಇಂಟರ್ನೆಟ್ ಅನ್ನು ಪ್ರವೇಶಿಸುವ ಬಳಕೆದಾರರಿಗೆ ಯಾವುದೇ ರೀತಿಯ ಪ್ರವೇಶ ನಿರ್ಬಂಧಗಳಿಲ್ಲ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.!!

ಫ್ರೀ ಬೇಸಿಕ್ ಇಂಟರ್‌ನೆಟ್‌ಗಿಂತ ಭಿನ್ನ!!

ಫ್ರೀ ಬೇಸಿಕ್ ಇಂಟರ್‌ನೆಟ್‌ಗಿಂತ ಭಿನ್ನ!!

ಸಾಮಾಜಿಕ ಜಾಲ ದೈತ್ಯ ಫೇಸ್‌ಬುಕ್ ಸಂಸ್ಥೆ ಆರಂಭಿಸಿರುವ ಈ ಫೇಸ್‌ಬುಕ್ ಎಕ್ಸ್‌ಪ್ರೆಸ್ ವೈಫೈಫ್ರೀ ಬೇಸಿಕ್ ಇಂಟರ್‌ನೆಟ್‌ಗಿಂತ ಭಿನ್ನವಾಗಿದೆ. ಇಲ್ಲಿ ಗ್ರಾಹಕರು ರೀಚಾರ್ಜ್ ಮಾಡಿಕೊಂಡು ಇಂಟರ್‌ನೆಟ್ ಬಳಕೆ ಮಾಡಿಕೊಳ್ಳಬಹುದು. ಆದರೆ, ಇಲ್ಲಿ ಗ್ರಾಹಕರಿಗೆ ಸಿಗುವ ಇಂಟರ್‌ನೆಟ್ ಭಾರೀ ವೇಗದಲ್ಲಿ ಕಾರ್ಯನಿರ್ವಹಣೆ ನೀಡಲಿದೆ.!!

How to view all photos, pages, comments and posts you liked on Facebook (KANNADA)
ಎಕ್ಸ್‌ಪ್ರೆಸ್ ವೈಫೈ ರೀಚಾರ್ಜ್ ಹೇಗೆ?

ಎಕ್ಸ್‌ಪ್ರೆಸ್ ವೈಫೈ ರೀಚಾರ್ಜ್ ಹೇಗೆ?

ಫೇಸ್‌ಬುಕ್ ಬಳಕೆದಾರರು ಸ್ಥಳೀಯ ವ್ಯಾಪಾರ ಪಾಲುದಾರರಿಂದ ಡೇಟಾ ಪ್ಯಾಕೇಜ್‌ಗಳನ್ನು ಖರೀದಿಸಬೇಕು ಮತ್ತು ಅದೇ ನೆಟ್ವರ್ಕ್‌ಗೆ ಸೇರಿದ ಹತ್ತಿರದ ವೈಫೈ ಪಾಯಿಂಟ್ಗಳ ಮೂಲಕ ಪ್ರವೇಶಿಸಬೇಕು. ನಂತರ ಬಳಕೆದಾರರಿಗೆ ಬ್ರಾಡ್ಬ್ಯಾಂಡ್ ಅಂತರ್ಜಾಲವನ್ನು ಕೈಗೆಟುಕುವ ಬೆಲೆಯಲ್ಲಿ ಪ್ರವೇಶಿಸುವ ಸಾಧ್ಯತೆಯನ್ನು ನೀಡುತ್ತದೆ.!!

ಫೇಸ್‌ಬುಕ್‌ಗೆ ಮಾತ್ರವಲ್ಲ.!!

ಫೇಸ್‌ಬುಕ್‌ಗೆ ಮಾತ್ರವಲ್ಲ.!!

ಫೇಸ್‌ಬುಕ್ ಹೈ-ಸ್ಪೀಡ್ ವೈಫೈ ಕನೆಕ್ಟಿವಿಟಿಗಾಗಿ ಇರುವ ಫೇಸ್‌ಬುಕ್ ಎಕ್ಸ್‌ಪ್ರೆಸ್ ವೈಫೈ ಮೂಲಕ ಅಂತರ್ಜಾಲ ಪಡೆದರೆ ಫೇಸ್‌ಬುಕ್‌ಗೆ ಮಾತ್ರ ಅಂತರ್ಜಾಲ ಬಳಕೆಯಾಗುವುದಿಲ್ಲ. ಈ ಇಂಟರ್‌ನೆಟ್ ಮೂಲಕ ಇತರೆ ಎಲ್ಲಾ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದಾಗಿದೆ. ವಿಡಿಯೋ, ಚಿತ್ರಗಳೆಲ್ಲವನ್ನೂ ಡೌನ್‌ಲೋಡ್ ಮಾಡಬಹುದಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It’s almost a year when Facebook made a grand attempt to connect Indians to the internet. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot