ಈ ವರ್ಷವೇ 'ವಾಟ್ಸ್ಆಪ್ ಪೇ' ವಾಣಿಜ್ಯ ಬಳಕೆಗೆ!..ಕನ್ನಡದಲ್ಲೂ ಇರಲಿದೆ ಸೇವೆ!

|

ಭಾರತೀಯರ ಅಚ್ಚುಮೆಚ್ಚಿನ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್ಆಪ್‌ನಲ್ಲಿ ಈ ವರ್ಷ ಪೇಮೆಂಟ್ ಸೇವೆ ಬರುವುದು ಖಚಿತವಾಗಿದೆ. ಕಳೆದ ವರ್ಷದಿಂದಲೇ ಪರಿಶೀಲನಾ ಬಳಕೆಯಲ್ಲಿರುವ ವಾಟ್ಸ್ಆಪ್ ಪೇ ಸೇವೆಯನ್ನು ವಾಣಿಜ್ಯ ಬಳಕೆಗೆ ಜಾರಿಮಾಡಲು ವಾಟ್ಸ್ಆಪ್ ಸಂಸ್ಥೆ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಹೆಚ್ಚು ಜನಪ್ರಿಯತೆ ಗಳಿಸಿಸಿರುವ ಪೇಟಿಎಂ, ಫೋನ್‌ಪೇ ಮತ್ತು ಗೂಗಲ್ ಪೇ ಆಪ್‌ಗಳಿಗೆ ಪೈಪೋಟಿ ಎದುರಾಗಲಿದೆ.

ಭಾರತದಲ್ಲಿ ಸಂಪೂರ್ಣ ವಾಣಿಜ್ಯ ಬಳಕೆಗೆ ಅನುಕೂಲವಾಗುವಂತೆ ವಾಟ್ಸ್ಆಪ್ಪ್ ಯೋಜನೆ ರೂಪಿಸಿದ್ದು, ಪಾವತಿ ವ್ಯವಸ್ಥೆಯಲ್ಲಿನ ಭದ್ರತಾ ಲೋಪ, ಜತೆಗೆ ಬ್ಯಾಂಕ್ ಮತ್ತು ಡಿಜಿಟಲ್ ವ್ಯವಸ್ಥೆಯ ನಿಯಮಾವಳಿಗಳನ್ನು ಪೂರೈಸಿದ ಬಳಿಕ ವಾಟ್ಸಪ್ ದೇಶದಲ್ಲಿ ವಾಣಿಜ್ಯ ಸೇವೆ ನೀಡಲಿದೆ. ಯುಪಿಐ ಇಂಟಿಗ್ರೇಶನ್‌ಗೆ ಈ ಮೊದಲೇ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿರುವ ಸಂಸ್ಥೆಯು ದೇಶದಲ್ಲಿ ಬೃಹತ್ ಬ್ಯಾಂಕ್‌ಗಳೊಡನೆ ಮಾತುಕತೆಯನ್ನು ಸಹ ಮುಗಿಸಿದೆ.

ಈ ವರ್ಷವೇ 'ವಾಟ್ಸ್ಆಪ್ ಪೇ' ವಾಣಿಜ್ಯ ಬಳಕೆಗೆ!..ಕನ್ನಡದಲ್ಲೂ ಇರಲಿದೆ ಸೇವೆ!

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಹಣ ಕಳಿಸುವ ಹಾಗೂ ಸ್ವೀಕರಿಸುವವರನ್ನು ಸಂಸ್ಥೆಯು ಬ್ಯಾಂಕ್ ಎಂಡ್ ನಿಂದ ಗುರುತಿಸಲಿದೆ. ಹಾಗಾಗಿ, ಶೀಘ್ರವಾಗಿ ಬೆಳವಣಿಗೆ ಕಾಣುತ್ತಿರುವ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ವಾಟ್ಸ್‌ಅಪ್ ಪ್ರವೇಶಿಸುವುದರಿಂದ ದೊಡ್ಡ ಮಟ್ಟದ ಕ್ರಾಂತಿಯೇ ಆಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದರೆ, ವಾಟ್ಸ್‌ಆಪ್ ಪೇ ಸೌಲಭ್ಯ ಹೇಗಿರಲಿದೆ? ವಾಟ್ಸ್ಆಪ್‌ನಿಂದ ಹಣವನ್ನು ಹೇಗೆ ಸೆಂಡ್ ಮಾಡುವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

(ಯುಪಿಐ) ಆಧಾರಿತ ಪಾವತಿ

(ಯುಪಿಐ) ಆಧಾರಿತ ಪಾವತಿ

ಜನಪ್ರಿಯ ಮೆಸೇಜಿಂಗ್ ಅಪ್ ವಾಟ್ಸ್ಆಪ್ ಏಕೀಕೃತ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಪಾವತಿಯನ್ನು ಅಳವಡಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳೊಂದಿಗೆ ವಾಟ್ಸ್‌ಆಪ್ ಸಹಭಾಗಿತ್ವವನ್ನು ಹೊಂದಿದೆ.

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ

'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಮೂಲಕ ಸಮೀಪದ ಮೊಬೈಲ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ. ಮೈಕ್ರೋಫೋನ್ ಮತ್ತು ಸ್ಪೀಕರ್‌ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆಯೂ ಆಪ್ ಸಂಪರ್ಕ ಸಾಧಿಸಲಿದೆ.

ಪೇಮೆಂಟ್ ಮಾಡುವುದು ಹೇಗೆ?

ಪೇಮೆಂಟ್ ಮಾಡುವುದು ಹೇಗೆ?

ವಾಟ್ಸ್‌ಆಪ್ ನೀಡಿರುವ ಮಾಹಿತಿಯಂತೆ ನೀವು ವಾಟ್ಸ್ಆಪ್ ಬಳಕೆ ಮಾಡುತ್ತಿರುವ ಮೊಬೈಲ್‌ ಸಂಖ್ಯೆಯು ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಸಂಪರ್ಕಿಸಿರಬೇಕು. ವಾಟ್ಸ್ಆಪ್‌ನಲ್ಲಿ ಪೇಮೆಂಟ್‌ಗಾಗಿಯೇ ಹೆಚ್ಚುವರಿ ಆಯ್ಕೆಯನ್ನು (ರೂಪಾಯಿ ಚಿಹ್ನೆ ಎನ್ನಲಾಗಿದೆ) ನೀಡಲಾಗಿದ್ದು, ಎಲ್ಲಿ ಯುಪಿಐ ಐಡಿ ನೀಡಿ ಹಣ ವಿನಿಮಯ ಮಾಡಬಹುದು.

ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್

ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್

'ವಾಟ್ಸ್ಆಪ್ ಪೇ' ಪ್ಲಾಟ್‌ಫಾರ್ಮ್ ಈಗಾಗಲೇ ಬೀಟಾ (ಪರೀಕ್ಷೆ) ಹಂತದಲ್ಲಿದೆ. ಪೇಮೆಂಟ್ ಸೇವೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈಗಾಗಲೇ ಕೆಲವರಿಗೆ ತಿಳಿದಿದೆ. ಇದರ ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ಇನ್ನಿತರ ಪ್ರಮುಖ ಸೇವೆಗಳನ್ನು ಪೇಮೆಂಟ್ ಸೇವೆಯ ಮೂಲಕ ಗ್ರಾಹಕರಿಗೆ ಪರಿಚಯಿಸಲು ವಾಟ್ಸ್ಆಪ್ ಸಂಸ್ಥೆ ತೀರ್ಮಾನಿಸಿದೆ.

ಕನ್ನಡದಲ್ಲಿಯೂ ಪೇಮೆಂಟ್ ಸೇವೆ

ಕನ್ನಡದಲ್ಲಿಯೂ ಪೇಮೆಂಟ್ ಸೇವೆ

Tez ಆಪ್‌ನಂತೆ 'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಕೂಡ ಕನ್ನಡ, ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತೆಲುಗು ಹಾಗೂ ತಮಿಳು ಸೇರಿ ಎಂಟು ಭಾಷೆಗಳಲ್ಲಿ ಬರುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ವಾಟ್ಸ್ಆಪ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಈವರೆಗೂ ನೀಡಿಲ್ಲ.

Best Mobiles in India

English summary
Facebook Inc. is moving a step closer to launching its long-delayed WhatsApp payments service in India after wrapping up an audit of related data practices, according to people familiar with the matter. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X