ಬದಲಾಗುತ್ತಿದೆ ಫೇಸ್‌ಬುಕ್: ನ್ಯೂಸ್‌ಫೀಡ್ಸ್‌ನಲ್ಲಿ ಬಂಧುಗಳೇ ಹೆಚ್ಚು..!

By: Tejaswini P G

ಫೇಸ್ಬುಕ್ 2018ರಲ್ಲಿ ತನ್ನ ಪ್ಲ್ಯಾಟ್ಫಾರ್ಮ್ಗೆ ಹೊಸತನವನ್ನು ನೀಡಲು ನಿರ್ಧರಿಸಿದ್ದು, ತನ್ನ ಪ್ಲ್ಯಾಟ್ಫಾರ್ಮ್ ಗೆ ಹೊಸ ಅಪ್ಡೇಟ್ ತರಲಿರುವುದಾಗಿ ತಿಳಿಸಿದೆ. ಈ ಹೊಸ ಅಪ್ಡೇಟ್ನ ಮೂಲಕ ಬಳಕೆದಾರರ ನ್ಯೂಸ್ಫೀಡ್ನಲ್ಲಿ ಪೇಜ್ ಮತ್ತು ಸೆಲೆಬ್ರಿಟಿಗಳ ಬದಲಾಗಿ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಈ ಮೂಲಕ ಜನರು ಈ ಸಾಮಾಜಿಕ ಜಾಲತಾಣದಲ್ಲಿ ಹಿಂದಿಗಿಂತ ಕಡಿಮೆ ಕಾಲ ವ್ಯಯಿಸುವ ಸಾಧ್ಯತೆಯಿದೆ.

ಬದಲಾಗುತ್ತಿದೆ ಫೇಸ್‌ಬುಕ್: ನ್ಯೂಸ್‌ಫೀಡ್ಸ್‌ನಲ್ಲಿ ಬಂಧುಗಳೇ ಹೆಚ್ಚು..!

ಫೇಸ್ಬುಕ್ ಪೋಸ್ಟ್ಗಳನ್ನು ರ್ಯಾಂಕ್ ಮಾಡುವ ವಿಧಾನ ಬದಲಾಗಲಿದ್ದು, ಸಮಾಜಿಕವಾಗಿ ಪರಸ್ಪರ ಬೆರೆಯುವಿಕೆ ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ ಎಂದು ನ್ಯೂಸ್ಫೀಡ್ ನ ಪ್ರಾಡಕ್ಟ್ ಮ್ಯಾನೇಜರ್ ಜಾನ್ ಹೆಜ್ಮ್ಯಾನ್ AFP ಗೆ ತಿಳಿಸಿದ್ದಾರೆ. "ಈ ಬದಲಾವಣೆಯ ಮೂಲಕ ಜನರು ಫೆಸ್ಬುಕ್ ನಲ್ಲಿ ಕಡಿಮೆ ಸಮಯ ಕಳೆಯಲಿದ್ದಾರೆ. ಆದರೆ ಅವರು ಫೇಸ್ಬುಕ್ ನಲ್ಲಿ ಕಳೆಯುವ ಸಮಯ ಹೆಚ್ಚು ಮೌಲ್ಯಯುತವಾಗಿರುತ್ತದೆ. ಹೀಗಾಗಿ ನಮಗೆ ಅದು ಸಂತೋಷವನ್ನುಂಟು ಮಾಡುತ್ತದಲ್ಲದೆ ನಮ್ಮ ಬಿಸ್ನೆಸ್ ಗೂ ಒಳಿತುಂಟಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಉದಾಹರಣೆಗೆ, ಪ್ರಸಿದ್ಧ ವ್ಯಕ್ತಿಯೊಬ್ಬರು ಅಥವಾ ನಿಮ್ಮ ಮೆಚ್ಚಿನ ರೆಸ್ಟೋರೆಂಟ್ ಮಾಡುವ ಪೋಸ್ಟ್ ಗಿಂತ ನಿಮ್ಮ ಜೀವನ ಸಂಗಾತಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವ ಫ್ಯಾಮಿಲಿ ವೀಡಿಯೋ ಹೆಚ್ಚು ಮುಖ್ಯವಾಗಿರುತ್ತದೆ. " ಅನಗತ್ಯವಾಗಿ ಇತರ ವಿಷಯಗಳ ಬಗ್ಗೆ ಕಾಲ ಕಳೆಯುವುದಕ್ಕಿಂತ ತಮ್ಮ ಹತ್ತಿರದವರೊಂದಿಗೆ ಪರಸ್ಪರ ಬೆರೆತು ಸಂವಹನ ನಡೆಸುವುದು ಹೆಚ್ಚು ಮುಖ್ಯವಾದುದು. ನಾವು ಮಾಡಿರುವ ಅಪ್ಡೇಟ್ಗಳಲ್ಲಿ ಇದು ಪ್ರಮುಖವಾದುದು" ಎಂದು ಹೆಜ್ಮೆನ್ ತಿಳಿಸಿದ್ದಾರೆ.

ಫೇಸ್ಬುಕ್ ನ ಸಹ-ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಮಾರ್ಕ್ ಜುಕರ್ಬರ್ಗ್ ಅವರು 2018ರಲ್ಲಿ ಜನರನ್ನು ಹತ್ತಿರ ತರುವುದು ಮತ್ತು ಸಮುದಾಯಗಳನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿರುತ್ತದೆ ಎಂದು ಹೇಳಿದ್ದಾರೆ.

How to Activate UAN Number? KANNADA

ಅಮೆರಿಕಾದಲ್ಲಿ ನಿ‍ಷೇಧವಾಗಲಿರುವ ವಿಶ್ವದ ಟಾಪ್ ಸ್ಮಾರ್ಟ್‌ಫೋನ್‌: ಭಾರತದಲ್ಲಿ ಬಹುಬೇಡಿಕೆಯಲ್ಲಿದೆ..!

ನ್ಯೂಸ್ಫೀಡ್ ರ್ಯಾಂಕಿಂಗ್ ನ ಹೊಸ ಅಪ್ಡೇಟ್ ಬರುವ ವಾರಗಳಲ್ಲಿ ಜಾಗತಿಕವಾಗಿ ಎಲ್ಲರಿಗೆ ಲಭ್ಯವಾಗಲಿದ್ದು ಫೆಸ್ಬುಕ್ ನ ಈ ಗುರಿಯನ್ನು ಬೆಂಬಲಿಸಲಿದೆ." ಈ ಹೊಸ ಅಪ್ಡೇಟ್ ಜಾರಿಗೆ ಬರುತ್ತಿದ್ದಂತೆ ನ್ಯೂಸ್ಫೀಡ್ ನಲ್ಲಿ ಬಿಸ್ನೆಸ್, ಬ್ರ್ಯಾಂಡ್ ಮತ್ತು ಮೀಡಿಯಾ ಗೆ ಸಂಬಂಧಿಸಿದ ಪೋಸ್ಟ್ಗಳು ಕಡಿಮೆಯಾಗಲಿದೆ. ಹಾಗೆಯೇ ನ್ಯೂಸ್ಫೀಡ್ನಲ್ಲಿ ಕಾಣಸಿಗುವ ಪಬ್ಲಿಕ್ ಪೋಸ್ಟ್ಗಳು ಜನರ ಮಧ್ಯೆ ಅರ್ಥಪೂರ್ಣ ಸಂವಹನವನ್ನು ಪ್ರೋತ್ಸಾಹಿಸುವಂತಿರಬೇಕು" ಎಂದು ಜುಕರ್ಬರ್ಗ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಯುಎಸ್ ಚುನಾವಣೆಯ ಸಂದರ್ಭದಲ್ಲಿ ರಷ್ಯಾ ಸೃಷ್ಟಿಸಿದ್ದ ನಕಲಿ ಸುದ್ದಿಗಳನ್ನು ಯುಎಸ್ ಮತ್ತು ಇತರ ರಾಷ್ಟ್ರಗಳಲ್ಲಿ ಹಬ್ಬಿಸಿದ್ದಕ್ಕಾಗಿ ಗೂಗಲ್, ಟ್ವಿಟ್ಟರ್ ಮತ್ತು ಫೇಸ್ಬುಕ್ಗಳು ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದವು. ಇದರ ನಂತರ ಫೇಸ್ಬುಕ್ ಈ ಸಮಸ್ಯೆಯನ್ನು ನಿವಾರಿಸಲು ಹಲವು ಬದಲಾವಣೆಗಳನ್ನು ತಂದಿತ್ತು. " ಫೆಸ್ಬುಕ್ ನಲ್ಲಿ ಕೆಟ್ಟ ಮತ್ತು ತಪ್ಪು ಮಾಹಿತಿಯನ್ನು ಕಡಿಮೆಯಾಗಿಸಲು ನಾವು ತುಂಬ ಶ್ರಮವಹಿಸುತ್ತಿದ್ದೇವೆ. ಈ ಹೊಸ ಅಪ್ಡೇಟ್ ನ ಗುರಿ ಬಳಕೆದಾರರಿಗೆ ಹೆಚ್ಚು ಹತ್ತಿರವಾದ ಮಾಹಿತಿಗಳ ಮೌಲ್ಯ ವೃದ್ಧಿಸುವುದೇ ಆಗಿದೆ" ಎಂದು ಹೆಜ್ಮೆನ್ ಹೇಳಿದ್ದಾರೆ.

ಶೈಕ್ಷಣಿಕ ಸಂಶೋಧನೆಯೊಂದರ ಅನುಸಾರ ವಾರ್ತೆ ಓದುವುದು ಅಥವಾ ವೀಡಿಯೋ ಶೇರ್ ಮಾಡುವುದಕ್ಕಿಂತ ತಮ್ಮ ಪ್ರೀತಿ ಪಾತ್ರರೊಂದಿಗೆ ಬೆರೆತು ಸಂವಹನ ನಡೆಸುವುದು ಮನುಷ್ಯನ ಯೋಗಕ್ಷೇಮಕ್ಕೆ ಒಳ್ಳೆಯದು. "ಯಾವ ಮಾಹಿತಿ ಹೆಚ್ಚು ಅರ್ಥಪೂರ್ಣವೆಂದು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲವಾದರೂ ಸಿಗುವ ಸೂಚನೆಗಳನ್ನನುಸರಿಸಿ ಅರ್ಥಪೂರ್ಣ ಮಾಹಿತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೆಜ್ಮೆನ್ ತಿಳಿಸಿದ್ದಾರೆ.

ತಾನು ಕೊಂದ ಪ್ರಾಣಿಯ ಮಾಂಸವನ್ನು ಮಾತ್ರ ತಿನ್ನುವುದರಿಂದ ಹಿಡಿದು ಮ್ಯಾಂಡರೀನ್ ಕಲಿಯುವ ವರೆಗೆ ಹಲವು ವೈಯುಕ್ತಿಕ ಗುರಿಗಳನ್ನು ತನಗೆ ತಾನೇ ಸೆಟ್ ಮಾಡಿಕೊಳ್ಳುವುದಕ್ಕೆ ಹೆಸರು ಪಡೆದ ಜುಕರ್ಬರ್ಗ್ ನ ಈ ವರ್ಷದ ಗುರಿ ಸಾಮಾಜಿಕ ಜಾಲತಾಣವನ್ನು ಸರಿಪಡಿಸುವುದಾಗಿದೆ! ಸಾಮಾಜಿಕ ಜಾಲತಾಣದಲ್ಲಿ ತುಂಬಿರುವ ದ್ವೇಷ ಮತ್ತು ನಿಂದನೆಗಳನ್ನು ನಿರ್ಮೂಲನೆಮಾಡಿ ಫೆಸ್ಬುಕ್ನಲ್ಲಿ ಕಳೆಯುವ ಸಮಯವನ್ನು ಅರ್ಥಪೂರ್ಣವಾಗಿಸುವುದು ಜುಕರ್ಬರ್ಗ್ ನ ಗುರಿಯಾಗಿದೆ.

"ನಾನು ನನ್ನ ಪ್ರಾಡಕ್ಟ್ ತಂಡಗಳಿಗೆ ನೀಡಿದ ಗುರಿಯನ್ನು ನಿಮಗೆ ಸಂಬಂಧಿತ ಮಾಹಿತಿಯನ್ನು ನೀಡುವುದರಿಂದ ನಿಮಗೆ ಅರ್ಥಪೂರ್ಣ ಸಾಮಾಜಿಕ ಸಂವಹನಗಳನ್ನು ಒದಗಿಸುವುದಕ್ಕೆ ಬದಲಾಯಿಸಿದ್ದೇನೆ" ಎಂದು ಜುಕರ್ಬರ್ಗ್ ಅವರು ಗುರುವಾರ ತಿಳಿಸಿದ್ದಾರೆ.

English summary
Facebook has now announced a major update to its platform. Well with the update, friends and family will be given priority above pages or celebrities in a user's news feed - and likely result in people spending less time on the leading social network.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot