"ಡಿಸ್‌ಲೈಕ್" ಆಯ್ಕೆ ತರಲಿದೆ ಫೇಸ್‌ಬುಕ್!!

Written By:

ಫೆಸ್‌ಬುಕ್ ಬಳಕೆದಾರರ ಬಹುದಿನದ ಆಸೆಯಂತೆ ಕಲವೇ ದಿನಗಳಲ್ಲಿ ಫೇಸ್‌ಬುಕ್ "ಡಿಸ್‌ಲೈಕ್" ಐಕಾನ್ ಆಯ್ಕೆಯನ್ನು ನೀಡುತ್ತದೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.!! ಯೂಟ್ಯೂಬ್‌ನಲ್ಲಿ ಮಾತ್ರ ಲಭ್ಯವಿದ್ದ ಈ ಆಯ್ಕೆಯನ್ನು ಫೇಸ್‌ಬುಕ್‌ನಲ್ಲಿಯೂ ಪರಿಚಯಿಸಲು ಫೇಸ್‌ಬುಕ್ ಸಂಸ್ಥೆ ಆಲೋಚಿಸಿದೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿಯೇ ಡಿಸ್‌ಲೈಕ್ ಮಾಡುವ ಒಂದು ಆಯ್ಕೆ ನಮಗೆ ಬೇಕಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದು, ಫೇಸ್‌ಬುಕ್‌ನಲ್ಲಿ ಈ ಐಕಾನ್ ನೀಡುವ ಬಗ್ಗೆ ಪ್ರಪಂಚದಾಧ್ಯಂತ ವೈರಲ್ ಆಗಿತ್ತು, ಹಾಗಾಗಿ, "ಡಿಸ್‌ಲೈಕ್" ಐಕಾನ್ ತರಲು ಫೇಸ್‌ಬುಕ್ ನಿರ್ಧರಿಸಿದೆ ಎನ್ನಲಾಗಿರುವ ಸುದ್ದಿ ಹರಿದಾಡಿದೆ.

ಜಿಯೋಯಿಂದಾಗಿ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ಬಂದು ನಿಂತ ಭಾರತ!!

ಲೈಕ್ ಆಯ್ಕೆಯ ಜೊತೆಯಲ್ಲಿ ಭಾವನೆಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಈಗಾಗಲೇ ಫೇಸ್‌ಬುಕ್ ನೀಡಿದ್ದು ಇದೀಗ ಪೋಸ್ಟ್‌ಗಳನ್ನು ಡಿಸ್‌ಲೈಕ್ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ. ಇನ್ನು ಈ ಯೋಜನೆ ಪರೀಕ್ಷೆ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಫೇಸ್‌ಬುಕ್ ಈ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ.!!

ಬಹುತೇಕ ಫೇಸ್‌ಬುಕ್ ಬಳಕೆದಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಜೊತೆಗೆ, ಇಷ್ಟವಿಲ್ಲದ ಪೋಸ್ಟ್‌ಗಳನ್ನು ಡಿಸ್‌ಲೈಕ್ ಮಾಡುವುದರ ಮೂಲಕ ಫೇಸ್‌ಬುಕ್‌ನಲ್ಲಿ ಎಂತಹ ಪೋಸ್ಟ್‌ಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ ಎಂದು ತಿಳಿಯಬಹುದಾಗಿದೆ.

English summary
The social network site is testing our reactions and a dislike button. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot