ಫೇಸ್‌ಬುಕ್ ಮೂಲಕ ನಿಮಗೆ ಸಮಸ್ಯೆ ಎದುರಾಗಿದ್ದರೆ ಅಥವಾ ಫೇಸ್‌ಬುಕ್ ಬಳಕೆ ಮಾಡುವಾಗ ಯಾವುದಾದರೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ನಾವು ಮಾಡುವ ಮೊದಲು ಯೋಚಿಸುವುದೇ ಫೇಸ್‌ಬುಕ್ ಸಹಾಯವಾಣಿಯನ್ನು ಹುಡುಕುವುದು.! ಆದರೆ, ನಿಮಗೆ ಗೊತ್ತೇ? ಫೇಸ್‌ಬುಕ್ ನಿಮಗೆ ಯಾವುದೇ ಸಹಾಯವಾಣಿಯನ್ನು ನೀಡಿಲ್ಲ.!!
ಹೌದು, ಫೇಸ್‌ಬುಕ್ ಸಹಾಯವಾಣಿಯನ್ನು ನೀವು ಗೂಗಲ್‌ನಲ್ಲಿ ಹುಡುಕಿದರೆ ನಿಮಗೆ ಹಲವು ಸಹಾಯವಾಣಿ ಸಂಖ್ಯೆಗಳು ಕಾಣಿಸುತ್ತವೆ. ಆದರೆ, ಈ ಯಾವುದೇ ನಂಬರ್‌ಗಳು ಕೂಡ ಫೇಸ್‌ಬುಕ್ ಅಧಿಕೃತ ಸಹಾಯವಾಣಿಗಳಲ್ಲ. ಬದಲಾಗಿ ಇತರರು ನಿಮ್ಮನ್ನು ಮೋಸಗೊಳಿಸಲು ಮಾಡಿಕೊಂಡಿರುವ ಕೆಲವು ಗಿಮಿಕ್‌ಗಳು ಮಾತ್ರ.!!
ನೀವು ಫೇಸ್‌ಬುಕ್ ಸಹಾಯವಾಣಿಯನ್ನು ಗೂಗಲ್‌ನಲ್ಲಿ ಹುಡುಕಿದರರೂ ಸಹ ನಿಮಗೆ ಹೊರೆಯುವುದು ಫೇಸ್‌ಬುಕ್ ಸಹಾಯ ಕೇಂದ್ರದ ಮಾಹಿತಿ ಮಾತ್ರ.!! ಇದರಲ್ಲಿ ಫೇಸ್‌ಬುಕ್‌ನಲ್ಲಿ ಸಾಮಾನ್ಯವಾಗಿ ಎದುರಾಗಿರುವ ಸಮಸ್ಯೆಗಳ ಪ್ರಶ್ನೆಗಳು ಹಾಗೂ ಅದಕ್ಕೆ ಫೇಸ್‌ಬುಕ್ ತಜ್ಞರು ನೀಡಿರುವ ಉತ್ತರಗಳು ಮಾತ್ರ ಕಾಣಿಸಿಕೊಳ್ಳುತ್ತವೆ.!!
ಆದರೆ ಫೇಸ್‌ಬುಕ್ ಸಹಾಯ ಕೇಂದ್ರದ ಮಾಹಿತಿಯಲ್ಲಿ ಕರೆ ಮಾಡಿ ಮಾಹಿತಿ ಪಡೆಯುವ ವ್ಯವಸ್ಥೆ ಇಲ್ಲ.!! ಹಾಗಾಗಿ, ಫೇಸ್‌ಬುಕ್ ಬಳಕೆಯಲ್ಲಿ ಯಾವುದಾದರೂ ತೊಂದರೆ ಕಾಣಿಸಿದರೆ ಫೇಸ್‌ಬುಕ್ ತಜ್ಞರು ನೀಡಿರುವ ಪ್ರಶ್ನೆಗಳು ಮತ್ತು ಉತ್ತರಗಳನ್ನು ಓದಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.! ಅತವಾ ಗೂಗಲ್‌ನಲ್ಲಿ ನಿಮ್ಮ ಸಮಸ್ಯೆ ಏನು ಎಂಬುದನ್ನು ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ.!!
ಇದಕ್ಕೂ ಹೆಚ್ಚಿನ ಪರಿಹಾರ ನಿಮಗೆ ಬೇಕಿದ್ದಲ್ಲಿ, ಫೇಸ್‌ಬುಕ್ ಸೆಟ್ಟಿಂಗ್ಸ್ ತೆರೆದು Report a problem ಆಯ್ಕೆಯ ಮೂಲಕ ಸ್ಕ್ರೀನ್ ಷಾಟ್ ತೆಗೆದು ಅಟ್ಯಾಚ್ ಮಾಡಿಫೇಸ್‌ಬುಕ್ ತಂಡಕ್ಕೆ ಕಳಿಸಬಹುದು. ನಂತರ ಫೇಸ್‌ಬುಕ್ ತಜ್ಞರ ತಂಡ ಈ ಬಗ್ಗೆ ನಿಮಗೆ ಉತ್ತ ನೀಡಲಿದೆ.!!
Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಓದಿರಿ: ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.