ಅಮೆಜಾನ್ - ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀಡಂ ಸೇಲ್‌..! ಗ್ರಾಹಕರಿಗೆ ಬಿಗ್‌ ಧಮಾಕಾ..!

By GizBot Bureau
|

ಭಾರತೀಯ ಇ-ಕಾರ್ಮಸ್ ಮಾರುಕಟ್ಟೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮವನ್ನು ಕಾಣಬಹುದಾಗಿದೆ. ಇ-ಕಾಮರ್ಸ್ ಮಾರುಕಟ್ಟೆಯ ದೈತ್ಯ ಕಂಪನಿಗಳೆಂದು ಖ್ಯಾತಿಯನ್ನು ಪಡೆದುಕೊಂಡಿರುವ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಗಳು ತಮ್ಮ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸೇಲ್ ಅನ್ನು ಆಯೋಜನೆ ಮಾಡಿವೆ.

ಈ ಹಿನ್ನಲೆಯಲ್ಲಿ ಫ್ಲಿಪ್ ಕಾರ್ಟ್ ಮೂರು ದಿನಗಳ ಸೇಲ್ ಅನ್ನು ಆಯೋಜನೆ ಮಾಡಿದ್ದು, ಅಮೆಜಾನ್ ನಾಲ್ಕು ದಿನಗಳ ಸೇಲ್ ಅನ್ನು ಆಯೋಜನೆ ಮಾಡಿದೆ. ಈ ಹಿನ್ನಲೆಯಲ್ಲಿ ಸೇಲ್ ಕುರಿತಾದ ಮಾಹಿತಿಯೂ ಮುಂದಿದೆ.

ಅಮೆಜಾನ್ - ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀಡಂ ಸೇಲ್‌..! ಗ್ರಾಹಕರಿಗೆ ಬಿಗ್‌ ಧಮಾಕಾ.!

ಫ್ಲಿಪ್ ಕಾರ್ಟ್ ದಿ ಬಿಗ್ ಫ್ರೀಡಮ್ ಸೇಲ್ ಎಂದು ಆಯೋಜನೆ ಮಾಡಿದ್ದು, ಇದೇ ಮಾದರಿಯಲ್ಲಿ ಅಮೆಜಾನ್ ಫ್ರೀಡಮ್ ಸೇಲ್ ಎಂದು ನಾಮಕರಣವನ್ನು ಮಾಡಿದೆ. ಫ್ಲಿಪ್ಕಾರ್ಟ್ ನಲ್ಲಿ ನಡೆಯಲಿರುವ ಬಿಗ್ ಫ್ರೀಡಮ್ ಸೇಲ್ ಆಗಸ್ಟ್ 10 ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಇದಾದ ನಂತರದಲ್ಲಿ ಅಮೆಜಾನ್ ಫ್ರೀಡಮ್ ಸೇಲ್ ಆಗಸ್ಟ್ 9 ರಿಂದ 12 ರ ವರೆಗೆ ನಡೆಯಲಿದೆ.

ಮೊದಲಿಗೆ ಫ್ಲಿಪ್ ಕಾರ್ಟ್ ಕುರಿತ ಮಾಹಿತಿಯನ್ನು ನೋಡುವುದಾದರೆ, ಟಾಪ್ ಬ್ರಾಂಡ್ ಗಳಾದ ಶಿಯೋಮಿ, ಸ್ಯಾಮ್ ಸಂಗ್, ಆಪಲ್ ಮತ್ತು ಇತರೇ ಬ್ರಾಂಡ್ ಗಳ ವಸ್ತುಗಳ ಮೇಲೆ ಆಫರ್ ಅನ್ನು ನೀಡುತ್ತಿದೆ. ಲ್ಯಾಟ್ ಟಾಪ್, ಕ್ಯಾಮೆರಾ, ಸ್ಮಾರ್ಟ್ ಪೋನ್ ಮೇಲೆ ಆಫರ್ ಲಭ್ಯವಿದೆ. ಇದಲ್ಲದೇ 10 ಕ್ಯಾಷ್ ಬ್ಯಾಕ್ ಅನ್ನು ಸಿಟಿ ಬ್ಯಾಂಕ್ ಕಾರ್ಡು ದಾರರಿಗೆ ನೀಡುತ್ತಿದೆ.

ಅಮೆಜಾನ್ - ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀಡಂ ಸೇಲ್‌..! ಗ್ರಾಹಕರಿಗೆ ಬಿಗ್‌ ಧಮಾಕಾ.!

ಇನ್ನು ಅಮೆಜಾನ್ ಸೇಲ್ ಗೆ ಬರುವುದಾದರೆ ಮೊಬೈಲ್ ಪೋನ್ ಗಳ ಮೇಲೆ 40% ಆಫರ್ ನೀಡುತ್ತಿದೆ. ಇದೇ ಮಾದರಿಯಲ್ಲಿ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಮೇಲೆ 50% ವರೆಗೂ ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೇ ಸ್ಯಾಮ್ ಸಂಗ್, ಒನ್ ಪ್ಲಸ್, ಸೇರಿದಂತೆ ಹಲವು ಟಾಪ್ ಬ್ರಾಂಡ್ ಕಂಪನಿಗಳ ವಸ್ತುಗಳ ಮೇಲೆ ಆಫರ್ ಅನ್ನು ನೀಡುತ್ತಿದೆ. ಇದರೊಂದಿಗೆ SBI ಕಾರ್ಡುದಾರರಿಗೆ 10% ಕ್ಯಾಷ್ ಬ್ಯಾಕ್ ಅನ್ನು ನೀಡುತ್ತಿದೆ.

ಒಟ್ಟಿನಲ್ಲಿ ಎರಡು ಕಂಪನಿಗಳು ಬಳಕೆದಾರರನ್ನು ಸೆಳೆಯುವ ಸಲುವಾಗಿ ಹಲವು ಆಫರ್ ಗಳನ್ನು ಲಾಂಚ್ ಮಾಡುತ್ತಿವೆ. ಇದುಗಳಿಗೆ ಮರುಳಾಗಿ ಬಳಕೆದಾರರು ಯಾವುದರಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಖರೀದಿದಾರರಿಗೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರಿದಿ ಮಾಡುವವರಿಗೆ ಈ ಎರಡು ಸೇಲ್ ಗಳಲ್ಲಿ ಭಾರೀ ಪ್ರಮಾಣದ ಲಾಭವಾಗಲಿದೆ.

Best Mobiles in India

English summary
Flipkart Big Freedom sale Vs Amazon Freedom sale: All the top deals, discounts and offers that you should know. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X