ಹೊಸ ಆಪ್ಡೇಟ್ ಗೂಗಲ್ ಅಲೋಗೆ ಹೊಸ ಜನ್ಮ ನೀಡಿದೆ..!!!

By: Precilla Dias

ಗೂಗಲ್ ತನ್ನ ನೂತನ ಮೆಸೆಂಜಿಂಗ್ ಆಪ್ ಅಲೋ ಬಿಡುಗಡೆ ಮಾಡಿದ ನಂತರದಲ್ಲಿ ಹೆಚ್ಚಿನ ಖ್ಯಾತಿಯನ್ನುಗಳಸಿಲು ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ಹೊಸದೊಂದು ಆಪ್ಡೇಟ್ ನೀಡಲು ಮುಂದಾಗಿದೆ. ಈ ಆಪ್ಡೇಟ್ ನಲ್ಲಿ ಅಲೋ ಬಳಕೆದಾರರು ವಿಡಿಯೋ ಕಾಲಿಂಗ್ ಮಾಡುವ ಸಲುವಾಗಿ ಗೂಗಲ್ ಡಿಯೊ ವನ್ನು ನೇರವಾಗಿ ಬಳಸುವ ಅವಕಾಶವನ್ನು ಮಾಡಿದೆ.

ಹೊಸ ಆಪ್ಡೇಟ್ ಗೂಗಲ್ ಅಲೋಗೆ ಹೊಸ ಜನ್ಮ ನೀಡಿದೆ..!!!

ಡಿಯೊ ಕಾಲಿಂಗ್ ಅನ್ನು ನೇರವಾಗಿ ಅಲೋ ಚಾಟ್ ನಲ್ಲಿ ಬಳಸಿಕೊಳ್ಳುವ ಅವಕಾಶವನ್ನು ಗೂಗಲ್ ಮಾಡಿಕೊಟ್ಟಿದೆ. ನೀವು ಅಲೋದಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿರುವ ಸಂದರ್ಭದಲ್ಲಿ ಬಲಭಾಗದ ಮೇಲ್ತುದಿಯಲ್ಲಿ ಗೂಗಲ್ ಡಿಯೊ ಐಕಾನ್ ಕಾಣಿಸಿಕೊಳ್ಳಲಿದೆ. ಅಲ್ಲಿಂದಲೇ ಕಾಲ್ ಮಾಡಬಹುದಾಗಿದೆ. ಅಲ್ಲದೇ ನೀವು ವಿಡಿಯೋ ಕಾಲಿಂಗ್ ಸ್ಕ್ರಿನ್ ಮೇಲೆಯೇ ಬರೆಯಬಹುದಾಗಿದೆ.

ಇದು ಅಲೋ ಚಾಟ್ ಬಳಕೆದಾರರಿಗೆ ಈ ಹೊಸ ಆಪ್ಡೇಟ್ ಹೆಚ್ಚಿನ ಸಹಾಯವನ್ನು ಮಾಡಲಿದೆ. ಹೇಗೆ ಎಂದರೆ ನೀವು ಮಾಲ್ ಗೆ ಹೋಗಿ ಶೂ ವೊಂದನ್ನು ಕೊಳ್ಳುವ ಸಂದರ್ಭದಲ್ಲಿ ನಿಮ್ಮ ಸ್ನೇಹಿತರ ಸಹಾಯವನ್ನು ವಿಡಿಯೋ ಕಾಲಿಂಗ್ ಮೂಲಕ ಪಡೆದುಕೊಳ್ಳಲು ಇದು ಸಹಾಯಕಾರಿ ಯಾಗಲಿದೆ.

ಈ ಆಪ್ ನಲ್ಲಿ ಚಾಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಡಿಯೊ ಆಪ್ ಹೊಂದಿಲ್ಲದ ಸಂದರ್ಭದಲ್ಲಿ ಇನ್ವೇಟ್ ಕಳುಹಿಸುವುದು ಸುಲಭವಾಗಿದ್ದು, ನೀವು ಕಳುಹಿಸಿದರೆ ಅವರ ಚಾಟ್ ವಿಂಡೋದಲ್ಲಿ ಪಾಪ್ ಅಪ್ ಆಗಲಿದೆ. ಅದರ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದರೊಂದಿಗೆ ಈ ಹೊಸ ಆಪ್ಡೇಟ್ ನೊಂದಿಗೆ ಹಲವು ಆಯ್ಕೆಗಳು ಲಭ್ಯವಿದ್ದು, ಚಾಟಿಂಗ್ ಸಮಯದಲ್ಲಿ ಸ್ನೇಹಿತರಿಗೆ ನೀವು ಕಳುಹಿಸಲು ಸ್ಟಿಕರ್ ಅನ್ನು ನೀಡಿದೆ. ಇದು ನಿಮ್ಮ ಚಾಟಿಂಗ್ ಅನ್ನು ಇನಷ್ಟು ಸುಂದರಗೊಳಿಸಲಿದೆ. ಅಪ್ಡೇಟ್ ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರಿಗೂ ಲಭ್ಯವಿದೆ ಎನ್ನಲಾಗಿದೆ.

Read more about:
English summary
Basically, the new update will now allow you to launch a Duo video call directly within an Allo chat.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot