ಗೂಗಲ್‌ನಿಂದ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗೆ ಮತ್ತೊಂದು ಆಪ್..!

By GizBot Bureau
|

ಯಾರು ಪಾಡ್ಕ್ಯಾಸ್ಟ್ ಗಳನ್ನು ಕೇಳುವುದನ್ನು ಪ್ರೀತಿಸುತ್ತಾರೋ ಅಂತವರಿಗಾಗಿ ಗೂಗಲ್ ಸಂಸ್ಥೆಯು ಹೊಸ ಆಪ್ ಒಂದನ್ನು ಬಿಡುಗಡೆಗೊಳಿಸಿದ್ದೆ. ಆಶ್ಚರ್ಯವೇನೆಂದರೆ ಆ ಆಪ್ ಗೆ ಗೂಗಲ್ ಪಾಡ್ಕ್ಯಾಸ್ಟ್ ಎಂದೇ ಹೆಸರನ್ನಿಟ್ಟಿದೆ.ಸದ್ಯ ಆಪ್ ಆಂಡ್ರಾಯ್ಡ್ ಗೆ ಮಾತ್ರ ಲಭ್ಯವಿದ್ದು, ಸದ್ಯದಲ್ಲೇ ಆಪಲ್ iOS ನ್ನು ಸದ್ಯದಲ್ಲೇ ತಲುಪುವ ಸಾಧ್ಯತೆ ಇದೆ.ಅಷ್ಟೇ ಅಲ್ಲ, ಇನ್ನಷ್ಟು ಹೊಸ ವೈಶಿಷ್ಟ್ಯಗಳು ಸೇರಿಕೊಳ್ಳುವ ಸಾಧ್ಯತೆಯೂ ಇದೆ.

ಅಮೆರಿಕಾಕ್ಕೆ ಸೆಡ್ಡು ಹೊಡೆದ 'ಸ್ವದೇಶಿ ಜಿಪಿಎಸ್' ಬಿಡುಗಡೆಗೆ ಕ್ಷಣಗಣನೆ!..ಇತಿಹಾಸ ಪುಟ ಸೇರಲಿದೆ ನಾವಿಕ್!!ಅಮೆರಿಕಾಕ್ಕೆ ಸೆಡ್ಡು ಹೊಡೆದ 'ಸ್ವದೇಶಿ ಜಿಪಿಎಸ್' ಬಿಡುಗಡೆಗೆ ಕ್ಷಣಗಣನೆ!..ಇತಿಹಾಸ ಪುಟ ಸೇರಲಿದೆ ನಾವಿಕ್!!

ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಆಪ್ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ವಿಶ್ವದಾದ್ಯಂತ ಲಭ್ಯವಾಗುತ್ತಿದೆ. ಇದನ್ನು ಆಡ್ ಮಾಡಿಕೊಳ್ಳುವುದು ಎಷ್ಟು ಯೋಗ್ಯ ಎಂಬುದನ್ನು ಬಳಕೆದಾರರು ನಿರ್ಧರಿಸಬೇಕು ಯಾಕೆಂದರೆ ಗೂಗಲ್ ಪಾಡ್ಕ್ಯಾಸ್ಟ್ಗಳು ಪೂರ್ಣ ಪ್ರಮಾಣದ ಅಪ್ಲಿಕೇಷನ್ ಆಗಿಲ್ಲ. ಯಾಕೆಂದರೆ ಇದು ಬಳಕೆದಾರರನ್ನು ಗೂಗಲ್ ಪೇಜ್ ನಲ್ಲಿ ಲಭ್ಯವಿರುವ ಪೇಜ್ ಗಳಿಗೆ ನೇವಿಗೇಟ್ ಮಾಡುವ ಕೆಲಸವನ್ನು ಮಾಡುತ್ತದೆ.

ಗೂಗಲ್‌ನಿಂದ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗೆ ಮತ್ತೊಂದು ಆಪ್..!

ಯಾರಿಗೆ ಈ ವಿಚಾರ ತಿಳಿದಿಲ್ಲವೋ ಅವರಿಗಾಗಿ ಹೇಳುತ್ತಿದ್ದೇವೆ, ಮೌಂಟೇನ್ ವ್ಯೂ ಬೇಸ್ ಆಗಿರುವ ಟೆಕ್ ಫರ್ಮ್ ಒಂದು, ಪಾಡ್ಕ್ಯಾಸ್ಟ್ ಸರ್ವೀಸ್ ನ್ನು 2016 ರಲ್ಲಿ ಗೂಗಲ್ ಸರ್ಚ್ ಆಪ್ ನಲ್ಲಿ ತಂದಿತ್ತು ಮತ್ತು ಅದು ನಂತರ ದಿನಗಳಲ್ಲಿ ಪ್ಲೇ ಮ್ಯೂಸಿಕ್ ಆಗಿ ಹೊರಬರಬೇಕಾಯಿತು.

ಗೂಗಲ್ ಪಾಡ್ಕ್ಯಾಸ್ಟ್ ಅನುಭವವನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸುಧಾರಣೆ ಮಾಡಬಹುದಾಗಿದೆ. ಯಾವಾಗ ಪ್ರೈಮರಿ ಸರ್ಚ್ ಆಪ್ ಅಪ್ ಗ್ರೇಡ್ ಆಗುತ್ತದೆಯೋ ಆಗ ಇದನ್ನು ಸಾಧಿಸಲಾಗುತ್ತದೆ.

ಆಪ್ ನಲ್ಲಿ ಹೋಮ್ ಸ್ಕ್ರೀನ್ ಇದ್ದು, ಇದು ಬಳಕೆದಾರರು ಚಂದಾದಾರರಾದ ಎಲ್ಲಾ ಪಾಡ್ಕ್ಯಾಸ್ಟ್ ಚಾನೆಲ್ ಗಳನ್ನು ತೋರಿಸುತ್ತದೆ. ಅದನ್ನು ಟ್ಯಾಪ್ ಮಾಡಿದರೆ ಎಪಿಸೋಡ್ ಗಳು ಲಭ್ಯವಾಗುತ್ತೆ ಮತ್ತು ಅದನ್ನು ಡೌನ್ ಲೋಡ್ ಮಾಡುವ ಅವಕಾಶವೂ ಅದರಲ್ಲಿರುತ್ತದೆ. ಹ್ಯಾಂಡ್ ಸೆಟ್ ನ ಸ್ಟೋರೇಜ್ ನ್ನು ಕಾಪಾಡುವ ನಿಟ್ಟಿನಲ್ಲಿ ಎಪಿಸೋಡ್ ಗಳನ್ನು ಅಟೋಮ್ಯಾಟಿಕಲಿ ಡಿಲೀಟ್ ಕೂಡ ಮಾಡುತ್ತದೆ. ಬಳಕೆದಾರರು ಅದರ ಅವಧಿಯನ್ನು ಬೇಕಿದ್ದರೆ ಆಯ್ಕೆ ಮಾಡುವ ಅವಕಾಶವಿರುತ್ತದೆ.

ಆಪ್ ನಲ್ಲಿ 'For You’ ಅನ್ನೋ ಒಂದು ಸೆಕ್ಷನ್ ಕೂಡ ಇದೆ. ಅಲ್ಲಿ ಬಳಕೆದಾರರಿಗೆ ಎಲ್ಲಾ ಹೊಸ ಎಪಿಸೋಡ್ ಗಳೂ ಇರುತ್ತದೆ. ಯಾವುದೆಲ್ಲ ಪ್ರೊಗ್ರೆಸ್ ನಲ್ಲಿದೆ ಮತ್ತು ಯಾವುದೆಲ್ಲ ಡೌನ್ ಲೋಡ್ ಲಿಸ್ಟ್ ನಲ್ಲಿದೆ ಎಂಬುದನ್ನು ಗಮನಿಸಬಹುದು. ಇತರೆ ಸೆಕ್ಷನ್ ಗಳಲ್ಲಿ ಟ್ರೆಂಡಿಂಗ್ ಮತ್ತು ಪಾಡ್ಕ್ಯಾಸ್ಟ್ ಗಳ ವಿವಿಧ ಕೆಟಗರಿಗಳು ಕಾಣುತ್ತದೆ.

ಗೂಗಲ್‌ನಿಂದ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗೆ ಮತ್ತೊಂದು ಆಪ್..!

ಗೂಗಲ್ ಪಾಡ್ಕ್ಯಾಸ್ಟ್ AI ನೀವು ಯಾವುದನ್ನು ಆಲಿಸುತ್ತೀರಿ ಮತ್ತು ನಿಮ್ಮ ಯಾವೆಲ್ಲ ಇತರೆ ಪಾಡ್ಕ್ಯಾಸ್ಟ್ ಗಳ ಬಗ್ಗೆ ನೀವು ಕೂತೂಹಲ ಹೊಂದಿದ್ದೀರಿ ಎಂಬುದನ್ನು ಈ ಇಂಜಿನ್ ತಿಳಿಸುತ್ತದೆ. ಇದು ತುಂಬಾ ವಯಕ್ತಿಕವಾಗಿರುತ್ತದೆ.

ಆಡಿಯೋ ಪ್ಲೇಯರ್ ಬಗ್ಗೆ ಹೇಳುವುದಾದರೆ, ಸ್ಕ್ರೀನಿನ ಕೆಳಭಾಗದಲ್ಲಿರುವ ಬಟನ್ ನ್ನು ನಿಮಗೆ ಅಗತ್ಯವಿರುವಷ್ಟು ಹೊತ್ತು ಹೋಲ್ಡ್ ಮಾಡಬಹುದು . ಆಡಿಯೋ ದಲ್ಲಿ ಯಾವುದೇ ಹೊಸತನವಿಲ್ಲ, ಅದೇ ಹಳೆಯ ಮಾದರಿಯ ಆಡಿಯೋ ಪ್ಲೇ ಬ್ಯಾಕ್ ಆಯ್ಕೆಯನ್ನೇ ಇದೂ ಕೂಡ ಕರುಣಿಸುತ್ತದೆ.ಪಾಡ್ಕ್ಯಾಸ್ಟ್ ನ್ನು ಆಕ್ಸಿಸ್ ಮಾಡುವ ವೇಗ ಹೆಚ್ಚಾಗಬೇಕಾದರೆ, ಹೋಮ್ ಸ್ಕ್ರೀನ್ ನ ಬಲಭಾಗದಲ್ಲಿರುವ ಆರ್ಟ್ ವರ್ಕ್ ನ್ನು ಪಿನ್ ಮಾಡಬಹುದು. ಇದು ಡಿವೈಸ್ ನಲ್ಲಿ ಲಿಸ್ಟ್ ನ್ನ ಸಿನ್ ಕ್ರನೈಸ್ ಮಾಡುತ್ತೆ ಮತ್ತು ಪಾಡ್ಕ್ಯಾಸ್ಟ್ ಗಳು ಗೂಗಲ್ ಹೋಮ್ ಮತ್ತು ಅಸಿಸ್ಟೆಂಟ್ ಜೊತೆ ಇಂಟಿಗ್ರೇಟ್ ಆಗಿರುತ್ತದೆ.

ಗೂಗಲ್ ಕೇವಲ ಹೊಸ ಆಪ್ ಒಂದನ್ನು ಮಾತ್ರ ಪರಿಚಯಿಸಿಲ್ಲ. ಅದರ ಜೊತೆಗೆ “Google Podcasts creator program’ ನ್ನು ಕೂಡ ಬಿಡುಗಡೆಗೊಳಿಸಿದೆ.,ಇದು ಆಪ್ ನಲ್ಲಿ ಸ್ಟೋರಿ ಹೇಳಲು ಅವಕಾಶ ನೀಡುತ್ತೆ. ಅದಕ್ಕಾಗಿಯೇ ನಾವು ಪಾಡ್ಕ್ಯಾಸ್ಟ್ ಉದ್ಯಮದೊಂದಿಗೆ ಇದರ ಅಡೆತಡೆಗಳನ್ನು ತೆಗೆದುಹಾಕಲು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಕಾರ್ಯಕ್ರಮವು ಪ್ರಪಂಚದಾದ್ಯಂತದ ಸಲಹಾ ಮಂಡಳಿಯಿಂದ ಮಾರ್ಗದರ್ಶನ ಪಡೆಯುತ್ತದೆ.

ಕೌಶಲ್ಯ ಅಭಿವೃದ್ಧಿ ಮತ್ತು ಕಡಿಮೆ ಪ್ರಾತಿನಿಧಿಕ ಧ್ವನಿಗಳಿಂದ ಪ್ರಯೋಗಗಳನ್ನು ಮಾಡುವ ಪ್ರಾಥಮಿಕ ಗುರಿಯೊಂದಿಗೆ, ಉದ್ಯಮದ ಉದ್ದಗಲಕ್ಕೂ ಅಳೆಯಬಹುದಾದ ಪರಿಕಲ್ಪನೆಗಳು ಮತ್ತು ಪ್ರಕ್ರಿಯೆಗಳನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.” ಎಂದು ಗೂಗಲ್ ಪಾಡ್ಕ್ಯಾಸ್ಟ್ ನ ಪ್ರೊಡಕ್ಟ್ ಮ್ಯಾನೇಜರ್ ಜಾಕ್ ರಿನ್ಯೂ-ವೀಡೀನ್ ಅಭಿಪ್ರಾಯ ಪಟ್ಟಿದ್ದಾರೆ.

ಭವಿಷ್ಯದ ಅಪ್ ಡೇಟ್ ಗಳನ್ನು ಗಮನಿಸಿದರೆ, ಗೂಗಲ್ ಹೇಳುವ ಪ್ರಕಾರ ಸ್ಪೀಟ್-ಟು-ಟೆಕ್ಸ್ಟ್ ಟೆಕ್ನಾಲಜಿಯನ್ನು ಬಳಸಿ, ಆಟೋಮ್ಯಾಟಿಕ್ ಸಬ್ ಟೈಟಲ್ ನೀಡುವ ಅವಕಾಶವೂ ಇದರಲ್ಲಿ ದೊರಯಲಿದೆಯಂತೆ. ಪಾಡ್ಕ್ಯಾಸ್ಟ್ ಗೆ ವಿಶ್ವದಾದ್ಯಂತ ಆಕ್ಸಿಸ್ ಲಭ್ಯವಾದ ನಂತರ ಬೇರೆಬೇರೆ ಭಾಷೆಗಳಿಗೆ ಇದನ್ನು ಹೆಚ್ಚಿಸಲಾಗುತ್ತೆ ಎಂದು ತಿಳಿಸಲಾಗಿದೆ.

Best Mobiles in India

English summary
Google launches ‘Podcasts’ app on Android. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X