ಗೂಗಲ್ ಮ್ಯಾಪ್ ನಲ್ಲಿ “ ಪಾಪುಲರ್ ಡಿಶ್ಶಸ್ ಫೀಚರ್” ಸೇರ್ಪಡೆ

By Gizbot Bureau
|

ನೀವು ಯಾವುದೋ ಹೊಟೆಲ್ ಗೆ ಹೋದಾಗ ಏನು ಆರ್ಡರ್ ಮಾಡುವುದು ಅಂತ ಗೊಂದಲಕ್ಕೀಡಾಗುತ್ತೀದ್ದೀರಾ? ಹಾಗಾದ್ರೆ ಇನ್ನು ಮುಂದೆ ಈ ಚಿಂತೆ ಇಲ್ಲ ಬಿಡಿ. ಯಾಕಂದ್ರೆ ನಿಮ್ಮ ಸಹಾಯಕ್ಕೆ ಗೂಗಲ್ ಮ್ಯಾಪ್ ಇರಲಿದೆ. ಮ್ಯಾಪ್ ಸಹಾಯದಿಂದ ನೀವು ಯಾವ ಹೊಟೆಲ್ ನಲ್ಲಿ ಯಾವ ಆಹಾರ ರುಚಿಯಾಗಿರುತ್ತದೆ ಎಂಬುದನ್ನು ತಿಳಿದು ನಂತರ ಆರ್ಡರ್ ಮಾಡಬಹುದು. ಅದಕ್ಕಾಗಿಯೇ ಮ್ಯಾಪ್ ನಲ್ಲಿ ಹೊಸ ಫೀಚರ್ ವೊಂದು ಬಿಡುಗಡೆಯಾಗುತ್ತಿದೆ.

ಯಾವ ಹೊಟೆಲ್ ನಲ್ಲಿ ಯಾವ ಫುಡ್ ರುಚಿ ಇರುತ್ತದೆ?

ಯಾವ ಹೊಟೆಲ್ ನಲ್ಲಿ ಯಾವ ಫುಡ್ ರುಚಿ ಇರುತ್ತದೆ?

ಗೂಗಲ್ ಮ್ಯಾಪ್ ಕೆಲವು ಆನ್ ಲೈನ್ ಫುಡ್ ಸೇವೆಗಳು ಮತ್ತು ಎಲ್ಪ್, ಫೋರ್ಸ್ಕ್ಯಾರ್ ಮತ್ತು ಇತ್ಯಾದಿಗಳಿಗೆ ಸ್ಪರ್ಧೆಯೊಡ್ಡಲು ತಯಾರಿ ನಡೆಸುತ್ತಿರುವಂತೆ ಕಾಣುತ್ತಿದೆ. ಕೇವಲ ಡಾಮಿನೆಂಟ್ ಆಪ್ ಆಗಿ ಮಾತ್ರವೇ ಈ ಸೇವೆ ಕೆಲಸ ಮಾಡುವುದಿಲ್ಲ ಅಥವಾ ದಾರಿಯನ್ನು ಮಾತ್ರವೇ ತೋರಿಸುವುದಿಲ್ಲ ಬದಲಾಗಿ ನಿರ್ಧಿಷ್ಟ ರೆಸ್ಟೋರೆಂಟ್ ನಲ್ಲಿ ಯಾವ ಆಹಾರ ಅಥವಾ ತಿಂಡಿ ಹೆಚ್ಚು ರುಚಿಯಾಗಿರುತ್ತದೆ ಎಂಬುದನ್ನು ಕೂಡ ತಿಳಿಸುವ ಕೆಲಸವನ್ನು ಮಾಡುತ್ತದೆ.

ಹೊಸದಾಗಿ ಸೇರ್ಪಡೆಗೊಂಡಿರುವ ಟ್ಯಾಬ್ ನಲ್ಲಿ ಮೆನು ಮತ್ತು ನಿರ್ಧಿಷ್ಟ ಹೋಟೆಲ್ ಅಥವಾ ರೆಸ್ಟೋರೆಂಟ್ ನ ಫೋಟೋವನ್ನು ಮ್ಯಾಪ್ ನಲ್ಲಿ ನೋಡುವುದಕ್ಕೆ ಅವಕಾಶವಿರುತ್ತದೆ.

ಪಾಪುಲರ್ ಡಿಶ್ಶಸ್:

ಪಾಪುಲರ್ ಡಿಶ್ಶಸ್:

ಈ ಹೊಸ "ಪಾಪುಲರ್ ಡಿಶ್ಶಸ್" ಸೆಕ್ಷನ್ ಕೇವಲ ಒಂದು ಡಿಶ್ಶ್ ನ್ನು ಮಾತ್ರವೇ ತೋರಿಸುವುದಿಲ್ಲ ಬದಲಾಗಿ ಹಲವು ಆಹಾರವನ್ನು ತೋರಿಸುತ್ತದೆ. ಅವುಗಳ ಬಳಕೆದಾರರ ರಿವ್ಯೂ ಮತ್ತು ಅವರ ಹೊಗಳಿಕೆಯ ಆಧಾರದಲ್ಲಿ ನೀಡಲಾಗಿರುತ್ತದೆ. 9ಟು5ಗೂಗಲ್ ವರದಿಯ ಪ್ರಕಾರ ಆಹಾರ ಪದಾರ್ಥವನ್ನು ಗೂಗಲ್ ಚಿತ್ರಗಳು ಮತ್ತು ಮೆಟಿರಿಯಲ್ ಡಿಸೈನ್ ಇರುವ ಥೀಮ್ಡ್ ಕಾರ್ಡ್ ಗಳ ರೂಪದಲ್ಲಿ ನೀಡುತ್ತದೆ.ಅದನ್ನು ಟ್ಯಾಪ್ ಮಾಡುವ ಮೂಲಕ ಹೆಚ್ಚು ರಿವ್ಯೂಗಳು ಮತ್ತು ಆಹಾರದ ಇನ್ನಷ್ಟು ಚಿತ್ರಗಳನ್ನು ನೋಡುವುದಕ್ಕೆ ಅವಕಾಶ ಸಿಗುತ್ತದೆ.

ಇದು ಪಬ್ಲಿಕ್ ಡಾಟಾ ಆಗಿರುವುದರಿಂದಾಗಿ "ಸಜೆಸ್ಟ್ ಆನ್ ಎಡಿಟ್" ಆಯ್ಕೆಯೂ ಇರುತ್ತದೆ. ಅದರ ಮೂಲಕ ಯಾರು ಬೇಕಿದ್ದರೂ ಮಾಹಿತಿಯನ್ನು ಎಡಿಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಗೊಂದಲ :

ಗೊಂದಲ :

ಇಲ್ಲಿ ಎದುರಾಗಿರುವ ಪ್ರಶ್ನೆ ಏನೆಂದರೆ ಬಳಕೆದಾರರಿಂದ ನೀಡಲಾಗಿರುವ ರಿವ್ಯೂಗಳನ್ನು ಸ್ಕ್ಯಾನ್ ಮಾಡುವುದಕ್ಕೆ ಗೂಗಲ್ ತನ್ನದೇ ಸ್ವಂತ ಯುಐಯನ್ನು ಬಳಕೆ ಮಾಡುತ್ತದೆಯೋ ಅಥವಾ ಅದಕ್ಕಾಗಿ ನಿರ್ಧಿಷ್ಟ ಟೀಮ್ ಏನಾದರೂ ಇರುತ್ತದೆಯೋ ಎಂಬುದಾಗಿದೆ. ರೆಸ್ಟೋರೆಂಟ್ ಗೆ ತಲುಪಿದ ನಂತರ ಯಾವ ಆಹಾರಕ್ಕೆ ಆರ್ಡರ್ ಮಾಡಬೇಕು ಎಂದು ಗೊಂದಲಕ್ಕೀಡಾಗುವವರಿಗೆ ಈ ಫೀಚರ್ ಬಹಳ ಸಹಾಯ ಮಾಡುತ್ತದೆ. ಇದೇ ರೀತಿಯ ಸೇವೆಯನ್ನು ಒದಗಿಸುವ ಆಪ್ ಗಳಿಗೆ ಮ್ಯಾಪ್ ಅಪ್ಲಿಕೇಷನ್ ಇನ್ನಷ್ಟು ಹತ್ತಿರವಾಗುತ್ತದೆ ಅಥವಾ ಸ್ಪರ್ಧೆಯೊಡ್ಡುತ್ತದೆ.

ಟೆಸ್ಟಿಂಗ್ ನಡೆಯುತ್ತಿದೆ:

ಟೆಸ್ಟಿಂಗ್ ನಡೆಯುತ್ತಿದೆ:

ಸದ್ಯ ಈ ಫೀಚರ್ ಟೆಸ್ಟಿಂಗ್ ಫೇಸ್ ನಲ್ಲಿದ್ದು ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ ಸದ್ಯಕ್ಕೆ ಲಭ್ಯವಿಲ್ಲ. ಗೂಗಲ್ ಐಓ 2019 ಡೆವಲಪರ್ಸ್ ಕಾನ್ಫರೆನ್ಸ್ ನಲ್ಲಿ ನಾವು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗೂಗಲ್ ನಿಂದ ನಿರೀಕ್ಷಿಸಬಹುದಾಗಿದೆ. ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂ ನಲ್ಲಿ ಮೇ 7 ರಿಂದ ಮೇ 9 ರ ವರೆಗೆ ಈ ಕಾನ್ಫರೆನ್ಸ್ ನ್ನು ಆಯೋಜಿಸಲಾಗಿದೆ.

ಹೊಸ ಫೀಚರ್ ಗಳು:

ಹೊಸ ಫೀಚರ್ ಗಳು:

ಗೂಗಲ್ ಮ್ಯಾಪ್ ನಲ್ಲಿ ಕಳೆದ ತಿಂಗಳಲ್ಲಿ ಟ್ರಾಫಿಕ್ ಸ್ಲೋಡೌನ್ ಫೀಚರ್ ನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಸ್ಪೀಡ್ ಟ್ರ್ಯಾಪ್ ಮತ್ತು ಕ್ರ್ಯಾಶ್ ರಿಪೋರ್ಟಿಂಗ್ ಆಯ್ಕೆಗಳು ಲಭ್ಯವಾಗಿದ್ದವು. ಒಟ್ಟಿನಲ್ಲಿ ಗೂಗಲ್ ಮ್ಯಾಪ್ ಪದೇ ಪದೇ ಅಪ್ ಡೇಟ್ ಆಗುತ್ತಲೇ ಇರುವುದರಿಂದಾಗಿ ಬಳಕೆದಾರರ ಅಗತ್ಯತೆಗಳು ಪೂರೈಕೆಯಾಗುತ್ತಿದೆ.

Best Mobiles in India

English summary
Google Maps adding 'Popular Dishes feature', here's what it means

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X